ಲಾಲ್ ಸಿಂಗ್ ಛಡ್ಡಾ ಸೋಲಿನ ಬಳಿಕ ಸಿನಿಮಾರಂಗದ ಸಹವಾಸವೇ ಬೇಡ ಎಂದು ಬಣ್ಣದ ಲೋಕದಿಂದ ದೂರ ಉಳಿದಿದ್ದ ನಟ ಆಮೀರ್ ಖಾನ್ ಸೈಲೆಂಟಾಗಿ ಹೊಸ ಸಿನಿಮಾ ಘೋಷಿಸಿದ್ದಾರೆ. ಆದರೆ, ಅದು ಆಮೀರ್ ನಟನೆಯ ಸಿನಿಮಾವಲ್ಲ ಬದಲಾಗಿ ನಿರ್ಮಾಣದ ಚಿತ್ರ ಎಂಬುದು ಗಮನಿಸಬೇಕಾದ ವಿಚಾರ. ಯಸ್, ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ನಟರಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿರುವುದು ನಿಮಗೆಲ್ಲ ಗೊತ್ತೆಯಿದೆ. ಆಮೀರ್ ಖಾನ್ ಪ್ರೊಡಕ್ಷನ್ಸ್ ಹುಟ್ಟುಹಾಕಿ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಆಮೀರ್, `ತಾರೆ ಜಮೀನ್ ಪರ್’, `ಲಗಾನ್’, `ದಂಗಲ್’ ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ತಮ್ಮ ನಟನೆಯ ಚಿತ್ರಗಳ ಜೊತೆಗೆ ಬೇರೆ ಸ್ಟಾರ್ ನಟರುಗಳ ಸಿನಿಮಾಗಳಿಗೂ ಹಣ ಹೂಡಿಕೆ ಮಾಡುತ್ತಿರುವ ಬಾಲಿವುಡ್ ಘಜಿನಿ ಈಗ ಸನ್ನಿಡಿಯೋಲ್ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ. ಹೆಸರಾಂತ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಜೊತೆ ಕೈ ಜೋಡಿಸಿ `ಲಾಹೋರ್ 1947′ ಸಿನಿಮಾವನ್ನ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
`ಲಾಹೋರ್- 1947′ ಸನ್ನಿಡಿಯೋಲ್ ಹಾಗೂ ರಾಜ್ಕುಮಾರ್ ಸಂತೋಷಿ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾ. ಗದರ್-2 ಮೂಲಕ ಮ್ಯಾಸೀವ್ ಸಕ್ಸಸ್ ಕಂಡಿರುವ ಮತ್ತು ಬಾಲಿವುಡ್ಗೆ ಬಲ ತುಂಬಿರುವ ಸನ್ನಿಡಿಯೋಲ್, ಮೈ ಕೊಡವಿಕೊಂಡು ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಜನಪ್ರಿಯ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಜೊತೆ ನಾಲ್ಕನೇ ಬಾರಿ ಕೈ ಜೋಡಿಸಿದ್ದಾರೆ. ಹೌದು, ಈ ಹಿಂದೆ ಈ ಜೋಡಿ ಮೂರು ಬ್ಲಾಕ್ಬಸ್ಟರ್ ಸಿನಿಮಾಗಳನ್ನ ಬಿಟೌನ್ಗೆ ಕಾಣಿಕೆಯನ್ನಾಗಿ ನೀಡಿದೆ. ಘಾಯಲ್, ದಾಮಿನಿ, ಘಟಕ್ ಸಿನಿಮಾಗಳ ಟ್ರ್ಯಾಕ್ ರೆಕಾರ್ಡ್ ಸನ್ನಿ ಹಾಗೂ ಸಂತೋಷ್ ಹೆಸರಲ್ಲಿದೆ. ಇದೀಗ ಮತ್ತೊಮ್ಮೆ ಈ ಕಾಂಬೋ ಜೊತೆಯಾಗುತ್ತಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದೆ.
ಇಂಟ್ರೆಸ್ಟಿಂಗ್ ಅಂದರೆ ಸನ್ನಿಡಿಯೋಲ್ ಸಿನಿಮಾಗೆ ಆಮೀರ್ ಖಾನ್ ಬಂಡವಾಳ ಹೂಡ್ತಿರುವುದು. ಯಸ್, ಒಂದ್ಕಾಲದಲ್ಲಿ ಸನ್ನಿ ಅಂಡ್ ಆಮೀರ್ ಇಬ್ಬರು ಕಾಂಪಿಟೇಟರ್ಸ್. ಬಾಕ್ಸ್ ಆಫೀಸ್ ಅಂಗಳದಲ್ಲಿ ಇಬ್ಬರ ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿತ್ತು. ಒಂದಲ್ಲ ಅಂದರೆ ಮೂರು ಭಾರಿ ಈ ಇಬ್ಬರು ಸ್ಟಾರ್ ಗಳ ಸಿನಿಮಾಗಳು ಏಕಕಾಲಕ್ಕೆ ರಿಲೀಸ್ ಆಗಿ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಿತ್ತು. ಹೌದು, ಆಮೀರ್ ಖಾನ್
ದಿಲ್' ಚಿತ್ರ ಬಿಡುಗಡೆಯ ದಿನವೇ ಸನ್ನಿಡಿಯೋಲ್
`ಘಾಯಲ್' ಚಿತ್ರ ಅಖಾಡಕ್ಕಿಳಿದಿತ್ತು.
`ರಾಜ ಹಿಂದೂಸ್ತಾನಿ’ ರಿಲೀಸ್ ಟೈಮ್ನಲ್ಲೂ ಸನ್ನಿಡಿಯೋಲ್ `ಘಟಕ್’ ಸಿನಿಮಾ ರಿಲೀಸ್ ಮಾಡಿ ಫೈಟ್ ಕೊಟ್ಟಿದ್ದರು. ಮೂರನೇ ಭಾರಿ ಲಗಾನ್' ಎದುರು
ಗದರ್’ ಕಣಕ್ಕಿಳಿಸಿ ಸೆಣಸಾಡಿದ್ದರು. ಆದ್ರೀಗ, ಇಬ್ಬರು ಒಂದಾಗಿದ್ದಾರೆ. ಮೊದಲ ಭಾರಿಗೆ ಹೆಗಲ ಮೇಲೆ ಕೈ ಹಾಕಿರುವ ಈ ಜೋಡಿ `ಲಾಹೋರ್-1947′ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲು ತೀರ್ಮಾನಿಸಿದ್ದಾರೆ.
ಇನ್ನೊಂದು ವಿಶೇಷ ಅಂದರೆ ರಾಜ್ಕುಮಾರ್ ಸಂತೋಷಿಯವರು ಮಿಸ್ಟರ್ ಪರ್ಫೆಕ್ಷನಿಸ್ಟ್ ಜೊತೆ ಐಕಾನಿಕ್ ಕಲ್ಟ್ ಕ್ಲಾಸಿಕ್ ಸಿನಿಮಾ ಮಾಡಿದ್ರು. `ಅಂದಾಜ್ ಅಪ್ನಾ ಅಪ್ನಾ’ ಚಿತ್ರದ ಮೂಲಕ ಸಿನಿಮಾ ಪ್ರೇಮಿಗಳಿಗೆ ಹಬ್ಬದೂಟ ಬಡಿಸಿದ್ದರು. ಆನಂತರ ಈ ಜೋಡಿ ಒಂದಾಗಿರಲಿಲ್ಲ. ಇದೀಗ, ಈ ಕಾಂಬೋ ಡೈರೆಕ್ಟರ್ ಪ್ಲಸ್ ಪ್ರೊಡ್ಯೂಸರ್ ಆಗಿ ಕಮಾಲ್ ಮಾಡಲು ಹೊರಟಿದೆ. `ಲಾಹೋರ್ 1-947′ ಸಿನಿಮಾಗೆ ಗದರ್ ಹೀರೋನೇ ಸರೀ ಎಂದು ತೀರ್ಮಾನಿಸಿ ಸನ್ನಿಡಿಯೋಲ್ನ ಕಣಕ್ಕಿಳಿಸುತ್ತಿದೆ. ಇಂದು ಅಫಿಷಿಯಲ್ಲಾಗಿ ಸಿನಿಮಾ ಅನೌನ್ಸ್ ಆಗಿದೆ. ಸನ್ನಿ ಹಾಗೂ ಸಂತೋಷಿ ಜೊತೆ ಟಯಪ್ ಆಗ್ತಿರುವುದು ಖುಷಿ ತಂದಿದೆ ಎಂದಿರುವ ಆಮೀರ್ ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ. `ಲಾಹೋರ್ -1947′ ಅಮೀರ್ ಖಾನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯ್ಯಾರಾಗುತ್ತಿರುವ 17ನೇ ಸಿನಿಮಾವಾಗಿದೆ. ಲಾಲ್ ಸಿಂಗ್ ಛಡ್ಡಾ ಸೋಲಿನ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ದಂಗಲ್ ಹೀರೋ ಈಗ ನಿರ್ಮಾಪಕರಾಗಿ ಅಖಾಡಕ್ಕೆ ಇಳಿದಿದ್ದಾರೆ. ನಟನಾಗಿ ಕಣಕ್ಕಿಳಿಯುವ ಕ್ಷಣಕ್ಕಾಗಿ ಆಮೀರ್ ಫ್ಯಾನ್ಸ್ ಎದುರುನೋಡ್ತಿದ್ದಾರೆ.
ಸಲಾಂ ವೆಂಕಿ ಚಿತ್ರದಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿರುವ ಧೂಮ್ ಹೀರೋ, `ದಳಪತಿ 68′ ಹಾಗೂ ಮಹೇಶ್ ಬಾಬು ಮುಂದಿನ ಸಿನಿಮಾದಲ್ಲಿ ವಿಲನ್ ಆಗ್ತಾರೆನ್ನುವ ಸುದ್ದಿಯಿದೆ. ಇತ್ತೀಚೆಗಷ್ಟೇ ಟ್ರೇಡ್ ಅನಲಿಸಿಸ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದರು. 2024 ಜನವರಿ 20ರಂದು ದಂಗಲ್ ಹೀರೋ ಹೊಸ ಸಿನಿಮಾ ಸೆಟ್ಟೇರಲಿದೆ. ಅದೇ ವರ್ಷ ಡಿಸೆಂಬರ್ 20ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ. ಅಮೀರ್ ಖಾನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ತಯ್ಯಾರಾಗಲಿದ್ದು, ಪ್ರಿಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿರುವುದಾಗಿ ಹೇಳಿದ್ದರು. ಆ ಕುರಿತು ಇನ್ನಷ್ಟೇ ಅಪ್ಡೇಟ್ ಹೊರಬೀಳಬೇಕಿದೆ. ಕಳೆದೊಂದು ವರ್ಷದಿಂದ ಸಾಕಷ್ಟು ಸ್ಕ್ರಿಪ್ಟ್ ಕೇಳಿರೋ ಆಮೀರ್ ಖಾನ್, ಉಜ್ವಲ್ ನಿಕಮ್ ಹಾಗೂ ಸ್ಟಾರ್ ಕ್ರಿಕೆಟಿಗ ಲಾಲಾ ಅಮರನಾಥ್ ಜೀವನ ಚರಿತ್ರೆಗೆ ಜೀವತುಂಬಲು ಕಾತುರರಾಗಿರುವ ಬಗ್ಗೆ ಸುದ್ದಿಯಾಗ್ತಿದೆ.