`ದಳಪತಿ ಅಂದರೆ ದಾಖಲೆ, ದಾಖಲೆ ಅಂದರೆ ದಳಪತಿ’ ಹೀಗಂತ ನಾವ್ ಹೇಳ್ತಿಲ್ಲ. ಬದಲಾಗಿ ಅವರ ಅಭಿಮಾನಿಗಳೇ ಈ ರೀತಿ ಘೋಷಣೆ ಕೂಗುತ್ತಿದ್ದಾರೆ. ಯುನೈಟೆಡ್ ಕಿಂಗ್‍ಡಮ್‍ನಿಂದ ಕೇಕೆಹೊಡೆಯುತ್ತಾ ಕಾಲಿವುಡ್ ತಲುಪಿದ ಆ ಸುದ್ದಿ ಕೇಳಿದ್ಮೇಲೆ ದಳಪತಿ ಪಡೆ ಎದೆಯುಬ್ಬಿಸಿ ನಿಂತಿದೆ. ಎದುರಾಳಿ ಪಡೆ ಮುಂದೆ ಕಾಲರ್ ಪಟ್ಟಿ ಟೈಟ್ ಮಾಡಿಕೊಳ್ಳುತ್ತಾ, ಕಣ್ಣುಬ್ಬು ಎಗಿರಿಸುತ್ತಾ ಸರಪಟಾಕಿ ಹಚ್ಚಿ ಸಂಭ್ರಮಿಸುತ್ತಿದೆ. ಒನ್ ಅಂಡ್ ಓನ್ಲೀ ಸೂಪರ್ ಸ್ಟಾರ್ ನಮ್ಮ ಬಾಸ್ ಮಾತ್ರ ಅಂತ ಊರಿಗೆಲ್ಲಾ ಸಿಹಿಹಂಚುತ್ತಿದೆ. ಅಷ್ಟಕ್ಕೂ, ಇಷ್ಟೆಲ್ಲಾ ಮಾಡ್ತಿರೋದಕ್ಕೆ ಕಾರಣ ಲಿಯೋ ಸಿನಿಮಾ
ಲಿಯೋ… ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ದಳಪತಿ ಅಭಿನಯದ ಮೋಸ್ಟ್ ಅವೈಟೆಡ್ ಮೂವೀ. ಈ ಚಿತ್ರಕ್ಕಾಗಿ ಈ ಭಾರಿ ತಮಿಳು ಪ್ರೇಕ್ಷಕರು ಮಾತ್ರವಲ್ಲ ಪ್ಯಾನ್ ಇಂಡಿಯಾ ಪ್ರೇಮಿಗಳು ಕೂಡ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಅದಕ್ಕೆ ಕಾರಣ ಲಿಯೋ ಸಾರಥಿ (ಲೋಕೇಶ್) ಪ್ಲಸ್ ಅಧಿಪತಿ (ವಿಜಯ್) ಜೊತೆಗೆ ಲಿಯೋ ತಾರಾಗಣ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಹೌದು, ಲಿಯೋ ಚಿತ್ರದಲ್ಲಿ ಸೂಪರ್ ಸ್ಟಾರ್ ಗಳ ದಂಡೇ ಇದೆ. ಬಾಲಿವುಡ್ ಮುನ್ನಭಾಯ್ ಸಂಜಯ್ ದತ್ತ್ ಆ್ಯಂಟನಿ ದಾಸ್ ಆಗಿ ದಳಪತಿ ಎದುರು ಧಗಧಗಿಸಲಿದ್ದಾರೆ. ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ, ಫಹಾದ್ ಫಾಸಿಲ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ತ್ರಿಷಾ, ಪ್ರಿಯಾ ಆನಂದ್ ಹೀಗೆ ಘಟಾನುಘಟಿ ತಾರೆಯರ ಸಮಾಗಮ ಇಲ್ಲಾಗಿದ್ದು, `ಲಿಯೋ’ ಮೇಲೆ ಇಂಡಿಯನ್ ಸಿನಿದುನಿಯಾದ ಕಣ್ಣುಬಿದ್ದಿದೆ. ಈಗಾಗಲೇ ಲಿಯೋ ಚಿತ್ರ ಯುನೈಟೆಡ್ ಕಿಂಗ್‍ಡಮ್‍ನ ಕಬ್ಜ ಮಾಡಿಕೊಂಡು ಕೇಕೆಹಾಕ್ತಿದೆ.
ಅಚ್ಚರಿ ಅಂದರೆ ಲಿಯೋ ಬಿಡುಗಡೆಗೆ 40 ದಿನ ಬಾಕಿಯಿದೆ, ಹೀಗಿರುವಾಗಲೇ ಯುನೈಟೆಡ್ ಕಿಂಗ್‍ಡಮ್‍ನ ಸುಮಾರು 120ಕ್ಕೂ ಹೆಚ್ಚು ಸಿಟಿಗಳಲ್ಲಿ ಲಿಯೋ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಮಾಡಲಾಗಿದೆ. ಕೇವಲ 24 ಗಂಟೆಯೊಳಗೆ 10000ಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಯುಕೆ ಬಾಕ್ಸ್ ಆಫೀಸ್ ನಲ್ಲಿ ಹಿಸ್ಟ್ರಿ ಕ್ರಿಯೇಟ್ ಆಗಿದೆ. ಒಂದೇ ಏಟಿಗೆ ಹಳೆಯ ದಾಖಲೆಗಳನ್ನೆಲ್ಲಾ ಕುಟ್ಟಿ ಪುಡಿ ಮಾಡಿದ `ಲಿಯೋ’ ನಯಾ ಇತಿಹಾಸಕ್ಕೆ ನಾಂದಿ ಹಾಡಿದೆ. ಸಿನಿಮಾ ರಿಲೀಸ್‍ಗೆ 6 ವಾರ ಬಾಕಿ ಇರುವಾಗ ಯುಕೆ ಅಖಾಡದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆದ ಇಂಡಿಯಾದ ಮೊದಲ ಸಿನಿಮಾ ಎನ್ನುವ ಖ್ಯಾತಿಗೆ ಲಿಯೋ ಪಾತ್ರವಾಗಿದೆ. ಅಹಿಂಸಾ ಎಂಟ್ರಟೈನ್ಮೆಂಟ್ ಸಂಸ್ಥೆ ಲಿಯೋ ಚಿತ್ರವನ್ನ ಡಿಸ್ಟ್ರಿಬ್ಯೂಷನ್ ಮಾಡ್ತಿದ್ದು ಗ್ಲೋಬಲ್ ಮಾರ್ಕೆಟ್ ಮೇಲೆ ಕಣ್ಣಿಟ್ಟಿದೆ. ಮೊದಲು ಯುಕೆನಾ ಕಬ್ಜ ಮಾಡಿಕೊಳ್ಳುವ ಅಹಿಂಸಾ ಕನಸು ನನಸಾಗಿದ್ದು, ಜಾಗತಿಕ ಮಾರುಕಟ್ಟೆಯ ಮೇಲೆ ಲಿಯೋ ಪ್ರಾಬಲ್ಯ ಸಾಧಿಸುವ ಸೂಚನೆ ಸಿಗ್ತಾಯಿದೆ.
ಅಂದ್ಹಾಗೇ, ಲಿಯೋ ಸಾರಥಿ (ಲೋಕೇಶ್ ಕನಗರಾಜ್) ಹಾಗೂ ಲಿಯೋ ಅಧಿಪತಿ (ವಿಜಯ್ ದಳಪತಿ) ಇಬ್ಬರು ಕೂಡ ಕಾಲಿವುಡ್ ಬಾಕ್ಸ್‍ಆಫೀಸ್ ಬಾಸ್‍ಗಳು. ಇವರಿಬ್ಬರ ಕಾಂಬಿನೇಷನ್‍ನಲ್ಲಿ ಬಂದಂತಹ ಮಾಸ್ಟರ್ ಸಿನಿಮಾ ಬರೀ ತಮಿಳುನಾಡಿನಲ್ಲೇ ನೂರಾರು ಕೋಟಿ ಬ್ಯುಸಿನೆಸ್ ಮಾಡಿತ್ತು. ಒಂದೇ ಭಾಷೆಯಲ್ಲಿ ತೆರೆಕಂಡು 250 ರಿಂದ 300 ಕೋಟಿ ಲೂಟಿ ಹೊಡೆದಿತ್ತು. ಇದೀಗ `ಲಿಯೋ’ 250 ರಿಂದ 300 ಕೋಟಿ ಬಜೆಟ್‍ನಲ್ಲಿ ತಯ್ಯಾರಾಗಿ ಶಿಲೆಯಾಗಿ ನಿಂತಿದೆ. ಐದೈದು ಭಾಷೆಯಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಬಿಡುಗಡೆಗೆ ಸಜ್ಜಾಗಿದ್ದು, ಇದೇ ಅಕ್ಟೋಬರ್ 19ರಂದು ದಸರಾ ಹಬ್ಬಕ್ಕೆ ಅದ್ದೂರಿಯಾಗಿ ಥಿಯೇಟರ್‍ಗೆ ಲಗ್ಗೆ ಇಡ್ತಿದೆ. ಈ ಡೆಡ್ಲಿ ಜೋಡಿಯ ಜುಗಲ್‍ಬಂಧಿ ವರ್ಕ್ ಆಗುತ್ತೆ, ಮಾಸ್ಟರ್‍ಗಳ ನಯಾ ಮೇನಿಯಾ ಸೃಷ್ಟಿಯಾಗುತ್ತೆನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿದೆ.
ಇನ್ನೂ `ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ ಕಾನ್ಸೆಪ್ಟ್ ಮೂಲಕ ನಿರ್ದೇಶಕ ಲೋಕೇಶ್ ಕನಗರಾಜ್, ಕೈಥಿ, ವಿಕ್ರಮ್ ಚಿತ್ರದ ಕಥೆ ಮತ್ತು ಪಾತ್ರಗಳನ್ನು ಲಿಯೋದಲ್ಲಿ ತಂದು ನಿರೀಕ್ಷೆ ಹೆಚ್ಚಿಸಿದ್ದಾರೆ. ಏಜೆಂಟ್ ಅಮರ್ ಫಹಾದ್, ರೊಲೆಕ್ಸ್ ಸೂರ್ಯ ಸ್ಪೆಷಲ್ ಎಂಟ್ರಿ ಆಗಿರೋದ್ರಿಂದ ಸಿನಿಮಾಪ್ರೇಮಿಗಳು `ಲಿಯೋ’ ನೋಡಲು ಕುತೂಹಲಭರಿತರಾಗಿದ್ದಾರೆ. ಕಥೆ ಚಿತ್ರಕಥೆ ರಚಿಸಿ ಲೋಕೇಶ್ ಈ ಸಿನಿಮಾ ಡೈರೆಕ್ಟ್ ಮಾಡಿದ್ದು, ಎಸ್‍ಎಸ್ ಲಲಿತ್‍ಕುಮಾರ್, ಜಗದೀಶ್ ಪಳನಿಸ್ವಾಮಿಯವರು ಬಂಡವಾಳ ಹೂಡಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಅನಿರುದ್ ರವಿಚಂದರ್ ಸಂಗೀತವಿದೆ. ಈಗಾಗಲೇ ರಿಲೀಸ್ ಆಗಿರುವ `ನಾ ರೆಡಿದಾ ವರವಾ’ ಹಾಗೂ ಬ್ಲಡಿ ಸ್ವೀಟ್ ಹಾಡುಗಳು ಕಲಾಭಿಮಾನಿಗಳಿಗೆ ಕಿಕ್‍ಕೊಟ್ಟಿವೆ. ಲಿಯೋಗೆ ಹೆವಿ ಕ್ರೇಜ್ ಕ್ರಿಯೇಟ್ ಆಗಿದ್ದು, ಮಾಸ್ಟರ್ ಕಾಂಬೋ ಕ್ಲಿಕ್ ಆಗುತ್ತಾ? ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್‍ನಿಂದ ಕೋಟಿ ಕೋಟಿ ಲೂಟಿ ಮಾಡಿ ಕಿಂಗ್ ಖಾನ್ ಜವಾನ್‍ನ ಹಿಂದಿಕ್ಕುತ್ತಾ? ಜಸ್ಟ್ ವೇಯ್ಟ್ ಅಂಡ್ ವಾಚ್