LoosemadaYogi:‘ದುನಿಯಾ’ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿಕೊಂಡ ನಟ ಲೂಸ್ ಮಾದ ಯೋಗಿ(Loosemada Yogi). ‘ದುನಿಯಾ’ ಮೂಲಕ ಕೆರಿಯರ್ ಶುರು ಮಾಡಿದ ಯೋಗಿ ‘ನಂದ ಲವ್ಸ್ ನಂದಿತ’ ಸಿನಿಮಾ ಮೂಲಕ ಹೀರೋ ಆಗಿ ಬಿಗ್ ಬ್ರೇಕ್ ಪಡೆದುಕೊಂಡ್ರು. ಸ್ಯಾಂಡಲ್‌ವುಡ್ ಟ್ಯಾಲೆಂಟೆಡ್ ನಟ ಯೋಗಿ ಈಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.
‘ನಂದ ಲವ್ಸ್ ನಂದಿತ’ ಸಿನಿಮಾ ಯೋಗಿ(Loosemada Yogi) ಅದೃಷ್ಟ ಬದಲಾಯಿಸಿದ ಸಿನಿಮಾ. ಅಲ್ಲಿಂದ ಖುಲಾಯಿಸಿದ ಲಕ್ ಸ್ಯಾಂಡಲ್‌ವುಡ್ ಭರವಸೆಯ ಯುವ ನಟನನ್ನಾಗಿ ಬೆಳೆಯಿಸಿತು. ಒಂದ್ ಕಾಲದಲ್ಲಿ ಸ್ಟಾರ್ ಆಗಿ ಮೆರೆದ ಯೋಗಿ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದಾರೆ. ಒಂದು ಬಿಗ್ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಆ ಪ್ರಯತ್ನದಲ್ಲಿರುವ ಯೋಗಿ ಈಗ ಕಾಲಿವುಡ್ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ತಮಿಳು ನಟ ಅರುಣ್ ವಿಜಯ್ ಸಿನಿಮಾದಲ್ಲಿ ಯೋಗಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ತಿರುಕುಮಾರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ.
ಈ ಬಗ್ಗೆ ಮಾತನಾಡಿರುವ ಯೋಗಿ(Loosemada Yogi), ಅರುಣ್ ವಿಜಯ್ ಸಿನಿಮಾಗೆ ಅವಕಾಶ ಸಿಕ್ಕಿದ್ದು ಹೆಡ್ ಬುಶ್ ಸಿನಿಮಾದಿಂದಾಗಿ. ಈ ಸಿನಿಮಾದಲ್ಲಿ ನನ್ನನ್ನು ಗಂಗ ಪಾತ್ರದಲ್ಲಿ ನೋಡಿ ಇಂಪ್ರೆಸ್ ಆಗಿ ಆಫರ್ ನೀಡಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದಿದ್ದಾರೆ. ಕನ್ನಡದಲ್ಲಿ ಯೋಗಿ ‘ಸಿದ್ಲಿಂಗು-2’(Sidlingu-2) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.