ಆರ್ ಆರ್ ಆರ್ (RRR) ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿರೋ ಟಿಟೌನ್ ಸ್ಟಾರ್ ರಾಮ್‌ಚರಣ್ ತೇಜಾ (Ram Charan) ತಾನು ಪಕ್ಕಾ ಫ್ಯಾಮಿಲಿ ಮ್ಯಾನ್ ಅನ್ನೋದನ್ನ ಆಗಾಗ ಪ್ರೂ ಮಾಡುತ್ತಲೇ ಇರ್ತಾರೆ. ಸದ್ಯ, ಬಹುನಿರೀಕ್ಷಿತ ಗೇಮ್ ಚೇಂಜರ್ ಚಿತ್ರೀಕರಣದ ನಡುವೆಯೂ ಫ್ಯಾಮಿಲಿಗೋಸ್ಕರ ಬಿಡುವು ಮಾಡಿಕೊಂಡಿರೋ ಚೆರ್ರಿ, ತಮ್ಮ ಪುತ್ರಿ ಕ್ಲಿನ್ ಕಾರ (KlinKaaraKonidela) ಹಾಗೂ ಪತ್ನಿ ಉಪಾಸನಾ ಕೊನಿಡೇಲಾ (Upasana Kamineni) ಜೊತೆ ವೈಸಾಗ್ ಬೀಚ್‌ಗೆ ತೆರಳಿದ್ದಾರೆ. ಫಸ್ಟ್ ಟೈಮ್ ಮಗಳನ್ನ ಬೀಚ್ ಗೆ ಕರೆದುಕೊಂಡು ಹೋಗಿರೋ ರಾಮ್‌ಚರಣ್ (Ram Charan) ದಂಪತಿ, ಕಡಲ ತೀರದಲ್ಲಿ ಕ್ವಾಲಿಟಿ ಟೈಮ್ ಕಳೆದಿದ್ದಾರೆ. ಪತಿ ಹಾಗೂ ಪುತ್ರಿ ಬೀಚ್ ಸೈಡ್‌ನಲ್ಲಿ ಸಖತ್ ಎಂಜಾಯ್ ಮಾಡಿರುವ ವಿಡಿಯೋವನ್ನ ಉಪಾಸನಾ(Upasana Kamineni) ತಮ್ಮ ಸೋಷಿಯಲ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿ ಚರಣ್ ಫ್ಯಾನ್ಸ್ ಲೈಕ್ ಮಾಡಿದ್ದೇ ಮಾಡಿದ್ದು, ಕಮೆಂಟ್ ಹಾಕಿದ್ದೇ ಹಾಕಿದ್ದು.
ಕ್ಲಿನ್ ಕಾರ (KlinKaaraKonidela) ಮೆಗಾ ಕುಟುಂಬದ ಪಾಲಿಗೆ ಅದೃಷ್ಟ ದೇವತೆ. ಚರಣ್ (Ram Charan) ಹಾಗೂ ಉಪಾಸನಾ (Upasana Kamineni) ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಮೆಗಾ ಕುಟುಂಬ ಪ್ರವೇಶಿಸಿರೋ ಈ ಮುದ್ದು ಕಂದಮ್ಮ ಸಾಕ್ಷಾತ್ ಲಕ್ಷ್ಮಿಯೇ ಸರೀ. ನಿಮಗೆಲ್ಲ ಗೊತ್ತಿರೋ ಹಾಗೇ ಚರಣ್ ಹಾಗೂ ಉಪಾಸನಾ ಮದುವೆಯಾಗಿ ಸುಮಾರು 11 ವರ್ಷಗಳಾದ್ಮೇಲೆ ಕ್ಲಿನ್ ಕಾರ ಜನಿಸಿದ್ದಾಳೆ. ಕಳೆದ ವರ್ಷವಷ್ಟೇ ಉಪಾಸನಾ ಮಡಿಲು ತುಂಬಿ ಮಗಧೀರನ ಮಗಳಾಗಿರುವ ಕ್ಲಿನ್ ಕಾರ (KlinKaaraKonidela)ಳನ್ನ ಮೆಗಾ ಕುಟುಂಬ ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಿದೆ. ಚೆರ್ರಿಯಂತೂ ಮಗಳನ್ನು ದೀಪದಂತೆ ಪೊರೆಯುತ್ತಿದ್ದಾರೆ. ಈಗಾಗಲೇ ಫಾರಿನ್ ಟ್ರಿಪ್ ಕರೆದುಕೊಂಡು ಹೋಗಿಬಂದಿರೋ ಚರಣ್ ದಂಪತಿ, ಫಸ್ಟ್ ಟೈಮ್ ತಮ್ಮ ಮಗಳನ್ನ ಬೀಚ್‌ಗೆ ಕರೆದುಕೊಂಡು ಹೋಗಿ ಮಸ್ತಿ ಮಾಡಿದ್ದಾರೆ.
ಆರ್ ಆರ್ ಆರ್(RRR) ನಂತರ ಚರಣ್ ʻಗೇಮ್ ಚೇಂಜರ್ʼ (Game Changer) ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ರೋಬೋ ಶಂಕರ್ ನಿರ್ದೇಶನದ ಸಿನಿಮಾ ಇದಾಗಿದ್ದು, ಪೊಲಿಟಿಕಲ್ ಆಕ್ಷನ್-ಥ್ರಿಲ್ಲರ್ ಜಾನರ್‌ನಲ್ಲಿ ತಯಾರಾಗ್ತಿದೆ. ದಿಲ್‌ರಾಜು ಹಾಗೂ ಅಲ್ಲು ಸಿರಿಶ್ ಜಂಟಿಯಾಗಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಬಿಟೌನ್ ಬ್ಯೂಟಿ ಕಿಯಾರಾ ಅಡ್ವಾಣಿ ನಟ ರಾಮ್‌ಚರಣ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಅಂಜಲಿ, ಎಸ್.ಜೆ ಸೂರ್ಯ,ಜಯರಾಮ್, ಸುನೀಲ್, ಶ್ರೀಕಾಂತ್, ಸಮುದ್ರಕಣಿ, ನಾಸರ್ ಸೇರಿದಂತೆ ಹಲವು ತಾರೆಯರು ಗೇಮ್ ಚೇಂಜರ್ ಭಾಗವಾಗಿದ್ದಾರೆ. ಸದ್ಯ ವೈಸಾಗ್‌ನಲ್ಲಿ ಶೂಟಿಂಗ್ ನಡೀತಿದ್ದು, ಸೆಪ್ಟೆಂಬರ್‌ನಲ್ಲಿ ತೆರೆಗೆ ತರುವ ಪ್ಲಾನ್ ನಡೀತಿದೆ. ಚರಣ್ ಕೈಯಲ್ಲಿ ಗೇಮ್ ಚೇಂಜರ್ ಜೊತೆ ಬುಚ್ಚಿಬಾಬು ಸನಾ ನಿರ್ದೇಶನದ ಸಿನಿಮಾವಿದೆ. ಇತ್ತೀಚೆಗೆ ಆ ಸಿನಿಮಾದ ಮುಹೂರ್ತ ನೆರವೇರಿದ್ದು, ಬಿಟೌನ್ ಚೆಲುವೆ ಜಾಹ್ನವಿ ಕಪೂರ್ ಜೋಡಿಯಾಗಿದ್ದಾಳೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಅಡಿಯಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಆರ್-16 ಸಿನಿಮಾ ಮೂಡಿಬರಲಿದೆ.