ಬಿಟೌನ್ ಕಿಂಗ್ ಖಾನ್ ಶಾರುಖ್ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಮರೀಚಿಕೆಯಾಗಿದ್ದ ಗೆಲುವನ್ನ ಜವಾನ್, ಪಠಾಣ್, ಡಂಕಿ ಮೂಲಕ ಮರಳಿ ಪಡೆದಿರೋ ಬಾಲಿವುಡ್ ಬಾದ್ ಷಾ ಸಕ್ಸಸ್‌ನ ಸಂಭ್ರಮಿಸ್ತಿದ್ದಾರೆ. CNN News18 ಕೊಡಮಾಡುವ ‘ಇಂಡಿಯನ್ ಆಫ್ ದಿ ಇಯರ್ 2023’ಪ್ರಶಸ್ತಿಗೆ ಭಾಜನರಾದ ಕಿಂಗ್‌ಖಾನ್, ವೃತ್ತಿಬದುಕಲ್ಲಿ ಕಂಡ ಏಳುಬೀಳುಗಳು, 2023ನಲ್ಲಿ ಸಿಕ್ಕಂತಹ ಯಶಸ್ಸು ಎಲ್ಲದರ ಕುರಿತಾಗಿ ಮಾತನಾಡಿದರು. ಸಿನಿಕರಿಯರ್ ಮುಗಿದೇ ಹೋಯ್ತು ಅಂತ ಎಲ್ಲ ಮಾತನಾಡುವ ಹೊತ್ತಲ್ಲಿ ಸಮಸ್ತ ಸಿನಿಮಾ ಪ್ರೇಮಿಗಳು ಹಾಗೂ ಅಭಿಮಾನಿಗಳು ಕೈಹಿಡಿದರು. ನನ್ನ ಈ ಗೆಲುವನ್ನ ಅವರೆಲ್ಲರಿಗೂ ಅರ್ಪಿಸುತ್ತೇನೆ ಎಂದರು. ಇದೇ ವೇಳೆ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಮಣಿರತ್ನಂ ಅವರಿಗೆ ನಂಗೊಂದು ಸಿನಿಮಾ ಮಾಡಿ ಸರ್ ಅಂತ ಶಾರುಖ್ ಕೋರಿಕೊಂಡರು.
Shah Rukh Khan expressed his eagerness to work with Mani Ratnam, even going as far as to humorously mention dancing on top of a plane for a film collaboration. Additionally, he concluded by singing the song "Jiya Jale." #SRK #ManiRatnam #ARRahman
— Batman (@WGenZInfo1) January 11, 2024
ಅಂದ್ಹಾಗೇ, ಶಾರುಖ್ ಹಾಗೂ ಮಣಿರತ್ನಂ ಕಳೆದ 26 ವರ್ಷಗಳ ಹಿಂದೆ ಒಟ್ಟಿಗೆ ಕೆಲಸ ಮಾಡಿದ್ದರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಂತಹ ʻದಿಲ್ ಸೇʼ ಸಿನಿಮಾ ಸೂಪರ್ ಹಿಟ್ಟಾಗಿತ್ತು. ಈ ಚಿತ್ರದ ಹಾಡುಗಳು ಹೊಸದೊಂದು ಕ್ರೇಜ್ ಸೃಷ್ಟಿ ಮಾಡಿದ್ವು. ಅದರಲ್ಲಿಯೂ ʻಚಯ್ಯ ಚಯ್ಯʼ ಹಾಡು ಸಿನಿಮಾಪ್ರೇಮಿಗಳನ್ನ ಹುಚ್ಚೇಳುವಂತೆ ಮಾಡಿತ್ತು. ಅಂದಿನಿಂದ ಇವತ್ತಿನವರೆಗೂ ಈ ಜೋಡಿ ಮತ್ತೆ ಒಂದಾಗಬೇಕು, ಒಟ್ಟಿಗೆ ಸಿನಿಮಾ ಮಾಡಬೇಕು ಅಂತ ಪ್ರೇಕ್ಷಕರು ಒತ್ತಾಯಿಸುತ್ತಿದ್ದಾರೆ. ಆದರೆ, ಈ ಜೋಡಿ ಸಮಾಗಮಗೊಳ್ಳುವ ಸಮಯ ಸನ್ನಿಹಿತವಾಗಿಲ್ಲ. ಆದ್ರೀಗ, ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದು ಯಾವಾಗ ಮತ್ತೆ ಒಂದಾಗ್ತೀರಿ ಎನ್ನುವ ಪ್ರಶ್ನೆ ಅಭಿಮಾನಿಗಳಿಂದ ಎದುರಾಗಿದೆ. ಹೀಗಾಗಿ ಶಾರುಖ್ ದಿ ಗ್ರೇಟ್ ವಿಷನರಿ ಡೈರೆಕ್ಟರ್ ಮಣಿರತ್ನಂ ಮುಂದೆ ಬೇಡಿಕೆಯಿಟ್ಟಿದ್ದಾರೆ. ‘ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಬೇಕಿದ್ದರೆ ಬೇಡಿಕೊಳ್ಳುತ್ತೇನೆ. ದಯವಿಟ್ಟು ನನಗಾಗಿ ಒಂದು ಸಿನಿಮಾ ಮಾಡಿ. ನೀವು ಹೇಳಿದರೆ ವಿಮಾನದ ಮೇಲೆ ನಿಂತು ‘ಚಯ್ಯ ಚಯ್ಯ’ ಎಂದು ಡ್ಯಾನ್ಸ್ ಮಾಡುತ್ತೇನೆ’ ಎಂದಿದ್ದಾರೆ. ಇದಕ್ಕೆ ಮಣಿರತ್ನಂ ರಿಯಾಕ್ಷನ್ ಹೇಗಿತ್ತು? ಏನಂದ್ರು ಗೊತ್ತೆ? ಹೇಳ್ತೀವಿ ಕೇಳಿ
Shah Rukh Khan – I don't just feel like Indian of the year, I am an Indian of all the ages gone by. I will be the Indian of all the years to come. I am an Indian of all ages. pic.twitter.com/MtatBEDvoe
— sohom (@AwaaraHoon) January 10, 2024
ಶಾರುಖ್ ಜೊತೆ ಸಿನಿಮಾ ಮಾಡಬೇಕು ಅಂದರೆ ಮೊದಲು ನಾನು ವಿಮಾನ ಖರೀದಿ ಮಾಡಬೇಕು ಎಂದರು ಮಣಿರತ್ನಂ. ಇದಕ್ಕೆ ಶಾರುಖ್ ‘‘ನಾನು ನಿಮಗಾಗಿ ವಿಮಾನ ಖರೀದಿಸಲೇ’ ಎಂದು ಕೇಳಿದ್ರು. ಸುಮ್ನೆ ಹೇಳ್ತೀಲ್ಲ ನಾನು ಈಗ ನನ್ನೆಲ್ಲಾ ಸಿನಿಮಾಗಳು ಯಶಸ್ಸು ಕಾಣ್ತಿವೆ. ವಿಮಾನ ಖರೀದಿ ದೊಡ್ಡ ವಿಚಾರ ಅಲ್ಲʼ ಎಂದರು. ಈ ತಮಾಷೆಯೆ ಸಂಭಾಷಣೆಗೆ ಅಲ್ಲಿದ್ದವರು ನಕ್ಕು ನಲಿದರು. ಏನೇ ಇರಲಿ, ಈ ಕ್ರೇಜಿ ಕಾಂಬೋ ಮತ್ತೆ ಒಂದಾಗಬೇಕು. ಫ್ಲೈಟ್ ಮೇಲೇರಿ ನಿಂತು ಚಯ್ಯ ಚಯ್ಯ ಹಾಡಿಗೆ ಸ್ಟೆಪ್ ಹಾಕುವ ಕಿಂಗ್‌ಖಾನ್ ಕನಸು ಈಡೇರಬೇಕು ಅನ್ನೋದೇ ಅವರ ಫ್ಯಾನ್ಸ್ ಆಶಯ