Manjummel Boys:ʻಮಂಜುಮ್ಮೆಲ್ ಬಾಯ್ಸ್ʼ(Manjummel Boys) ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಮಾಲಿವುಡ್ ಸಿನಿಮಾ. ಕೇರಳ ಚಿತ್ರರಂಗ ಇತ್ತೀಚೆಗೆ ಉತ್ತಮ ಕಟೆಂಟ್ ಸಿನಿಮಾ ಮೂಲಕ ಗ್ಲೋಬಲ್ ಆಡಿಯನ್ಸ್ ಚಿತ್ತವನ್ನು ಕದಿಯುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ʻಮಂಜುಮ್ಮೆಲ್ ಬಾಯ್ಸ್ʼ. ಭಾರತೀಯ ಚಿತ್ರರಂಗ ಮಾತ್ರವಲ್ಲ ಗ್ಲೋಬಲ್ ಲೆವೆಲ್ನಲ್ಲೂ ಟಾಕ್ ಕ್ರಿಯೇಟ್ ಮಾಡಿರುವ ಒನ್ ಎಂಡ್ ಓನ್ಲಿ ಸಿನಿಮಾ ಅದ್ರೆ ಅದು ʻಮಂಜುಮ್ಮೆಲ್ ಬಾಯ್ಸ್ʼ(Manjummel Boys) ಸಿನಿಮಾ.
ಕಡಿಮೆ ಬಜೆಟ್ನಲ್ಲಿ ಸೆಟ್ಟೇರಿ ಸದ್ದಿಲ್ಲದೇ ಥಿಯೇಟರ್ ಅಂಗಳಕ್ಕೆ ಎಂಟ್ರಿ ಕೊಟ್ಟ ನೈಜ ಘಟನೆ ಆಧಾರಿತ ಸಿನಿಮಾ ʻಮಂಜುಮ್ಮೆಲ್ ಬಾಯ್ಸ್ʼ(Manjummel Boys). ಬಾಕ್ಸ್ ಆಫೀಸ್ನಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಬರೆಯುತ್ತಿರುವ ಈ ಚಿತ್ರ 200ಕೋಟಿ ಕ್ಲಬ್ ದಾಟಿದ ಮೊದಲ ಮಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶ, ಭಾಷೆ ಎಲ್ಲೆ ಮೀರಿ ಟಾಕ್ ಕ್ರಿಯೇಟ್ ಮಾಡಿರುವ ಚಿತ್ರ ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಸೂಪರ್ ಸಕ್ಸಸ್ ಕಂಡ ಸಿನಿಮಾದ ತೆಲುಗು ಡಬ್ಬಿಂಗ್ ರೈಟ್ಸ್ ಮೈತ್ರಿ ಮೂವಿ ಮೇಕರ್ಸ್ ಪಡೆದುಕೊಂಡಿದ್ದು, ಏಪ್ರಿಲ್ 6ರಂದು ತೆಲುಗಿನಲ್ಲಿ ತೆರೆ ಕಾಣುತ್ತಿದೆ.
ರಜನಿಕಾಂತ್, ಕಮಲ್ ಹಾಸನ್ ಒಳಗೊಂಡಂತೆ ಸ್ಟಾರ್ ಹೀರೋಗಳು ಮನಸೋತ ಈ ಚಿತ್ರದ ಸೂತ್ರದಾರ ಚಿದಂಬರಂ(Chidambaram). ಹೊಸ ಪ್ರತಿಭೆಗಳೊಂದಿಗೆ ನೈಜ ಘಟನೆಯನ್ನು ಸಿನಿಮ್ಯಾಟಿಕ್ ಶೈಲಿಯಲ್ಲಿ ತೆರೆಗೆ ತಂದು ಚಿದಂಬರಂ ಗೆದ್ದಿದ್ದಾರೆ. ಚಿತ್ರಮಂದಿರದಲ್ಲಿ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರ 225 ಕೋಟಿ ಕಲೆಕ್ಷನ್ ಮಾಡಿದೆ. ಬಹು ದೊಡ್ಡ ಸಕ್ಸಸ್ ಕಂಡ ಸಿನಿಮಾವನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತೆಲುಗು ಆಡಿಯನ್ಸ್ ಮುಂದೆ ಏಪ್ರಿಲ್ 6ಕ್ಕೆ ತರುತ್ತಿದೆ.