Manjummel Boys: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್(Rajinikanth). ಪ್ರಪಂಚದಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ರಜನಿ ಸಿನಿಮಾ ಪ್ರೀತಿ ದೇಶ, ಭಾಷೆ ಗಡಿ ಎಲ್ಲೇ ಮೀರಿದ್ದು. ಕೇವಲ ತಮ್ಮ ಸಿನಿಮಾ ಮಾತ್ರವಲ್ಲ ಉತ್ತಮ ಸಿನಿಮಾ ಯಾವುದೇ ಬಂದರೂ ಖುದ್ದು ತಾವೇ ಆ ಸಿನಿಮಾ ನೋಡಿ ಚಿತ್ರತಂಡಕ್ಕೆ ವಿಶೇಷ ಪ್ರೀತಿ ತೋರುತ್ತಾರೆ. ಇದೀಗ ಮತ್ತೊಂದು ಸಿನಿಮಾ ತಲೈವಾ ಮನ ಸೋಲುವಂತೆ ಮಾಡಿದೆ.
ʻಮಂಜುಮಲ್ ಬಾಯ್ಸ್ʼ(Manjummel Boys) ಸದ್ಯ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಸೌತ್ ಇಂಡಿಯನ್ ಸಿನಿಮಾ. ಮಾಲಿವುಡ್ ಸಿನಿಮಾ ರಂಗದಿಂದ ಮೂಡಿ ಬಂದ ಈ ಚಿತ್ರ ಕೇರಳದಾದ್ಯಂತ ಮಾತ್ರವಲ್ಲ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಯಾರ ಬಾಯಲ್ಲಿ ಕೇಳಿದ್ರೂ ಈ ಸಿನಿಮಾದ್ದೇ ಮಾತು. ದೇಶ, ಭಾಷೆ ಗಡಿ ಎಲ್ಲೇ ಮೀರಿ ದಿನದಿಂದ ದಿನಕ್ಕೆ ಈ ಸಿನಿಮಾ ಖ್ಯಾತಿ ಹೆಚ್ಚಾಗುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಬರೆಯುತ್ತಿರುವ ಈ ಚಿತ್ರವನ್ನು ಸ್ಟಾರ್ ನಟರು ನೋಡಿ ಭೇಷ್ ಎಂದಿದ್ದರು. ಇದೀಗ ಕ್ರೇಜ಼್ ಸೃಷ್ಟಿಸಿರುವ ಈ ಸಿನಿಮಾಗೆ ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಕೂಡ ಮನ ಸೋತಿದ್ದಾರೆ. ಸ್ಪೆಷಲ್ ಸ್ಕ್ರೀನಿಂಗ್‌ನಲ್ಲಿ ಸಿನಿಮಾ ನೋಡಿ ಫಿದಾ ಆಗಿದ್ದಾರೆ.
ʻಮಂಜುಮಲ್ ಬಾಯ್ಸ್ʼ(Manjummel Boys) ಸಿನಿಮಾ ನೋಡಿ ತಲೈವಾ ದಿಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ಸಿನಿಮಾ ತಂಡವನ್ನು ಮನೆಗೆ ಆಹ್ವಾನಿಸಿ ಅವರೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಸಿನಿಮಾ ತಂಡ, ನಿರ್ದೇಶಕ ಚಿದಂಬರಂ(Chidambaram)ರನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಚಿತ್ರತಂಡಕ್ಕೆ ಒಂದಿಷ್ಟು ಹಿತವಚನವನ್ನು ಹೇಳಿದ್ದಾರೆ ಸೂಪರ್ ಸ್ಟಾರ್. ಸಾಮಾಜಿಕ ಜಾಲತಾಣದಲ್ಲಿ ʻಮಂಜುಮಲ್ ಬಾಯ್ಸ್ʼ ತಲೈವಾ ಭೇಟಿಯಾದ ಫೋಟೋಗಳು ವೈರಲ್ ಆಗಿದ್ದು, ಸಿನಿಮಾ ತಂಡ ಕೂಡ ಸೂಪರ್ ಸ್ಟಾರ್ ಭೇಟಿಯಿಂದ ಪರಮಾನಂದಗೊಂಡಿದೆ.
ಚಿಕ್ಕ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಇಂದು ಪ್ರಪಂಚದಾದ್ಯಂತ ಪ್ರಶಂಸೆ ಗಳಿಸಿಕೊಳ್ಳುವುದರ ಜೊತೆಗೆ 200 ಕೋಟಿ ಕ್ಲಬ್ ಸೇರಿಕೊಂಡಿದೆ. ಯಾವುದೇ ಸ್ಟಾರ್ ನಟರಿಲ್ಲದೇ ಕೇವಲ ಕಂಟೆಂಟ್ ಮೂಲಕವೇ ಗಮನ ಸೆಳೆದ ಸಿನಿಮಾವೊಂದು ಮಾಲಿವುಡ್‌ನಲ್ಲಿ ಈ ಮಟ್ಟಿಗಿನ ಕ್ರೇಜ಼್, ಈ ಮಟ್ಟಿಗಿನ ಗಳಿಕೆ ಕಂಡಿದ್ದು ಇದೇ ಮೊದಲು ಅನ್ನೋದು ವಿಶೇಷ.