ʻಮಾರ್ಟಿನ್ʼ(Martin).. ಸ್ಯಾಂಡಲ್ ವುಡ್ ಅಂಗಳದ ಬಹು ನಿರೀಕ್ಷಿತ ಸಿನಿಮಾ.. ನಟ, ನಿರ್ದೇಶಕ, ಬಜೆಟ್ ಹಾಗೂ ಚಿತ್ರದ ಅದ್ದೂರಿ ಮೇಕಿಂಗ್‌ನಿಂದ ಸದಾ ಸುದ್ದಿಯಲ್ಲಿರುವ ಸಿನಿಮಾ. ಚಿತ್ರದ ನಯಾ ಸುದ್ದಿಗಳು ಒಂದೊಂದಾಗೆ ತೇಲಿ ಬರ್ತಿದ್ದಂಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಅಭಿಮಾನಿ ಬಳಗದಲ್ಲೂ ಸಿನಿಮಾ ನೋಡುವ ಕಿಚ್ಚು ಜೋರಾಗಿದೆ. ಬರೋಬ್ಬರಿ 240 ದಿನ ಚಿತ್ರೀಕರಣ ಮುಗಿಸಿ ಸುದ್ದಿಯಾಗಿದ್ದ ಚಿತ್ರತಂಡ ಇದೀಗ ಚಿತ್ರದ ಡಬ್ಬಿಂಗ್ ಕಂಪ್ಲೀಟ್ ಮಾಡಿದೆ.
ʻಮಾರ್ಟಿನ್ʻ(Martin),, ಗಾಂದೀನಗರದಲ್ಲಿ ಸಖತ್ ಸದ್ದು, ಸುದ್ದಿಯಲ್ಲಿರುವ ಸಿನಿಮಾ. ಆಕ್ಷನ್ ಪ್ರಿನ್ಸ್(Action Prince) ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟನಾಗಿ ತೆರೆಮೇಲೆ ಮಿಂಚಲಿದ್ದಾರೆ. ಈ ಚಿತ್ರದ ಮೇಲೆ ಇನ್ನಿಲ್ಲದ ನಿರೀಕ್ಷೆ ಮೂಡಲು ಮತ್ತೊಂದು ಕಾರಣ ಹೀರೋ – ಡೈರೆಕ್ಟರ್ ಕಾಂಬಿನೇಶನ್. ಹೌದು, ಧ್ರುವ ಸರ್ಜಾ(Dhruva Sarja) ಗೆ ಬಿಗ್ ಬ್ರೇಕ್ ತಂದುಕೊಟ್ಟ ʻಅದ್ದೂರಿʼ ಸಿನಿಮಾ ಕಾಂಬೋ ಮಾರ್ಟಿನ್ ನಲ್ಲಿ ಮತ್ತೆ ಒಂದಾಗಿದೆ. ಎ.ಪಿ ಅರ್ಜುನ್(A.P.Arjun) ಅದ್ದೂರಿಯಲ್ಲಿ ಸೃಷ್ಟಿಸಿದ್ದ ಮ್ಯಾಜಿಕನ್ನು ಮತ್ತೊಮ್ಮೆ ಆಕ್ಷನ್ ಪ್ರಿನ್ಸ್(Action Prince) ಜೊತೆ ಸೇರಿ ಸೃಷ್ಟಿಸಲು ಹೊರಟಿರುವ ಸಿನಿಮಾ. ಸಹಜವಾಗಿಯೇ ಈ ಹಿಟ್ ಕಾಂಬೋ ಒಂದಾದಲ್ಲಿಂದ ಸಿನಿಮಾ ಮೇಲೂ ಇನ್ನಿಲ್ಲದ ನಿರೀಕ್ಷೆ ಹುಟ್ಟಕೊಂಡಿದೆ. ಇತ್ತೀಚೆಗೆ ಲಾಂಗ್ ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡದಿಂದ ಡಬ್ಬಿಂಗ್ ಕಂಪ್ಲೀಟ್ ಆದ ಸುದ್ದಿ ತೇಲಿ ಬಂದಿದ್ದು ಇನ್ಮೇಲಿಂದ ಮಾರ್ಟಿನ್(Martin) ನಯಾ ಸಮಾಚಾರಗಳು ಸಿನಿಮಾ ಪ್ರೇಕ್ಷಕರನ್ನು ಕ್ಯೂರಿಯಸ್‌ಗೊಳಿಸೋದಂತು ಸತ್ಯ.
ಮಾರ್ಟಿನ್(Martin) ನಲ್ಲಿ ಧ್ರುವ ನಯಾ ಅವತಾರ ತಾಳಿದ್ದಾರೆ. ಪೋಸ್ಟರ್ ಗಳಲ್ಲಿ ಆಕ್ಷನ್ ಪ್ರಿನ್ಸ್(Action Prince) ಲುಕ್ ನೋಡಿ ಕಿಕ್ಕೇರಿಸಿಕ್ಕೊಂಡಿರುವ ಭಕ್ತಗಣ ಸಿನಿಮಾಗಾಗಿ ಬರೋಬ್ಬರಿ ಎರಡು ವರ್ಷದಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನಿರ್ದೇಶಕರೇ ಹೇಳುವಂತೆ ಸುಮಾರು 90 ಕೋಟಿ ವೆಚ್ಚದಲ್ಲಿ ಮಾರ್ಟಿನ್(Martin) ಸಿನಿಮಾ ತಯಾರಾಗಿದೆ. ಹಾಗಾಗಿ ಅದ್ದೂರಿತನಕ್ಕೇನು ಇಲ್ಲಿ ಕೊರತೆಯಿಲ್ಲ ಅನ್ನೋದು ಕನ್ಫರ್ಮ್. ಅರ್ಜುನ್ ಸರ್ಜಾ(Arjun Sarja) ಕಥೆಯಲ್ಲಿ ಅರಳಿರುವ ಮಾರ್ಟಿನ್(Martin) ಈಗಾಗಲೇ ಟೀಸರ್ ಮೂಲಕ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಮೇಕಿಂಗ್ ಝಲಕ್ ಕೂಡ ಸಿಕ್ಕಾಪಟ್ಟೆ ಪ್ರಾಮಿಸಿಂಗ್ ಆಗಿದೆ. ಇದೆಲ್ಲವೂ ಮಾರ್ಟಿನ್ ಮೇಲೆ ಇನ್ನಿಲ್ಲದ ನಿರೀಕ್ಷೆ ಮೂಡಲು ಕಾರಣ.
ಉದಯ್ ಕೆ ಮೆಹ್ತಾ(Uday K Mehta) ಅದ್ದೂರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಮಣಿ ಶರ್ಮಾ ಸಂಗೀತ, ರವಿ ಬಸ್ರೂರು(Ravi Basrur) ಹಿನ್ನೆಲೆ ಸಂಗೀತ, ಸತ್ಯ ಹೆಗ್ಡೆ(Sathya Hegde) ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಹೀಗೆ ಘಟಾನುಘಟಿ ತಾಂತ್ರಿಕ ಬಳಗ ಹೊಂದಿರುವ ಈ ಚಿತ್ರಕ್ಕೆ ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್ ನಾಯಕಿಯರು. ಮಾಳವಿಕ ಅವಿನಾಶ್(Malavika Avinash), ಅಚ್ಯುತ್ ಕುಮಾರ್(Achyuth Kumar), ಚಿಕ್ಕಣ್ಣ(Chikkanna) ಒಳಗೊಂಡ ಬಹು ದೊಡ್ಡ ತಾರಾಗಣವೂ ಚಿತ್ರದಲ್ಲಿದೆ.