Dhruva Sarja: ಸ್ಯಾಂಡಲ್‌ವುಡ್ ಅಂಗಳ ಸ್ಟಾರ್ ನಟರ ಸಿನಿಮಾಗಳಿಲ್ಲದೆ ಬಳಲಿ ಬೆಂಡಾಗಿದೆ. ಇತ್ತ ಚಿತ್ರಂಂದಿರಗಳು ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿವೆ. ಯಾವ ಸ್ಟಾರ್ ನಟರತ್ತ ಕಣ್ಣು ಹೊರಳಿಸಿದ್ರು ಸಿನಿಮಾ ಬಗ್ಗೆ ಅಪ್ಡೇಟ್ ಸಿಗುತ್ತಿಲ್ಲ. ಒಂದೊಂದೇ ಚಿತ್ರಮಂದಿರಗಳು ಇತಿಹಾಸ ಪುಟ ಸೇರುತ್ತಿವೆ. ಇದರ ನಡುವೆ ಬಹಳ ನಿರೀಕ್ಷೆ ಮೂಡಿಸಿರುವ ಸಿನಿಮಾಗಳು ಶೂಟಿಂಗ್ ಮುಗಿದರೂ ಒಳ ಜಗಳ, ಚಿತ್ರತಂಡದಲ್ಲಿನ ವೈಮನಸ್ಸಿನ ಕಾರಣಕ್ಕೆ ಮುಂದೂಡಲ್ಪಡುತ್ತಿದೆ. ಇದಕ್ಕೆ ಎಕ್ಸಾಂಪಲ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ.
ಮಾರ್ಟಿನ್(Martin) ಶೂಟಿಂಗ್ ಕಂಪ್ಲೀಟ್ ಆಗಿ ಐದು ತಿಂಗಳು ಕಳೆದರೂ ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಸಿನಿಮಾ ಯಾವಾಗ ಸಾರ್ ಎಂದ್ರೆ ಯಾಕ್ರೋ ಕೇಳಿ ಕೇಳಿ ಮುಜುಗರ ಪಡಿಸ್ತೀರಾ ಅಂತಿದ್ದಾರೆ ನಿರ್ದೇಶಕರು. ಇದ್ರ ಮಧ್ಯೆ ಧ್ರುವ(Dhruva Sarja) ಕೂಡ ಹಟಾತ್ ನಿರಾಸೆಗೊಂಡತಿದ್ದು, ನಟನಾಗಿ ನಂಗೂ ಆದಷ್ಟು ಬೇಗ ಅಪ್ಡೇಟ್ ಕೊಡಬೇಕೆಂದು ಆಸೆ ಇದೆ. ನನಗಿಂತ ಪ್ರೊಡ್ಯೂಸರ್‌ಗೆ ಈ ಬಗ್ಗೆ ಆಸಕ್ತಿ ಹೆಚ್ಚಿರಬೇಕು,…. ಪ್ರೊಡ್ಯೂಸರ್, ಡೈರೆಕ್ಟರ್ ಇಬ್ಬರು ಕಾಲ್ ತೆಗೆದುಕೊಂಡು ರಿಲೀಸ್ ಡೇಟ್ ಬಗ್ಗೆ ಮಾಹಿತಿ ನೀಡಬೇಕು ಎಂದಿದ್ದಾರೆ. ಧ್ರುವ ಹೇಳಿಕೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಆಕ್ಷನ್ ಪ್ರಿನ್ಸ್ ಈ ಹೇಳಿಕೆ ಚಿತ್ರತಂಡದಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿದ್ಯಾ ಎನ್ನುವ ಅನುಮಾನವನ್ನು ಹುಟ್ಟು ಹಾಕಿದೆ. ನಿರ್ದೇಶಕ ಎ.ಪಿ. ಅರ್ಜುನ್(AP.Arjuņ)ನಿರ್ಮಾಪಕ ಉದಯ್ ಕೆ ಮೆಹ್ತಾ ನಡುವೆ ಸಂಭಾವನೆ, ಸಿನಿಮಾ ಸ್ಕೇಲ್ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳು ಗಾಂದೀನಗರದ ತುಂಬೆಲ್ಲ ಪಸರ್ ಆಗಿತ್ತು. ಈ ವಿಚಾರ ಜಗಜ್ಜಾಹೀರು ಆಗ್ತಿದ್ದಂತೆ ಇಬ್ಬರು ಒಟ್ಟಿಗೆ ವಿಡಿಯೋ ಮಾಡಿ ನಾವಿಬ್ಬರು ಚೆನ್ನಾಗಿದ್ದಿವಿ, ಇದೆಲ್ಲಾ ರೂಮರ್ಸ್ ಅಷ್ಟೇ ಎಂದಿದ್ರು. ಆದ್ರೆ ಧ್ರುವ ಲೇಟೆಸ್ಟ್ ಹೇಳಿಕೆ ನೋಡ್ತಿದ್ರೆ ನಿರ್ದೇಶಕ ಹಾಗೂ ನಿರ್ಮಾಪಕರ ಕೋಲ್ಡ್ ವಾರ್ ಮುಗಿದಂತೆ ಕಾಣುತ್ತಿಲ್ಲ.
ನಿರ್ದೇಶಕ ಎ.ಪಿ ಅರ್ಜುನ್ ಮಾತ್ರ ಸಿನಿಮಾದಲ್ಲಿ ಅರ್ಧಕ್ಕರ್ಧ ಸಿಜಿ ವರ್ಕ್ ಇದೆ. ಅದು ಮುಗಿಯದೇ ರಿಲೀಸ್ ಡೇಟ್ ಅನೌನ್ಸ್ ಮಾಡೋದು ಕಷ್ಟ ಅಂತಿದ್ದಾರೆ. ಯಾವುದು ನಿಜವೋ, ಯಾವುದು ಸುಳ್ಳೋ ಬಲ್ಲವರಿಲ್ಲ. ಆದ್ರೆ ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ ಮಾರ್ಟಿನ್(Martin) ರಿಲೀಸ್ ಮುಂದೂಡಲ್ಪಡುತ್ತಿದೆ.