ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

massage parlour scandals: ಐಟಿ ಸಿಟಿಯನ್ನು ಆವರಿಸಿಕೊಂಡಿದೆ ಸ್ಪಾ ದಂಧೆ!

Majja Webdeskby Majja Webdesk
27/03/2025
in Majja Special
Reading Time: 1 min read
massage parlour scandals: ಐಟಿ ಸಿಟಿಯನ್ನು ಆವರಿಸಿಕೊಂಡಿದೆ ಸ್ಪಾ ದಂಧೆ!

-ಕಣ್ಣು ಕೋರೈಸೋ ಸ್ಪಾದೊಳಗೆ ಏನೇನು ನಡೆಯುತ್ತೆ?

-ಮಸಾಜ್ ಪಾರ್ಲರ್ ಎಂಬೋ ಮಾಯಾಲೋಕ!

 

ಹೊರಗೆ ಸೌಂದರ್ಯ ಕಾಳಜಿಯ ರಂಗು ರಂಗಿನ ಬೋರ್ಡು, ಒಳಗೆ ಕಾಮದ ಕಥಕ್ಕಳಿ… ಇದು ಬೆಂಗಳೂರಿನ ತುಂಬಾ ಹಬ್ಬಿಕೊಂಡಿರುವ ಮಸಾಜ್ ಸೆಂಟರ್ ಅರ್ಥಾತ್ ಸ್ಪಾಗಳ ಅಸಲಿ ಅಂತರಾಳ. ಐಟಿ ಸಿಟಿಯ ನಿಯಾನ್ ದೀಪಗಳಾಚೆಗಿನ ಮಿಣುಕು ಕತ್ತಲಲ್ಲಿ ನಡೆಯುವ ವೇಶ್ಯಾ ದಂಧೆಯದ್ದೇ ಒಂದು ತೂಕವಾದರೆ, ಬೃಹತ್ ಮಹಲುಗಳಲ್ಲಿ ನಡೆಯುವ ಇಂಥಾ ಮಸಾಜ್ ಪಾರ್ಲರುಗಳಲ್ಲಿ ಚಾಲ್ತಿಯಲ್ಲಿರುವ ಸೆಕ್ಸ್ ರ್‍ಯಾಕೆಟ್ಟಿನದ್ದೇ ಮತ್ತೊಂದು ತೂಕ. ಇತ್ತೀಚೆಗಂತೂ ನಗರದ ತುಂಬಾ ಇಂಥಾ ಹೈಟೆಕ್ ವೇಶ್ಯಾ ಅಡ್ಡೆಗಳು ಎಗ್ಗಿಲ್ಲದೆ ದಂಧೆ ನಡೆಸುತ್ತಿವೆ. ಪಿಂಪ್‌ಗಳಂತೂ ಯಾವುದೇ ಭಯವಿಲ್ಲದೆ ಗಿರಾಕಿ ಹುಡುಕಿ ಕಾಸು ಪೀಕುವ ಕೆಲಸದಲ್ಲಿ ಫುಲ್ ಬ್ಯುಸಿ. ಈವತ್ತಿಗೆ ಇಡೀ ಬೆಂಗಳೂರಿನ ಸ್ವಾಸ್ಥ್ಯಕ್ಕೆ ಇಂಥಾ ಮಸಾಜ್ ಪಾರ್ಲರುಗಳು, ಸ್ಪಾಗಳು ಅಕ್ಷರಶಃ ಕಂಟಕಪ್ರಾಯವಾಗಿ ಬಿಟ್ಟಿವೆ. ಅದರೊಳಗೆರ ಅದೇನೇನು ನಡೆಯುತ್ತವೆಂದು ಹುಡುಕ ಹೋದರೆ ನಿಜಕ್ಕೂ ಕಂಗಾಲಾಗುವಂತಾಗುತ್ತೆ.
ಬೆಂಗಳೂರಿನ ಸಖಲ ಏರಿಯಾಗಳಲ್ಲಿಯೂ ಪ್ರಳಯಾಂತಕ ಆಸಾಮಿಗಳ ಸಾರಥ್ಯದಲ್ಲಿ ಮಸಾಜ್ ಸೆಂಟರುಗಳು ತಲೆಯೆತ್ತಿವೆ. ಅದರಲ್ಲಿ ಬಹುತೇಕ ವೇಶ್ಯಾ ದಂಧೆಯ ಕಾರಸ್ಥಾನಗಳಾಗಿ ಬದಲಾಗಿವೆ. ಮರ್ಯಾದಸ್ಥರು ವಾಸಿಸುವ ಪ್ರದೇಶಗಳಲ್ಲಿ ಇಂಥಾ ಅಡ್ಡೆಗಳು ತಲೆಯೆತ್ತಿ ನೆಮ್ಮದಿಯಾಗಿ ಓಡಾಡಲೂ ಆಗದ ಪರಿಸ್ಥಿತಿ ಇದೆ. ಇಂಥಾ ಅಡ್ಡೆಗಳ ಸುತ್ತ ಪುಂಡ ಪೋಕರಿಗಳು ಎಣ್ಣೆ ಹೊಡೆದು ಓಲಾಡಿದರೂ, ಅಲ್ಲಿ ಬೇರೆ ದಂಧೆ ನಡೆಯುತ್ತಿದೆ ಅಂತ ಮೇಲು ನೋಟಕ್ಕೇ ಗೊತ್ತಾದರೂ ಈ ವ್ಯವಸ್ಥೆ ಏಕೆ ಸುಮ್ಮನಿದೆ ಅಂತೊಂದು ಅನುಮಾನ ಯಾರನ್ನಾದರೂ ಕಾಡದೇ ಇರುವುದಿಲ್ಲ.

ಎಂಥಾ ದಂಧೆ?

ಕೆಲ ವರ್ಷಗಳ ಹಿಂದೆ ಪ್ರತಿಷ್ಟಿತ ಏರಿಯಾಗಳಿಗೆ ಮಾತ್ರ ಸೀಮಿತವಾಗಿದ್ದ ಇಂಥಾ ಬಾಡಿ ಮಸಾಜ್ ಸೆಂಟರ್‌ಗಳು ಈವತ್ತು ಗಲ್ಲಿ ಗಲ್ಲಿಗಳಲ್ಲಿಯೂ ಪಿತಗುಡಲಾರಂಭಿಸಿದೆ. ಹಾದಿ ಬಟ್ಟ ಹೈವಾನ್‌ಗಳ ಪಾಲಿಗಿದು ಅಕ್ಷರಶಃ ಲಾಭದಾಯಕ ದಂಧೆ. ಸದ್ಯ ಈ ದಂಧೆಯಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಸಕ್ರಿಯರಾಗಿದ್ದಾರಾದರೂ, ಇದರ ಡಾನ್‌ಗಳಂತಿರುವ ಹಳೇ ಖದೀಮರೇ ಇಂದಿಗೂ ಮೆರೆಯುತ್ತಿದ್ದಾರೆ. ಮುಖ್ಯ ಮಸಾಜ್ ಸೆಂಟರ್‌ಗಳ ಬಾಸ್‌ಗಳಲ್ಲಿ ಮೋಹಿನ್, ಬ್ರಿಗೇಡ್ ನಟರಾಜ್, ನವೀನ್, ಬಾಲಕೃಷ್ಣ, ದಿನೇಶ್, ಚೌಡೇಶ, ಹ್ಯಾರಿ, ಮೂರ್ತಿ, ಗುರು, ಗೋವಿಂದ, ಸ್ವಾತಿ, ಸಂಧ್ಯಾ, ಪ್ರಕಾಶ್ ಸೇರಿದ್ದಾರೆ. ಇವರಲ್ಲಿ ಬಾಲಕೃಷ್ಣ, ಕಮಲ್, ಮೋಹಿನ್ ಮತ್ತು ದಿನೇಶ ಭಾರೀ ಕುಳಗಳು. ಇವರಲ್ಲಿ ಪ್ರತಿಯೊಬ್ಬರೂ ಏಳೆಂಟು ಹೈಟೆಕ್ ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ.
ಈ ದಿನೇಶ ಜೆಪಿ ನಗರದ ಸಿಂಧೂರ ಕಲ್ಯಾಣ ಮಂಟಪದ ಎದುರಿನ ಕಟ್ಟಡದಲ್ಲಿ ದಂಧೆ ನಡೆಸಿದರೆ, ಕಮಲ್ ಹಾಗೂ ಮುನ್ನಾ ಬಿಟಿಎಂ ಲೇಜೌಟಿನಲ್ಲಿ ಜಂಟಿಯಾಗಿ ಫೀಲ್ಡಿನಲ್ಲಿದ್ದಾರೆ. ಇನ್ನು ಮೂಲತಃ ದೇವನಹಳ್ಳಿಯವನಾದ ನವೀನನಿಗೆ ಜೆಸಿ ನಗರದಲ್ಲಿ ಮೂರ್ನಾಲ್ಕು ಪಾರ್ಲರುಗಳಿವೆ. ಇನ್ನುಳಿದಂತೆ ಚೌಡೇಶ ವಸಂತನಗರದಲ್ಲಿ, ಹ್ಯಾರಿ ಎಂಬಾತ ಸಂಜಯನಗರದ ಕಾಫಿ ಡೇ ಪಕ್ಕದಲ್ಲಿ, ಸ್ವಾತಿ ಹೆಚ್‌ಎಸ್ಸಾರ್ ಲೇಜೌಟಿನಲ್ಲಿ, ಪ್ರಕಾಶ ಕೆಆರ್ ಪುರದಲ್ಲಿ ರಾಜಾರೋಷವಾಗಿಯೇ ದಂಧೆ ನಡೆಸುತ್ತಿದ್ದಾರೆ. ಇಂಥಾ ಸ್ಪಾಗಳ ಹಳೇ ಕುಳವಾದ ಗೋವಿಂದ ಎಂಬ ಬಿಡ್ ಪಿಂಪ್ ಒಬ್ಬನ ಖಾಸಾ ತಂಗಿಯಾದ ಸಂದ್ಯಾ ಎಂಬಾಕೆ ಬಾಣಸವಾಗಿಯಲ್ಲಿ ಈ ಹಲಾಲು ಕೆಲಸ ನಡೆಸುತ್ತಿದ್ದಾಳೆ.
ಈ ಪ್ರಮುಖ ಸ್ಪಾಗಳ ಬಾಸ್‌ಗಳಿದ್ದಾರಲ್ಲಾ? ಇವರೆಲ್ಲರೂ ಎಸಿಪಿಯೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ, ಆದುದರಿಂದಲೇ ಒಂದು ರೂಪಾಯಿ ಆಚೀಚೆ ಆಗುವಂತಿಲ್ಲ ಅಂತಲೂ ಪೇದೆ ಶ್ರೀನಿವಾಸ ಹಲುಬಾಡುತ್ತಾನಂತೆ. ಇದಲ್ಲದೆ ಸಣ್ಣ ಮಟ್ಟದಲ್ಲಿ ನಡೆಯುವ ದಂಧೆಕೋರರಿಂದಲೂ ಶ್ರೀನಿವಾಸ ವಾರದ ಲೆಕ್ಕದಲ್ಲಿ ವಸೂಲಿ ಮಾಡುತ್ತಿದ್ದಾನೆಂಬ ಆರೋಪಗಳೂ ಇವೆ. ಹಾಗಂತ ಈ ಶ್ರೀನಿವಾಸನಿಗೆ ಕಲೆಕ್ಷನ್ ಸಲೀಸು. ಯಾಕೆಂದರೆ, ಸರ್ಕಾರಿ ಸಂಬಳವಾದರೂ ಒಂದೆರಡು ದಿನ ವೈತ್ಯಾಸವಾಗಬಹುದು. ಆದರೆ ಈ ದಂಧೆಕೋರರು ನಿಗಧಿತ ದಿನದಂದೇ ಪಕ್ಕಾ ಪೇಮೆಂಟ್ ಮಾಡುತ್ತಾರೆ. ಇವರೆಲ್ಲರ ಕೈಕೆಳಗೆ ನೂರಾರು ಪಿಂಪ್‌ಗಳು ಸಕ್ರಿಯರಾಗಿದ್ದಾರೆ. ಇಲ್ಲಿಗೆ ಹೆಚ್ಚಿನದಾಗಿ ಉತ್ತರಭಾರತ ಮೂಲದ ಹುಡುಗೀರನ್ನೇ ಪಿಂಪ್‌ಗಳ ಮೂಲಕ ಕರೆಸಿಕೊಳ್ಳಲಾಗುತ್ತಿದೆ.

ಸ್ಪಾ ಅಂದ್ರೆ ಸಮುದ್ರ!


ಈ ದಂಧೆಯನ್ನು ಮಟ್ಟ ಹಾಕಲು ಗಂಭೀರವಾಗಿ ಚಿಂತಿಸಿ ಕ್ರಮ ಕೈಗೊಳ್ಳಬೇಕಿದೆ. ಇಂಥಾ ಅಡ್ಡೆಗಳಿಂದ ನಗರದ ಸ್ವಾಸ್ಥ್ಯ ಹಾಳಾಗೋದಲ್ಲದೆ ಅಮಾಯಕರೂ ಕೂಡಾ ಈ ಚಕ್ರಸುಳಿಗೆ ಸಿಕ್ಕು ಕಂಗಾಲಾಗುತ್ತಿದ್ದಾರೆ. ಈ ದಂಧೆಯನ್ನು ಬೇರು ಸಮೇತ ಕಿತ್ತೊಗೆದು, ಇಂಥಾ ದುಷ್ಟರನ್ನೇ ಆದಾಯ ಮೂಲವಾಗಿಸಿಕೊಂಡಿರುವ ಇಲಾಖೆಯ ಮಂದಿಗೂ ಈ ಮಸಾಜ್ ಸೆಂಟರುಗಳು ಬೆಂಗಳೂರಿನಂಥಾ ನಗರಗಳಲ್ಲಿ `ಸ್ಪಾ’ ಹೆಸರಿನಲ್ಲಿ ಭಾರೀ ದಂಧೆ ನಡೆಸುತ್ತಿವೆ. ಹೊರಗೆ ರಂಗು ರಂಗಿನ ಬೋರ್ಡು ತಗುಲಿಸಿಕೊಂಡಿರುವ ಇಂಥಾ ಸ್ಪಾಗಳ ಒಳಗಿನದ್ದು ಅಕ್ಷರಶಃ ಕತ್ತಲ ಸಾಮ್ರಾಜ್ಯ. ವೆರೈಟಿ ವೆರೈಟಿಯಾಗಿ ಮೈ ಉಜ್ಜಿಸಿಕೊಳ್ಳುವ ಜೊತೆ ಜೊತೆಗೇ ಇಲ್ಲಿ ನಡೆಯೋದು ಅಕ್ಷರಶಃ ಹಡಬೆ ದಂಧೆ. ಒಟ್ಟಾರೆಯಾಗಿ ಅದು ಕೊಳಕು ಕೊಚ್ಚೆಯ ಸಮೃದ್ಧ ಸಮುದ್ರ!
ಅಷ್ಟಕ್ಕೂ ಈ `ಸ್ಪಾ’ ಅಂದರೆ ಏನರ್ಥ ಅಂತ ಹುಡುಕುತ್ತಾ ಸಾಗಿದರೆ ಕೆಲ ಕೌತುಕದ ಅಂಶಗಳು ಅನಾವರಣಗೊಳ್ಳುತ್ತವೆ. ಅಸಲಿಗೆ ಸ್ಪಾ ಎಂಬೋ ಪದ ಸ್ಪ್ಯಾನಿಷ್ ಭಾಷೆಯದ್ದು. ಅದರ ಅರ್ಥವೂ ಸಮುದ್ರ ಎಂದೇ. ಈಗ್ಗೆ ಸಾವಿರಾರು ವರ್ಷಗಳ ಹಿಂದೆ ಅದೆಷ್ಟೇ ಶ್ರೀಮಂತಿಕೆಯಿದ್ದರೂ ಸೌಂದರ್ಯದ ಖಯಾಲಿಯೆ ಮಸಾಜ್ ಸೆಂಟರುಗಳು ಇರಲಿಲ್ಲವಲ್ಲಾ? ಇದಕ್ಕೆಂದೇ ಆಗಿನ ರಾಜಮಹಾರಾಜರು ಪ್ರಾಕೃತಿಕ ಹಾದಿಯೊಂದನ್ನು ತಲಾಷು ಮಾಡಿದ್ದರು.
ಇಂಥಾ ರಾಜರುಗಳು ವರ್ಷದ ನಿರ್ಧಿಷ್ಟ ಅವಧಿಯೊಂದರಲ್ಲಿ ರಾಣಿ ಮತ್ತು ಸಖಿಯರ ಸಂಗಡ ಸಮೀಪದ ಕಡಲ ತೀರದಲ್ಲಿ ಮೊಕ್ಕಾಂ ಹೂಡುತ್ತಿದ್ದರು. ಅವರ ಜೊತೆ ಆಸ್ಥಾನ ವೈದ್ಯರ ಹಾಜರಿಯೂ ಇರುತ್ತಿತ್ತು. ಅಲ್ಲಿ ಅವರು ಬಿಸಿಲಿನ ಝಳಕ್ಕೆ ಹದವಾಗಿ ಮೈಯೊಡ್ಡುತ್ತಾ, ಸಮುದ್ರದ ಅಂಚಿನಲ್ಲಿ ಸಿಗುವ ಜವುಳು ಮಣ್ಣನ್ನು ಮೈಯಿಡೀ ಮೆತ್ತಿಕೊಂಡು ಸೌಂದರ್ಯದ ಒನಪು ಹೆಚ್ಚಿಸೋ ಕಸರತ್ತು ನಡೆಸುತ್ತಿದ್ದರು. ಇನ್ನು ಅಗತ್ಯ ಬಿದ್ದರೆ ಆಸ್ಥಾನ ವೈದ್ಯರಿಂದ ಗಿಡಮೂಲಿಕೆ ಅರೆಸಿ ಪೂಸಿಕೊಳ್ಳುತ್ತಿದ್ದರು. ಇಂಥಾ ಕಡಲತೀರದ ಸೌಂದರ್ಯ ಸಂಬಂಧೀ ಕಸರತ್ತು ಇದೀಗ ಆಧುನಿಕ ವಿಶ್ವದಲ್ಲಿ ಸ್ಪಾಗಳ ಹೆಸರಲ್ಲಿ ಚಾಲ್ತಿಯಲ್ಲಿದೆ. ಆದರೆ ಅಂದು ನಿಜಕ್ಕೂ ಪ್ರಾಕೃತಿಕ ಚಿಕಿತ್ಸೆಯ ನೆರಳಲ್ಲಿದ್ದ ಸ್ಪಾ ಎಂಬ ಕಲ್ಪನೆ ಈವತ್ತು ತೊಗಲಿನ ದಂಧೆಯ ದಾವಾನಲವಾಗಿ ಮಾರ್ಪಾಡು ಹೊಂದಿರುವುದು ವಿಪರ್ಯಾಸ.

ಮೈತುಂಬ ಕಾಯಿಲೆ!


ಇದೀಗ ಬೆಂಗಳೂರಿನಲ್ಲಿ ತಲೆ ಎತ್ತಿರುವ ಬಹುತೇಕ ಮಸಾಜ್ ಸೆಂಟರುಗಳು ವೇಶ್ಯಾವಾಟಿಕೆಯ ಬಲದಿಂದಲೇ ಮೆರೆದಾಡುತ್ತಿವೆ. ಆದರೆ ಇಲ್ಲಿ ನಡೆಯುವ ಮಸಾಜ್ ಆಗಲಿ, ಇತರೇ ಸೌಂದರ್ಯವರ್ಧಕ ಚಿಕಿತ್ಸೆಗಳಾಗಲಿ ಯಾವ ರೀತಿಯಿಂದಲೂ ಸೇಫ್ ಅಲ್ಲ. ಸಾವಿರಾರು ರೂಪಾಯಿ ಸುರಿದು ಇಂಥಾ ಅಡ್ಡಾಗಳಿಗೆ ಎಡತಾಕಿ ಬರಬಾರದ ಕಾಯಿಲೆ ಅಂಟಿಸಿಕೊಂಡು ಹೇಳಿಕೊಳ್ಳಲಾರದೆ ಒದ್ದಾಡುವ ಅನೇಕರಿದ್ದಾರೆ. ಇಲ್ಲಿನ `ಕಾಮ ಚಿಕಿತ್ಸೆ’ ಅನುಭವಿಸಿ ಏಡ್ಸ್‌ನಂಥಾ ಮಹಾಮಾರಿ ಅಚಿಟಿಸಿಕೊಂಡು ಲೆಕ್ಕವಿಲ್ಲದಷ್ಟು ಮಂದಿ ಗೋಣು ಚೆಲ್ಲಿದ್ದಾರೆ.
ಕೆಲ ಬಾರಿ ಇಂಥಾ ಸ್ಪಾಗಳ ಅನಾಚಾರಗಳು ಗಿರಾಕಿಗಳಿಂದಲೇ ಹೊರಬೀಳುವುದೂ ಇದೆ. ಅದೇ ರೀತಿಯದ್ದೊಂದು ಪ್ರಕರಣ ಕೆಲ ತಿಂಗಳ ಹಿಂದೆ ನಡೆದಿತ್ತು. ಖಾಸಗಿ ಕಂಪೆನಿಯೊಂದರ ನೌಕರನೊಬ್ಬ ಈ ಸ್ಟೋರಿಯ ದುರಂತ ನಾಯಕ. ಈತ ಹೈಪ್ರೊಫೈಲ್ ಜನರಂತೆ ತೆವಲಿಗೆ ಬಿದ್ದು ದೊಮ್ಮಲೂರಿನ ಕುಖ್ಯಾತ ಮಸಾಜು ಸೆಂಟರ್ ಬ್ರಿಗೇಡ್ ಸ್ಪಾಗೆ ಎಂಟ್ರಿ ಕೊಟ್ಟಿದ್ದ. ಇದು ಮಸಾಜಿನ ಹೆಸರಲ್ಲಿ ತೊಗಲೋದ್ಯಮ ನಡೆಸುವ ಕುಖ್ಯಾತ ಅಡ್ಡೆ. ಇಂಥಾದ್ದರ ಒಳ ಹೋದವನನ್ನು ಅರೆಬೆತ್ತಲು ಮಲಗಿಸಿ ಎಣ್ಣೆ ನೀವಿದಾಕೆಯೇ ಕೆಡವಿಕೊಂಡಿದ್ದಳು. ಈ ಆಸಾಮಿಯೂ ಯಾವ ಖಬರೂ ಇಲ್ಲದೆ ಸುಖ ಸಾಗರದಲ್ಲಿ ಮಿಂದೆದ್ದಿದ್ದ.
ಹಾಗೆ ಬ್ರಿಗೇಡ್ ಸ್ಪಾದ ಟ್ರೀಟ್‌ಮೆಂಟ್ ಅನುಭವಿಸಿ ಅದೇ ಮತ್ತಲ್ಲಿ ಕೆಲಸಕ್ಕೆ ಹೋಗುತ್ತಿದ್ದೆವನಿಗೆ ಆಫೀಸಿನಲ್ಲಿಯೇ ಸಣ್ಣಗೆ ಜ್ವರ ಕಾಣಿಸಿಕೊಂಡಿತ್ತು. ವಾರಗಟ್ಟಲೆ ಟ್ರೀಟ್‌ಮೆಂಟ್ ತೆಗೆದುಕೊಂಡರೂ ಜ್ವರ ಮಾತ್ರ ಬಿಡಲಿಲ್ಲ. ಇದೇ ತಿಂಗಳಾರಭ್ಯ ಮುಂದುವರೆದು ಕಡೆಗೊಂದು ದಿನ ರಕ್ತ ಪರೀಕ್ಷೆ ನಡೆಸಿದರೆ ಮಹಾ ಶಾಕ್ ಕಾದಿತ್ತು. ಆ ರಿಪೋರ್ಟು ಹೆಚ್‌ಐವಿ ಪಾಸಿಟಿವ್ ಎಂಬುದನ್ನು ಸಾರಿ ಹೇಳುತ್ತಿತ್ತು. ಈ ಮಹಾಶಯನಿಗೆ ಇದು ಬ್ರಿಗೇಡ್ ಸ್ಪಾದ ಕೊಡುಗೆ ಎಂಬುದು ಪಕ್ಕಾ ಆದೇಟಿಗೆ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ಈ ಸ್ಪಾದ ಅಸಲಿ ಕಥೆ ತೆರೆದಿಟ್ಟಿದ್ದ. ಆಯುಕ್ತರು ತಕ್ಷಣ ಈ ಕೇಸನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಹಾಗೆ ಸಿಸಿಬಿ ಪೊಲೀಸರು ರೇಡು ಬೀಳುತ್ತಲೇ ಬ್ರಿಗೇಡ್ ಸ್ಪಾದ ಅಕರಾಳ ವಿಕರಾಳ ರೂಪ ಜಾಹೀರಾಗಿತ್ತು. ಅಂದಹಾಗೆ ಈ ಸ್ಪಾಗೆ ಗಿರಾಕಿ ಹುಡುಕಿ ಕೊಡುವ ಕಸುಬು ಮಾಡುತ್ತಿದ್ದ ಝಕೌಲಾ ಹಾಗೂ ಸಮೀರ್ ಲಾಮಾ ಎಂಬಿಬ್ಬರು ಉತ್ತರಪ್ರದೇಶ ಮೂಲದ ಪಿಂಪ್‌ಗಳೂ ತಗುಲಿಕೊಂಡಿದ್ದರು. ಇಂಥಾ ಐನಾತಿಗಳ ಸಂಪರ್ಕದಿಂದ ಇಂಥಾ ಸ್ಪಾಗಳಿಗೆ ಹೋಗಿ ಮಲಗೆದ್ದು ಬಂದರೆ ಮೈತುಂಬಾ ಕಾಯಿಲೆ ಖಂಡಿತ!

ಹೈಟೆಕ್ ದಂಧೆ


ಇಂಥಾ ಹೈಟೆಕ್ ಅಡ್ಡೆಗಳನ್ನು ಲಕ್ಷಾಂತರ ರೂಪಾಯಿ ಇನ್ವೆಸ್ಟ್ ಮಾಡಿ ಕಟ್ಟಲಾಗುತ್ತೆ. ಮಿರಮಿರನೆ ಮಿಂಚುವ ಹಾಗೆ ಇಂಟೀರಿಯರ್ ಡೆಕೋರೇಷನ್ ಮಾಡಿ ಸ್ಪಾ, ಮಸಾಜು ಪಾರ್ಲರ್ ಅನ್ನು ತೆರೆಯುವ ಮಾಲೀಕ ಹೊರಜಗತ್ತಿಗೆ ಕಾಣಿಸುವುದಿಲ್ಲ. ತಮಾಷೆ ಅಂದರೆ, ಅವಳಿ ನಗರದ ಸುಮಾರು ಹತ್ತಕ್ಕೂ ಹೆಚ್ಚು ಯುವಕರು ಕೇಂದ್ರ ಸರಕಾರದ ಪಿಎಂಆರ್‌ವೈ ಸ್ಕೀಂನ ಅಡಿಯಲ್ಲಿ ತಾವು ನಿರೂದ್ಯೋಗಿಗಳು ಎಂಬ ಕಾರಣ ಮುಂದಿಟ್ಟು ಬ್ಯಾಂಕ್‌ನಿಂದ ಸಾಲಎತ್ತಿ ಮಾಂಸ ದಂಧೆಯ ದುಖಾನು ತೆರೆದು ಕುಳಿತಿದ್ದಾರೆ. ಇಂಥಾ ಸ್ಪಾ, ಮಸಾಜ್ ಪಾರ್ಲರುಗಳ ಅಸಲಿ ಮಾಲೀಕ ತಿಂಗಳಿಗೆ ಐದರಿಂದ ಆರು ಲಕ್ಷ ರೂಪಾಯಿ ಬಾಡಿಗೆ ಫಿಕ್ಸ್ ಮಾಡಿರುತ್ತಾನೆ. ಮೂರು, ನಾಲ್ಕು ಯುವಕರ ತಂಡದಿಂದ ಒಂದಿಷ್ಟು ಲಕ್ಷ ಡಿಪಾಜಿಟ್ಟು ತೆಗೆದುಕೊಂಡು, ಬಾಂಡ್ ಪೇಪರ್ ಒಂದರ ಮೇಲೆ ಬಾಡಿಗೆ ಆಧಾರದ ಕರಾರು ಪತ್ರಕ್ಕೆ ಸಹಿ ಹಾಕಿಸಿ ಬಾಡಿಗೆಗೆ ಕೊಡುತ್ತಾನೆ.
ಇಂಥಾ ಯುವಕರ ಪ್ರತೀ ತಂಡ ಕನಿಷ್ಠ ನಾಲ್ಕು, ಐದು ಸೆಂಟರ್‌ಗಳನ್ನು ಈ ಕ್ಷಣಕ್ಕೂ ನಡೆಸುತ್ತಿದ್ದಾರೆ. ಪ್ರತೀ ಸೆಂಟರ್‌ನ ಎಂಟ್ರೆನ್ಸ್ ಮಾತ್ರ ಸಣ್ಣದಾಗಿರುತ್ತದೆ. ಇನ್ನು ಮಸಾಜು ಸೆಂಟರ್‌ನ ಬೊರ್ಡು ಸಹ ಚಿಕ್ಕದಾಗಿರುತ್ತದೆ. ಗ್ರಾಹಕರನ್ನು ಸೆಳೆಯಲು ಪ್ರತಿ ಸೆಂಟರ್‌ನ ತಂಡದವರು ಸಪರೇಟ್ ಆಗಿ ಸಾಕಷ್ಟು ವಾಟ್ಸಪ್ ಗುಂಪನ್ನು ರಚಿಸಿರುತ್ತಾರೆ. ಆ ಗುಂಪಿನ ಮೂಲಕ ವಾರಕ್ಕೆ ಮೂರು ಸಾರಿ ತಾವು ನೀಡುವ ಡಿಸ್ಕೌಂಟ್‌ನಿಂದ ಹಿಡಿದು, ಹೊಸದಾಗಿ ಮೈತಿಕ್ಕಲು ಬರುವ ಹುಡುಗಿಯರ ವಿವಿಧ ಭಂಗಿಗಳ ಛಾಯಾ ಚಿತ್ರಗಳನ್ನು ಹಾಕಿ ಆಕರ್ಷಿಸಲಾಗುತ್ತದೆ. ಕೇವಲ ಬೆರಳೆಣಿಕೆಯ ಸೆಂಟರ್‌ನವರು ಮಾತ್ರ ಪಾಲಿಕೆಯ ವತಿಯಿಂದ ಆಯುರ್ವೇದಿಕ್ ಮಸಾಜ್ ಹೆಸರಿನಲ್ಲಿ ಲೈಸೆನ್ಸ್ ಪಡೆದು, ಅತ್ಯಂತ ನುರಿತ ಚಿಕಿತ್ಸಕರಿಂದ ಕೇವಲ ಮಸಾಜ್ ಮಾಡುತ್ತೆವೆ, ಅದ್ಯಾವ ಕಾರಣಕ್ಕೂ ಇಲ್ಲಿ ವೇಶ್ಯಾವಾಟಿಕೆಯಂಥಾ ಕಸುಬುಗಳು ನಡೆಯುವುದಿಲ್ಲ ಎಂಬಂಥ ಸುಳ್ಳು ಬಾಂಡ್‌ನ್ನು ಪಾಲಿಕೆಗೆ ನೀಡಿರುತ್ತಾರೆ. ಸಾಕಷ್ಟು ಸಲೂನ್ ಆಂಡ್ ಸ್ಪಾ ಹೆಸರಿನಲ್ಲಿಯೂ ಇಲ್ಲಿ ನಡೆಯುತ್ತಿರುವುದು ಶುದ್ಧ ವ್ಯವಹಾರವೇ.
ತೀರಾ ಅವಳಿನಗರದ ಎಕ್ಸ್ಟೆಂನ್ಷನ್ ಏರಿಯಾಗಳಲ್ಲಿ ಮೂರು, ನಾಲ್ಕು ಬೆಡ್ ರೂಮ್‌ಗಳ ಬಾಡಿಗೆಯ ಮನೆಯನ್ನು ಹಿಡಿದು, ಎಂಟತ್ತು ಮಸಾಜ್ ಪಾರ್ಲರ್‌ಗಳು ಕಾರ್ಯನಿರ್ವೈಹಿಸುತ್ತಿವೆ. ಇನ್ನುಳಿದಂತೆ, ಗಂಡು ಮಿಕಗಳ ಮೈತಿಕ್ಕಲು ಬರುವ ಹುಡುಗಿಯರನ್ನು ಬಹುತೇಕ ಶುದ್ಧ ಬಡತನ ಇರುವ ಈಶಾನ್ಯ ಭಾರತದ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರೀಪುರಾ ಹಾಗೂ ಸಹೋದರ ರಾಜ್ಯ ಸಿಕ್ಕಿಂನಿಂದ ಕರೆತರಲಾಗುತ್ತದೆ. ತೀರಾ ಎರಡು ವರ್ಷದಿಂದ ಈಚೆಗೆ ಒಂದು ತಿಂಗಳಿಗೆ ಮಾತ್ರ ಅನ್ನುವಂತೆ ಥೈಲ್ಯಾಂಡ್, ಬ್ಯಾಂಕಾಕ್, ರಷ್ಯಾ ಹಾಗೂ ಬಾಂಗ್ಲಾದೇಶಗಳಿಂದಲೂ ಹುಡುಗಿಯರನ್ನು ಕರೆಸಲಾಗುತ್ತದೆ. ಅವರ ದರ ಬೇರೆಯದಾಗಿರುತ್ತದೆ.

ರಂಗೀನ್ ದುನಿಯಾ!


ಮೈತಿಕ್ಕುವ ಸೆಂಟರ್‌ನ ಹುಡುಗಿಯರನ್ನು ಕರೆತರಲು ಎಜೆಂಟರಿದ್ದಾರೆ. ಅಂಥಾ ದಲ್ಲಾಳಿಗಳು ಒಂದು ತಿಂಗಳು ಸಂಬಳ ಹುಡುಗಿಯಿಂದಲೂ ಹಾಗೂ ಸೆಂಟರ್‌ನ ಮಾಲೀಕನಿಂzಲೂ ಪೀಕುತ್ತಾರೆ. ಇದನ್ನು ಬಿಟ್ಟು ಬೆಂಗಳೂರಿನ ಕೊರಮಂಗಲದ ಮಿಜೋರಾಂ, ಸಿಕ್ಕಿಂ ಹಾಗೂ ಅಸ್ಸಾಂನ ಪ್ರತ್ಯೇಕ ಹೌಸ್‌ನಿಂದಲೂ ನೇರವಾಗಿ ಹುಡುಗಿಯರನ್ನು ಸಂಪರ್ಕಿಸಿ ವ್ಯವಹಾರ ಕುದುರಿಸಿಕೊಳ್ಳಲಾಗುತ್ತದೆ. ಉತ್ತರ ಭಾರತದಿಂದ ಬರುವ ನುರಿತ ಹುಡುಗಿಯರಿಗೆ ಪ್ರತ್ಯೇಕ ಟ್ರೈನ್ ಅಥವಾ ಫ್ಲೈಟ್ ಚಾರ್ಜ ಕೊಟ್ಟು ಕರೆಯಿಸಿಕೊಳ್ಳುವ ವ್ಯವಸ್ಥೆಯೂ ಇದೆ. ಹೀಗೆ ಬಂದ ಹುಡುಗಿಯರಿಗೆ ಮಸಾಜ್ ಪಾರ್ಲರ್ ನಡೆಸುವವರೇ ಅಪಾರ್ಟ್‌ಮೆಂಟ್‌ನಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿಕೊಡುವುದು ಕಂಪಲ್ಸರಿ. ದಿನನಿತ್ಯದ ಟಿಫನ್‌ಗೆ ಮೋಮೋಸ್ ಅಥವಾ ನೂಡಲ್ಸ್ ಸೇವಿಸಿದರೆ, ಊಟಕ್ಕೆ ಅದ್ಯಾವ ಮಸಾಲಾವನ್ನೂ ಬೆರೆಸದ ದನದ ಮಾಂಸವನ್ನು ಹುಡುಗಿಯರೇ ಬೇಯಿಸಿಕೊಂಡು ತಿನ್ನುತ್ತಾರೆ.


ಬಂದ ಗ್ರಾಹಕರ ಮೈತಿಕ್ಕಲು ಸಂಬಳ ರೂಪದಲ್ಲಿ ಒಬ್ಬೊಬ್ಬರಿಗೆ ಕನಿಷ್ಠ ಹದಿಮೂರು ಸಾವಿರದಿಂದ ಗರಿಷ್ಠ ಹದಿನೆಂಟು ಸಾವಿರ ಮಾತ್ರ ಕೊಡಲಾಗುತ್ತದೆ. ಮಸಾಜ್ ಹೆಸರಿನಲ್ಲಿ ನಡೆಯುವ ಮತ್ತೊಂದು ಬಗೆಯ ಸೇವೆಗೆ ಸಿಗುವ ಟಿಪ್ಸನ್ನು ಮಾತ್ರ ಆಯಾ ಹುಡುಗಿ ನೇರ ತನ್ನ ಪಾಲೆಂದು ಎತ್ತಿಟ್ಟುಕೊಳ್ಳುತ್ತಾಳೆ. ಅಂಥಾ ಟಿಪ್ಸ್ ಹಣವೆ ದಿನಕ್ಕೆ ಐದರಿಂದ ಎಂಟು ಸಾವಿರ ದಾಟುತ್ತದೆ. ತಾವು ದುಡಿದ ಮೊತ್ತದ ಮುಕ್ಕಾಲು ಪಾಲು ಹಣವನ್ನು ಬ್ಯಾಂಕ್ ಮೂಲಕ ತಮ್ಮ ಪಾಲಕರಿಗೆ ಎಲ್ಲ ಹುಡುಗಿಯರು ಕಳಿಸುತ್ತಾರೆ. ಹೀಗೆ ಮೈತಿಕ್ಕಲು ಬರುವ ಬಹುತೇಕ ಹುಡುಗಿಯರು ವರ್ಷಕ್ಕೊಮ್ಮೆ ಡಿಸೆಂಬರ್, ಜನೆವರಿ ಮಧ್ಯ ಒಂದು ತಿಂಗಳು ತಮ್ಮ ಊರಿಗೆ ತಪ್ಪದೆ ಹೋಗುತ್ತಾರೆ. ಪ್ರತೀ ತಿಂಗಳು ಅದೆಲ್ಲ ಮಸಾಜ್ ಪಾರ್ಲರ್ ನಡೆಸುವವರು ತಮ್ಮ ಗ್ರಾಹಕರ ಬಯಕೆಗನುಗುಣವಾಗಿ ಪ್ರತೀ ಪಾರ್ಲರ್‌ಗಳಲ್ಲಿ ಹುಡುಗಿಯರನ್ನು ಬದಲಾಯಿಸಿಕೊಳ್ಳುತ್ತಾರೆ.
ಇಂಥಾ ಸ್ಪಾ ಹಾಗೂ ಮಸಾಜ್ ಪಾರ್ಲರ್‌ಗಳಲ್ಲಿ ನಾನಾ ವೆರೈಟಿಯ ಥೆರಫಿಯನ್ನು ಶುರುವಿನಲ್ಲಿ ತೊರಿಸಿ ಅದರ ದರವನ್ನು ಹೇಳುತ್ತಾರೆ. ಫೀಟ್ ಮಸಾಜ್‌ನಿಂದ ಶುರು ಆಗುವ ಅವರ ದರ ಕೊನೆಯ ಬಿ ಟೂ ಬಿ ವರೆಗೂ ಏರಿಕೆ ಆಗುತ್ತದೆ. ಥೈ, ಬ್ಯಾಕ್, ಸ್ವಿಡಿಷ್, ಫೀಟ್, ಟ್ವಂಟಿ ಫಿಂಗರ್, ಸ್ಯಾಂಡ್‌ವಿಚ್ ಮಸಾಜ್‌ನಿಂದ ಹಿಡಿದು ಹ್ಯಾಪಿ ಎಂಡಿಂಗ್ ಜೊತೆಗೆ ಇಬ್ಬರು ಅಥವಾ ಮೂರು ಹುಡುಗಿಯರು ಸೇರಿ ಟಬ್‌ನಲ್ಲಿ ಮಾಡಿಸುವ ಬಾಡಿ ಟೂ ಬಾಡಿ ಮಸಾಜ್‌ನ ಹೆಸರಿನಲ್ಲಿ ನಡೆಯುವುದು ಕಾಮದ ವಿಕೃತ ವಿಜೃಂಭಣೆ. ಇಲ್ಲಿ ದಾಖಲಿಸಲೂ ಅಸಹ್ಯವಾಗುವಂಥಾ ಕಾಮದ ಪಟ್ಟುಗಳು ಅಲ್ಲಿ ಪ್ರದರ್ಶನಗೊಳ್ಳುತ್ತವೆ!

Tags: #bangalore#massageparlour#sexscandal#spa

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Ratan Naval Tata: ಉದ್ಯಮ ಜಗತ್ತಿನ ಅಪ್ಪಟ ಸಂತ ರತನ್ ಟಾಟಾ!

Ratan Naval Tata: ಉದ್ಯಮ ಜಗತ್ತಿನ ಅಪ್ಪಟ ಸಂತ ರತನ್ ಟಾಟಾ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.