ಸಿನಿಮಾ: ಮ್ಯಾಟ್ನಿ
ನಿರ್ದೇಶನ: ಮನೋಹರ್
ನಿರ್ಮಾಣ: ಪಾರ್ವತಿ ಎಸ್ ಗೌಡ
ತಾರಾಬಳಗ: ಸತೀಶ್ ನೀನಾಸಂ, ರಚಿತಾ ರಾಮ್, ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ, ಅದಿತಿ ಪ್ರಭುದೇವ.
ಮನೋಹರ್ ಕಾಂಪಲ್ಲಿ ನಿರ್ದೇಶನದಲ್ಲಿ ಚೊಚ್ಚಲ ಬಾರಿಗೆ ಮೂಡಿಬಂದ ಸಿನಿಮಾ ‘ಮ್ಯಾಟ್ನಿ’(Matinee). ನೀನಾಸಂ ಸತೀಶ್(Ninasam Sathish), ರಚಿತಾ ರಾಮ್(Rachita Ram), ಅದಿತಿ ಪ್ರಭುದೇವ(Aditi Prabhudeva) ಮುಖ್ಯ ಭೂಮಿಕೆ ಇರುವ ಸಿನಿಮಾ ವಿಮರ್ಶೆ ಇಲ್ಲಿದೆ.
ಕಥೆ:
ಒಂದು ಮನೆಯಲ್ಲಿ ನಡೆಯುವ ಘಟನೆ ಸುತ್ತ ಹೆಣೆದ ಕಥೆ ಮ್ಯಾಟ್ನಿ(Matinee). ಅರುಣ(ನೀನಾಸಂ ಸತೀಶ್)ತಾಯಿಯ ಸಾವಿನಿಂದ ಚೇತರಿಸಿಕೊಳ್ಳಲಾಗದೆ ಹೊರ ಪ್ರಪಂಚದಿಂದ ದೂರ ಉಳಿಯೋ ಶ್ರೀಮಂತ ಮನೆತನದ ಹುಡುಗ. ಅಕ್ಷರ(ರಚಿತಾ ರಾಮ್) ಪ್ರೀತಿಯಲ್ಲಿರುವ ಅರುಣನನ್ನು, ಬಾಲ್ಯದ ಗೆಳೆಯರು ಸಂಧಿಸುತ್ತಾರೆ. ಅಲ್ಲಿಂದ ಅರುಣ ಬದುಕಿನಲ್ಲಿ ಟ್ವಿಸ್ಟ್ಗಳು ಶುರುವಾಗುತ್ತೆ. ಆತನ ಮನೆಯಲ್ಲಿ ಅತಿಮಾನುಷ ಶಕ್ತಿಗಳ ಅನಾವರಣವಾಗುತ್ತೆ. ಇನ್ನೊಂದೆಡೆ ನಾಯಕಿ ಚಿತ್ರ(ಅದಿತಿ ಪ್ರಭುದೇವ) ನಾಪತ್ತೆಯಾಗುತ್ತಾಳೆ. ಇದ್ದಕ್ಕಿದ್ದಂತೆ ಬಾಲ್ಯದ ಗೆಳೆಯರು ಅರುಣನನ್ನು ಭೇಟಿಯಾಗಲು ಕಾರಣವೇನು..? ಚಿತ್ರಾಗೂ ಅರುಣಗಿರುವ ಸಂಬಂಧವೇನು..? ನಿಜವಾಗಲೂ ಮನೆಯಲ್ಲಿ ದೆವ್ವ ಇದೆಯಾ..? ಎನ್ನುವುದರ ಸುತ್ತ ಹೆಣೆದ ಸಿಂಪಲ್ ಕಥೆ ‘ಮ್ಯಾಟ್ನಿ’.
ನಿರ್ದೇಶನ:
ಮೊದಲ ಸಿನಿಮಾದಲ್ಲಿ ಒಂದಿಷ್ಟು ಭರವಸೆ ಮೂಡಿಸಿದ್ದಾರೆ ನಿರ್ದೇಶಕ ಮನೋಹರ್. ಹಾರಾರ್, ಥ್ರಿಲ್ಲರ್ ಸಿನಿಮಾಗೆ ಕೌತುಕದ ಜೊತೆಗೆ ಹಾಸ್ಯ, ಭಾವನಾತ್ಮಕ ಎಳೆಯ ಲೇಪನ ಹಚ್ಚಿ ಹದ ಮಾಡುವಲ್ಲಿ ಇವರ ಪ್ರಯತ್ನ ಕೊಂಚ ಗೆಲುವು ಕಂಡಿದೆ.
ಕಲಾವಿದರ ಅಭಿನಯ:
ಸತೀಶ್ ನೀನಾಸಂ(Ninasam Sathish), ಅಭಿನಯ ಗಮನ ಸೆಳೆಯುತ್ತೆ. ಭಾವನಾತ್ಮಕ ಸನ್ನಿವೇಶದಲ್ಲಿ ಅವರ ಅಭಿನಯ ಮೆಚ್ಚುವಂತದ್ದು. ರಚಿತಾ ರಾಮ್(Rachita Ram) ತಮ್ಮ ಸಹಜ ಅಭಿನಯದಿಂದ ಗಮನ ಸೆಳೆಯುತ್ತಾರೆ. ಅದಿತಿ ಪ್ರಭುದೇವ ನಟನೆಯೂ ಇಷ್ಟವಾಗುತ್ತದೆ. ಶಿವರಾಜ್ ಕೆ ಆರ್ ಪೇಟೆ, ನಾಗಭೂಷಣ್, ಪೂರ್ಣ, ದಿಗಂತ್ ದಿವಾಕರ್ ಪಾತ್ರ ಸಿನಿಮಾದ ಲವಲವಿಕೆಯನ್ನು ಹೆಚ್ಚಿಸಿದೆ.
ಸಿನಿಮಾ ಹೇಗಿದೆ:
ಹಾರಾರ್, ಥ್ರಿಲ್ಲರ್ ಕಟೆಂಟ್ ಒಳಗೊಂಡ ಸಿನಿಮಾ ಮ್ಯಾಟ್ನಿ. ಹಾಗಂತ ಪೂರ್ತಿ ಸಿನಿಮಾ ಹೆದರಿ ಕುಳಿತುಕೊಳ್ಳೋ ಅವಶ್ಯಕತೆಯಿಲ್ಲ. ಕಾರಣ ಇಲ್ಲಿ ಹೆದರಿಕೆ ತಣಿಸಲು ಕಾಮಿಡಿ ಟಾನಿಕ್ ಇದೆ. ಸ್ನೇಹ, ಪ್ರೀತಿಯ ಸಿಂಚನವಿದೆ, ಥ್ರಿಲ್ಲಿಂಗ್ ಎನಿಸೋ ಟ್ವಿಸ್ಟ್ಗಳಿದೆ. ಹಾಗಂತ ಮ್ಯಾಟ್ನಿ(Matinee) ಜಗತ್ತು ಸಿಕ್ಕಾಪಟ್ಟೇ ಮಜುಭೂತಾಗಿಲ್ಲ ಆದ್ರೆ ಕೊಟ್ಟ ಹಣಕ್ಕೆ ಒಮ್ಮೆ ನೋಡಲಡ್ಡಿಯಿಲ್ಲ.