Pushpa-2:ಅಲ್ಲು ಅರ್ಜುನ್ (Allu Arjun), ಸುಕುಮಾರ್(Sukumar)ಪುಷ್ಪ-2(Pushpa-2) ಮೂಲಕ ಮತ್ತೊಮ್ಮೆ ಗೆಲುವಿನ ನಗೆ ಬೀರಲು ರೆಡಿಯಾಗಿದ್ದಾರೆ. ಆಗಸ್ಟ್‌ನಲ್ಲಿ ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗ್ತಿದೆ. ಪ್ರಮೋಶನ್ ಶುರು ಮಾಡಿರುವ ಚಿತ್ರತಂಡ ಹಾಡುಗಳ ಮೂಲಕ ದಿಲ್ ಕದಿಯಲು ರೆಡಿಯಾಗಿದೆ. ಮೊದಲ ಸಾಂಗ್ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಎರಡನೇ ಹಾಡಿನ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಅಂದ್ಹಾಗೆ ಈ ಬಾರಿ ಕುಣಿಸಲು ಬರ್ತಿರೋದು ಶ್ರೀವಳ್ಳಿ.
ಪುಷ್ಪಾ ಮೊದಲ ಭಾಗದಲ್ಲಿ ‘ನಾ ಸಾಮಿ’ ಎಂದು ಸೊಂಟ ಬಳುಕಿಸಿ ಕಿಕ್ಕೇರಿಸಿದ್ದ ಶ್ರೀವಳ್ಳಿ ಸಖತ್ ಸ್ಟೆಪ್ಸ್ ಹಾಕಿ ಮ್ಯಾಜಿಕ್ ಮಾಡಿದ್ಲು. ಮತ್ತೆ ಮತ್ತೆ ಈ ಸಾಂಗ್ ನೋಡಿ ನೋಡುಗರು ಕಣ್ತಂಪು ಮಾಡಿಕೊಂಡಿದ್ರು. ಈ ಹಾಡಿನ ಹುಕ್ ಸ್ಟೆಪ್ ಕೂಡ ಸಖತ್ ವೈರಲ್ ಆಗಿತ್ತು. ಇದೀಗ ಪುಷ್ಪಾ ಸೀಕ್ವಲ್‌ನಲ್ಲೂ ಶ್ರೀವಳ್ಳಿಗೆಂದೇ ಸಾಂಗ್ ಒಂದನ್ನು ಇಡಲಾಗಿದೆ. ‘ಸೂಸೇಕಿ’ ಎನ್ನುವ ಕಪಲ್ ಸಾಂಗ್ ಇದಾಗಿದೆ. ಸಾಂಗ್ ಮೂಲಕ ಶ್ರೀವಳ್ಳಿ ಅಲಿಯಾಸ್ ರಶ್ಮಿಕಾ ಮಂದಣ್ಣ(Rashmika Mandanna) ಮತ್ತೆ ಕಿಕ್ ನೀಡಲು ಬರ್ತಿದ್ದಾರೆ. ಕಪಲ್ ಸಾಂಗ್ ಆಗಿರೋದ್ರಿಂದ ಅಲ್ಲು ಅರ್ಜುನ್ ಕೂಡ ಹಾಡಿನಲ್ಲಿರಲಿದ್ದು, ಶ್ರೀವಳ್ಳಿ- ಪುಷ್ಪಾರಾಜ್ ರೋಮ್ಯಾನ್ಸ್ ನೋಡಲು ಕಾತುರರಾಗಿದ್ದಾರೆ ಅಭಿಮಾನಿಗಳು. ಇಬ್ಬರ ಎನರ್ಜಿ ಹಾಡಿನ ತೂಕ ಹೆಚ್ಚಿಸಲಿದೆ. ಎರಡನೇ ಸಾಂಗ್ ಪ್ರೋಮೋ ಬಿಡುಗಡೆಯಾಗಿದ್ದು ರಶ್ ಜೋಶ್ ಹಾಡಿನ ಮೈಲೇಜ್ ದುಪ್ಪಟ್ಟು ಮಾಡಲಿದೆ ಅಂತಿದ್ದಾರೆ ಭಕ್ತಗಣ.
ರಾಕ್ ಸ್ಟಾರ್ DSP ಮ್ಯೂಸಿಕ್ ಮ್ಯಾಜಿಕ್‌ನಲ್ಲಿ ಪುಷ್ಪಾ ಸಿನಿಮಾದ ಹಾಡುಗಳು ಮೂಡಿ ಬಂದಿವೆ. ಈಗಾಗಲೇ ಪುಷ್ಪಾರಾಜ್ ಸಾಂಗ್ ಬಿಡುಗಡೆಯಾಗಿ ಸಖತ್ ಕ್ರೇಜ಼್ ಕ್ರಿಯೇಟ್ ಮಾಡಿದೆ. ಟೀಸರ್ ಎರಡು ಹಾಡುಗಳು ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಹೆಚ್ಚಿಸಿದ್ದು, ಈ ಬಾರಿ ಪುಷ್ಪರಾಜ್ ಬಹುದೊಡ್ಡ ಮಟ್ಟದಲ್ಲಿ ಗೆಲುವು ತನ್ನದಾಗಿಸಿಕೊಳ್ಳಲಿದ್ದಾನೆ ಅಂತಿದ್ದಾರೆ ಸಿನಿ ಪಂಡಿತರು.