Chiranjeevi: ಕೇಂದ್ರ ಸರ್ಕಾರ ಈ ವರ್ಷದ ಪದ್ಮವಿಭೂಷಣ ಪ್ರಶಸ್ತಿಯನ್ನು ಜನವರಿಯಲ್ಲಿ ಘೋಷಣೆ ಮಾಡಿತ್ತು. ಅದರಲ್ಲಿ ಸಿನಿಮಾ ನಟನೆಗೆ, ಚಿತ್ರರಂಗಕ್ಕೆ ನೀಡಿದ ಅಪೂತ ಪೂರ್ವ ಕೊಡುಗೆಗೆ ಸೌತ್ ಇಂಡಿಯಾ ನಟನಿಗೆ ಪ್ರಶಸ್ತಿ ಒಲಿದು ಬಂದಿತ್ತು. ಅದು ಬೇರೆ ಯಾರೂ ಅಲ್ಲ ಮೆಗಾ ಸ್ಟಾರ್ ಚಿರಂಜೀವಿ.
ಟಾಲಿವುಡ್ ಚಿತ್ರರಂಗದ ದೈತ್ಯ ಹೆಸರು, ಅಭಿಮಾನಿಗಳ ಪ್ರೀತಿಯ ಮೆಗಾ ಸ್ಟಾರ್ ಚಿರಂಜೀವಿ(Chiranjeevi) ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರಶಸ್ತಿ ಲಿಸ್ಟ್‌ನಲ್ಲಿ ಚಿರಂಜೀವಿ ಹೆಸರು ಕೇಳಿ ಮೆಗಾ ಫ್ಯಾಮಿಲಿ, ಚಿರಂಜೀವಿ ಅಪಾರ ಭಕ್ತಗಣ ಹೆಮ್ಮೆ ಪಟ್ಟಿತ್ತು. ನಿನ್ನೆ ಡೆಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರೀಕ ಗೌರವ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮರಿಂದ ಪಡೆದುಕೊಂಡಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚಿರಂಜೀವಿ(Chiranjeevi) ಕುಟುಂಬ ಭಾಗಿಯಾಗಿ ಮೆಗಾ ಸ್ಟಾರ್ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಚಿರಂಜೀವಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಾಲ್ಕು ದಶಕದಿಂದ ಪ್ರೇಕ್ಷಕರನ್ನು ರಂಜಿಸುತ್ತ ಬಂದಿರುವ ಮೆಗಾ ಸ್ಟಾರ್ ರಾಜಕೀಯ ಅಂಗಳದಲ್ಲಿ ಅಗ್ನಿ ಪರೀಕ್ಷೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಸಂತಸ ಹಾಗೂ ಧನ್ಯವಾದ ತಿಳಿಸಿದ್ದಾರೆ.