Megha Shetty: ಇನ್ನೇನಿದ್ರೂ ಟೀಸರ್ ಟೈಮ್! ಎನ್ನುತ್ತಾ ಸಣ್ಣದೊಂದು ಮಂದಹಾಸ ಬೀರುವ ಆಪರೇಷನ್ ಲಂಡನ್ ಕೆಫೆ ನಿರ್ದೇಶಕ ಸಡಗರ ರಾಘವೇಂದ್ರ. ಚಿತ್ರದ ನಾಯಕಿ ಮೇಘಾ ಶೆಟ್ಟಿ ಹುಟ್ಟು ಹಬ್ಬದ ದಿನ ನಾಯಕಿ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಈಗಾಗಲೇ ತನ್ನ ಮಾಸ್ ಪೋಸ್ಟರ್ ಮೂಲಕ ಪ್ರೇಕ್ಷಕರ ಕುತೂಹಲ ಕೆರಳಿಸಿರುವ ಆಪರೇಷನ್ ಲಂಡನ್ ಕೆಫೆ ಚಿತ್ರದ ಟೀಸರ್ ರಿಲೀಸ್ ಗೆ ಕೌಂಟ್ಡೌನ್ ಶುರುವಾಗಿದೆ ಎನ್ನುವ ಸಿಹಿ ಸುದ್ಧಿಯನ್ನು ಹಂಚಿಕೊಂಡಿದ್ದಾರೆ.
ಮೇಘಾ ಶೆಟ್ಟಿ(Megha Shetty) ಹುಟ್ಟು ಹಬ್ಬಕ್ಕೆ ಶುಭ ಕೋರುವ ಸಲುವಾಗಿ ಚಿತ್ರತಂಡ ಬಿಡುಗಡೆಗೊಳಿಸಿರುವ ಹಳ್ಳಿ ಹುಡುಗಿಯ ಗೆಟಪ್ಪಿನಲ್ಲಿ ಲಂಗ ದಾವಣಿಯಲ್ಲಿ ಮಿರಮಿರ ಮಿಂಚುತ್ತಿರುವ ಮೇಘಾ ಶೆಟ್ಟಿಯ ಆಪರೇಷನ್ ಲಂಡನ್ ಕೆಫೆ ಪೋಸ್ಟರ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಮತ್ತು ಇತರ ಭಾಷೆಗಳಲ್ಲಿ ಬಿಡುಗಡೆಗೊಳ್ಳುವ ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಜಂಟಿಯಾಗಿ ನಿರ್ಮಿಸುತ್ತಿದ್ದು ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಚಾಲ್ತಿಯಲ್ಲಿದೆ. ಅತೀ ಶೀಘ್ರದಲ್ಲಿಯೇ ಚಿತ್ರದ ಟೀಸರ್ ಬಿಡುಗಡೆಗೊಳಿಸುವುದಾಗಿ ನಿರ್ದೇಶಕ ಸಡಗರ ರಾಘವೇಂದ್ರ ಹೇಳಿಕೊಂಡಿದ್ದಾರೆ.