ಬುಧವಾರ, ಜುಲೈ 9, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Mohanlal: ಮಾಲಿವುಡ್‌ ಸೂಪರ್‌ ಸ್ಟಾರ್‌ ಕಾಡಿದ ಡಾ.ರಾಜ್‌ ಹಾಡು – ಮೋಹನ್‌ ಲಾಲ್‌ ಫೇವರೇಟ್‌ ಸಾಂಗ್‌ ಯಾವುದು ಗೊತ್ತಾ..?

Bharathi Javalliby Bharathi Javalli
20/05/2024
in Majja Special
Reading Time: 1 min read
Mohanlal: ಮಾಲಿವುಡ್‌ ಸೂಪರ್‌ ಸ್ಟಾರ್‌ ಕಾಡಿದ ಡಾ.ರಾಜ್‌ ಹಾಡು – ಮೋಹನ್‌ ಲಾಲ್‌ ಫೇವರೇಟ್‌ ಸಾಂಗ್‌ ಯಾವುದು ಗೊತ್ತಾ..?

Mohanlal: ಡಾ.ರಾಜ್‌ ಕುಮಾರ್‌ ಸಿನಿಮಾ, ಹಾಡು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ. ಅದೆಂತದೇ ಸಮಯ ಸಂದರ್ಭವಿರಲಿ ರಾಜ್‌ ಕಂಠದಲ್ಲಿ ಅರಳಿರೋ ಹಾಡುಗಳನ್ನು ಕೇಳಿದ್ರೆ ಏನೋ ಒಂದು ರೀತಿಯ ನೆಮ್ಮದಿ. ಅದಕ್ಕೇ ಇಂದಿಗೂ ಕೂಡ ಅಣ್ಣಾವ್ರ ಸಿನಿಮಾ ಹಾಡು ಎವರ್‌ ಗ್ರೀನ್‌ ಆಗಿರೋದು. ನಮ್ಮಲ್ಲಿ ಮಾತ್ರವಲ್ಲ ಬೇರೆ ರಾಜ್ಯದ ಸೂಪರ್‌ ಸ್ಟಾರ್‌ಗಳಿಗೂ ನಟ ಸಾರ್ವಭೌಮನ ಹಾಡುಗಳಂದ್ರೆ ಪಂಚಪ್ರಾಣ ಅಂದ್ರೆ ನೀವ್‌ ನಂಬ್ತಿರಾ..? ನಂಬಲೇಬೇಕು ಅಂತಿದೆ ವೈರಲ್‌ ಆಗಿರೋ ವಿಡಿಯೋ.

ಸೋಶಿಯಲ್‌ ಮೀಡಿಯಾದಲ್ಲಿ ಡಾ.ರಾಜ್(Dr.Rajkumar) ಮಂಜುಳ ಜೋಡಿಯ ಹಾಡೊಂದು ವೈರಲ್‌ ಆಗಿದೆ. ಹಾಡನ್ನು ಮತ್ತೆ ಮತ್ತೆ ಕೇಳುತ್ತಾ ತಾವೂ ಆ ಹಾಡನ್ನು ಹಾಡುತ್ತ ದನಿಯಾಗೋ ವಿಡಿಯೋವದು. ಆತ ಬೇರಾರು ಅಲ್ಲ ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್(Mohanlal).‌ ಹೌದು. 1974ರಲ್ಲಿ ತೆರೆಕಂಡ ‘ಎರಡು ಕನಸು’ ಚಿತ್ರದ ‘ಎಂದೆಂದೂ ನಿನ್ನನು ಮರೆತು’ ಸಾಂಗ್‌ ಎಲ್ಲರ ಫೇವರೇಟ್‌ ಆದಂತೆ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ಗೂ ಬಲು ಇಷ್ಟವಂತೆ. ಆ ಹಾಡನ್ನು ಯಾವಾಗಲೂ ನೋಡುತ್ತಾ, ಕೇಳುತ್ತಾ ಎಂಜಾಯ್‌ ಮಾಡ್ತಿರ್ತಾರಂತೆ. ಸದ್ಯ ಮೋಹನ್‌ ಲಾಲ್‌ ಟ್ಯಾಬ್‌ನಲ್ಲಿ ಸಾಂಗ್‌ ಕೇಳುತ್ತ ಹಾಡಲು ಪ್ರಯತ್ನಿಸುತ್ತಾ ಎಂಜಾಯ್‌ ಮಾಡ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಕನ್ನಡ ಸಿನಿರಸಿಕರ ಮನಗೆದ್ದಿದೆ. ದೊಡ್ಮನೆ ಅಭಿಮಾನಿಗಳು ಈ ವಿಡಿಯೋವನ್ನು ಶೇರ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

https://twitter.com/appudynasty1/status/1792214082688544787

ಅದ್ಭುತ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಾಲಿವುಡ್‌ ಸೂಪರ್‌ ಸ್ಟಾರ್‌ ನಟರಲ್ಲೊಬ್ಬರು ಮೋಹನ್‌ ಲಾಲ್(Mohanlal).‌ ಕನ್ನಡ ಸಿನಿರಸಿಕರಿಗೆ ಇವರು ಪುನೀತ್‌ ರಾಜ್‌ ಕುಮಾರ್‌(Puneeth Rajkumar) ಅಭಿನಯದ ಮೈತ್ರಿ ಹಾಗೂ ಆದಿತ್ಯ ಅಭಿನಯದ ಲವ್‌ ಸಿನಿಮಾಗಳ ಮೂಲಕ ಪರಿಚಿತರಾಗಿದ್ದಾರೆ. ಇವರ ಸೂಪರ್‌ ಹಿಟ್‌ ಸಿನಿಮಾಗಳು ಕನ್ನಡಲ್ಲಿ ರಿಮೇಕ್‌ ಆಗಿ ಸಕ್ಸಸ್‌ ಕಂಡಿವೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Sara Ali khan: ಉದ್ಯಮಿ ಜೊತೆ ಎಂಗೇಜ್‌ ಆದ್ರಾ ಸೈಫ್ ಪುತ್ರಿ – ಮಾಜಿ ಸಿಎಂ ಮೊಮ್ಮಗನೊಂದಿಗೆ ಸಾರಾ ಡೇಟಿಂಗ್..?‌

Sara Ali khan: ಉದ್ಯಮಿ ಜೊತೆ ಎಂಗೇಜ್‌ ಆದ್ರಾ ಸೈಫ್ ಪುತ್ರಿ – ಮಾಜಿ ಸಿಎಂ ಮೊಮ್ಮಗನೊಂದಿಗೆ ಸಾರಾ ಡೇಟಿಂಗ್..?‌

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.