`ಸಲಾರ್’ ಈ ಮೂರೇ ಮೂರು ಅಕ್ಷರದ ಸಿನಿಮಾ ಅದೆಷ್ಟು ಸದ್ದು ಸುದ್ದಿ ಮಾಡ್ತಿದೆ ಅನ್ನೋದು ನಿಮಗೆ ಗೊತ್ತಿದೆ. ಸಿನಿಮಾ ಪ್ರೇಮಿಗಳು ಮಾತ್ರವಲ್ಲದೇ ಸಿನಿಮಾ ಮಂದಿಯೂ ಕೂಡ `ಸಲಾರ್’ ಎನ್ನುವ ಮೂರೇ ಮೂರಕ್ಷರದ ಸಿನಿಮಾಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಕೆಜಿಎಫ್ ಮೂಲಕ ನರಾಚಿ ದರ್ಶನ ಮಾಡಿಸಿ ನಾಲ್ಕು ದಿಕ್ಕಿನ ಸಿನಿಮಾಮಂದಿಯನ್ನ ಥಂಡಾ ಹೊಡೆಸಿದ ಡೈರೆಕ್ಟರ್ ಪ್ರಶಾಂತ್ ನೀಲ್, `ಸಲಾರ್’ ಮೂಲಕ ಮತ್ಯಾವ ಲೋಕಕ್ಕೆ ಕೊಂಡೊಯ್ಯುತ್ತಾರೆ. ಅಲ್ಲಿ ಅದ್ಯಾವ ಕರಾಳ ಜಗತ್ತನ್ನು ಕಣ್ಣ ಮುಂದೆ ತಂದು ನಿಲ್ಲಿಸಲಿದ್ದಾರೆ ಅಂತ ಕುತೂಹಲಭರಿತರಾಗಿ ಕಾಯುತ್ತಿದ್ದಾರೆ. ಹೀಗಿರುವಾಗಲೇ ದಿನಕ್ಕೊಂದು ಸುದ್ದಿ `ಸಲಾರ್’ ಬಗ್ಗೆ ಕೇಳಿಬರುತ್ತಿದೆ. ಅದು ಅಧಿಕೃತ ಮಾಹಿತಿ ಅಲ್ಲವಾದರೂ ಕೂಡ ಸಿನಿದುನಿಯಾವನ್ನ ಶೇಕ್ ಮಾಡುತ್ತಿದೆ. ಸದ್ಯ, ಸಲಾರ್ ಕುರಿತಾಗಿ ಹೊರಬಿದ್ದಿರುವ ರೆಬೆಲ್ಸ್ಟಾರ್-ರಾಕಿಂಗ್ಸ್ಟಾರ್-ಯಂಗ್ಟೈಗರ್ ಜುಗಲ್ ಬಂಧಿ ಖಬರ್ ಪ್ಯಾನ್ ವಲ್ರ್ಡ್ ದುನಿಯಾವನ್ನೇ ಬೆಚ್ಚಿಬೀಳಿಸಿದೆ.
ಯಸ್, ರೆಬೆಲ್ಸ್ಟಾರ್-ರಾಕಿಂಗ್ಸ್ಟಾರ್-ಯಂಗ್ಟೈಗರ್ ಸಮಾಗಮಗೊಳ್ಳುತ್ತಿರುವ ಸಮಾಚಾರ್ ಟಾಲಿವುಡ್ ಫಿಲ್ಮ್ ನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ. `ಸಲಾರ್’ ಗಾಗಿ ಮಾನ್ಸ್ಟರ್ & ಜೂ. ಎನ್ ಟಿ ಆರ್ ಇಬ್ಬರು ಕಣಕ್ಕಿಳಿದಿದ್ದಾರೆನ್ನುವ ಬೆಂಕಿ ಸಮಾಚಾರ್ ಟಾಲಿವುಡ್ನ ಗಲ್ಲಿ ಗಲ್ಲಿಯಲ್ಲೂ ಕೇಕೆ ಹೊಡೆಯುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಅಥವಾ ಸುಳ್ಳಾ ಗೊತ್ತಿಲ್ಲ ಆದರೆ, ಇದೊಂದು ಬಡಾಖಬರ್ ಎಷ್ಟೋ ಜನರ ಬುಡಕ್ಕೆ ಬೆಂಕಿಬೀಳುವಂತೆ ಮಾಡಿದೆ. ಬಾಹುಬಲಿ ಜೊತೆಯಾಗಿ ರಾಜಾಹುಲಿ ಮತ್ತು ಯಂಗ್ಟೈಗರ್ ಅಖಾಡಕ್ಕಿಳಿದರೆ ಬೆಳ್ಳಿಭೂಮಿ ಅಂಗಳದಲ್ಲಿ ಸುನಾಮಿ ಏಳೋದು, ಬಾಕ್ಸ್ ಆಫೀಸ್ ಜ್ವಾಲಾಮುಖಿಯಂತೆ ಸಿಡಿಯೋದು ಪಕ್ಕಾ ಎನ್ನಲಾಗುತ್ತಿದೆ. ಇವರ ರೇಜು ಪ್ಲಸ್ ಗೇಜ್ ಗೊತ್ತಿರುವ ಸಿನಿಮಾಮಂದಿ, ಪಠಾಣ್-ಜವಾನ್ ಪರಿಸ್ಥಿತಿ ಏನಾಗಬಹುದು? ಗಲ್ಲಾಪೆಟ್ಟಿಗೆ ಅದೆಷ್ಟು ಕೋಟಿ ಹೊತ್ಕೊಂಡು ಕುಣಿಯಬಹುದು ಅಂತ ಲೆಕ್ಕಚ್ಚಾರ ಹಾಕುತ್ತಿದ್ದಾರೆ. ಇತ್ತ ಈ ಮೂವರು ಸ್ಟಾರ್ ನಟರ ಫ್ಯಾನ್ಸ್ ಸರಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಗಾಸಿಪ್ ಲೋಕದಲ್ಲಿ ಹರಿದಾಡ್ತಿರುವ ಈ ಸುದ್ದಿ ನಿಜವಾಗಲಿ. `ಸಲಾರ್’ ಜೊತೆಗೆ ಮಾನ್ಸ್ಟರ್ & ಜೂ. ಎನ್ ಟಿ ಆರ್ ಕಣಕ್ಕಿಳಿಯಲಿ ಅಂತ ಬೇಡಿಕೊಳ್ಳುತ್ತಿದ್ದಾರೆ.
ಅಂದ್ಹಾಗೇ, ಇಷ್ಟು ದಿನ `ಸಲಾರ್’ ಜೊತೆಗೆ ನರಾಚಿ ಹೀರೋ ಅಖಾಡಕ್ಕಿಳಿಯುತ್ತಿದ್ದಾರೆ ಎನ್ನುವ ಸುದ್ದಿಯಷ್ಟೇ ಕೇಳಿಬಂದಿತ್ತು. ಡೇಂಜರಸ್ ಡೈನೋಸಾರ್ ಜೊತೆ ಮಾನ್ಸ್ಟರ್ ಎಂಟ್ರಿಯಾಗಲಿದೆ `ಸಲಾರ್’ ಅಖಾಡದಲ್ಲಿ 5 ನಿಮಿಷ ತೂಫಾನ್ ಹೇಳಲಿದೆ ಎನ್ನುವ ಖಬರ್ರು, ರಾಕಿಭಾಯ್ ಹಾಗೂ ರೆಬೆಲ್ ಅಭಿಮಾನಿಗಳನ್ನ ಹುಚ್ಚೇಳುವಂತೆ ಮಾಡಿತ್ತು. ಆದ್ರೀಗ, ಅಮರೇಂದ್ರ ಬಾಹುಬಲಿ-ರಾಜಾಹುಲಿ-ಕೊಮರಮ್ ಭೀಮ್ ಒಟ್ಟಾಗಿ `ಸಲಾರ್’ ಅಂಗಳದಲ್ಲಿ ಕಾಣಿಸಿಗಲಿದ್ದಾರೆನ್ನುವ ಸಮಾಚಾರ ಸಿನಿಮಾ ಪ್ರೇಮಿಗಳನ್ನ ಮಾತ್ರವಲ್ಲ ಇಡೀ ಸಿನಿದುನಿಯಾವನ್ನೇ ಬೆಕ್ಕಸ ಬೆರಗಾಗಿಸಿದೆ. ಮೂವರು ಪ್ಯಾನ್ ಇಂಡಿಯಾ ಸ್ಟಾರ್ಗಳ ಜುಗಲ್ ಬಂಧಿ ಜಾತ್ರೆ ನೋಡೋದಕ್ಕೆ ಪ್ಯಾನ್ ವಲ್ರ್ಡ್ ಪ್ರೇಕ್ಷಕರು ಕೂಡ ಒಂಟಿಕಾಲಿನಲ್ಲಿ ನಿಲ್ಲುವಂತಾಗಿದೆ. ಅಷ್ಟಕ್ಕೂ, ಕೇಳಿಬರುತ್ತಿರುವ ಬೆಂಕಿ ಖಬರ್ ಬಗ್ಗೆ `ಸಲಾರ್’ ಸ್ಟಾರ್ ಮೇಕರ್ಗಳಿಂದ ಸ್ಪಷ್ಟನೆ ಸಿಕ್ಕಿಲ್ಲವಾದರೂ, ಸಲಾರ್ ಕ್ಲೈಮ್ಯಾಕ್ಸ್ ನಂತರ ಪೋಸ್ಟ್ ಕ್ರೆಡಿಟ್ನಲ್ಲಿ ಯಶ್ ಅಂಡ್ ತಾರಕ್ ಸರ್ಪೈಸ್ ಎಂಟ್ರಿಯಾಗಲಿದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಪ್ಯಾಂಟು ಟೋಪಿ ಹಾಕ್ಕೊಂಡು ಕುಣಿತಾಯಿದೆ.
ಹೌದು, `ಸಲಾರ್’ ಮೂಲಕ ಕೆಜಿಎಫ್ ಯೂನಿವರ್ಸ್ ಮಾಡಲಿಕ್ಕೆ ಹೊರಟಿರುವ ನಿರ್ದೇಶಕ ಪ್ರಶಾಂತ್ ನೀಲ್, ಮೆಟಾವರ್ಸ್ ಮಾಧರಿಯಲ್ಲಿ `ಸಲಾರ್’ ಸಿನಿಮಾವನ್ನ ಕಟ್ಟಿಕೊಟ್ಟಿದ್ದಾರಂತೆ. ಕೆಜಿಎಫ್ ಕಥೆಗೂ, ಸಲಾರ್ ಸ್ಟೋರಿಗೂ, ಎನ್ಟಿಆರ್-31ಗೂ ಲಿಂಕ್ ಇಟ್ಟಿರುವ ನೀಲ್ ಸಾಹೇಬ್ರು, ಮೂರು ಚಿತ್ರಗಳ ಕಥಾ ನಾಯಕರನ್ನ `ಸಲಾರ್’ನಲ್ಲಿ ಒಗ್ಗೂಡಿಸಿದ್ದಾರಂತೆ. ಸಲಾರ್ ಪೋಸ್ಟ್ ಕ್ರೆಡಿಟ್ಸ್ನಲ್ಲಿ ರಾಕಿಭಾಯ್ ಹಾಗೂ ಜೂ.ಎನ್ಟಿಆರ್ನ ತರುವ ಮೂಲಕ ಕೆಜಿಎಫ್ ಯೂನಿವರ್ಸ್ಗೆ ಚಾಲನೆ ಕೊಟ್ಟಿದ್ದಾರೆನ್ನುವ ಇಂಟ್ರೆಸ್ಟಿಂಗ್ ರೂಮರ್ಸ್ ಎಲ್ಲರನ್ನೂ ಬೆರಗುಗೊಳಿಸಿದೆ. ಡಿಸೆಂಬರ್ 22 ಯಾವಾಗ ಆಗುತ್ತೋ ಅಂತ ಎದುರುನೋಡುವಂತೆ ಮಾಡಿದೆ. ಅಂದ್ಹಾಗೇ, ಈ ಪೋಸ್ಟ್ ಕ್ರೆಡಿಟ್ಸ್ ಟೆಕ್ನಿಕ್ನ ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರ ನೋಡ್ತಿದ್ವಿ. ಆದ್ರೀಗ, `ಸಲಾರ್’ ಚಿತ್ರದಿಂದ ಆ ಟೆಕ್ನಿಕ್ ಸೌತ್ನಲ್ಲೂ ಟ್ರೆಂಡ್ ಆಗಲಿದೆ. ಮಾರ್ವಲ್ಗೂ ಮೀರಿದ ಸಿನಿಮಾ ಇದಾಗಲಿದೆ ಎನ್ನುವುದು ಸಿನಿಮಾಪಂಡಿತರು ಹೇಳುವ ಮಾತು.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ `ಸಲಾರ್’ ಸೆಪ್ಟೆಂಬರ್ 28ರಂದೇ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಡಿಸೆಂಬರ್ 22ಕ್ಕೆ ಚಿತ್ರ ಮುಂದೂಡಲಾಗಿದೆ. ದಸರಾ ಹಬ್ಬಕ್ಕೆ ಸ್ಪೆಷಲ್ಲಾಗಿ ಟ್ರೇಲರ್ ಗಿಫ್ಟ್ ಕೊಟ್ಟು ಪ್ಯಾನ್ ವಲ್ರ್ಡ್ ಮಂದಿಯಾ ಐ ಬಾಲ್ನ ಕಬ್ಜ ಮಾಡಿಕೊಳ್ಳುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಹೀಗಾಗಿ, ಟ್ರೇಲರ್ ಫೈನಲ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಭರ್ತಿ 250 ಕೋಟಿ ಸುರಿದು ಕೆಂಡದಂತಹ ಸಿನಿಮಾ ಮಾಡಿರುವ ಹೊಂಬಾಳೆ ಮಾಲೀಕರು ಡಿಸೆಂಬರ್ 22ರಂದು ಕಿಂಗ್ ಖಾನ್ ಡಂಕಿ ಮುಂದೆ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಕೆಜಿಎಫ್ ಮುಂದೆ ಕಿಂಗ್ ಖಾನ್ ಜೀರೋ ಚಿತ್ರ ಮಕಾಡೆ ಮಲಗಿತ್ತು. ಇದೀಗ ಮತ್ತೊಮ್ಮೆ ಹೊಂಬಾಳೆ ಮಾಲೀಕರ ಸಲಾರ್ ಎದುರು ಬಾಕ್ಸ್ ಆಫೀಸ್ ಕಿಂಗ್ ಶಾರುಖ್ ಡಂಕಿ ಸೆಣಸಬೇಕಿದೆ. ಬಾಹುಬಲಿ ಬಂತರ ಸಾಲು ಸಾಲು ಸೋಲುಂಡಿರೋ ಪ್ರಭಾಸ್ ಬಾಲಿವುಡ್ ಬಾದ್ಷಾನ ಬೆಳ್ಳಿಭೂಮಿ ಅಂಗಳದಲ್ಲಿ ಬಗ್ಗುಬಡಿತಾರಾ? ಬಾಕ್ಸ್ ಆಫೀಸ್ನಲ್ಲಿ ಕಿಂಗ್ ಖಾನ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸ್ತಾರಾ? ಡಿಸೆಂಬರ್ 22ರವರೆಗೆ ಕಾದುನೋಡಬೇಕು.