ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Most Awaited Movies of 2025: 2025ರ ಬಹುನಿರೀಕ್ಷಿತ ಚಿತ್ರಗಳ ಕಂಪ್ಲೀಟ್ ಡೀಟೇಲ್ಸ್!

Majja Webdeskby Majja Webdesk
06/02/2025
in Majja Special
Reading Time: 1 min read
Most Awaited Movies of 2025: 2025ರ ಬಹುನಿರೀಕ್ಷಿತ ಚಿತ್ರಗಳ ಕಂಪ್ಲೀಟ್ ಡೀಟೇಲ್ಸ್!

-ಧೂಳೆಬ್ಬಿಸಲಿರೋ ಚಿತ್ರಗಳಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ!

-ಕೌತುಕದ ರೇಸಿನಲ್ಲಿ ಯಶ್ ಜೊತೆಗಿದ್ದಾರೆ ರಿಶಭ್!

ಹೊಸಾ ವರ್ಷವೊಂದು ಶುರುವಾದಾಕ್ಷಣವೇ ಹೊಸ ಲೆಕ್ಕಾಚಾರಗಳು ಗರಿಗೆದರಿಕೊಳ್ಳುತ್ತವೆ. ನವ ಸಂವತ್ಸರದಲ್ಲಿ ಎಲ್ಲವೂ ಹುಲುಸಾಗಿರಲಿ, ಮುಟ್ಟಿದ್ದೆಲ್ಲವೂ ಚಿನ್ನವಾಗಿ ಗೆಲುವು ಸಿಕ್ಕಲಿ ಎಂಬಂಥಾ ಗಾಢ ಆಶಯ ಎಲ್ಲರಲ್ಲಿಯೂ ಇರುತ್ತವೆ. ಇದೇ ಹೊತ್ತಿನಲ್ಲಿ ತಮ್ಮ ಖಾಸಗಿ ಪಡಿಪಾಟಲುಗಳನ್ನೆಲ್ಲ ಮೀರಿ ಇಲ್ಲಿನ ಸಿನಿಮಾ ಪ್ರೇಮಿಗಳು ಬೇರೆಯದ್ದೇ ರೀತಿಯ ಲೆಕ್ಕಾಚಾರಕ್ಕಿಳಿಯೋದು ಮಾಮೂಲು. ಈವತ್ತಿಗೆ ಜನಸಾಮಾನ್ಯರ ಮನೋರಂಜನೆಗೆ ನಾನಾ ಬಾಗಿಲುಗಳು ತೆರೆದುಕೊಂಡಿವೆ. ಆದರೆ, ಅವ್ಯಾವುವೂ ಕೂಡಾ ಸಿನಿಮಾ ನೀಡುಉವ ಅನುಭೂತಿಗೆ ಸರಿಸಾಟಿಯಾಗಲು ಸಾಧ್ಯವಾಗಿಲ್ಲ. ಅದೇನೇ ಅಡೆತಡೆಗಳು ಬಂದರೂ, ಕೊರೋನಾದಂಥಾ ಮಹಾ ಮಾರಿ ಎಲ್ಲವನ್ನೂ ಸರ್ವನಾಶ ಮಾಡಿದರೂ ಕೂಡಾ ಚಿತ್ರರಂಗ ಮತ್ತೆ ಕಳೆಗಟ್ಟಿಕೊಂಡಿದೆ ಅಂದ್ರೆ, ಅದರ ಹಿಂದಿರೋದು ಭಾರತೀಯರಲ್ಲಿ ಸ್ಫುರಿಸುತ್ತಿರುವ ಅಪೂರ್ವವಾದ ಸಿನಿಮಾ ಪ್ರೇಮ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ!
ಇದೀಗ ೨೦೨೫ರ ಒಂದು ತಿಂಗಳು ಮುಕ್ತಾಯವಾಗಿದೆ. ಕನ್ನಡವೂ ಸೇರಿದಂತೆ ನಾನಾ ಸಿನಿಮಾ ರಂಗಗಳಲ್ಲಿ ಹೊಸತನದ ಗಾಳಿಯೊಂದಿಗೆ, ಒಂದಷ್ಟು ಸಮ್ಮೋಹಕ ಗೆಲುವುಗಳು ಸಂಭವಿಸುತ್ತಿವೆ. ಒಟ್ಟಾರೆ ಭಾರತೀಯ ಚಿತ್ರರಂಗವನ್ನು ಈ ವರ್ಷದ ಭೂಮಿಕೆಯಲ್ಲಿ ಪರಾಮರ್ಶೆ ನಡೆಸಿದರೆ ಇತ್ತೀಚಿನ ವರ್ಷಗಳಲ್ಲೇ ಅಪರೂಪದ ಆಶಾದಾಯಕ ವಾತಾವರಣವೊಂದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಅಬ್ಬರದ ಮುಂದೆ ತಣ್ಣಗಾದಂತಿರೋ ಬಾಲಿವುಡ್ ಕೂಡಾ ಈ ವರ್ಷ ಮತ್ತೆ ಚೇತರಿಸಿಕೊಳ್ಳುವ ಸ್ಪಷ್ಟ ಸೂಚನೆ ಕಾಣಿಸಲಾರಂಭಿಸಿದೆ. ಅದ್ಯಾವ ಭಾಷೆಯ ಸಿನಿಮಾಗಳೇ ಆಗಿದ್ದರೂ ಭರಪೂರ ಗೆಲುವು ಕಾಣೋದೆಂದರೆ, ಅದು ಭಾರತೀಯ ಚಿತ್ರರಂಗದ ಒಟ್ಟಾರೆ ಏಳಿಗೆಯ ದೃಷ್ಟಿಯಿಂದ ನಿಜಕ್ಕೂ ಆಶಾದಾಯಕ ಬೆಳವಣಿಗೆ. ೨೦೨೫ ಅಂಥಾದ್ದೊಂದು ಸುವರ್ಣ ಕಾಲವನ್ನ ಭಾರತೀಯ ಚಿತ್ರರಂಗಕ್ಕೆ ತಂದು ಕೊಡಲಿದೆಯಾ? ಸದ್ಯ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಹೌದೆಂಬಂಥಾ ಉತ್ತರ ಖಂಡಿತವಾಗಿಯೂ ಸಿದ್ಧವಿದೆ!

ಶುರುವಾಗುತ್ತಾ ಸುವರ್ಣ ಕಾಲ?


ಈವತ್ತಿಗೆ ಭಾರತೀಯ ಚಿತ್ರರಂಗ ನಾನಾ ಟೆಕ್ನಾಲಜಿಗಳಿಗೆ ತನ್ನನ್ನು ತಾನು ಒಡ್ಡಿಕೊಂಡಿದೆ. ಮೂಕಿ ಚಿತ್ರದ ಜಮಾನದಿಂದ ಶುರುವಾಗಿ, ಬ್ಲಾಕ್ ಅಂಡ್ ವೈಟ್ ಯುಗವನ್ನು ದಾಟಿಕೊಂಡು, ಹಂತ ಹಂತವಾಗಿ ಬೆಳೆದು ನಿಂತ ಘನ ಇತಿಹಾಸ ಭಾರತೀಯ ಸಿನಿಮಾ ರಂಗಕ್ಕಿದೆ. ಇಂದಿಗೆ ಹಾಲಿವುಡ್ಡನ್ನೇ ಸರಿಗಟ್ಟುವಂಥಾ ತಂತ್ರಜ್ಞಾನ, ಗಟ್ಟಿ ಕಥೆ, ಗುಣಮಟ್ಟ, ಬೆರಗಾಗಿಸುವಂಥಾ ನಿರ್ದೇಶನ ಸೇರಿದಂತೆ ಎಲ್ಲವೂ ಇದೆ. ಆದರೆ, ಆಗಾಗ ಈ ಬಣ್ಣದ ಲೋಕಕ್ಕೆ ಅನಿರೀಕ್ಷಿತವಾಗಿ ಗ್ರಹಣ ಕವುಚಿಕೊಳ್ಳುತ್ತೆ. ಕೊರೋನಾದಿಂದ ಸೃಷ್ಟಿಯಾದ ಲಾಕ್ ಡೌನ್ ಮತ್ತು ಆ ನಂತರದ ಕೆಲ ವಿದ್ಯಮಾನಗಳು ಸಿನಿಮಾ ಕ್ಷೇತ್ರವನ್ನು ಕಂಗಾಲಾಗಿಸಿರೋದು ಸತ್ಯ. ಅದು ಕೊರೋನಾ ತೊಲಗಿ ಎರಡ್ಮೂರು ವರ್ಷಗಳ ಕಾಲ ಹಾಗೆಯೇ ಮುಂದುವರೆದಿತ್ತು.
ಕಳೆದ ವರ್ಷದ ಅಂಚಿನ ಹೊತ್ತಿಗೆಲ್ಲ ಕೊಂಚ ಗ್ರಹಣ ಕಳೆದಂತಾಗಿದೆ. ಕನ್ನಡ, ತಮಿಳು, ತೆಲುಗು ಸೇರಿದಂತೆ ಒಂದಷ್ಟು ಭಾಷೆಗಳಲ್ಲಿ ಚೆಂದದ ಸಿನಿಮಾಗಳು ಕಳೆದ ವರ್ಷ ತೆರೆಗಂಡಿವೆ. ದೊಡ್ಡ ಮಟ್ಟದಲ್ಲಿಯೇ ಗೆದ್ದಿವೆ. ಆದರೆ, ಆ ಗೆಲುವು ಭಾರತೀಯ ಚಿತ್ರರಂಗದ ಅಗಾಧ ವಿಸ್ತಾರ, ಸಾಧ್ಯತೆಗಳನ್ನು ಸರಿಗಟ್ಟುವಂತಿಲ್ಲ ಅನ್ನೋದು ಸಿನಿಮಾ ಪ್ರೇಮಿಗಳ ಅಸಲೀ ಕೊರಗು. ಇಂದು ತಂತ್ರಜ್ಞಾನ ಸೇರಿದಂತೆ ಎಲ್ಲವೂ ಇದ್ದರೂ ನಿರಂತರ ಗೆಲುವು ಸಾಧ್ಯವಾಗುತ್ತಿಲ್ಲ ಅಂತೊಂದು ಅಸಮಾಧಾನ ಸಿನಿಮಾ ಪ್ರೇಮಿಗಳಲ್ಲಿ ಇದ್ದೇ ಇದೆ. ಈ ವರ್ಷದ ಸ್ಥಿತಿಗತಿ, ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಹವಾ ಸೃಷ್ಟಿಸಲು ಸಜ್ಜಾಗಿರುವ ಸಿನಿಮಾಗಳ ಪಟ್ಟಿ ನಿಜಕ್ಕೂ ಆಶಾದಾಯಕವಾಗಿದೆ. ಇದು ಭಾರತೀಯ ಚಿತ್ರರಂಗದ ಪಾಲಿಗೆ ಸುವರ್ಣ ಯುಗ ಮರುಕಳಿಸುವ ನಿಖರ ಮುನ್ಸೂಚನೆಯಂತೆಯೂ ಕಾಣಿಸುತ್ತಿದೆ.

ಕನ್ನಡ ಚಿತ್ರರಂಗ ಲಕಲಕ!


ಬೇರೆಲ್ಲ ಭಾಷೆಗಳ ಸಿನಿಮಾಗಳ ಬಗ್ಗೆ ಹೇಳುವುದಕ್ಕಿಂತ ಮೊದಲು ಕನ್ನಡ ಚಿತ್ರರಂಗದ ಲಕ್ಕು ಕುದುರುವ ಲಕ್ಷಣದ ಬಗ್ಗೆ ಉಲ್ಲೇಖಿಸೋದೊಳಿತು. ಈಗೊಂದು ದಶಕದ ಹಿಂದಿನ ವಾತಾವರಣವನ್ನೊಮ್ಮೆ ಸುಮ್ಮನೆ ನೆನಪಿಸಿಕೊಳ್ಳಿ. ಕನ್ನಡ ಚಿತ್ರರಂಗದ ಅಂದಿನ ಸ್ಥಿತಿಗತಿ ನಿಜಕ್ಕೂ ಖೇದ ಮೂಡಿಸುತ್ತೆ. ಯಾಕಂದ್ರೆ, ಕನ್ನಡ ಸಿನಿಮಾ ರಂಗವನ್ನ ಕಂಡು ಪರಭಾಷಾ ಮಂದಿ ಮೂಗು ಮರಿಯುತ್ತಿದ್ದರು. ಅವಕಾಶ ಸಿಕ್ಕಾಗೆಲ್ಲ ಮೂದಲಿಸುತ್ತಿದ್ದರು. ಇಲ್ಲಿಯೂ ಒಂದಷ್ಟು ಚೆಂದದ ಸಿನಿಮಾಗಳು ಬಂದರೂ ಕೂಡಾ ಅವು ಗಡಿದಾಟಿ ಸದ್ದು ಮಾಡುವಲ್ಲಿ ಸೋಲುತ್ತಿದ್ದವು. ಒಟ್ಟಾರೆ ಗುಣಮಟ್ಟದ ವಿಚಾರದಲ್ಲಿಯೂ ಕೂಡಾ ಕನ್ನಡ ಸಿನಿಮಾಗಳು ಹಿಂದೆ ಬಿದ್ದಂತಿದ್ದವು.
ಪಕ್ಕದ ತಗೆಲುಗು ಚಿತ್ರಗಳು ಪ್ಯಾನಿಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ಹೊತ್ತಿಗೆ, ತಮಿಳು ಚಿತ್ರಗಳು ವಿಸ್ತಾರವಾದ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಾಗಲೂ ಕೂಡಾ ಕನ್ನಡ ಚಿತ್ರರಂಗ ಮಾತ್ರ ಮಿತಿಗಳನ್ನು ಮೀರಲು ಸಾಧ್ಯವಾಗದೆ ಒದ್ದಾಡುವಂತಾಗಿತ್ತು. ಇಂಥಾ ವಾತಾವರಣದಲ್ಲಿಯೇ ತಯಾವ ನಿರೀಕ್ಷೆಗಳನ್ನೂ ಮೂಡಿಸದೆ ರೂಪುಗೊಂಡಿದ್ದ ಸಿನಿಮಾ ಕೆಜಿಎಫ್. ಆ ದಿನಮಾನದಲ್ಲಿ ವರ್ಷಗಟ್ಟಲೆ ಶೂಟಿಂಗು ನಡೆಸಿದ್ದ ಕೆಜಿಎಫ್ ಬಗ್ಗೆ ಮೂದಲಿಕೆ, ರೂಮರುಗಳು ಕೇಳಿ ಬರುತ್ತಿದ್ದವೇ ಹೊರತು ಆಶಾದಾಯಕ ವಾತಾವರಣ ಇರಲಿಲ್ಲ. ಇಂಥಾ ಹೊತ್ತಿನಲ್ಲಿ ಯಶ್ ದೇಶವ್ಯಾಪಿ ಸದ್ದು ಮಾಡುವ ಮಾತಾಡಿದಾಗ, ಹೊಸಾ ಕನಸುಗಳನ್ನು ತೆರೆದಿಟ್ಟಾಗ ಅದೆಲ್ಲವೂ ಅಕ್ಷರಶಃ ಭ್ರಮೆಯಂತೆಯೇ ಭಾಸವಾಗುತ್ತಿತ್ತು.
ಆದರೂ ಕೂಡಾ ಯಶ್ ಮಾತಿನಲ್ಲಿನ ಕಾನ್ಫಿಡೆನ್ಸ್ ಲೆವೆಲ್ಲು ಕೊಂಚವೂ ಇಳಿಮುಖವಾಗಿರಲಿಲ್ಲ. ಆದರೆ, ಆ ಘಳಿಗೆಯಲ್ಲಿ ಕೆಜಿಎಫ್ ದಾಖಲಿಸಬಹುದಾದ ಗೆಲುವಿನ ಅಗಾಧತೆ ಯಾರಿಗೂ ಗೊತ್ತಾಗಿರಲಿಲ್ಲ. ಈವತ್ತಿಗೆ ಕೆಜಿಎಫ್ ಅಂದಾಕ್ಷಣ ಮೂಡಿಕೊಳ್ಳುವ ರೋಮಾಂಚನವೇ ಬೇರೆ, ಆವತ್ತಿಗೆ ಆ ಟೈಟಲ್ಲು ಕೇಳಿದಾಕ್ಷಣ ಆಗುತ್ತಿದ್ದ ಫೀಲೇ ಬೇರೆ. ಆವತ್ತಿಗೆ ಅದೊಂದು ಕ್ಯಾಚೀ ಟೈಟಲ್ ಅನ್ನಿಸಿರಲಿಲ್ಲ. ಉಗ್ರಂ ಥರದ ಸಿನಿಮಾ ಮಾಡಿದ್ದ ಪ್ರಶಾಂತ್ ನೀಲ್ ಈ ಮಟ್ಟದ ಕಮಾಲ್ ಒಂದಕ್ಕೆ ಅಣಿಗೊಳ್ಳುತ್ತಿದ್ದಾರೆಂಬ ಸುಳಿವೂ ಕೂಡಾ ಸಿಕ್ಕಿರಲಿಲ್ಲ. ಆ ಚಿತ್ರ ವರ್ಷಗಟ್ಟಲೆ ಚಿತ್ರೀಕರಣ ನಡೆಸಿಕೊಂಡಾಗ ಚಿತ್ರತಂಡದ ತಿಕ್ಕಾಟವೇ ಅದಕ್ಕೆ ಕಾರಣವೆಂದು ಭ್ರಮಿಸಿದವರೇ ಹೆಚ್ಚು. ಆದರೆ, ಕೆಜಿಎಫ್ ಬಿಡುಗಡೆಗೊಂಡು ಫ್ಯಾನಿಂಡಿಯಾ ಮಟ್ಟ ಮೀರಿ ವಿದೇಶಗಳಲ್ಲಿಯೂ ಸದ್ದು ಮಾಡುವ ಮೂಲಕ ಎಲ್ಲ ಭ್ರಮೆಗಳೂ ಕಳಚಿಕೊಂಡು ಆ ಜಾಗವನ್ನು ಬೆರಗೊಂದು ಆವರಿಸಿಕೊಂಡಿತ್ತು.

ಕೆಜಿಎಫ್ ಪ್ರಭೆಯಲ್ಲಿ ಟಾಕ್ಷಿಕ್


ಈ ಕ್ಷಣದಲ್ಲಿ ೨೦೨೫ರ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳ ಬಗ್ಗೆ ಹೇಳುವಾಗ ಕೆಜಿಎಫ್ ಇತಿಹಾಸ ಕೆದಕುವುದಕ್ಕೆ, ಕನ್ನಡ ಚಿತ್ರರಂಗದ ದಶಕದ ಹಿಂದಿನ ಸ್ಥಿತಿಗತಿಗಳನ್ನು ಪರಾಮರ್ಶೆ ನಡೆಸುವುದಕ್ಕೆ ಕಾರಣ ಇಲ್ಲದಿಲ್ಲ. ಒಂದು ಕಾಲದಲ್ಲಿ ಯಾವ ಕೆಜಿಎಫ್ ಮೂಲಕ ಯಶ್ ಕನ್ನಡ ಚಿತ್ರರಂಗದ ಘನತೆ ಗೌರವಗಳನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ್ದರೋ, ಅದೇ ಯಶ್ ಸಿನಿಮಾ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಪ್ರಾತಿನಿಧ್ಯ ಸಿಕ್ಕಿದೆ. ಈಗಾಗಲೇ ಕೆಲ ಸಂಸ್ಥೆಗಳು ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಬಗ್ಗೆ ಸರ್ವೆ ನಡೆಸಿವೆ. ಅದರಲ್ಲಿ ಯಶ್ ಅಭಿನಯದ ಟಾಕ್ಸಿಕ್ ಈ ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿ ಮುಂಚೂಣಿಯಲ್ಲಿದೆ.
ಕೆಜಿಎಫ್ ಸರಣಿಯ ಎರಡೂ ಸಿನಿಮಾಗಳು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ದೊಡ್ಡ ಮಟ್ಟದಲ್ಲಿಯೇ ಗೆದ್ದಿವೆ. ಅದರಲ್ಲಿಯೂ ಹಿಂದಿ ಸ್ಟಾರ್ ಗಳ ಸ್ವಂತದ ಸ್ವತ್ತೆಂಬಂತಿದ್ದ ಹಿಂದಿ ಮಾರುಕಟ್ಟೆಯನ್ನು ಕೂಡಾ ರಾಕಿಂಗ್ ಸ್ಟಾರ್ ಯಶ್ ಕಬ್ಜಾ ಮಾಡಿಕೊಂಡಿದ್ದಾರೆ. ಈ ಕೆಜಿಎಫ್ ಸರಣಿಯ ನಂತರ ಕೂಡಾ ಯಶ್ ಅತ್ಯಂತ ಎಚ್ಚರದ ಹೆಜ್ಜೆಯಿಟ್ಟಿದ್ದಾರೆ. ಗೀತು ಮೋಹನ್ ದಾಸ್ ಎಂಬ ಮಹಿಳಾ ನಿರ್ದೇಶಕಿಗೆ ಸಾರಥ್ಯ ವಹಿಸುವ ಮೂಲಕವೂ ಯಶ್ ಅಚ್ಚರಿ ಮೂಡಿಸಿದ್ದಾರೆ. ಅಂತೂ ಇದೀಗ ಟಾಕ್ಸಿಕ್ ಕೂಡಾ ಹಂತ ಹಂತವಾಗಿ ಕೆಜಿಎಫಫ್ ಅನ್ನೇ ಮೀರಿಸುವಂತೆ ಮಿಂಚುತ್ತಿದೆ. ಈ ಬಾರಿ ಕಳೆದೆರಡು ಗೆಲುವನ್ನೇ ಮೀರಿಸುವಂತೆ ಯಶ್ ಮಿಂಚಲಿದ್ದಾರೆಂಬ ಮಾತತುಗಳು ಬಾಲಿವುಉಡ್ ಮಟ್ಟದಲ್ಲಿ ಕೇಳಿ ಬರಲಾರಂಭಿಸಿದೆ. ಈ ಕಾರಣದಿಂದಲೇ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಟಾಕ್ಸಿಕ್ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದೆ. ಇದರೊಂದಿಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಸ್ಥಾನ ಗಟ್ಟಿಯಾಗಿದೆ.

ಯಶ್ ಜೊತೆ ರಿಶಭ್ ಹವಾ


ರಾಕಿಂಗ್ ಸ್ಟಾರ್ ಯಶ್ ಮೂಡಿಸಿದ್ದ ಪ್ಯಾನಿಂಡಿಯಾ ಸಂಚಲನವನ್ನು ಅದೇ ಆವೇಗದಲ್ಲಿ ಮುಂದುವರೆಸಿದ ಚಿತ್ರವೇನಾದರೂ ಕನ್ನಡದಲ್ಲಿದ್ದರೆ ಅದು ಕಾಂತಾರ ಮಾತ್ರ. ಇದು ಪರಭಾಷಾ ಚಿತ್ರರಂಗದ ಮಂದಿಯನ್ನೂ ಅವಕ್ಕಾಗಿಸಿದ್ದ ಅಚ್ಚರಿದಾಯಕ ಗೆಲುವು. ಎಶಭ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದ ಆ ಚಿತ್ರ ಕನ್ನಡಕ್ಕೆರರ ಮಾತ್ರವೇ ಸೀಮಿತವಾಗಿ ತಯಾರಾಗಿತ್ತು. ಅದನ್ನು ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಬೇಕೆಂಬ ಸಣ್ಣ ಇರಾದೆಯೂ ರಿಶಭ್ ಅವರಿಗೆ ಇದ್ದಂತಿರಲಿಲ್ಲ. ಯಾವ ಹೈಪು, ಪೋಸುಗಳೂ ಇಲ್ಲದೆ ತೆರೆಗಂಡಿದ್ದ ಈ ಸಿನಿಮಾ ಸೃಷ್ಟಿಸಿದ ಹಂಗಾಮಾ ಇದೆಯಲ್ಲಾ? ಅದನ್ನು ಕನ್ನಡ ಚಿತ್ರರಂಗದ ಇತಿಹಾಸ ಸದಾ ನೆನಪಿನಲ್ಲಿಟ್ಟುಕೊಳ್ಳುವಂಥಾದ್ದು.

ಕರಾವಳಿ ಭಾಗದ ಭೂಊತ ಕೋಲದಂಥವುಗಳು ಸಾಕಷ್ಟು ಬಾರಿ ಕನ್ನಡ ಸಿನಿಮಾಗಳಲ್ಲಿ ಮಿಂಚಿತ್ತು. ಆದರೆ ಕಾಂತಾರದಷ್ಟು ಪರಿಣಾಮಕಾರಿಯಾಗಿ ಯಾವ ಸಿನಿಮಾಗಳೂ ಕಟ್ಟಿ ಕೊಟ್ಟಿರಲಿಲ್ಲ. ಗಟ್ಟಿ ಕಂಟೆಂಟು ಒಂದಿದ್ದರೆ ಒಂದು ಸಿನಿಮಾ ಹೇಗೆ ಗಡಿ ದಾಟಿಕೊಂಡು ಸರ್ವಾಂತರ್ಯಾಮಿಯಾಗುತ್ತೆ ಅನ್ನೋದಕ್ಕೆ ಕಾಂತಾರಾ ಉದಾಹರಣೆಯಂತಿದೆ. ಕನ್ನಡದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದ ಈ ಸಿನಿಮಾ ಕಡೆಗೆ ಬೇರೆ ಬೇರೆ ಭಾಷೆಗಳಲ್ಲಿಯೂ ಕೂಡಾ ಬಿಡುಗಡೆಗೊಂಡಿತ್ತು. ಕಲೆಕ್ಷನ್ನಿನಲ್ಲಿ ದೊಡ್ಡ ಮಟ್ಟದಲ್ಲಿಯೇ ದಾಖಲೆ ಬರೆದಿತ್ತು. ಇದೀಗ ರಿಶಭ್ ಕಾಂತಾರಾ ಸೀಕ್ವೆಲ್ ಅನ್ನು ರೆಡಿ ಮಾಡುತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಇದೂ ಕೂಡಾ ಭಾರತದ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಹೀಗೆ ಕನ್ನಡ ಚಿತ್ರರಂಗಕ್ಕೆ ಪ್ಯಾನಿಂಡಿಯಾ ಮಟ್ಟದಲ್ಲಿ ಸಿಕ್ಕಿರುವ ಪ್ರಾತಿನಿಧ್ಯ ಕಂಡು ಬಾಲಿವುಡ್ ಮಂದಿಯೇ ಕಂಗಾಲಾಗಿದ್ದಾರೆ. ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಈ ವರ್ಷದ ಆಶಾದಾಯಕ ಬೆಳವಬಣಿಗೆಗಳ ಬಗ್ಗೆ ಹೇಳೋದಕ್ಕಿಂತ ಮೊದಲು ಕನ್ನಡ ಚಿತ್ರರಂಗದ ಸುಗ್ಗಿ ಸಂಭ್ರಮದ ಬಗ್ಗೆ ಹೇಳಲೇ ಬೇಕಿದೆ. ಇಷ್ಟೂ ವರ್ಷಗಳ ಕಾಲ ವರ್ಷದಲ್ಲಿ ಒಂದು ಸಿನಿಮಾ ಪ್ಯಾನಿಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿತ್ತು. ಅದರ ಮುಂಚೂಣಿಯಲ್ಲಿ ರಾಕಿಭಾಯ್ ಮಾತ್ರವೇ ಇರುತ್ತಿದ್ದರು. ಆದರೆ, ಈ ವರ್ಷ ಮಾತ್ರನ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ಯಾಕಂದ್ರೆ, ಕನ್ನಡದ ಭೂಮಿಕೆಯಲ್ಲಿ ತಯಾರಾಗುತ್ತಿರೋ ಟಾಕ್ಸಿಕ್ ಮತ್ತು ಕಾಂತಾರಾ ಅಧ್ಯಾಯ೧ ಚಿತ್ರಗಳು ಭಾರೀ ಹೈಪು ಸೃಷ್ಟಿಸಿದ್ದಾವೆ.
ಈ ಎರಡೂ ಸಿನಿಮಾಗಳ ಪ್ರಭೆ ಬೇರೆ ಸಿನಿಮಾಗಳಿಗೆ ಹೋಲಿಸಿದರೆ ಹೆಚ್ಚೇ ಇದ್ದಂತಿದೆ. ತಮಿಳು, ತೆಲುಗುಇಇ ಮತ್ತು ಹಿಂದಿಯಲ್ಲಿ ಘಟಾನುಘಟಿ ನಟರ ಬಿಗ್ ಬಜೆಟ್ ಸಿನಿಮಾಗಳು ಬಹುನಿರೀಕ್ಷೆಯ ರೇಸಿನಲ್ಲಿದ್ದಾವೆ. ಅದರಲ್ಲಿಯೇ ಯಾವ ಸಿನಿಮಾಗಳ ಮೇಲೆ ಹೆಚ್ಚು ನಿರೀಕ್ಷೆ ಅಂತೇನದರೂ ಸ್ಪರ್ಧೆ ಶುರುವಾದರೆ ಖಮಡಿತವಾಗಿಯೂ ಟಾಕ್ಸಿಕ್ ಮತ್ತು ಕಾಂತಾರಾ ಅಧ್ಯಾಯ೧ ಚಿತ್ರಗಳೇ ಮುಂಚೂಣಿಯಲ್ಲಿರುತ್ತವೆ. ಕನ್ನಡ ಸಿನಿಮಾಗಳೆರಷ್ಟು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಹೀಗೆ ಮುನ್ನಡೆ ಕಾಯ್ದುಕೊಂಡಿರೋದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ.

ರೇಸಿನಲ್ಲಿ ಇಪ್ಪತ್ತು ಚಿತ್ರಗಳು
ಸದ್ಯ ಈ ವರ್ಷಾರಂಭದಲ್ಲಿಯೇ ಬಿಡುಗಡೆಯಾಗಲಿರೋ ದೊಡ್ಡ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವರ್ಷದ ಅಂತ್ಯದೊಳಗೆ ಬಿಡುಗಡೆಗೊಳ್ಳಲು ಬೇರೆ ಬೇರೆ ಭಾಷೆಗಳ ಒಂದಷ್ಟು ಸಿನಿಮಾಗಳು ರೆಡಿಯಾಗಿವೆ. ಅದರಲ್ಲಿ ಪ್ರಧಾನವಾಗಿ ವಿಶ್ವಾದ್ಯಂತ ಪ್ರೇಕ್ಷಕರು ನಿರೀಕ್ಷೆಯಿಟ್ಟುಕೊಂಡಿರುವ ಇಪ್ಪತ್ತು ಸಿನಿಮಾಗಳ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿ ಮೇಲು ನೋಟಕ್ಕೆ ಹಿಂದಿ ಸಿನಿಮಾಗಳು ಮೇಲುಗೈ ಸಾಧಿಸಿದಂತಿದೆ. ಯಾಕಂದ್ರೆ ಇಪ್ಪತ್ತರಲ್ಲಿ ಹನ್ನೆರಡು ಹಿಂದಿ ಸಿನಿಮಾಗಳಿದ್ದಾವೆ. ಕನ್ನಡ, ತಮಿಳು, ಮಲೆಯಾಳಂ, ತೆಲುಗು ಚಿತ್ರಗಳೂ ಆ ಪಟ್ಟಿಯಲ್ಲಿವೆ. ಕಳೆದ ವರ್ಷದ ಹೊತ್ತಿಗೆಲ್ಲ ಬಾಲಿವುಡ್ ಸಣ್ಣ ಪುಟ್ಟ ಗೆಲುವುಉಗಳನ್ನು ಸಂಭ್ರಮಿಸುವ ಹಂತ ತಲುಉಪಿಕೊಂಡಿತ್ತು. ಆದರೆ ಈ ಬಾರಿ ಬಾಲಿವುಡ್ಡಿನ ಹನ್ನೆರಡು ಸಿನಿಮಾಗಳು ಈ ವರ್ಷದ ಮಹತ್ವದ ಸಿನಿಮಾಗಳಾಗಿ ದಾಖಲಾಗಿವೆ. ಇದು ಬಾಲಿವುಡ್ ಚೇತರಿಸಿಕೊಳ್ಳುತ್ತಿರೋ ಲಕ್ಷಣ ಅಂತಲೂ ಹೇಳಲಾಗುತ್ತಿದೆ.

ಸೊರಗಿದ್ದ ಅಕ್ಷಯ್ ಆವೇಗ!


ಹಿಂದಿ ಸಿನಿಮಾ ರಂಗದಲ್ಲಿ ಅದೇನೇ ಪಲ್ಲಟಗಳಾದರೂ, ಖಾನ್‌ಗಳು ವರ್ಷಕ್ಕೊಂದು ಸಿನಿಮಾಗಳಲ್ಲಿ ನಟಿಸಲು ಹಿಂದೆ ಮುಂದೆ ನೋಡುವಾಗಲೂ ಓಡುವ ಕುದುರೆಯಂತೆ ಕೆನೆಯುತ್ತಿದ್ದವರು ಅಕ್ಷಯ್ ಕುಮಾರ್. ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಷಯ್ ಸಿನಿಮಾಗಳು ಮಾತ್ರವೇ ಹಿಂದಿಯಲ್ಲಿ ಬಿಡುಗಡೆಗೊಳ್ಳುತ್ತಿದ್ದವು. ಅಕ್ಷಯ್ ಸಿನಿಮಾ ಅಂದಮೇಲೆ ಬೇರೆ ಭಾಷೆಗಳ್ಲ್ಲಿಯೂ ಮಾರ್ಕೆಟ್ ಇದ್ದೇ ನಇದೆಯೆಂಬ ವಾತಾವರಣವಿತ್ತು. ಆತನ ಸಿನಿಮಾಗಳು ಹಾಕಿದ ಬಂಡವಾಳಕ್ಕೆ ಮೋಸ ಮಾಡೋದಿಲ್ಲ ಎಂಬಂಥಾ ನಂಬಿಕೆಯೂ ಇತ್ತು. ಆದರೆ, ಕಳೆದ ವರ್ಷದಲ್ಲಿ ಅಕ್ಷಯ್‌ಗೆ ಸಾಲು ಸಾಲು ಸೋಲೆದುರಾಗುವ ಮೂಲಕ ಎಲ್ಲವೂ ಅದಲು ಬದಲಾಗಿತ್ತು.
ಅಕ್ಷಯ್ ಕುಮಾರ್ ನಸೀಬ್ ಅದ್ಯಾವ ಪರಿಯಲ್ಲಿ ಕೆಟ್ಟಿತ್ತೆಂದರೆ, ಈತನನ್ನು ನಂಬಿ ಹಣ ಹೂಡಿದ ನಿರ್ಮಾಪಕರೊಬ್ಬರು ಮನೆ ಮಠ ಮಾರಿಕೊಂಡಿದ್ದರ ಬಗ್ಗೆಯೂ ಭಾರೀ ವಿವಾದವೆದ್ದಿತ್ತು. ಒಂದು ಹಂತದಲ್ಲಿ ಅಕ್ಷಯ್ ಸಿನಿಮಾಗೆ ಹಣ ಹೂಡಲು ನಿರ್ಮಾಪಕರು ಹಿಂದೇಟು ಹಾಕಿದ್ದರು. ಇನ್ನೇನು ಅಕ್ಷಯ್ ಕುಮಾರ್ ಕಥೆ ಮುಗೀತೆಂದುಕೊಂಡಿದ್ದವರಿಗೆಲ್ಲ ೨೦೨೫ರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿ ಅಕ್ಷರಶಃ ಶಾಕ್ ಕೊಟ್ಟಿದೆ. ಯಾಕಂದ್ರೆ, ಇಪ್ಪತ್ತು ಸಿನಿಮಾಗಳ ಈ ಪಟ್ಟಿಯಲ್ಲಿರೋ ಹನ್ನೆರಡು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ನಟಿಸಿರೋ ಮೂರು ಚಿತ್ರಗಳಿದ್ದಾವೆ!

ಸಿಕಂದರ್ ಹವಾ


ಮುರುಗಾ ದಾಸ್ ನಿರ್ದೇಶನದ ಸಿಕಂದರ್ ಚಿತ್ರ ಕಳೆದ ವರ್ಷದಿಂದಲೇ ಭಾರೀ ಸದ್ದು ಮಾಡಿತ್ತು. ಮುರುಗಾ ದಾಸ್ ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ. ಭಿನ್ನ ಹಾದಿಯಲ್ಲಿ ಹೆಜ್ಜೆಯೂರದ ಮುರುಗಾ ದಾಸ್ ಅಂದರೆ, ದೇಶ ವಿದೇಶಗಳಲ್ಲಿಯೂಊ ಒಂದು ಬೆರಗಿದೆ. ಕಳೆದ ಒಂದಷ್ಟು ವರ್ಷಗಳಲ್ಲಿ ಸಲ್ಮಾನ್ ಖಾನ್ ನಟಿಸಿರುವ ಚಿತ್ರಗಳು ತೆರೆಗಂಡಿದ್ದೂ ಕಡಿಮೆ. ದೊಡ್ಡ ಮಟ್ಟದಲ್ಲಿ ಗೆದ್ದಿದ್ದೂ ಕೂಡಾ ವಿರಳ. ಸೋಲು ಕಾಣದಿದ್ದರೂ ಕೂಡಾ ಸಿಕ್ಕ ಗೆಲುವು ಸಲ್ಲು ಸ್ಟಾರ್ ಡಮ್‌ಗೆ ಸಮನಾಗಿಲ್ಲ ಎಂಬಂಥಾ ವೀಶ್ಲೇಷಣೆಗಳು ಕೇಳಿ ಬರುತ್ತಿವೆ. ದಕ್ಷಿಣದ ಹೊಸಾ ಹೀರೋಗಳ ಚಿತ್ರಗಳು ಬಾಲಿವುಡ್ ಬಾಕ್ಸಾಫೀಸ್ ಅನ್ನು ಕಬ್ಜಾ ಮಾಡಿಕೊಳ್ಳುತ್ತಿವೆ. ಅದೇ ಹೊತ್ತಿನಲ್ಲಿ ಸಲ್ಲು ಸಿನಿಮಾಗಳು ಕಳೆಗುಂದಿದ್ದವು.
ಅಂಥಾದ್ದೊಂದು ಹಿನ್ನಡೆಯನ್ನು ದಾಟಿಕೊಳ್ಳುವ ಸಲುವಾಗಿಯೇ ಸಲ್ಮಾನ್ ಖಾನ್ ಮುರುಗಾ ದಾಸ್ ಮೊರೆ ಹೋಗಿದ್ದಾರೆಂದು ಹೇಳಲಾಗುತ್ತಿದೆ. ಇದರಲ್ಲಿ ಸತ್ಯವೂ ಇದೆ. ನಿರೀಕ್ಷಿತವಾಗಿಯೇ ಮುರುಗಾ ದಾಸ್ ನಿರ್ದೇಶನದ ಸಿಕಂದರ್ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದೆ. ಈ ಕಾರಣದಿಂದಲೇ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಜೋಡಿಯಾಗಿ ನಟಿಸುತ್ತಿದ್ದಾರೆ. ಮುರುಗಾದಾಸ್ ಯಾರೂ ಮುಟ್ಟದ ಕಥೆಗಳತ್ತು ಕಣ್ಣು ಹಾಯಿಸೋದರಲ್ಲಿ ಸಿದ್ಧಹಸ್ತರು. ಸಿಕಂದರ್ ಅನ್ನು ಕೂಡಾ ಅವರು ಹಾಗೆಯೇ ರೂಪಿಸಿದ್ದಾರೆಂಬ ನಂಬಿಕೆ ಎಲ್ಲರಲ್ಲಿದೆ.

ರೇಸಿನಲ್ಲಿ ಯಾರ್‍ಯಾರು?


ಪ್ರಭಾಸ್ ಅಭಿನಯದ ರಾಜಾ ಸಾಬ್ ಚಿತ್ರ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಪ್ರಭಾಸ್ ಬಾಹುಬಲಿಯಂಥಾ ಸರಣಿ ಗೆಲುವಿನ ನಂತರವೂ ಡಲ್ಲುಉ ಹೊಡೆದಿದ್ದರು. ಆದಿ ಪುಉರುಷ್ ಥರದ ಚಿತ್ರಗಳಿಂದ ಅವರಿಗೆ ಭಾರೀ ಹಿನ್ನಡೆಯಾಗಿತ್ತು. ಒಂದು ಸೂಪರ್ ಹಿಟ್ ಸರಣಿಯ ನಂತರ ಆದ ಸರಣಿ ಸೋಲುಗಳ ಆಘಾತದಿಂದ ಬಾಹುಬಲಿ ತತ್ತರಿಸುವಂಥಾಗಿತ್ತು. ಕಲ್ಕಿ ಚಿತ್ರದ ಮೂಲಕ ಕಡೆಗೂ ಪ್ರಭಾಸ್ ಸೋಲನ್ನುಉ ಮೀರಿಕೊಂಡಿದ್ದಾರೆ. ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಆ ಬಳಿಕ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದರೂ ಕೂಡಾ ಪ್ರಭಾಸ್ ಮೊದಲು ಆರಂಭಿಸಿದ್ದ ಚಿತ್ರ ರಾಜಾ ಸಾಬ್.
ಇದೀಗ ರಾಜಾ ಸಾಬ್ ಚಿತ್ರ ಕೂಡಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಇನ್ನುಳಿದಂತೆ ಹೃತಿಕ್ ರೋಶನ್ ಮುಖ್ಯ ಭೂಮಿಕೆಯಲ್ಲಿರುವ ವಾರ್ ೨ ಕೂಡಾ ಈ ಪಟ್ಟಿಯಲ್ಲಿದೆ. ಈ ಚಿತ್ರದಲ್ಲಿ ಜ್ಯೂಊನಿಯರ್ ಎನ್ಟಿಆರ್ ಮತ್ತು ಕಿಯಾರಾ ಅಡ್ವಾಣಿ ಕೂಡಾ ನಟಿಸಿದ್ದಾರೆ. ಶಾಹಿದ್ ಕಪೂರ್ ಮತ್ತು ಮಪೂಜಾ ಹೆಗ್ಡೆ ಅಭಿನಯದ ದೇವಾ ಚಿತ್ರವೂ ರೇಸಿನಲ್ಲಿದೆ. ವಿಕ್ಕಿ ಕೌಶಾಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛವ್ವಾ, ಸನ್ನಿ ಡಿಯೋಲ್‌ನ ಜಾಥ್, ಅಮೀರ್ ಖಾನ್ ನಟಿಸಿರೋ ಸಿತಾರೆ ಜಮೀನ್ ಪರ್, ಆಲಿಯಾ ಭಟ್ ನಟಿಸಿರುವ ಆಲ್ಫಾ, ನಾಗಚೈತನ್ಯ ನಟನೆತ ಥಂಡೇಲ್ ಮುಂತಾದ ಸಿನಿಮಾಗಳು ಈ ಪಟ್ಟಿಯಲ್ಲಿವೆ.
ತಮಿಳಿನ ವಿಚಾರಕ್ಕೆ ಬಂದರೆ, ಕಮಲ್ ಹಾಸನ್ ನಟನೆಯ ಥಗ್ ಲೈಫ್ ಕುತೂಹಲ ಮೂಡಿಸಿದೆ. ಈ ಎಲ್ಲ ವಿಚಾರಗಳನ್ನು ಗಮನಿಸಿದರೆ, ಖಂಡಿತವಾಗಿಯೂ ಈ ಬಾರಿ ಭಾರತೀಯ ಸಿನಿಮಾ ರಂಗ ಮತ್ತೆ ಗೆಲುವಿನ ಹಾದಿಗೆ ಮರಳುವ ಲಕ್ಷಣಗಳಿದ್ದಾವೆ. ಈಗ ನಿರೀಕ್ಷೆ ಮೂಡಿಸಿರುವ ಸಿನಿಮಾಗಳು ಪ್ರೇಕ್ಷಕರನ್ನು ಖುಷಿಗೊಳಿಸಿದರೆ, ಖಂಡಿತವಾಗಿಯೂ ಭಾರತೀಯ ಚಿತ್ರಂಗ ಮತ್ತೊಂದು ಶಖೆಯತ್ತ ಮರಳಿಕೊಳ್ಳುತ್ತದೆ. ಈಗ ತುರ್ತಾಗಿ ಅಂಥಾದ್ದೊಂದು ರೂಪಾಂತರ ಭಾರತೀಯ ಚಿತ್ರರಂಗಕ್ಕೆ ಬೇಕಿದೆ. ಈಗ ನಿಗಧಿಯಾಗಿರುವಂತೆ ಈ ಎಲ್ಲ ಸಿನಿಮಾಗಳು ಈ ವರ್ಷದ ಅಂಚಿನೊಳಗೆ ಬಿಡುಗಡೆಗೊಂಡರೆ ಸಿನಿಮಾ ಪ್ರೇಮಿಗಳ ಪಾಲಿಗೆ ಅಕ್ಷರಶಃ ಹಬ್ಬವಾಗಲಿದೆ!

Tags: #kanthara2#majjaspecial#mostawaitedmoviesof2025#murugadas#raajasab#rishabhshetty#salmankhan#sikandar#yashtoxicbollywoodprabhassandalwoodtollywood

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Divotic History Of Rivers: ಪವಿತ್ರ ನದಿಗಳ ತಟದಲ್ಲಿರೋ ಪುಣ್ಯ ಕ್ಷೇತ್ರಗಳು!

Divotic History Of Rivers: ಪವಿತ್ರ ನದಿಗಳ ತಟದಲ್ಲಿರೋ ಪುಣ್ಯ ಕ್ಷೇತ್ರಗಳು!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.