Salaar2: ಡಾರ್ಲಿಂಗ್ ಪ್ರಭಾಸ್(Prabhas) ಹಾಗೂ ಪ್ರಶಾಂತ್ ನೀಲ್(Prashanth Neel) ಕಾಂಬಿನೇಶನ್‌ನಲ್ಲಿ ಬಂದ ಸಿನಿಮಾ ಸಲಾರ್2(Salaar2). ಕಳೆದ ವರ್ಷ ತೆರೆಕಂಡ ಸಿನಿಮಾ ಮಿಶ್ರ ಪ್ರತಿಕ್ರಿಯೆಯೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಕಮಾಯಿ ಮಾಡಿತ್ತು. ಉಗ್ರಂ ರಿಮೇಕ್ ಎಂದು ತೀವ್ರ ಟ್ರೋಲ್‌ಗೆ ಗುರಿಯಾದ ಈ ಸಿನಿಮಾ ಎರಡು ಸೀಕ್ವೆಲ್‌ನಲ್ಲಿ ತೆರೆ ಕಾಣಲಿದೆ ಎನ್ನುವುದನ್ನು ನಿರ್ಮಾಣ ಸಂಸ್ಥೆ ಮೊದಲೇ ತಿಳಿಸಿತ್ತು. ಇದೀಗ ಮೂಲಗಳ ಪ್ರಕಾರ ಸಲಾರ್ ಸಿನಿಮಾ ಶೂಟಿಂಗ್ ಆರಂಭಿಸಿಲು ಚಿತ್ರತಂಡ ರೆಡಿಯಾಗಿದೆ.
ಸಲಾರ್2(Salaar2) ಸಿನಿಮಾ ಚಿತ್ರೀಕರಣಕ್ಕೆ ಸಕಲ ಸಿದ್ದತೆ ನಡೆದಿದೆಯಂತೆ. ಇದೇ ತಿಂಗಳಲ್ಲಿ 10 ದಿನದ ಶೂಟಿಂಗ್ ಹೈದ್ರಾಬಾದ್‌ನಲ್ಲಿ ನಡೆಯಲಿದೆ ಎಂಬ ಸುದ್ದಿ ಹರಿದಾಡ್ತಿದೆ. 2025 ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿದೆಯಂತೆ. ಮೊದಲ ಸೀಕ್ವೆಲ್‌ಗೆ ಸಿಕ್ಕ ಮಿಶ್ರ ಪ್ರತಿಕ್ರಿಯೆ ಹಾಗೂ ವಿಮರ್ಶೆಯನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ತಂಡ ಚಿತ್ರಕಥೆಯನ್ನು ಹೆಣೆದಿದ್ದು, ಕಳೆದ ಮೂರು ತಿಂಗಳನ್ನು ಇದಕ್ಕಾಗಿ ಮೀಸಲಿಟ್ಟಿದೆಯಂತೆ. ಚಿತ್ರೀಕರಣ ಆರಂಭಿಸಲು ಸಕಲ ರೀತಿಯಲ್ಲೂ ಸಿದ್ದವಾಗಿದ್ದು, ಪ್ರಭಾಸ್(Prabhas), ಪೃಥ್ವಿರಾಜ್ ಸುಕುಮಾರನ್ ಭಾಗದ 10 ದಿನದ ಚಿತ್ರೀಕರಣವನ್ನು ಹೈದ್ರಾಬಾದ್‌ನಲ್ಲಿ ಇದೇ ತಿಂಗಳು ನಡೆಸಲಾಗುತ್ತಿದೆ.
ಒಂದ್ಕಡೆ ಸಲಾರ್(Salaar2) ಸೆಟ್ಟೇರೋದಿಲ್ಲ. ಈ ಸಿನಿಮಾ ನಿರ್ಮಾಣನ್ನು ಹೊಂಬಾಳೆ ಸಂಸ್ಥೆ(Hombale Films) ಕೈ ಬಿಟ್ಟಿದೆ ಎಂಬ ಮಾತುಗಳು ಕೇಳಿ ಬರ್ತಿವೆ. ಪ್ರಶಾಂತ್ ಹಾಗೂ ಪ್ರಭಾಸ್ ನಡುವೆ ಶೂಟಿಂಗ್‌ನಲ್ಲಿ ಏರ್ಪಟ್ಟ ಭಿನ್ನಾಭಿಪ್ರಾಯವೋ, ಶೀತಲ ಸಮತರವೋ, ಮೊದಲ ಪಾರ್ಟ್ ನಿರೀಕ್ಷಿತ ಮಟ್ಟಕ್ಕೆ ಗೆಲುವು ಕಾಣಲಿಲ್ಲ ಅನ್ನುವುದೋ ಇದಕ್ಕೆ ಕಾರಣವಾ ಜಾಹೀರಾಗಿಲ್ಲ. ಆದ್ರೆ ಈ ಮಾತುಗಳು ಗಾಂದೀನಗರದಲ್ಲಿ ಸಖತ್ ಚಲಾವಣೆಯಲ್ಲಿದೆ. ಆದ್ರೀಗ ಸಲಾರ್2 (Salaar2) ಶೂಟಿಂಗ್ ಆರಂಭವಾಗಲಿದೆ ಎಂಬ ಸುದ್ದಿಯೂ ಕೇಳಿ ಬರ್ತಿದ್ದು, ಗೊಂದಲದಲ್ಲಿದ್ದಾರೆ ಪ್ರಭಾಸ್ ಅಭಿಮಾನಿ ವೃಂದ.