Kiran Rao: ಹತ್ತು ವರ್ಷದ ನಂತರ ನಿರ್ದೇಶನಕ್ಕೆ ಮರಳಿರುವ ಬಿಟೌನ್ ನಿರ್ದೇಶಕಿ ಕಿರಣ್ ರಾವ್(Kiran Rao) ಲಾಪಟಾ ಲೇಡೀಸ್(Laapataa Ladies) ಸಿನಿಮಾ ಸಕ್ಸಸ್‌ನಿಂದ ಖುಷಿಯಲ್ಲಿದ್ದಾರೆ. ‘ದೋಬಿ ಘಾಟ್’(Dhobi Ghat) ಸಿನಿಮಾ ನಂತರ ಲಾಂಗ್ ಬ್ರೇಕ್ ಪಡೆದ ಈಕೆ ಮತ್ತೆ ನಿರ್ದೇಶನಕ್ಕೆ ಮರಳಿ ಸಕಸ್ಸ್ ಕಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ‘ಲಾಪಟಾ ಲೇಡಿಸ್’ 50 ದಿನಗಳನ್ನು ಪೂರೈಸಿದೆ. ಇದೇ ಸಂದರ್ಭದಲ್ಲಿ ಕಿರಣ್ ರಾವ್ ಮೊದಲ ಮಗು ಪಡೆದ ಹಿಂದಿನ ನೋವಿನ ಕತೆ ಬಿಚ್ಚಿಟ್ಟಿದ್ದಾರೆ.
ಎಲ್ಲರಂತೆ ನಾನು ಮಗುವನ್ನು ಪಡೆಯಲು ಹಂಬಲಿಸಿದ್ದೆ. ಆದರೆ ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೆ. ದೈಹಿಕ ಹಾಗೂ ವೈಯಕ್ತಿಕ ಸಮಸ್ಯೆಗಳು ನನ್ನನ್ನು ತೀವ್ರವಾಗಿ ಭಾದಿಸುತ್ತಿತ್ತು. ಇದ್ರಿಂದ ಹಲವು ಬಾರಿ ಗರ್ಭಪಾತ ಅನುಭವಿಸಿದ್ದೆ. ‘ಅಜಾದ್’ ಹುಟ್ಟುವ ಮುನ್ನ ಹಲವು ಬಾರಿ ನನಗೆ ಗರ್ಭಪಾತ ಆಗಿದೆ. ಕೊನೆಗೆ ಐವಿಎಫ್ ಮೂಲಕ ಮಗು ಪಡೆಯಲಾಯಿತು ಎಂದು ನೋವನ್ನು ಹೊರಹಾಕಿದ್ದಾರೆ. ‘ದೋಬಿ ಘಾಟ್’ ಸಿನಿಮಾ ಬಂದಾಗ ಮಗ ಅಜಾದ್ ಹುಟ್ಟಿದ. ಇದಕ್ಕೂ ಮುನ್ನ ಮಗುವಿಗಾಗಿ ತೀವ್ರವಾಗಿ ಎಲ್ಲರಂತೆ ಹಂಬಲಿಸಿದ್ದೆ ಎಂದಿದ್ದಾರೆ ಅಮೀರ್ ಖಾನ್(Aamir Khan) ಮಾಜಿ ಪತ್ನಿ.
ಈ ಹತ್ತು ವರ್ಷ ಮಗನೊಂದಿಗೆ ಸಖತ್ ಎಂಜಾಯ್ ಮಾಡ್ತಿದ್ದೇನೆ. ಅವನ ಜೊತೆ ಕಳೆದ ಕ್ಷಣಗಳು ನನ್ನ ಜೀವನದ ಅತ್ಯಮೂಲ್ಯ ವರ್ಷಗಳು. ಇಷ್ಟು ವರ್ಷ ಮಗನೊಂದಿಗೆ ತಾಯ್ತನವನ್ನು ಅನುಭವಿಸುತ್ತಿದೆ. ಆದ್ರಿಂದ ಹತ್ತು ವರ್ಷಗಳು ಸಿನಿಮಾದಿಂದ ದೂರ ಉಳಿದಿದ್ದೆ ಎಂಬ ರಿಗ್ರೇಟ್ ತಮಗಿಲ್ಲ ಎಂದು ಹರುಷ ವ್ಯಕ್ತಪಡಿಸಿದ್ದಾರೆ ಕಿರಣ್ ರಾವ್.