G.V. Prakash Kumar: ಈಗಂತೂ ಡಿವೋರ್ಸ್ ಕೇಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಒಂದು ವರ್ಷ ಎರಡು ವರ್ಷವಿರಲಿ ಒಂದು ದಶಕ, ಎರಡು ದಶಕ ಒಟ್ಟಿಗೆ ಜೀವಿಸಿದವರು ಕೂಡ ಡಿವೋರ್ಸ್ ಹಿಂದೆ ಬಿದ್ದಿರೋ ಸುದ್ದಿಗಳು ಆಘಾತ ಉಂಟು ಮಾಡುತ್ತಿವೆ. ಅನ್ಯೋನ್ಯತೆ ಎನ್ನೋದು ಫೋಟೋ, ವಿಡಿಯೋಗಷ್ಟೇ ಸೀಮಿತವಾಗ್ತಿದೆ. ಅದರಲ್ಲೂ ಸಿನಿಮಾರಂಗದಲ್ಲಿ ಇದು ತುಸು ಹೆಚ್ಚೇ ಚಾಲ್ತಿಯಲ್ಲಿದೆ. ಕಾಲಿವುಡ್ ಯಶಸ್ವಿ ಜೋಡಿ ಧನುಷ್- ಐಶ್ವರ್ಯ ದೂರಾದ ಬೆನ್ನಲ್ಲೇ ಮತ್ತೊಂದು ಡಿವೋರ್ಸ್ ಸುದ್ದಿ ಕಾಲಿವುಡ್ ಅಂಗಳವನ್ನು ತಲ್ಲಣಗೊಳಿಸಿದೆ.
ಆತ ಟಾಲಿವುಡ್, ಕಾಲಿವುಡ್ ಸಿನಿ ಅಂಗಳದ ಭರವಸೆಯ ಸಂಗೀತ ನಿರ್ದೇಶಕ, ತೆರೆ ಮೇಲೆ ಮ್ಯೂಸಿಕ್‌ನಂತೆ ಮ್ಯಾಜಿಕ್ ಮಾಡೋ ನಟ ಕೂಡ ಹೌದು. ಸ್ಟಾರ್ ನಟರ ಸಿನಿಮಾಗಳಿಗೂ ಈತನ ಮ್ಯೂಸಿಕ್ಕೇ ಬೇಕು. ಡಾರ್ಲಿಂಗ್, ರಾಜಾ ರಾಣಿ, ಆಡು ಕಾಲಂ, ಥೆರಿ, ಅಸುರನ್, ಸುರಾರೈ ಪೋಟ್ರು ಸಿನಿಮಾಗಳು ಈತನ ಐಡೆಂಟಿಟಿ. ಯುವ ಸಂಗೀತ ನಿರ್ದೇಶಕನಾಗಿ ಹಲವು ಪ್ರಶಸ್ತಿಗೆ ಮುತ್ತಿಟ್ಟಿರುವ ಈತ ತನ್ನ 11 ವರ್ಷದ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಆತ ಬೇರಾರು ಅಲ್ಲ ಜಿ.ವಿ.ಪ್ರಕಾಶ್ ಕುಮಾರ್. ಪತ್ನಿ ಸೈಂದವಿ ಜೊತೆಗಿನ ಹನ್ನೊಂದು ವರ್ಷದ ದಾಂಪತ್ಯ ಜೀವನಕ್ಕೆ ಜಿ.ವಿ.ಪ್ರಕಾಶ್ ಕುಮಾರ್(G.V. Prakash Kumar) ಫುಲ್ ಸ್ಟಾಪ್ ಇಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸತಿ ಪತಿಗಳಿಬ್ಬರು ತಮ್ಮ ದೂರಾಗುವಿಕೆ ಬಗ್ಗೆ ಪೋಸ್ಟ್ ಹಾಕಿ ಖಚಿತ ಪಡಿಸಿದ್ದಾರೆ. ಇಬ್ಬರ ನಿರ್ಧಾರವನ್ನು ಗೌರವಿಸುವಂತೆ ಕೋರಿಕೊಂಡಿದ್ದಾರೆ.
2005ರಿಂದ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಡಿರುವ ಜಿ.ವಿ.ಪ್ರಕಾಶ್ ಕುಮಾರ್ ಸಂಗೀತದ ದೈತ್ಯ ಪ್ರತಿಭೆ ಎ.ಆರ್ ರೆಹಮಾನ್ ಸಂಬಂಧಿ. 2013ರಲ್ಲಿ ಹಿನ್ನೆಲೆ ಗಾಯಕಿ ಹಾಗೂ ಸಹಪಾಠಿ ಸೈಂದವಿಯನ್ನು ಪ್ರೀತಿಸಿ ಮದುವೆಯಾದ ಇವರಿಗೆ ಒಂದು ಮುದ್ದಾದ ಮಗುವಿದೆ. ಇದು ತಮ್ಮಿಬ್ಬರ ಅತ್ಯುತ್ತಮ ನಿರ್ಧಾರ ಎಂದು ತಿಳಿಸಿರುವ 36 ವರ್ಷದ ಜಿ.ವಿ.ಪ್ರಕಾಶ್ ಕುಮಾರ್(G.V. Prakash Kumar), ಸಮಂತಾ, ಧನುಶ್, ಅಮಲ ಪೌಲ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.