Rajinikanth: ಯುವ ನಿರ್ದೇಶಕ ಲೋಕೇಶ್ ಕನಕರಾಜ್ ಸೂಪರ್ ಸ್ಟಾರ್ ರಜನಿ ಕಾಂಬಿನೇಶನ್‌ನಲ್ಲಿ ಮೂಡಿ ಬರ್ತಿರುವ ಸಿನಿಮಾ ‘ಕೂಲಿ’(Coolie). ಕಳೆದ ವಾರ ಟೈಟಲ್ ಟೀಸರ್ ಅನೌನ್ಸ್ ಮಾಡಿ ಕ್ರೇಜ಼್ ಹೆಚ್ಚಿಸಿತ್ತು ಚಿತ್ರತಂಡ. ತಲೈವಾ ನಯಾ ಅವತಾರ ಕಂಡು ಕೋಟ್ಯಾಂತರ ಭಕ್ತಗಣ ಇಮ್ಯಾಜಿನರಿ ಮೂಡ್‌ಗೆ ಜಾರಿದ್ರೆ ಸಂಗೀತ ಮಾಂತ್ರಿಕ ಇಳಯರಾಜ ಮಾತ್ರ ಚಿತ್ರತಂಡದ ಮೇಲೆ ಕೋಪಗೊಂಡಿದ್ದಾರೆ.
ರಜನಿ(Rajinikanth) ಸಿನಿಮಾ ಮೇಲೆ ಇಳಯರಾಜ(Ilaiyaraaja) ಮುನಿಸಿಕೊಂಡಿದ್ದಾರೆ. ಸಿನಿಮಾ ತಂಡದ ವಿರುದ್ಧ ನೋಟೀಸ್ ಜಾರಿ ಮಾಡಿದ್ದಾರೆ. ಸಿನಿಮಾ ಮೇಲೆ, ಟೈಟಲ್ ಮೇಲೆ, ರಜನಿ ಮೇಲೆ ಸಂಗೀತ ಮಾಂತ್ರಿಕನ ಕೋಪವಲ್ಲ ಟೀಸರ್‌ನಲ್ಲಿ ಬಳಕೆಯಾದ ಮ್ಯೂಸಿಕ್ ಬಗ್ಗೆ ಇಳಯರಾಜ ಕೆಂಡಾಮಂಡಲರಾಗಿದ್ದಾರೆ. ಟೀಸರ್‌ನಲ್ಲಿ ತಮ್ಮ ಹಾಡನ್ನು ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡಿದ್ದಕ್ಕೆ ಚಿತ್ರದ ಪ್ರೊಡಕ್ಷನ್ ಹೌಸ್ ಸನ್ ಪಿಕ್ಚರ್ಸ್ ಮೇಲೆ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ.
1983ರಲ್ಲಿ ತೆರೆಕಂಡ ರಜನಿಕಾಂತ್(Rajinikanth) ಸಿನಿಮಾ ‘ತಂಗ ಮಗನ್’ ಚಿತ್ರದ ‘ವಾ ವಾ ಪಕ್ಕಂ ವಾ’ ಹಾಡು ಇಳಯರಾಜ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಈ ಹಾಡನ್ನು ‘ಕೂಲಿ’ ಸಿನಿಮಾದ ಟೈಟಲ್ ಟೀಸರ್‌ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಅನುಮತಿ ಪಡೆಯದೇ ತಮ್ಮ ಸಾಂಗ್ ಬಳಕೆ ಮಾಡಿದ್ದು ಇಳಯರಾಜ(Ilaiyaraaja) ಕೋಪಕ್ಕೆ ಕಾರಣವಾಗಿದೆ.
‘ಕೂಲಿ’(Coolie)‘ತಲೈವರ್171’ ನೇ ಸಿನಿಮಾವಾಗಿದೆ. ಟೈಟಲ್ ಟೀಸರ್ ಮೂಲಕ ರಜಿನಿ ಸ್ವ್ಯಾಗ್, ಮ್ಯಾನರಿಸಂ, ಸ್ಟೈಲ್ ಕಂಡು ಅಭಿಮಾನಿ ಬಳಗ ಥ್ರಿಲ್ ಆಗಿದೆ, ಕ್ರೇಜ಼ಿಯಾಗಿದೆ. ಸಿನಿಮಾ ಮೇಲೆ ಸಿಕ್ಕಾಪಟ್ಟೇ ನಿರೀಕ್ಷೆ ಕ್ರಿಯೇಟ್ ಆಗಿದ್ದು, ಇದೇ ವರ್ಷ ಚಿತ್ರೀಕರಣ ಆರಂಭವಾಗಲಿದೆ.