Manjummel Boys: ಸಂಗೀತ ಮಾಂತ್ರಿಕ ಇಳಯರಾಜ(Ilaiyaraaja) ಮಾಲಿವುಡ್ ಸೂಪರ್ ಹಿಟ್ ಸಿನಿಮಾ ಮೇಲೆ ಕೋಪಗೊಂಡಿದ್ದಾರೆ. ಅದು ಬೇರಾವ ಸಿನಿಮಾವಲ್ಲ ದಾಖಲೆ ಬರೆದ ‘ಮಂಜುಮ್ಮೆಲ್ ಬಾಯ್ಸ್’ ಮೇಲೆ. ಸ್ಟಾರ್ ನಟರೆಲ್ಲಾ ಈ ಸಿನಿಮಾವನ್ನು ಹಾಡಿ ಹೊಗಳುತ್ತಿರುವಾಗ ಇಳಯರಾಜ ಕೋಪಗೊಂಡಿದ್ದೇಕೆ ಅನ್ನೋದು ಎಲ್ಲರ ಪ್ರಶ್ನೆ.
‘ಮಂಜುಮ್ಮೆಲ್ ಬಾಯ್ಸ್’(Manjummel Boys) ಮೇಲೆ ಇಳಯರಾಜ ಕೋಪಗೊಂಡಿಲ್ಲ. ಇದರಲ್ಲಿ ಬಳಸಿಕೊಂಡ ತಮ್ಮ ಹಾಡಿನ ಮೇಲೆ ಸಂಗೀತ ಮಾಂತ್ರಿಕ ಕೋಪಗೊಂಡಿದ್ದಾರೆ. ಕೇವಲ ಕೋಪವಲ್ಲ ಚಿತ್ರದ ನಿರ್ಮಾಣ ಸಂಸ್ಥೆಗೆ ಲೀಗಲ್ ನೋಟಿಸ್ ಹೊರಡಿಸಿದ್ದಾರೆ. ಮಂಜುಮ್ಮೆಲ್ ಬಾಯ್ಸ್ ಚಿತ್ರದಲ್ಲಿ ಕಮಲ್ ಹಾಸನ್ (Guna) ನಟನೆಯ ಗುಣ ಚಿತ್ರದ ಹಾಡೊಂದನ್ನು ಬಳಕೆ ಮಾಡಿಕೊಳ್ಳಲಾಗಿದೆ. ಗುಣ ಚಿತ್ರಕ್ಕೆ ಸಂಗೀತ ನೀಡಿದ್ದು ಇಳಯರಾಜ. ತಮ್ಮ ಅನುಮತಿ ಪಡೆಯದೇ ಚಿತ್ರದ ಮ್ಯೂಸಿಕ್ ಬಳಸಿಕೊಂಡಿದ್ದಾರೆಂಬುದು ಇಳಯರಾಜ ಕೋಪಕ್ಕೆ ಕಾರಣ. ಇದಕ್ಕಾಗಿ ಲೀಗಲ್ ನೋಟೀಸ್ ನೀಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್(Rajinikanth) ನಯಾ ಸಿನಿಮಾ ಕೂಲಿ(Coolie) ಚಿತ್ರದ ಮೇಲೋ ನೋಟಿಸ್ ನೀಡಿದ್ದಿರು ಇಳಯರಾಜ. ಈ ಚಿತ್ರದ ಟೈಟಲ್ ಟೀಸರ್‌ನಲ್ಲಿ ತಮ್ಮ ಸಂಗೀತ ಬಳಕೆಯಾಗಿದೆ ಎಂದು ಲೀಗಲ್ ನೋಟಿಸ್ ನೀಡಿದ್ದರು. ಇದೀಗ ಈ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಮಂಜುಮ್ಮೆಲ್ ಬಾಯ್ಸ್ ಚಿತ್ರತಂಡಕ್ಕೂ ನೋಟೀಸ್ ನೀಡಿದ್ದಾರೆ.