ಬಾಲಿವುಡ್‌ನ ಗರ್ಮಿ ಬ್ಯೂಟಿ ನೋರಾ ಫತೇಹಿ ಗಾಂಧಿನಗರಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನ ಶೋ ಮ್ಯಾನ್ ಪ್ರೇಮ್ ನಾಚ್ ಮೇರಿ ರಾಣಿನಾ ಕನ್ನಡಕ್ಕೆ ಕರೆತರುವ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಸಖತ್ ಸರ್ ಪ್ರೈಸ್ ಕೊಟ್ಟಿದ್ದಾರೆ.
ಹೌದು, ಈ ಹಿಂದೆ ಜೆನ್ನಿಫರ್ ಕೊತ್ವಾಲ್, ಯಾನಾಗುಪ್ತಾ, ಮಲ್ಲಿಕಾ ಶೆರಾವತ್, ನಿಶಾ ಕೊಠಾರಿ, ಮುಮೈತ್ ಖಾನ್, ಏಮಿ ಜಾಕ್ಸನ್ ಸೇರಿ ಹಲವರು ನಟಿಮಣಿಯರನ್ನ ಪರಭಾಷೆಯಿಂದ ಕನ್ನಡಕ್ಕೆ ಕರೆತಂದಿರೋ ಜೋಗಿ ಪ್ರೇಮ್ ಈಗ ಡ್ಯಾನ್ಸಿಂಗ್ ಕ್ವೀನ್ ನೋರಾ ಫತೇಹಿ ವೆಲ್‌ಕಮ್ ಮಾಡಿಕೊಂಡಿದ್ದಾರೆ. ʻಕೆಡಿʼ ಚಿತ್ರದ ಮೂಲಕ ಬಾಲಿವುಡ್‌ನ ದಿಲ್‌ಬರ್ ಚೆಲುವೆ ಸ್ಯಾಂಡಲ್‌ವುಡ್ ಸಿನಿಮಾ ಪ್ರೇಮಿಗಳಿಗೆ ಪರಿಚಯವಾಗ್ತಿದ್ದಾರೆ. ಬಹದ್ದೂರ್ ಗಂಡಿನ ಜೊತೆ ನೋರಾ ಫತೇಹಿ ತಮ್ಮ ಜಿರೋ ಸೈಜ್ ಸೊಂಟ ಬಳುಕಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಅಪ್‌ಡೇಟ್ ಹಂಚಿಕೊಂಡಿದೆ. ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದಾರಾ? ಎಂಬುದರ ಬಗ್ಗೆ ಸುಳಿವು ಬಿಟ್ಟು ಕೊಟ್ಟಿಲ್ಲ.
ʻಕೆಡಿʼ ನಿಮಗೆಲ್ಲ ಗೊತ್ತಿರೋ ಹಾಗೇ ಪ್ರೇಮ್ ಹಾಗೂ ಧ್ರುವ ಕಾಂಬಿನೇಷನ್‌ನಲ್ಲಿ ಬರ್ತಿರೋ ಹೈವೋಲ್ಟೇಜ್ ಸಿನಿಮಾ. ಬಿಗ್ ಬಜೆಟ್‍ನಲ್ಲಿ, ಬಹುತಾರಾಗಣದಲ್ಲಿ ಮೂಡಿಬರ್ತಿರೋ ಕೆಡಿ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ತುಂಬೆಲ್ಲ ನಿರೀಕ್ಷೆಯಿದೆ. ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಕೆವಿಎನ್ ಬಂಡವಾಳ ಸುರಿಸಿದ್ದು ಸೌತ್-ನಾರ್ತ್ ಸೂಪರ್ ಸ್ಟಾರ್‍ಗಳಿಗೆ ರತ್ನಗಂಬಳಿ ಹಾಕಿ `ಕೆಡಿ’ ಕಣಕ್ಕೆ ಬರಮಾಡಿಕೊಂಡಿದೆ. ಕನ್ನಡದಿಂದ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಹಲವರು ಪ್ರಮುಖ ಪಾತ್ರವರ್ಗದಲ್ಲಿದ್ದು, ಬಿಟೌನ್‍ನಿಂದ ಸಂಜುಬಾಬ, ಶಿಲ್ಪಾಶೆಟ್ಟಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ವಿಂಟೇಜ್ ಲುಕ್‍ನಲ್ಲಿರೋ `ಕೆಡಿ’ ಕಲಾವಿದರು, ಕಲಾಭಿಮಾನಿಗಳನ್ನ ಮಾತ್ರವಲ್ಲ ಕಲಾಲೋಕವೇ ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ. ಸದ್ಯ ನೋರಾ ಫತೇಹಿ ಈ ಚಿತ್ರದ ಭಾಗವಾಗಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.