Naga chaitanya: ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ(Naga Chaitanya) ಹಾಗೂ ಸಾಯಿ ಪಲ್ಲವಿ(Sai Pallavi) ಮತ್ತೊಮ್ಮೆ ಒಂದಾಗಿರುವ ಸಿನಿಮಾ ‘ಥಂಡೆಲ್’. ‘ಲವ್ ಸ್ಟೋರಿ’ ನಂತರ ಪ್ಯಾನ್ ಇಂಡಿಯಾ ಸಿನಿಮಾ ‘ಥಂಡೆಲ್’(Thandel)ನಲ್ಲಿ ಕಮಾಲ್ ಮಾಡೋಕೆ ಈ ಜೋಡಿ ರೆಡಿಯಾಗಿದೆ. ಸದ್ಯ ಸೂಪರ್ ಜೋಡಿಯನ್ನು ತೆರೆಮೇಲೆ ಕಣ್ತುಂಬಿಕೊಳ್ಳೋದು ಯಾವಾಗ ಎನ್ನೋದು ಎಲ್ಲರ ಪ್ರಶ್ನೆ.
ಚಿತ್ರೀಕರಣ ಕಂಪ್ಲೀಟ್ ಮಾಡಿರುವ ‘ಥಂಡೆಲ್’(Thandel)ತಂಡ ಡಿಸೆಂಬರ್ನಲ್ಲಿ ಸಿನಿಮಾ ತೆರೆಗೆ ತರುವ ಯೋಜನೆಯಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಬೇಕಿದ್ದು, ನಿರ್ಮಾಪಕ ಬನ್ನಿ ವಾಸ್ ಕ್ರಿಸ್ಮಸ್ ರಜೆಯನ್ನು ಟಾರ್ಗೆಟ್ ಮಾಡಿದ್ದು ಈ ಸಮಯದಲ್ಲೇ ಸಿನಿಮಾ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧೀಕೃತ ಮಾಹಿತಿ ಹೊರ ಬೀಳಲಿದೆ.
‘ಥಂಡೆಲ್’(Thandel) ತುಣುಕುಗಳನ್ನು ಕಣ್ತುಂಬಿಕೊಂಡ ಸಿನಿರಸಿಕರು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ನಾಗಚೈತನ್ಯ(Naga Chaitanya) ಸಿನಿಕೆರಿಯರ್ನ ಸ್ಪೆಷಲ್ ಸಿನಿಮಾ ಇದಾಗಿದ್ದು, ಚಿತ್ರಕ್ಕಾಗಿ ಸಖತ್ ಹಾರ್ಡ್ ವರ್ಕ್ ಮಾಡಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ನಡಿ ಅದ್ದೂರಿಯಾಗಿ ನಿರ್ಮಾಣವಾಗ್ತಿರುವ ಚಿತ್ರಕ್ಕೆ ನೈಜ ಘಟನೆಯ ಸ್ಪೂರ್ತಿಯಿದೆ. ಚಿತ್ರದಲ್ಲಿ ಮೀನುಗಾರನಾಗಿ ನಾಗ ಚೈತನ್ಯ ಕಾಣಿಸಿಕೊಂಡಿದ್ದಾರೆ.
ಚಂದೂ ಮಂಡೇತಿ(Chandoo Mandeti) ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ರಾಕ್ಸ್ಟಾರ್ ಖ್ಯಾತಿಯ ಡಿಎಸ್ಪಿ ಸಂಗೀತ ನಿರ್ದೇಶನವಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ನಾಗಚೈತನ್ಯ(Naga Chaitanya)ಗೆ ಈ ಸಿನಿಮಾ ಹೊಸ ಇಮೇಜ್ ತಂದುಕೊಡುತ್ತಾ ಕಾದು ನೋಡಬೇಕಿದೆ.