ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Rashmika:ಮದುಮಗಳಾಗಿ ಮಿಂಚಿದ ನ್ಯಾಷನಲ್‌ ಕ್ರಷ್‌ ರಶ್ಮಿಕಾ…ಪುಷ್ಪರಾಜ್‌ ಜೊತೆ ಶ್ರೀವಲ್ಲಿ ಮದುವೆ!

Vishalakshi Pby Vishalakshi P
21/03/2024
in Majja Special
Reading Time: 1 min read
Rashmika:ಮದುಮಗಳಾಗಿ ಮಿಂಚಿದ ನ್ಯಾಷನಲ್‌ ಕ್ರಷ್‌ ರಶ್ಮಿಕಾ…ಪುಷ್ಪರಾಜ್‌ ಜೊತೆ ಶ್ರೀವಲ್ಲಿ ಮದುವೆ!

ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ(Rashmika)ನವವಧುವಿನಂತೆ ಸಿಂಗಾರಗೊಂಡಿದ್ದಾರೆ. ರೆಡ್‌ ಅಂಡ್‌ ಗೋಲ್ಡನ್‌ ಸ್ಯಾರಿಯಿಟ್ಟು, ಮೈ ತುಂಬಾ ಒಡವೆ, ಕೈ ತುಂಬಾ ಹಸಿರು ಗಾಜಿನ ಬಳೆಗಳನ್ನ ತೊಟ್ಕೊಂಡು, ಹಣೆಗೆ ಸಿಂಧೂರ ಇಟ್ಟು ಮದುಮಗಳಾಗಿ ಮಿಂಚಿದ್ದಾರೆ. ಅಷ್ಟಕ್ಕೂ, ಸಾನ್ವಿ ಈ ರೀತಿ ಅಲಂಕಾರಗೊಂಡಿರೋದು ಪುಷ್ಪ ಸಿನಿಮಾಗಾಗಿ (Pushpa-2). ‌ಪುಷ್ಪ-2 ಇಡೀ ಚಿತ್ರಜಗತ್ತು ಆಸೆಯ ಕಣ್‌ಗಳಿಂದ ಎದುರುನೋಡ್ತಿರುವ ಸಿನಿಮಾ. ಈ ಚಿತ್ರದಲ್ಲಿ ಪುಷ್ಪರಾಜ್‌ (Alluarjun) ಲುಕ್ಕು-ಗೆಟಪ್‌ ಹೇಗಿರಲಿದೆ ಅನ್ನೋದಕ್ಕೆ ಈಗಾಗಲೇ ಕೆಲ ಪೋಸ್ಟರ್‌ಗಳು, ವಿಡಿಯೋಗಳು ವೈರಲ್‌ ಆಗಿದ್ವು. ಆದರೆ, ಪುಷ್ಪರಾಜ್‌ ವೈಫ್‌ ಶ್ರೀವಲ್ಲಿಯ ನಯಾ ಅವತಾರ ಹೇಗಿರಲಿದೆ. ಪುಷ್ಪ ಪಾರ್ಟ್‌-2ನಲ್ಲಿ ರಶ್ಮಿಕಾ (Rashmika) ಹೇಗ್‌ ಕಾಣಿಸಬಹುದು ಎನ್ನುವ ಕುತೂಹಲ ಪ್ರೇಕ್ಷಕರನ್ನ ಕಣ್ಣರಳಿಸಿ ಕಾಯುವಂತೆ ಮಾಡಿತ್ತು. ಆ ಕುತೂಹಲಕ್ಕೆ ವೈರಲ್‌ ಆಗಿರೋ ವಿಡಿಯೋವೊಂದು ತೆರೆಎಳೆಯೋ ಕೆಲಸ ಮಾಡಿದೆ.

Wooohoooooo
Here is Srivalli's 1st look

Now the excitement to watch this film has increased further.

Teri Jhalak Asharfi @iamRashmika 🔥❤️#RashmikaMandanna ❤️pic.twitter.com/EsZEfMcXkS

— Rashmika Delhi Fans (@Rashmikadelhifc) March 19, 2024

ಯಸ್‌, ಪುಷ್ಪ-2 (Pushpa-2) ಅಖಾಡದಿಂದ ಶ್ರೀವಲ್ಲಿಯ (Rashmika) ಮದುವಣಗಿತ್ತಿಯಾಗಿರೋ ವಿಡಿಯೋ ಲೀಕ್‌ ಆಗಿದೆ. ರೆಡ್‌ ಅಂಡ್‌ ಗೋಲ್ಡನ್‌ ಸ್ಯಾರಿಯಿಟ್ಟು, ಮೈ ತುಂಬಾ ಒಡವೆ, ಕೈ ತುಂಬಾ ಹಸಿರು ಗಾಜಿನ ಬಳೆಗಳನ್ನ ತೊಟ್ಕೊಂಡು, ಹಣೆಗೆ ಸಿಂಧೂರ ಇಟ್ಟುಕೊಂಡು ಸಿಂಗಾರಗೊಂಡಿರೋ ಸಾನ್ವಿ, ಬಾಡಿಗಾರ್ಡ್‌ಗಳ ಜೊತೆ ಹಸೆಮಣೆಗೆ ನಡೆದುಹೋಗ್ತಿರುವ ದೃಶ್ಯ ಇದಾಗಿದೆ. ಸದ್ಯ ಹೈದ್ರಬಾದ್‌ನಲ್ಲಿ ಪುಷ್ಪ-2 ಚಿತ್ರದ ಶೂಟಿಂಗ್‌ ಭರದಿಂದ ಸಾಗಿದೆ. ಪುಷ್ಪರಾಜ್‌ (Alluarjun) ಹಾಗೂ ಶ್ರೀವಲ್ಲಿ (Rashmika) ಕಾಂಬಿನೇಷನ್‌ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಅಭಿಮಾನಿಗಳು ಸಾಗರೋಪಾದಿಯಲ್ಲಿ ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಸೇರಿಕೊಂಡಿದ್ದಾರೆ. ಹೆವಿ ಕ್ರೌಡ್‌ ಮಧ್ಯೆ ಮದುವೆ ಸೀಕ್ವೆನ್ಸ್‌ ಶೂಟಿಂಗ್‌ ನಡೆಯುತ್ತಿದ್ದು, ಮೊಬೈಲ್‌ನಲ್ಲಿ ಮ್ಯಾರೇಜ್‌ ಸೀಕ್ವೆನ್ಸ್‌ ಸೆರೆಹಿಡಿದಿರೋ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ. ಸದ್ಯ, ಸಾನ್ವಿ ಮದುವಣಗಿತ್ತಿಯಾಗಿರೋ ವಿಡಿಯೋ ಸೋಷಿಯಲ್‌ ಸಾಮ್ರಾಜ್ಯದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ನಿಮಗೆಲ್ಲ ಗೊತ್ತಿರೋ ಹಾಗೇ ಪುಷ್ಪ-2(Pushpa-2) ಚಿತ್ರದ ರಿಲೀಸ್‌ ಡೇಟ್‌ ಫಿಕ್ಸಾಗಿದೆ. ಆಗಸ್ಟ್‌ 15ಕ್ಕೆ ಪ್ಯಾನ್‌ ವರ್ಲ್ಡ್‌ ತುಂಬೆಲ್ಲಾ ರಿಲೀಸ್‌ ಮಾಡೋದಕ್ಕೆ ಮೈತ್ರಿ ಮೂವೀ ಮೇಕರ್ಸ್‌ ಟೀಮ್‌ ಸಕಲ ತಯ್ಯಾರಿ ಮಾಡಿಕೊಳ್ತಿದೆ. ಇತ್ತ ನಿರ್ದೇಶಕ ಸುಕುಮಾರ್‌, ಪುಷ್ಪ ದಿ ರೈಸ್‌ ಗಿಂತ, ಪುಷ್ಪ ದಿ ರೂಲ್‌ನ ಬಿಗ್ಗರ್‌ ಅಂಡ್‌ ಬೆಟರ್‌ ಆಗಿ ಕಟ್ಟಿಕೊಡೋದಕ್ಕೆ ಕಣ್ಣಿಗೆ ಎಣ್ಣೆಬಿಟ್ಕೊಂಡು ಕೆಲಸ ಮಾಡ್ತಿದ್ದಾರೆ. ಆದಷ್ಟು ಬೇಗ ಟಾಕಿಪೋಶನ್‌ ಮುಗಿಸಿ, ಐಟಂ ಸಾಂಗ್‌ ಕ್ಯಾಪ್ಟರ್‌ ಮಾಡಲು ರೆಡಿಯಾಗ್ತಿದ್ದಾರೆ. ಈ ಬಾರಿ ಪುಷ್ಪ ಅಖಾಡದಲ್ಲಿ ಕುಣಿಯೋದಕ್ಕೆ ಬಿಟೌನ್‌ ಬೆಡಗಿ ಜಾಹ್ನವಿ ಕಪೂರ್‌ನ (Janhvi Kapoor) ಅಪ್ರೋಚ್‌ ಮಾಡಿರುವ ಸುದ್ದಿ ಕೇಳಿಬಂದಿದೆ. ಯಂಗ್‌ ಟೈಗರ್‌ ಜೂ.ಎನ್‌ಟಿಆರ್‌ ದೇವರ ನಂತರ ಮೆಗಾಪ್ರಿನ್ಸ್‌ ರಾಮ್‌ಚರಣ್‌ ತೇಜಾ ನಟನೆಯ ಆರ್‌-16 ಸಿನಿಮಾಗೆ ಎಂಟ್ರಿಕೊಟ್ಟಿರುವ ದಢಕ್‌ ಬ್ಯೂಟಿ, ಪುಷ್ಪರಾಜ್‌ ಜೊತೆ ಲೆಗ್‌ ಶೇಕ್‌ ಮಾಡ್ತಾಳಾ? ಊಂ ಅಂಟಾವ ಮಾವ ಅಂತ ಸೌತ್‌ ಸುಂದರಿ ಸಮಂತಾ ಕುಣಿದ್ಹಂಗೆ ಪುಷ್ಪರಾಜ್‌ ಜೊತೆ ಎಕ್ಕಮಕ್ಕಾ ಕುಣಿದು ಕಿಕ್ಕೇರಿಸ್ತಾಳಾ ಕಾದುನೋಡಬೇಕು.

 

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Ram Charan: `ಮಗಧೀರ’ನ ಮಗಳ ಫಸ್ಟ್‌ ಬೀಚ್‌ ಎಕ್ಸ್‌ಪೀರಿಯನ್ಸ್‌ ಹೀಗಿತ್ತು ನೋಡಿ!

Ram Charan: `ಮಗಧೀರ'ನ ಮಗಳ ಫಸ್ಟ್‌ ಬೀಚ್‌ ಎಕ್ಸ್‌ಪೀರಿಯನ್ಸ್‌ ಹೀಗಿತ್ತು ನೋಡಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.