ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Navarasa Academy: ಆರು ವರ್ಷ ಪೂರೈಸಿದ ‘ನವರಸ ನಟನ’ ಅಕಾಡೆಮಿ – ಜು. 20 ರಿಂದ ಹೊಸ ಬ್ಯಾಚ್ ಶುರು..!

Bharathi Javalliby Bharathi Javalli
15/07/2024
in Majja Special
Reading Time: 1 min read
Navarasa Academy: ಆರು ವರ್ಷ ಪೂರೈಸಿದ ‘ನವರಸ ನಟನ’ ಅಕಾಡೆಮಿ – ಜು. 20 ರಿಂದ ಹೊಸ ಬ್ಯಾಚ್ ಶುರು..!

Navarasa Academy: ಜಗ್ಗೇಶ್ ಅವರ ಸಹಕಾರದೊಂದಿಗೆ ಶುರುವಾದ ‘ನವರಸ ನಟನ ಅಕಾಡೆಮಿ’ ಇದೀಗ ಆರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕಳೆದ 6 ವರ್ಷಗಳಲ್ಲಿ 150ಕ್ಕೂ ಹೆಚ್ಚು ಬ್ಯಾಚ್ ಮೂಲಕ ವಿದ್ಯಾರ್ಥಿಗಳಿಗೆ ಅಭಿನಯ, ನಾಟಕ, ನಿರ್ದೇಶನ, ನೃತ್ಯ, ಸಾಹಸ, ಮೂಕಾಭಿನಯ, ಮೇಕಪ್, ಸಂಕಲನ ಮತ್ತು ಡಬ್ಬಿಂಗ್ ಸೇರಿದಂತೆ ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಮೊದಲಾದ ಕೆಲಸಗಳ ಕುರಿತು ತರಬೇತಿ ನೀಡುತ್ತಾ ಬಂದಿದೆ.

ಇದೀಗ ಜುಲೈ 20ರಿಂದ ಹೊಸ ಬ್ಯಾಚ್ ಶುರುವಾಗುತ್ತಿದೆ. ಹಿರಿಯ ನಿರ್ದೇಶಕ ಶಿವಮಣಿ ಅವರು  ಪ್ರಾಂಶುಪಾಲರಾಗಿದ್ದು, ಈ ಸಲ ಸಾಕಷ್ಟು ಹೊಸ ವಿಷಯಗಳನ್ನು ಸೇರಿಸಿಕೊಳ್ಳಲಾಗಿದ್ದು, ಹೊಸ  ವಿದ್ಯಾರ್ಥಿಗಳಿಗೆ ಅವೆಲ್ಲವೂ ಲಭ್ಯವಾಗಲಿದೆ. ನಾಲ್ಕು ಮತ್ತು ಆರು ತಿಂಗಳ ನಟನೆ, ನಿರ್ದೇಶನದ ಕೋರ್ಸ್, ವಾರದ ತರಗತಿಗಳು ಮತ್ತು ವಾರಾಂತ್ಯದ ತರಗತಿಗಳು ಅಕಾಡೆಮಿಯಲ್ಲಿ ನಡೆಯಲಿದೆ.  ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ‘ನವರಸ ನಟನ ಅಕಾಡೆಮಿ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಮಾಲೂರು ಶ್ರೀನಿವಾಸ್ ಸಹ ವಿದ್ಯಾರ್ಥಿಗಳಿಗೆ ನೃತ್ಯ ಹಾಗೂ ಇನ್ನಿತರೆ ಪಟ್ಟುಗಳನ್ನು ಕಲಿಸಿಕೊಡಲಿದ್ದಾರೆ. ಅನೇಕ ವಿದ್ಯಾರ್ಥಿಗಳು ಈಗ ಸಾಕಷ್ಟು ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಕೆಲವರು ಸ್ವತಂತ್ರ ನಿರ್ದೇಶಕರಾಗಿ, ಕಲಾವಿದರಾಗಿ ಗುರುತಿಸಿಕೊಳ್ಳುತ್ತಿರೋದು ಈ ಸಂಸ್ಥೆಯ ಹೆಚ್ಚುಗಾರಿಕೆ. ಪ್ರಾಂಶುಪಾಲರಾದ ಶಿವಮಣಿ ಸೇರಿದಂತೆ ಕನ್ನಡದ ಹೆಸರಾಂತ ನಿರ್ದೇಶಕರು,ಕಲಾವಿದರು, ತಂತ್ರಜ್ಞರಿಂದ ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಎದುರಿಸುವ ಪರಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅವರಿಂದಲೇ ಕಿರುಚಿತ್ರವೊಂದನ್ನು ತಯಾರು ಮಾಡಿಸಿ ಅರ್ಹತಾ ಪತ್ರ ನೀಡಲಾಗುತ್ತದೆ‌.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Mahesh Babu: ‘ಆಕಾಶ್’, ‘ಅರಸು’, ‘ಮೆರವಣಿಗೆ’ ಡೈರೆಕ್ಟರ್ ಹೊಸ ಸಿನಿಮಾ ಶುರು- ಮಹೇಶ್‌ ಬಾಬು ಚಿತ್ರಕ್ಕೆ ಸ್ಮೈಲ್ ಗುರು ರಕ್ಷಿತ್ ನಾಯಕ

Mahesh Babu: 'ಆಕಾಶ್', 'ಅರಸು', 'ಮೆರವಣಿಗೆ' ಡೈರೆಕ್ಟರ್ ಹೊಸ ಸಿನಿಮಾ ಶುರು- ಮಹೇಶ್‌ ಬಾಬು ಚಿತ್ರಕ್ಕೆ ಸ್ಮೈಲ್ ಗುರು ರಕ್ಷಿತ್ ನಾಯಕ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.