Nayanthara: ಸೌತ್ ಸಿನಿರಂಗದ ಲೇಡಿ ಸೂಪರ್ ಸ್ಟಾರ್, ಅಪಾರ ಅಭಿಮಾನಿಗಳ ಕಣ್ಮಣಿ ನಯನಾತಾರಾ(Nayanathara). ಸಾಮಾನ್ಯವಾಗಿ ಮದುವೆಯಾದ ಮೇಲೆ ಸಿನಿರಂಗದಲ್ಲಿ ನಾಯಕಿಯರನ್ನು ಪರಿಗಣನೆಗೆ ತೆಗೆದುಕೊಳ್ಳೋದು ಕಡಿಮೆ. ಇದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ನಿಯಮ. ಆದ್ರ ಲೇಡಿ ಸೂಪರ್ ಸ್ಟಾರ್ ಮಾತ್ರ ಆಫ್ಟರ್ ಮ್ಯಾರೇಜ್ ಸ್ಟಾರ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರ ಖಾತೆಗೆ ಹೊಸ ಸಿನಿಮಾವೂ ಜಮಾವಣೆಯಾಗಿದೆ.
ಜವಾನ್ ಸಿನಿಮಾದಲ್ಲಿ ಶಾರೂಕ್ ಜೊತೆ ಮೋಡಿ ಮಾಡಿದ ನಟಿ ನಯನಾತಾರಾ(Nayanathara). ಸ್ಟಾರ್ ಸಿನಿಮಾ ನಟರ ಸಿನಿಮಾಗಳಿಗೆ ಲೇಡಿ ಸೂಪರ್ ಸ್ಟಾರ್ ಬೇಕೇ ಬೇಕು ಎನ್ನುವ ಮಾತುಗಳು ಈ ನಡುವೆ ಕೇಳಿ ಬರ್ತಿದೆ. ಅದು ಈಕೆಯ ಹೆಸರಿಗಿರುವ, ಫೇಮ್‌ಗಿರುವ ಗತ್ತು. ಹಲವು ಸಿನಿಮಾಗಳು ಈಕೆಗಾಗಿ ಕ್ಯೂ ನಿಂತಿದ್ದು, ಇದೀಗ ಮಲಯಾಳಂ ಸೂಪರ್ ಸ್ಟಾರ್ ಜೊತೆ ನಟಿಸಲು ನಯನಾತಾರಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮಮ್ಮುಟ್ಟಿ(Mammotty) ಜೊತೆ ಸೌತ್ ಸೂಪರ್ ಸ್ಟಾರ್ ನಟಿ ಸ್ಕ್ರೀನ್ ಶೇರ್ ಮಾಡ್ತಿರೋದು ಮಾಲಿವುಡ್ ಸಿನಿ ಪ್ರೇಮಿಗಳಿಗೂ ಥ್ರಿಲ್ ನೀಡಿದೆ.
ತೆಲುಗು, ತಮಿಳು ಸಿನಿರಂಗದಲ್ಲಿ ಗೌತಮ್ ವಾಸುದೇವ್ ಮೆನನ್(Gautham Vasudev Menon) ಹೆಸರು ಅಪಾರ ಖ್ಯಾತಿ ಗಳಿಸಿದೆ. ನಟನೆ ಇರಲಿ, ನಿರ್ದೇಶನವಿರಲಿ ಗೌತಮ್ ಮೆನನ್ ತಮ್ಮದೇ ಆದ ಸಿಗ್ನೇಚರ್ ಸ್ಟೈಲ್ ಹೊಂದಿದ್ದಾರೆ. ಇವ್ರ ನಿರ್ದೇಶನಕ್ಕೆ ಅಪಾರ ಫ್ಯಾನ್ ಬೇಸ್ ಇದೆ. ಬ್ಲಾಕ್ ಬಸ್ಟರ್ ಮಿನ್ನಲೆ, ವೆಟ್ಟೈಯಾಡು ವಿಲೈಯಾಡು, ಯೇ ಮಾಯೆ ಚೇಸಾವೆ ಸೇರಿದಂತೆ ಹಲವು ಹಿಟ್ ಸಿನಿಮಾ ನೀಡಿರುವ ಗೌತಮ್ ವಾಸುದೇವ್ ಮೊದಲ ಬಾರಿ ಮಲಯಾಳಂ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರದಲ್ಲಿ ಮಮ್ಮುಟ್ಟಿ(Mammotty) ನಾಯಕನಟನಾಗಿ ನಟಿಸುತ್ತಿದ್ದು, ನಯನತಾರಾ ಜೋಡಿಯಾಗೋದು ಕನ್ಫರ್ಮ್ ಆಗಿದೆ. ಚಿತ್ರತಂಡದಿಂದ ಅಧೀಕೃತ ಮಾಹಿತಿ ಹೊರ ಬೀಳಬೇಕಿದೆ.