ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಕಾಮಿಡಿ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ‘ಕಿಡ್ನಾಪ್ ಕಾವ್ಯ’ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿತು. ‘ಎಸ್ 26 ಸ್ಟುಡಿಯೋಸ್’ ಬ್ಯಾನರಿನಲ್ಲಿ ಷಡಕ್ಷರಿ ಬಿ. ನೀಲಕಂಠಯ್ಯ ನಿರ್ಮಿಸಿ, ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಬೆಂಗಳೂರಿನ ವಿಜಯನಗರದ ಮಾರುತಿ ಮಂದಿರದಲ್ಲಿ ನಡೆದ ‘ಕಿಡ್ನಾಪ್ ಕಾವ್ಯ’ ಸಿನಿಮಾದ
ಮುಹೂರ್ತ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.
ವಿಜಯನಗರದ ಮಾರುತಿ ಮಂದಿರದಲ್ಲಿ ನೆರವೇರಿತು.’ಕಿಡ್ನಾಪ್ ಕಾವ್ಯ’ ಚಿತ್ರಕ್ಕೆ ಪಾಂಡುರಂಗ. ಬಿ. ನಾರಾಯಣಕರ್ ಛಾಯಾಗ್ರಾಹಕರಾಗಿದ್ದಾರೆ. ಚಿತ್ರದ ಹಾಡುಗಳಿಗೆ ದಿವಾಕರ್. ಕೆ. ಸಂಗೀತ ಸಂಯೋಜಿಸುತ್ತಿದ್ದಾರೆ. ಸಾಹಸ ನಿರ್ದೇಶಕರಾಗಿ ಸಂತೋಷ್. ಕೆ , ಶಿವರಾಜ್ ಕೂಲಹಳ್ಳಿ ಪ್ರಸಾದನವಿದ್ದು , ಎಂ. ಎಸ್. ಅರ್ಜುನ್ ನೃತ್ಯ ನಿರ್ದೇಶಕರಾಗಿ , ಅಶೋಕ್.ಎ. ಜಿ. ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಕಿಡ್ನಾಪ್ ಕಾವ್ಯ’ ಈ ಚಿತ್ರದಲ್ಲಿ ರಾಜವಂಶಿ ,ಆರ್. ವಿಜಯಕುಮಾರ್, ಪೂಜಾ, ಪ್ರೀತಿ, ಅನನ್ವಿ, ಮುರಳಿ ಕೃಷ್ಣ, ಮಹೇಶ್. ಕಲಿ, ಲಪಂಗ್ ರಾಜು ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ‘ಕಿಡ್ನಾಪ್ ಕಾವ್ಯ’ ಸಿನಿಮಾದ ಮುಹೂರ್ತ ನೆರವೇರಿಸಿ ಚಿತ್ರೀಕರಣಕ್ಕೆ ಹೊರಟಿರುವ ಚಿತ್ರತಂಡ, ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ.