ಇತ್ತೀಚೆಗೆ ಯಾವ ಸುದ್ದಿಯೂ ಇಲ್ಲದೇ ಸೈಲೆಂಟಾಗಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದ ಈಗ ಮತ್ತೆ ಸುದ್ದಿಯಲ್ಲಿದ್ದಾನೆ. ಕೊರೋನ ಪ್ಯಾಂಡಮಿಕ್ ಟೈಂ ನಲ್ಲಿ ಅಮೆರಿಕಾದ ನೇವಾರ್ಕ ನಗರದ ಮೇಯರ್ ರಾಸ್ ಬರಾಕ್ ನನ್ನೇ ಬಕ್ರಾ ಮಾಡಿ ‘ಸಿಸ್ಟರ್ ಸಿಟಿ’ ಒಪ್ಪಂದ ಮಾಡಿಕೊಂಡಿದ್ದ ನಿತ್ಯಾನಂದನ ಪಟಾಲಂ ಈಗ ಮತ್ತೊಂದು ಅಂತಾರಾಷ್ಟ್ರೀಯ ಹಗರಣ ಮಾಡಿ ಜಗತ್ತಿನೆದುರು ಬಟಾ ಬಯಲಾಗಿದೆ. ನಿತ್ಯಾನಂದ ಬಹುದೊಡ್ಡ ಭೂ ಹಗರಣ ಮಾಡಿರುವ ಕುರಿತು ವಿಶ್ವದೆಲ್ಲೆಡೆ ಈಗ ಚರ್ಚೆ ನಡೆದಿದೆ. ದಕ್ಷಿಣ ಅಮೆರಿಕದ ಅಮೆಜಾನ್ ಮಳೆಕಾಡಿನಲ್ಲಿ ತನ್ನದೇ ಕೈಲಾಸ ಸೃಷ್ಟಿಮಾಡಲು ಮುಂದಾಗಿದ್ದ ವಂಚಕ ಸ್ವಾಮೀಜಿ ನಿತ್ಯಾನಂದ ದಕ್ಷಿಣ ಅಮೆರಿಕದ ಬೊಲಿವಿಯಾ ದೇಶದ ಸ್ಥಳೀಯ ಬುಡಕಟ್ಟು ಜನರನ್ನು ಮರಳು ಮಾಡಿ ಭೂಮಿ ಕಬಳಿಸೋ ಪ್ಲ್ಯಾನ್? ಮಾಡಿ ಬಿಗ್ ಗ್ಲೂಬಲ್ ಲ್ಯಾಂಡ್ ಫ್ರಾಡ್ ಸ್ಕ್ಯಾಮ್ ನಲ್ಲಿ ಮತ್ತೆ ಸುದ್ದಿಯಾಗಿದ್ದಾನೆ. ಎಚ್ಚೆತ್ತುಕೊಂಡ ಬೊಲಿವಿಯಾ ಸರ್ಕಾರ ಸ್ವಯಂ ಘೋಷಿತ ಕೈಲಾಸಪತಿಯ ಕನಸಿಗೆ ತಣ್ಣೀರು ಎರಚಿದೆ. ಜೊತೆಗೆ ಈತನ ೨೦ ಜನ ಅನುಯಾಯಿಗಳನ್ನು ತಕ್ಷಣವೇ ಬಂಧಿಸಿ ಗಡಿಪಾರು ಮಾಡಿದೆ!
ಪ್ಯಾಂಟಸಿ ನೇಷನ್ ನ ಸ್ವಘೋಷಿತ ಪ್ರಧಾನಿ ನಿತ್ಯಾನಂದ ಭಾರತದಾದ್ಯಂತ ಹಲವು ರಾಜ್ಯಗಳಲ್ಲಿ ಒಟ್ಟು ೬೦ಕ್ಕೂ ವಿವಿಧ ಪ್ರಕರಣಗಳಲ್ಲಿ ಬೇಕಾಗಿರುವ ವಾಂಟೆಡ್ ಆರೋಪಿ. ಕಳೆದ ೧೬ವರ್ಷಗಳಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಗಾಡ್ ಮ್ಯಾನ್ ಈಗ ವಿದೇಶಿಗರಿಂದಲೂ ಫ್ರಾಡ್ ಮ್ಯಾನ್ ಅನ್ನಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾನೆ. ದಕ್ಷಿಣ ಅಮೆರಿಕದ ಅಮೆಜಾನ್ ಮಳೆಕಾಡು ಪ್ರದೇಶದ ಬೊಲಿವಿಯಾ ದೇಶದಲ್ಲಿನ ೪ಲಕ್ಷ ಎಕರೆ ಭೂ ಪ್ರದೇಶವನ್ನು ದಿನಕ್ಕೆ ೨೫೦೦ರೂಪಾಯಿಯ ಲೀಸ್ ಅಮೌಂಟ್ ಕೊಟ್ಟು ೧೦೦೦ವರ್ಷಗಳ ಅವಧಿಗೆ ಲೀಸ್ ಹಾಕಿಕೊಂಡಂತೆ ನಕಲಿ ದಾಖಲೆಗಳನ್ನು ಮಾಡಿಕೊಂಡು ಬೊಲಿವಿಯಾ ಅಮೆಜಾನ್ ಕಾಡಿನ ಸ್ಥಳೀಯ ಮೂಲನಿವಾಸಿ ಬುಡಕಟ್ಟು ಜನಾಂಗದ ಸುಪರ್ದಿಯಲ್ಲಿ ಇತ್ತು ಎಂದು ಹೇಳಲಾಗುತ್ತಿರುವ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ನಕಲಿ ಸಹಿಗಳನ್ನು ನಿತ್ಯಾನಂದನ ಭಕ್ತರು ಮಾಡಿರುವುದು, ಸ್ಥಳೀಯ ಬುಡಕಟ್ಟು ಜನರನ್ನು ವಂಚಿಸುವ ಯತ್ನಕ್ಕೆ ಕೈಹಾಕಿರುವುದು ಮೇಲ್ನೋಟಕ್ಕೆ ಕಂಡು ಬಂದು ಅಲ್ಲಿನ ಸ್ಥಳೀಯ ಪೊಲೀಸರು ಮತ್ತು ಬೊಲಿವಿಯಾ ಸರ್ಕಾರಿ ಅಧಿಕಾರಿಗಳು ಲ್ಯಾಂಡ್ ಲೂಟ್ ಗೆ ರೆಡಿ ಆಗ್ತಿದ್ದ ನಿತ್ಯಾನಂದ ಸ್ವಾಮಿಯ ೨೦ ಜನ ಶಿಷ್ಯಂದಿರನ್ನು ಆ ದೇಶದಿಂದಲೇ ಗಡಿಪಾರು ಮಾಡಿ ಹೊರ ಹಾಕಿದ್ದಾರೆ. ಟೂರಿಸ್ಟ್ ವೀಸಾ ಪಡೆದು ಅಮೆಜಾನ್ ಮಳೆಕಾಡನ ಬೊಲಿವಿಯಾ ಪ್ರವೇಶಿಸಿದ್ದ ನಿತ್ಯಾನಂದನ ಶಿಷ್ಯರು ಈ ಬಹುದೊಡ್ಡ ಲ್ಯಾಂಡ್ ಫ್ರಾಡ್ ಒಪ್ಪಂದದಲ್ಲಿ ಪೋರ್ಜರಿ ಸಹಿ ಮತ್ತು ಪೋರ್ಜರಿ ಭೂ ದಾಖಲೆ ಮಾಡಿಕೊಂಡು ೩೯೦೦ ಸ್ಕೇರ್ ಕಿಲೋಮೀಟರ್ ಜಾಗವನ್ನು ಕಬಳಿಸಲು ಹುನ್ನಾರ ನಡೆಸಿದ್ದ ಬಗ್ಗೆ ಬೊಲಿವಿಯಾ ಸರ್ಕಾರದ ಗಮನಕ್ಕೆ ತಂದಿರುವ ಅಲ್ಲಿನ ಸ್ಥಳೀಯ ಮಾಧ್ಯಮಗಳು ಬುಡಕಟ್ಟು ಜನರನ್ನು ನಿತ್ಯನ ಭಕ್ತಗಣ ಯಾಮಾರಿಸಿ ಮಂಕು ಬೂದಿ ಎರಚಿರುವ ಕುರಿತು ವರದಿ ಮಾಡಿವೆ.
ಈಗ ಬೊಲಿವಿಯಾ ಸರ್ಕಾರಿ ಅಧಿಕಾರಿಗಳು ಈ ಭೂ ಒಪ್ಪಂದಕ್ಕೆ ಮಾನ್ಯತೆ ಇಲ್ಲ ಎಂದು ಆರ್ಡರ್ ಪಾಸ್ ಮಾಡಿದ್ದಾರೆ. ಬೇರೆ ದೇಶಗಳಿಂದ ಬಂದು ಏಕಾಏಕಿ ಯಾರು ಕೂಡ ಹೀಗೆ ಕ್ರಷಿ ಜಮೀನು, ಅರಣ್ಯ ಭೂಮಿ ಖರೀದಿ ಮಾಡಲ ಆಗೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿತ್ಯಾನಂದನ ಅಂತಾರಾಷ್ಟ್ರೀಯ ಮಟ್ಟದ ರಿಯಲ್ ಎಸ್ಟೇಟ್ ಪ್ಲಾನ್ ಪ್ಲಾಪ್ ಆಗಿದೆ. ಹೊಸ ಕೈಲಾಸ ದೇಶಕ್ಕೆ ಶಾಶ್ವತ ನೆಲೆ ಹುಡುಕಿಕೊಳ್ಳುವ ಈತನ ಮಾಸ್ಟರ್ ಪ್ಲಾನ್ ಉಲ್ಟಾ ಹೊಡೆದಿದೆ. ಅಮೆಜಾನ್ ಮಳೆಕಾಡಿನಲ್ಲಿ ಬೆಂಗಳೂರಿಗಿಂತ ೫ವರೆ ಪಟ್ಟು ದೊಡ್ಡದಾದ ಭೂ ಪ್ರದೇಶವನ್ನೇ ೧೦೦೦ ವರ್ಷಕ್ಕೆ ಭೋಗ್ಯಕ್ಕೆ ಹಾಕಿಕೊಂಡಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಖತರ್ನಾಕ್ ನಿತ್ಯಾನಂದ ಬೊಲಿವಿಯಾ ದೇಶದಲ್ಲಿ ಭೂಕಬಳಿಕೆ ಮಾಡಿ ಅಲ್ಲಿನ ಸ್ಥಳೀಯ ಮೂಲನಿವಾಸಿ ಬುಡಕಟ್ಟು ಜನಾಂಗವನ್ನೇ ವಕ್ಕಲೆಬ್ಬಿಸಲು ಹೋರಟಿದ್ದೇ ಈ ವಿಚಾರ ಹೊರಗೆ ಬರಲು ಕಾರಣವಾಗಿದೆ!
ನಿತ್ಯಾನಂದನ ಈ ಮಾಸ್ಟರ್ ಪ್ಲ್ಯಾನ್‌ಗೆ ಬೊಲಿವಿಯಾ ಸರ್ಕಾರವೇ ಬೆಚ್ಚಿ ಬೆರಗಾಗಿತ್ತು. ಈತನನ್ನು ಸುಮ್ಮನೆ ಬಿಟ್ರೆ ಇಡೀ ದೇಶವನ್ನೇ ಕೊಂಡುಕೊಳ್ಳುತ್ತಾನೇನೋ ಎಂದು ಫುಲ್ ಅಲರ್ಟ್ ಆದ ಅಲ್ಲಿನ ಸ್ಥಳೀಯ ಸರ್ಕಾರ ನಿತ್ಯಾನಂದನಿಗೆ ಬರೋಬ್ಬರಿ ಬುದ್ದಿ ಕಲಿಸಲು ಮುಂದಾಗಿದೆ. ಎಲ್ಲಿ ಹೋದರೂ ನಿಲ್ಲದ ನಿತ್ಯಾನಂದನ ವಂಚನೆಯ ಎಪಿಸೋಡ್ ಈಗ ಅಮೆಜಾನ್ ಮಳೆಕಾಡಿನಲ್ಲೂ ಮುಂದುವರಿದಿದೆ. ನಿತ್ಯಾನಂದ ತನ್ನ ಭಕ್ತರನ್ನು ಬಿಟ್ಟು ಈಗ ದಕ್ಷಿಣ ಅಮೆರಿಕಾದ ಅಮೆಜಾನ್ ಮಳೆಕಾಡಿನಲ್ಲಿ ಆಶ್ರಮ ವಿಸ್ತರಿಸಲು ಹೋಗಿ ತಗಲಾಕಿಕೊಂಡು ಜಗತ್ತಿನೆದುರು ಮತ್ತೆ ಬೆತ್ತಲಾಗಿದ್ದಾನೆ. ಅಲ್ಲಿನ ಬಯೆರ್ ಕಯಾಬಾ ಬುಡಕಟ್ಟು ಜನರಿಗೆ ಸೇರಿತ್ತು ಎಂದು ಹೇಳಲಾಗುತ್ತಿರುವ ಭೂಮಿಯನ್ನು ಲೀಸ್ ಹಣ ಕೊಟ್ಟು ೪೮೦೦ಚದರ ಕಿಲೋಮೀಟರ್ ಭೂಮಿಯನ್ನು ‘ಯುನೈಟೆಡ್ ನೇಷನ್ ಆಫ್ ಕೈಲಾಸ’ ಹೆಸರಿನಲ್ಲಿ ನಕಲಿ ದಾಖಲೆ, ಸಹಿ ಹಾಕಿ ಒಪ್ಪಂದದ ಪತ್ರಗಳನ್ನು ತಯಾರು ಮಾಡಿಕೊಂಡಿದ್ದ ಭೂಕಬಳಿಕೆ ವಿಚಾರ ಜಾಗತಿಕವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಟ್ರಂಪ್ ಕೈಗೆ ತಗಲಾಕೊಂಡ್ರೆ ಗೇಟ್ ಪಾಸ್ ಗ್ಯಾರಂಟಿ.
ಫಲವತ್ತಾದ ಅಮೆಜಾನ್ ಮಳೆಕಾಡಿನ ಮೇಲೆಯೇ ಕಣ್ಣು ಹಾಕೀರುವ ನಿತ್ಯಾನಂದನ ಯೂಟ್ಯೂಬ್ ಚಾನೆಲ್ ಗಳು ವೆಬ್ ಸೈಟ್ ಎಡಿಟರ್ ಗಳು ‘ಇದೊಂದು ಸುಳ್ಳು ಆರೋಪ’ ಮೀಡಿಯಾ ಗಳ ಅಪನಿಂದನೆ ಎಂದು ಅವಲತ್ತುಕೊಂಡಿದ್ದಾರೆ. ಆದರೇ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಫೇಕ್ ಕಂಟ್ರಿ ಕೈಲಾಸ ಗ್ರ್ಯಾಬ್ ಅಮೆಜಾನ್ ಲ್ಯಾಂಡ್ ಎಂದು ತಲೆ ಬರಹ ಕೊಟ್ಟು ಸುದ್ಧಿ ಬಿತ್ತರಿಸುತ್ತಿವೆ. ಹಲವಾರು ಎನ್.ಜಿ.ಓ.ಗಳು ಈಗಾಗಲೇ ಬೊಲಿವಿಯಾ ಬುಡಕಟ್ಟು ಜನಾಂಗದ ಪರವಾಗಿ ಹೋರಾಡಲು ಸಜ್ಜಾಗುತ್ತಿವೆ. ಅಮೆಜಾನ್ ಮಳೆಕಾಡುಗಳನ್ನು ಉಳಿಸಿಕೊಳ್ಳಲು ಸದಾ ಮಿಡಿಯುವ ಹಲವಾರು ಪರಿಸರ ಪ್ರೇಮಿಗಳು ಈಗ ಎಚ್ಚೆತ್ತುಕೊಂಡು ಧ್ವನಿ ಎತ್ತುವ ಪ್ರಯತ್ನ ನಡೆಸುತ್ತಿದ್ದಾರಂತೆ. ‘ಅಮೆಜಾನ್ ಅರಣ್ಯ ನಿತ್ಯಾನಂದನಿಗೆ ಸಾವಿರ ವರ್ಷಗಳ ಲೀಸ್’ ಈ ಪದವನ್ನು, ಒಪ್ಪಂದವನ್ನು ಕೇಳಿಯೇ ಎಷ್ಟೋ ಜನ ಮೂರ್ಚೆ ಹೋದಂತಾಗಿದ್ದಾರೆ.
ಕೆಲವು ದಿನಗಳ ಹಿಂದೆ ಯಷ್ಟೇ ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರನ್ನು ವಲಸಿಗರು ಎಂದು ಕೈ ಕಾಲಿಗೆ ಕೋಳ ತೊಡಿಸಿ ವಿಮಾನದಲ್ಲಿ ಭಾರತಕ್ಕೆ ವಾಪಸ್ ಕಳುಹಿಸಿದ್ದ ಡೊನಾಲ್ಡ್ ಟ್ರಂಪ್ ಮಹಾತ್ಮ ನಿಗೇನಾದರೂ ಈ ನಿತ್ಯಾನಂದನ ‘ಕಾಡು ಕಬ್ಜಾ’ ಕಥೆ ಗೊತ್ತಾಗಿ ಆತನ ತಲೆ ಕೆಟ್ಟು ಅಮೆರಿಕದ ಇಕ್ವಿಡಾರ್ ದ್ವೀಪದ ಯಾವುದೋ ಮೂಲೆಯಲ್ಲಿ ತಲೆ ಮರೆಸಿಕೊಂಡು ಬಚ್ಚಿಟ್ಟುಕೊಂಡಿರುವ ನಿತ್ಯಾನಂದನನ್ನು ಹಿಡಿದು ಕೈ ಕೋಳ ತೊಡಿಸಿ ಇಂಡಿಯಾದ ಇಂಟರ್ ಪೋಲ್ ಗೆ ಪಾರ್ಸೆಲ್ ಕಳುಹಿಸುವುದಂತು ಪಕ್ಕಾ ಅಂತಿದ್ದಾರೆ ತಿಳಿದವರು. ಇದುವರೆಗೂ ತನ್ನ ಕೈಲಾಸ ದೇಶದ ಅಡ್ರೆಸ್ ತಿಳಿಸದ ನಿತ್ಯಾನಂದ ಲ್ಯಾಂಡ್ ಲೊಕೇಶನ್ ತಿಳಿಸದ ನಿತ್ಯಾನಂದ ಬರೀ ಆನ್ಲೈನ್ ನಲ್ಲಿ ಡಿಜಿಟಲ್ ಗ್ರಾಫಿಕ್ಸ್ ಮೂಲಕ ಕೈಲಾಸವನ್ನು ಜನರಿಗೆ ತೋರಿಸುತ್ತಾ ಎಲ್ಲರನ್ನೂ ಯಾಮಾರಿಸಿಕೊಂಡೇ ಬರುತ್ತಿದ್ದಾನೆ. ತನ್ನ ವೆಬ್ ಸೈಟ್ ನಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ವರ್ಷಕ್ಕೊಮ್ಮೆ ಮಾತ್ರ ಪ್ರತ್ಯಕ್ಷವಾಗುವ ದೈವ ಮಾನವ ನಿತ್ಯಾನಂದನ ಕಾಲ್ಪನಿಕ ಕೈಲಾಸ ದೇಶಕ್ಕೆ ಬನ್ನಿ ವೀಸಾ ಪಡೆದುಕೊಳ್ಳಿ ಎಂದು ಸುಳ್ಳು ಹೇಳುವ ನಿತ್ಯಾನಂದನ ಕೈಲಾಸ ದೇಶಕ್ಕೆ ಜಗತ್ತಿನ ಯಾವ ದೇಶಗಳೂ ಇನ್ನೂ ಮಾನ್ಯತೆ ಕೊಟ್ಟಿಲ್ಲ. ಏಕೆಂದರೆ ಈತನ ದೇಶ ಸದ್ಯಕ್ಕೆ ಅಸ್ತಿತ್ವದಲ್ಲೇ ಇಲ್ಲ ಅಂತ ಅಮೆರಿಕದ ಇಕ್ವಿಡಾರ್ ಸರ್ಕಾರವೇ ಅಧಿಕ್ರತವಾಗಿ ಅನೌನ್ಸ್ ಮಾಡಿದೆ. ‘ನಾವು ನಿತ್ಯಾನಂದನಿಗೆ ಯಾವ ದ್ವೀಪ ಪ್ರದೇಶವನ್ನು ಮಾರಿಲ್ಲ!’ ಎಂದು ಮಾಧ್ಯಮಗಳ ಮುಂದೆಯೇ ಅಮೆರಿಕದ ಈಕ್ವೆಡಾರ್ ಗೌರ್ನಮೆಂಟ್ ಹೇಳಿಯಾಗಿದೆ.
ಅಮೇರಿಕಾದ ಯಾವುದೋ ಮೂಲೆಯಲ್ಲಿ ಸೈಟೊಂದನ್ನೋ, ಮನೆಯೊಂದನ್ನೋ ಖರೀದಿ ಮಾಡಿಯೋ, ಬಾಡಿಗೆಗೆ ಪಡೆದೋ ಅಡಗಿ ಕುಳಿತು ಆನ್ಲೈನ್ ನಲ್ಲಿ ಆಟ ಆಡುವ ನಿತ್ಯಾನಂದ ತನ್ನ ಕಾರ್ಯ ಚಟುವಟಿಕೆಗಳ ಬಗ್ಗೆ ಎಲ್ಲವನ್ನೂ ಡಿಜಿಟಲ್ ಮೀಡಿಯಾ ಮೂಲಕವೇ ಜಗತ್ತಿಗೇ ತಿಳಿಸುವ ಪ್ರಯತ್ನ ನಡೆಸುತ್ತಿದ್ದಾನೆ. ಆದರೆ ಎಲ್ಲೂ ಬಹಿರಂಗವಾಗಿ ‘ಇಗೋ ಇಲ್ಲಿ ನಿತ್ಯಾನಂದ ಕೈಲಾಸ ದೇಶದ ಪ್ರಧಾನಿ ಓಡಾಡಿದ. ಅಮೆರಿಕದ ಲ್ಲಾಗಲೀ ಬೇರೆ ದೇಶಗಳಲ್ಲಿಗಲೀ ಇಂತಿಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಬಾಗವಹಿಸಿದ್ದ. ಪ್ರವಚನ ನೀಡಿದ’ ಅಂತ ಇದುವರೆಗೂ ಎಲ್ಲೂ ವರಧಿಯಾಗಿಲ್ಲ. ಭಾರತದ ಇಂಟರ್ ಪೋಲ್ ಪೊಲೀಸರು ಈತನ ಮೇಲಿರುವ ಕಿಡ್ನಾಪು, ರೇಪು, ಆಶ್ರಮದಲ್ಲಿ ಆಗಿರುವ ನಿಗೂಢ ಕೊಲೆ, ಲೈಂಗಿಕ ಕಿರುಕುಳ, ಅಕ್ರಮ ಬಂಧನದ ಕೇಸುಗಳ ಕಾರಣಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ ತಕ್ಷಣವೇ ಆನ್ಲೈನ್ ನಲ್ಲಿ ಮುಖ ತೋರಿಸುವುದನ್ನೂ ಬಂದ್ ಮಾಡಿಬಿಟ್ಟ ‘ವಾಂಟೆಡ್ ನಿತ್ಯಾನಂದ!’ ನಾನು ಸುದೀರ್ಘ ಯೋಗ ನಿದ್ರೆಗೆ ಜಾರುತ್ತೀದ್ದೇನೆ! ಸ್ವಲ್ಪ ಕಾಲ ಶವಾಸನಕ್ಕೆ ಶಿಫ್ಟ್ ಆಗುತ್ತೇನೆ!’ ಎಂದು ಹೇಳಿ ನಾಪತ್ತೆ ಆಗುತ್ತಾನೆ.
ಒಳಗೊಳಗೇ ಗುಟ್ಟಾಗಿ ಇಂತಹ ‘ಕಾಡು ಕಬ್ಜಾ’ ಪ್ರಾಜೆಕ್ಟ್ ಗಳು ಮಾತ್ರ ಸದ್ದಿಲ್ಲದೆ ಜಾರಿಯಲ್ಲಿರುತ್ತವೆ! ಅಮೆರಿಕದ ಅಧಿಕಾರಿಗಳನ್ನೇ ಬಕ್ರಾ ಮಾಡಿತ್ತು ನಿತ್ಯನ ಟೀಂ. ಬೆಂಗಳೂರು ಬಳಿಯ ಬಿಡದಿಯಲ್ಲಿ ‘ನಿತ್ಯಾನಂದ ಧ್ಯಾನ ಪೀಠ’ ಸ್ಥಾಪಿಸಿ ಅಲ್ಲಿ ನೂರಾರು ವಿದೇಶಿ ಹುಡುಗಿಯರು, ಮಹಿಳೆಯರನ್ನೆ ಸ್ವಯಂ ಸೇವಕರನ್ನಾಗಿಸಿಕೊಂಡಿದ್ದ ಕಿಲಾಡಿ ನಿತ್ಯಾನಂದನ ವಿರುದ್ಧ ಎಷ್ಟೋ ಜನ ತಂದೆ ತಾಯಿಗಳು ‘ತಮ್ಮ ಮಕ್ಕಳಿಗೆ ಮಂಕು ಬೂದಿ ಎರಚಿ ಬ್ರೈನ್ ವಾಶ್ ಮಾಡಿ ಆಶ್ರಮಕ್ಕೆ ಕರೆತಂದಿದ್ದಾನೆ!’ ಎಂದು ಕಂಪ್ಲೈಂಟ್ ಕೊಟ್ಟಿದ್ದರು. ವಿದೇಶಿಗರನ್ನೇ ಇಸ್ಕಾನ್ ಟೆಂಪಲ್ ನವರಂತೆ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಸನಾತನ ಧರ್ಮಕ್ಕೆ ಮತಾಂತರ ಮಾಡಿದ್ದು ಮಾತ್ರ ಈತನ ಹೆಗ್ಗಳಿಕೆ. ಇಸ್ಲಾಂ, ಕ್ರಿಶ್ಚಿಯನ್ ಧರ್ಮದವರು ಮಾಡುವಂತೆಯೆ ಮೈಂಡ್ ವೀಕ್ ಇರುವವರನ್ನೇ ಟಾರ್ಗೆಟ್ ಮಾಡಿ ಬ್ರೈನ್ ವಾಶ್ ಮಾಡುವ ನಿತ್ಯಾನಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದೇಶಿಗರಿಂದ ಹಲವು ಎನ್.ಜಿ.ಓ.ಗಳಿಂದ ಕೋಟ್ಯಾಂತರ ರೂಪಾಯಿ ಫಂಡ್ ಪಡೆಯುತ್ತಾನೆ. ವಿಶ್ವದ ೪೭ಕಂಟ್ರಿಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದ್ದೇನೆ ಎಂದು ಹೇಳಿರುವ ನಿತ್ಯಾನಂದ ಸ್ವಾಮೀಜಿ ೨೦೧೦ ರಲ್ಲಿ ತಮಿಳು ಸಿನಿಮಾ ನಟಿ ರಂಜಿತಾ ಜೊತೆಗೆ ಖಾಸಗಿಯಾಗಿ ಅರೆಬೆತ್ತಲೆಯಾಗಿ ಇದ್ದ ವೀಡಿಯೋ ಒಂದನ್ನು ಆತನ ಡ್ರೈವರ್ ಲೀಕ್ ಮಾಡಿ ಬಿಟ್ಟಿದ್ದ. ಆಗ ನಿತ್ಯಾನಂದ ಆಕೆಯ ಜೊತೆಗೆ ‘ಶವಾಶನ’ ಪ್ರಾಕ್ಟೀಸ್ ಮಾಡ್ತಿದ್ದೆ! ಅಂತ ಹೇಳಿ ಎಲ್ಲರ ಬಾಯಿ ಮುಚ್ಚಿಸಲು ನೋಡಿದ್ದ ಈಗ ಈತನ ಪರಮ ಭಕ್ತೆ ಆಗಿರುವ ನಟಿ ರಂಜಿತಾಳೇ ಈತನ ಕೈಲಾಸ ದೇಶದ ಪ್ರಧಾನಿ ಇರಬಹುದಾ ಅಂತ ಹಲವರಿಗೆ ಗುಮಾನಿಗಳಿವೆ.
ಈಗಲೂ ಆಕೆ ಎಲ್ಲಿದ್ದಾಳೆ ಎಂಬುದೇ ನಿಗೂಢವಾಗುಳಿದಿದೆ. ನಿತ್ಯಾನಂದನ ಡ್ರೈವರ್ ಚೆನ್ನೈ ನಲ್ಲಿ ಇವಳ ಮೇಲೆ ಹಾಕಿರುವ ಕೇಸು, ಇವಳು ಕೊಟ್ಟ ಕೇಸೂ ಪೆಂಡಿಂಗ್ ಇವೆಯಂತೆ. ಆದಿ ಯೋಗಿನಿಯ ಆಶೀರ್ವಾದದಲ್ಲಿ ಅಡಗಿ ಕುಳಿತಿರುವ ನಿತ್ಯಾನಂದನ ಪರವಾಗಿ ದೇಶ ವಿದೇಶಗಳಲ್ಲಿ ಸುತ್ತುತ್ತಾ ರಾಜತಾಂತ್ರಿಕ ವ್ಯವಹಾರ ನಡೆಸುತ್ತಿರುವ ವಿಧ್ಯಾವಂತೆ ವಿಜಯ ಪ್ರಿಯ ನಿತ್ಯಾನಂದ ಎಂಬಾಕೆ ಪಾತ್ರ ಮತ್ತು ಸಂಬಂಧ ಕೈಲಾಸದೊಳಗೆ ಏನು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಒಮ್ಮೆ ವಿಶ್ವ ಸಂಸ್ಥೆ ಎನ್.ಜಿ.ಓ. ಗಳಿಗಾಗಿ ಆಯೋಜಿಸಿದ್ದ ಸಮಾಜ ಕಲ್ಯಾಣದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಹಜವಾಗಿ ಭಾಗವಹಿಸಿದ್ದ ಇದೇ ವಿಜಯ ಪ್ರಿಯ ನಿತ್ಯಾನಂದ ನನಗೆ ರಾಜತಾಂತ್ರಿಕವಾಗಿ ವಿಶ್ವ ಸಂಸ್ಥೆ ಆಹ್ವಾನ ನೀಡಿತ್ತು. ನಾನು ಇಲ್ಲಿಗೆ ಕೈಲಾಸ ದೇಶದ ರಾಯಭಾರಿಯಾಗಿ ಭಾಗವಹಿಸಿದ್ದೆ ಎಂದು ಸುಳ್ಳು ಹೇಳಿ ಆನ್ಲೈನ್ ನಲ್ಲಿ ನಗೆಪಾಟಲಿಗೆ ಈಡಾಗಿದ್ದಳು.
ಮಾನ್ಯತೆಯೇ ಇಲ್ಲದ ದೇಶದ ರಾಯಭಾರಿ ಎಂದು ಹೇಳಿಕೊಂಡು ಅಮೆರಿಕದ ನೇವಾರ್ಕ್ ನಗರದ ಮೇಯರ್ ರಾಸ್ ಬರಾಕ್ ನನ್ನೇ ‘ಸಿಸ್ಟರ್ ಸಿಟಿ ಒಪ್ಪಂದ ‘ ದ ಮೂಲಕ ಬಕ್ರಾ ಮಾಡಿದ್ದ ಈಕೆಯ ತಂಡ ಸುಳ್ಳು ಹೇಳಿ ಯಾಮಿರಿಸಿದ್ದಕ್ಕೆ ನಂತರ ಅಮೆರಿಕ ಸರ್ಕಾರಿ ಅಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡಿತ್ತು. ೩೧ ಅಮೆರಿಕದ ಸಿಟಿ ಗಳೊಂದಿಗೆ ಆರ್ಥಿಕ, ಸಾಂಸ್ಕೃತಿಕ, ರಾಜತಾಂತ್ರಿಕ ವ್ಯವಹಾರದ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳುತಿದ್ದ ನಿತ್ಯಾನಂದನ ಟೀಂ ಮೇಲೆ ಅಮೆರಿಕ ಗೌರ್ನಮೆಂಟ್ ಗದಾ ಪ್ರಹಾರ ನಡೆಸಿದ ನಂತರ ಸುಳ್ಳು ಹೇಳುವುದನ್ನು ನಿಲ್ಲಿಸಿ ತೆಪ್ಪಗಾಗಿದ್ದಾರೆ. ಇತ್ತ ಡಿಜಿಟಲ್ ಗ್ರಾಫಿಕ್ಸ್ ಡಿಜೈನ್ ಮೂಲಕ ಪ್ರತ್ಯೇಕ ಲಾಂಚನ. ಪ್ರತ್ಯೇಕ ಧ್ವಜ ತೋರಿಸಿಕೊಂಡು ಆನ್ಲೈನ್ ನಲ್ಲಿ ಫಂಡ್ ಎತ್ತುವ ನಿತ್ಯಾನಂದನ ಕೈಲಾಸ ದೇಶದ ನಾಟಕಕ್ಕೆ ಪರದೆ ಎಳೆಯುವ ದಿನಗಳೀಗ ಹತ್ತಿರ ಬಂದಂತೆ ಕಾಣುತ್ತಿದೆ. ಅದಕ್ಕಾಗಿಯೇ ಈಗ ದಕ್ಷಿಣ ಅಮೆರಿಕದ ಅಮೆಜಾನ್ ಮಳೆಕಾಡಿನ ತಂಟೆಗೆ ಹೋಗಿ ಮತ್ತೊಮ್ಮೆ ಜಗತ್ತಿನೆದುರು ಜಗಜ್ಜಾಹೀರಾಗುತ್ತಿದ್ದಾನೆ. ತಮಿಳುನಾಡಿನ ತಿರುವಣ್ಣಾ ಮಲೈನ ಈ ಅರುಣಾಚಲಂ ರಾಜಶೇಖರನ್ ತನ್ನ ೧೨ನೇ ವಯಸ್ಸಿಗೆ ಜ್ಞನೋಧಯ ಮಾಡಿಕೊಂಡವನು ಈಗ ತನ್ನ ಸುತ್ತ ಮುತ್ತ ಬರೀ ವೀದೇಶಿ ಹುಡುಗಿಯನ್ನೇ ಭಕ್ತರನ್ನಾಗಿ ಮಾಡಿಕೊಂಡು ನಿತ್ಯಾನಂದ ಪರಮಹಂಸನಾಗಿ ಪರಿವರ್ತಿತನಾಗಿ, ಉರಿಯುವ ಸೂರ್ಯನನ್ನೇ ಕೆಲವು ನಿಮಿಷ ಚಲಿಸಿದಂತೆ ನಿಲ್ಲಿಸುವ ಧೀಶಕ್ತಿ ಹೊಂದಿದ್ದೇನೆ. ನಾನೇ ಶಿವನ ಅಪರಾವತಾರ ಎಂದು ಬಿಂಬಿಸಿಕೊಂಡು ನಾಪತ್ತೆ ಯಾಗಿರುವ ನಿತ್ಯಾನಂದನ ಅನುಯಾಯಿಗಳು ಈಗ ವಿಶ್ವವೇ ದಂಗಾಗುವಂತೆ ಅಮೆಜಾನ್ ಮಳೆಕಾಡನ್ನು ಕಬ್ಜಾ ಮಾಡಲು ಹೋಗಿ ಗಡಿಪಾರಾಗಿದ್ದಾರೆ.
ಈತನ ಕಿತಾಪತಿ ಹೀಗೆ ಮುಂದುವರೆದರೆ, ನಿತ್ಯಾನಂದ ವಿದೇಶಗಳಲ್ಲಿ ಕಾನೂನು ಮುರಿದರೆ ಅಲ್ಲಿನ ಜೈಲುಗಳಲ್ಲಿ ಕೊಳೆಯ ಬೇಕಾಗುತ್ತದೆ. ಅಥವಾ ಆತನನ್ನು ಅವರೇ ಬಂದಿಸಿ ಭಾರತಕ್ಕೆ ಅಟ್ಟುವ ದಿನಗಳು ದೂರವಿಲ್ಲ. ೨೦೧೦ರ ಏಪ್ರಿಲ್ ತಿಂಗಳಲ್ಲಿ ಹಿಮಾಚಲ ಪ್ರದೇಶದಿಂದ ನಿತ್ಯಾನಂದನನ್ನು ಅರೆಸ್ಟ್ ಮಾಡಿ ಕರೆತಂದು ರಾಮನಗರದ ಜೈಲಿನಲ್ಲಿ ಇಡಲಾಗಿತ್ತು. ಜಾಮೀನು ಪಡೆದು ಹೊರ ಬಂದು ನೇಪಾಳದ ಮೂಲಕ ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿರುವ ನಿತ್ಯಾನಂದ ಈಗಲೂ ತಾನು ಭೂಮಿಯ ಯಾವ ಭಾಗದಲ್ಲಿ ಇದ್ದೇನೆ ಎಂದು ಮಾಹಿತಿ ಕೊಡುತ್ತಿಲ್ಲ ಇದೇ ಈಗ ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ