ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸಂಸಾರದ ಬಗ್ಗೆ ಕಳೆದ ಮೂರ್ನಾಲ್ಕು ದಿನಗಳಿಂದ ನೂರೆಂಟು ಅಂತೆಕಂತೆ ಸುದ್ದಿಗಳು ಕೇಕೆ ಹೊಡೆದಿದ್ವು. ನಯನ್ ಹಾಗೂ ವಿಘ್ನೇಶ್ ಶಿವನ್ ನಡುವೆ ವಿರಸ ಮೂಡಿದ್ದು, ಡಿವೋರ್ಸ್ ಪಡೆಯೋದಕ್ಕೆ ಮುಂದಾಗಿದ್ದಾರೆ ಅಂತೆಲ್ಲಾ ಸುದ್ದಿಯಾಗಿತ್ತು. ಫೈನಲೀ, ಗಾಸಿಪ್ ಖಾಲಂನಲ್ಲಿ ಕುಣಿದಾಡಿದ ಮ್ಯಾಟ್ರಿಗೆ ಮುಕ್ತಿ ಸಿಕ್ಕಿದೆ. ನಯನ್-ವಿಘ್ನೇಶ್ ಶಿವನ್ ಸಂಸಾರದಲ್ಲಿ ನೋ ಬಿರುಗಾಳಿ, ನೋ ಸುಂಟರಗಾಳಿ ಅನ್ನೋದಕ್ಕೆ ಸಾಕ್ಷಿಯೂ ದಕ್ಕಿದೆ.
ಹೌದು, ಕಳೆದ ಮೂರ್ನಾಲ್ಕು ದಿನಗಳಿಂದೆ ನಯನತಾರಾ ಪತಿ ವಿಘ್ನೇಶ್ ಶಿವನ್‌ರನ್ನ ಸೋಷಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿರುವ ಬಗ್ಗೆ ಚರ್ಚೆಯಾಗಿತ್ತು. ‘ಕಣ್ಣಲ್ಲಿ ನೀರು ಬರುತ್ತಿದ್ದರೂ ಇದು ನನಗೆ ಸಿಕ್ಕಿತು’ಅಂತ ನಯನ್ ಭಾವುಕಗೊಂಡು ಪೋಸ್ಟ್ ಹಾಕಿದ್ದೇ ತಡ ಎಲ್ಲರೂ ಸೋಷಿಯಲ್ ಮೀಡಿಯಾ ತಡಕಾಡಿದರು. ಆಗ ನಟಿ ನಯನ್‌ತಾರಾ, ಪತಿ ವಿಘ್ನೇಶ್ ಶಿವನ್‌ರನ್ನ ಅನ್‌ಫಾಲೋ ಮಾಡಿರುವ ವಿಚಾರ ಗೊತ್ತಾಗಿತ್ತು. ಆ ಕ್ಷಣಕ್ಕೆ ಕೆಲ ನೆಟ್ಟಿಗರು ಲೇಡಿ ಸೂಪರ್ ಸ್ಟಾರ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿರೋದು ಗ್ಯಾರಂಟಿ ಅಂತ ಕಮೆಂಟ್ ಹಾಕೋದಕ್ಕೆ ಶುರು ಮಾಡಿದರು. ಡಿವೋರ್ಸ್ ಪಡೆಯೋದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡೋದು, ಫೋಟೋಗಳನ್ನ ಡಿಲೀಟ್ ಮಾಡೋದು ಫಸ್ಟ್ ಸ್ಟೆಪ್. ಸೋ ಅದನ್ನ ನಟಿ ನಯನ್ ತಾರಾ ಕೂಡ ಫಾಲೋ ಮಾಡ್ತಿದ್ದಾರೆ ಅಂತೆಲ್ಲಾ ಕಮೆಂಟ್ ಪಾಸ್ ಮಾಡಿದ್ರು. ಆದ್ರೀಗ ಅಸಲಿ ಸತ್ಯ ಏನೆಂಬುದನ್ನ ಸ್ವತಃ ವಿಘ್ನೇಶ್ ಶಿವನ್ ಹೊರಹಾಕಿದ್ದಾರೆ.
ನಮ್ಮ ಸಂಸಾರದಲ್ಲಿ ಸುಂಟರಗಾಳಿನೂ ಎದ್ದಿಲ್ಲ, ಸುನಾಮಿನೂ ಬಂದಿಲ್ಲ. ನಮ್ಮ ಸಂಸಾರದಲ್ಲಿ ಎಲ್ಲವೂ ಸರಿಯಿದೆ. ಟೆಕ್ನಿಕಲ್ ಇಷ್ಯೂಸ್‌ನಿಂದಾಗಿ ಅನ್‌ಫಾಲೋ ತೋರಿಸ್ತಿದೆ ಬಿಟ್ರೆ, ನಾನು ಮತ್ತೆ ನಯನ್ ಚೆನ್ನಾಗಿಯೇ ಇದ್ದೇವೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕ್ಕೊಂಡಿದ್ದಾರೆ. ಅಭಿಮಾನಿಗಳ ಪ್ರೀತಿ, ಆಶೀರ್ವಾದ ಸದಾ ನಮ್ಮ ಮೇಲೆ ಇದೆ ಎಂದಿದ್ದಾರೆ. ಅಂದ್ಹಾಗೇ, ನಯನ್ ಹಾಗೂ ವಿಘ್ನೇಶ್ ಶಿವನ್ ಜೋಡಿ ಪರಸ್ಪರ 10 ವರ್ಷಗಳ ಕಾಲ ಪ್ರೀತಿಸಿ ಜೊತೆಯಾದವರು. ಇದೀಗ ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನ ಪಡೆದರಾದ್ರೂ ಕೂಡ ಅಕ್ಕರೆಯಿಂದ, ಪ್ರೀತಿ-ಕಕ್ಕುಲಾತಿಯಿಂದ ಮಕ್ಕಳನ್ನ ಸಾಕುತ್ತಿದ್ದಾರೆ. ಹೀಗಿರುವಾಗ ಈ ಜೋಡಿ ಬೇರಾಗೋದುಂಟೆ. ಅಷ್ಟಕ್ಕೂ, ಅದ್ಯಾವ ಕಿಡಿಗೇಡಿಗಳು ಈ ಸುದ್ದಿನಾ ಕ್ರಿಯೇಟ್ ಮಾಡಿದ್ರೋ ಗೊತ್ತಿಲ್ಲ. ಏಕ್ದಮ್ ಇವರಿಬ್ಬರ ಡಿವೋರ್ಸ್ ಸುದ್ದಿ ಜ್ವಾಲಾಮುಖಿಯಂತೆ ಸಿಡಿಯಿತು. ಅಭಿಮಾನಿಗಳ ಹೃದಯ ಒಡೆದೋಗುವಂತೆ ಮಾಡಿತ್ತು. ಫೈನಲೀ, ಡಿವೋರ್ಸ್ ಸಮಾಚಾರಕ್ಕೆ ಅಂತ್ಯ ಹಾಡಿದ್ದಾರೆ. ನಮ್ಮ ಸಂಸಾರ ಆನಂದ ಸಾಗರ ಅಂತ ಹಾಡ್ತಾ ಮುದ್ದಾದ ಮಕ್ಕಳ ಜೊತೆ ಬದುಕು ನಡೆಸುತ್ತಿದ್ದಾರೆ. ಅಂದ್ಹಾಗೇ, ಈ ಸಂಸಾರದ ಮೇಲೆ ಯಾವ ಕೆಟ್ಟ ಕಣ್ಣು ಬೀಳದಿರಲಿ. ನಯನ್-ವಿಘ್ನೇಶ್ ಶಿವನ್ ಹಾಲು-ಜೇನಿನಂತೆ ಬೆರತು ಬಾಳಲಿ ಅನ್ನೋದೇ ನಮ್ಮ ಆಶಯ ಕೂಡ.