-ಪ್ಯಾನಿಂಡಿಯಾ ಸಿನಿಮಾಗಳ ಹಿಸ್ಟರಿ ಗೊತ್ತಾ?
-ಸಣ್ಣ ಸಿನಿಮಾಗಳ ಕತ್ತು ಹಿಸುಕಿದ್ಯಾರು?
ಭಾರತೀಯ ಸಿನಿಮಾ ರಂಗವೀಗ ಹೊಸತನದಿಂದ ತೊನೆಯಲಾರಂಭಿಸಿದೆ. ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಮಾತ್ರ ಎಂಬಂತಿದ್ದ ವಾತಾವರಣವೀಗ ಸಂಪೂರ್ಣವಾಗಿಯೇ ಬದಲಾಗಿದೆ. ಬಾಲಿವುಡ್ ಚಿತ್ರಗಳ ಆಲೋಚನಾ ಕ್ರಮ ಮತ್ತು ಗುಣ ಮಟ್ಟವನ್ನು ಭಾರತದ ಮತ್ಯಾವ ಭಾಷೆಗಳ ಸಿನಿಮಾಗಳೂ ಕೂಡಾ ಮೀರಿಸೋದಿರಲಿ; ಮುಟ್ಟಲೂ ಸಾಧ್ಯವಿಲ್ಲ ಎಂಬಂಥಾ ಠೇಂಕಾರ ಬಾಲಿವುಡ್ ಮಂದಿಯಲ್ಲಿತ್ತು. ದಕ್ಷಿಣ ಭಾರತೀಯ ಚಿತ್ರರಂಗ ಆಗಷ್ಟೇ ನಾನಾ ಸವಾಲುಗಳನ್ನು ಮೀರಿ, ಎಲ್ಲದರಲ್ಲಿಯೂ ಸ್ವಾವಲಂಬನೆ ಸಾಧಿ ಸಿಕೊಳ್ಳುವ್ತ ದಾಪುಗಲಡುತಿತ್ತು. ಇಂಥಾ ಹೊತ್ತಿನಲ್ಲಿ ಕನ್ನಡವೂ ಸರಿದಂತೆ ನಾನಾಭಾಷೆಗಳಲ್ಲಿ ರೀಮೇಕ್ ಮಾಡಿ ಹೇಗೋ ಚಾಲ್ತಿಯಲ್ಲಿರುವ ಸರ್ಕಸ್ಸುಗಳೂ ನಡೆಯುತ್ತಿದ್ದವು. ಸೂಕ್ಷ್ಮವಾಗಿ ಗಮನಿಸಿದರೆ, ಅದರ ಹಿಂದೆಯೂ ಚಿತ್ರರಂಗವನ್ನು ಜೀವಂತವಾಗಿಡುವ ಫಾರ್ಮುಲಾ ಅಡಗಿತ್ತು.
ಕನ್ನಡ ಚಿತ್ರರಂಗದ ಇಚಾರವನ್ನೇ ತೆಗೆದುಕೊಂಡರೆ ಎಂಬತ್ತರ ದಶಕದ ಆಚೀಚಿನವರೆಗೂ ಕೂಡಾ ಎಲ್ಲದಕ್ಕೂ ಚೆನೈ ಅನ್ನೇ ಆಶ್ರಯಿಸುವಂಥಾ ವಾತಾವರಣವಿತ್ತು. ಅಂಥಾ ಸ್ಥಿತಿಯನ್ನು ದಾಟಿಕೊಂಡು ಈ ಮಟ್ಟದ ವರೆಗೆ ಬೆಳೆದು ಬಂದ ಹಾದಿ ಇದೆಯಲ್ಲಾ? ಅದು ನಿಜಕ್ಕೂ ರಣರೋಚಕ. ಬಹುತೇಕ ಭಾಷೆಗಳ ಚಿತ್ರರಂಗಗಳೂ ಕೂಡಾ ಇಂಥಾದ್ದೇ ಸವಾಲುಗಳನ್ನು ದಾಟಿಕೊಂಡು ಬಂದಿರುತ್ತವೆ. ಅದು ನಿಜಕ್ಕೂ ಸಲೀಸಿನ ಹಾದಿಯಾಗಿಕಕರೋದಿಲ್ಲ. ಕನ್ನಡವೂ ಸೇರಿದಂತೆ ಒಂದಷ್ಟು ಸಿನಿಮಾ ರಂಗಗಳು ಈವತ್ತಿಗೆ ಬಾಲಿವುಡ್ಡೇ ಕಣ್ಣರಳಿಸಿ ನೋಡುವಂತೆ ಬೆಳೆದು ನಿಂತಿವೆ. ಇದಕ್ಕೆ ಕಾರಣವಾಗಿರೋದು ಪ್ಯಾನಿಂಡಿಯಾ ಸಿನಿಮಾಗಳ ಹಂಗಾಮಾ. ಕನ್ನಡದಲ್ಲಿಯೂ ಕೆಜಿಎಫ್ ಸರಣಿಯ ಮೂಲಕ ಇಂಥಾದ್ದೊಂದು ಕ್ರೇಜ್ ಶುರುವಾಗಿದೆ.

ಯಾವುದೇ ಸಿನಿಮಾಗಳಾದರೂ ಗಡಿ ದಾಟಿಕೊಂಡು ಮಾರುಕಟ್ಟೆ ವ್ಯಾಪ್ತಿಯನ್ನು ಹಿಗ್ಗಲಿಸಿಕೊಳ್ಳದೇ ಹೋದರೆ ಖಂಡಿತವಾಗಿಯೂ ಉಳಿಗಾಲವಿಲ್ಲ. ಈ ನಿಟ್ಟಿನಲ್ಲಿ ನೋಡ ಹೋದರೆ ಇಂಥಾ ಪ್ಯಾನಿಂಡಿಯಾ ಸಿನಿಮಾಗಳು ಆಸರೆಯಾಗಿ ಕಾಣಿಸೋದು ಸುಳ್ಳಲ್ಲ. ಹಾಗಂತ ಇದರಿಂದಾಗಿ ಬರೀ ಸಕಾರಾತ್ಮಕ ಪರಿಣಾಮವೇ ಇದೆ ಅಂದುಕೊಳ್ಳುವಂತಿಲ್ಲ. ಯಾಕಂದ್ರೆ ವರ್ಷಕ್ಕೊಂದು ಸಾರಿ ಬರುವ ಜಾತ್ರೆಯಂತಿರೋ ಪ್ಯಾನಿಂಡಿಯಾ ಸಿನಿಮಾಗಳ ನಂತರದಲ್ಲಿ ಸಣ್ಣು ಪುಟ್ಟ ಸಿನಿಮಾ ನೋಡಲು ಜನ ಬಾರದೆ ಅದೆಷ್ಟೋ ಮಂದಿ ಚಿತ್ರರಂಗವನ್ನೇ ತೊರೆದಿದ್ದಾರೆ. ಒಂದು ಹಿಟ್ ಪ್ಯಾನಿಂಡಿಯಾ ಸಿನಿಮಾ ನಂತರದಲ್ಲಿ ಅದೇ ಗುಣಮಟ್ಟದ ಅದೇ ಬಗೆಯ ಸಿನಿಮಾಗಳನ್ನು ಮಂದಿ ಬಯಸುತ್ತಾರೆ. ಆದರೆ ಅದೆಷ್ಟೋ ಚೆಂದದ ಕಥೆಯ, ಪ್ರಯೋಗಾತ್ಮಕ ಸಿನಿಮಾಗಳು ಗುಣಮಟ್ಟದಲ್ಲಿ ಪ್ಯಾನಿಂಡಿಯಾ ಮಟ್ಟ ಮುಟ್ಟಲಾರದೆ ಸೋಲುತ್ತಿವೆ. ಒಂದು ಸಿನಿಮಾ ರಂಗ ಜೀವಂತವಾಗುಳಿಯ ಬೇಕೆಂದರೆ ಅಲ್ಲಿ ವರ್ಷಕ್ಕೊಂದಷ್ಟು ಗೆಲುವು ಸಾಧ್ಯವಾಗಬೇಕು. ಎಲ್ಲ ಬಗೆಯ ಸಿನಿಮಾಗಳನ್ನೂ ಪ್ರೇಕ್ಷಕರು ಕೈ ಹಿಡಿಯಬೇಕು. ಈ ನಿಟ್ಟಿನಲ್ಲಿ ಪ್ಯಾನಿಂಡಿಯಾ ಸಿನಿಮಾಗಳು ನಾನಾ ದಿಕ್ಕಿನಲ್ಲಿ ಚರ್ಚೆ ಹುಟ್ಟು ಹಾಕಿವೆ.
ಕೆಜಿಎಫ್ ಕಂದೀಲು

ಕನ್ನಡ ಚಿಕತ್ರರಂಗ ಸಾಕಷ್ಟು ಏಳು ಬೀಳುಉಗಳನ್ನು ಕಾನೂರ್ಥಥ ಬಂದಿದೆ. ಆದರೆ ಬೇರೆ ಸಾಧ್ಯತೆಗಳತ್ತ ಕೈ ಚಾಚುವ ಕಸುವು ಕಾಣದೆ ದಶಕಗಳ ಕಾಲ ಕನ್ನಡ ಚಿತ್ರರಂಗ ಉಸಿರುಗಟಿಸಿಕೊಂಡಿತ್ತು. ಇಂಥಾ ಘಳಿಗೆಯಲ್ಲಿ ಯಾರೂ ಊಹಿಸಿರದ ರೀತಿಯಲ್ಲಿ ಮ್ಯಾಜಿಕ್ಕು ಸೃಷ್ಟಿ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್. ಕೆಲ ಸ್ಟಾರುಗಳು ಸಾಗಿ ಬಂದ ದಾರಿಯ ದಿಕ್ಕಿಗೊಮ್ಮೆ ಕಣ್ಣು ಹಾಯಿಸಿದ್ರೆ, ಆರಂಭದ ಬಿಂದುವಿನಿಂದ, ಈ ಕ್ಷಣದವರೆಗಿನ ಪ್ರತೀ ಹೆಜ್ಜೆಯೂ ಸ್ಫೂರ್ತಿಯಾಗಿ ಕಾಣಿಸುತ್ತೆ. ನಿಜವಾಗಿಯೂ ಅಭಿಮಾನಿ ಬಳಗ ಪ್ರಭಾವಿತರಾಗಬೇಕಿರೋದು ಅಂಥಾ ಸ್ಫೂರ್ತಿಯ ವಾಸ್ತವದಿಂದ ಮಾತ್ರ. ರಾಕಿಂಗ್ ಸ್ಟಾರ್ ಯಶ್ ಓರ್ವ ಸಾಮಾನ್ಯ ಹುಡುಗನಾಗಿ ಬಣ್ಣದ ಜಗತ್ತಿನ ಕನಸು ಕಂಡು, ಪ್ಯಾನಿಂಡಿಯಾ ಸ್ಟಾರ್ ಆಗಿ ನೆಲೆಗೊಂಡ ಪರಿ ಇದೆಯಲ್ಲಾ? ಅದು ಅನುಕ್ಷಣವೂ ಕಾಡಬಲ್ಲ ಅಚ್ಚರಿ. ಯಶ್ ಕನ್ನಡ ಚಿತ್ರರಂಗವನ್ನು ಗೆಲ್ಲಿಸುತ್ತಲೇ ತಾನೂ ಗೆದ್ದಿದ್ದ ಪ್ಯಾನಿಂಡಿಯಾ ಎಂಬ ಕಾನ್ಸೆಪ್ಟಿನಿಂದಲೇ ಎಂಬುದು ಗಮನಾರ್ಹ ವಿಚಾರ!
ರಾಕಿಂಗ್ ಸ್ಟಾರ್ ಯಶ್ ಈವತ್ತಿಗೆ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಶಾರೂಖ್ ಖಾನ್ ಥರದ ಸೂಪರ್ ಸ್ಟಾರುಗಳೇ ಭಹಿರಂಗವಾಗಿ ತಾವು ಯಶ್ ಫ್ಯಾನ್ ಅಂತ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಯಶ್ ಹವಾ ಹಬ್ಬಿಕೊಂಡಿದೆ. ಈ ಮೂಲಕ ಯಶ್ ಮಾತ್ರವೇ ಮಿಂಚುತ್ತಿದ್ದಾರೆ ಅಂದುಕೊಳ್ಳಬೇಕಿಲ್ಲ. ಯಶ್ ಗೆ ಸಿಕ್ಕ ಗೌರವ ಮೊದಲು ಸಲ್ಲುವುದು ಕನ್ನಡ ಚಿತ್ರರಂಗಕ್ಕೇನೇ. ಯಶ್ ಅವರನ್ನು ಭಾರತೀಯ ಚಿತ್ರರಂಗ ಈವತ್ತಿಗೆ ಕನ್ನಡ ಚಿತ್ರರಂಗದ ಭೂಮಿಕೆಯಿಂದಲೇ ಗುರುತಿಸುತ್ತಿದೆ. ಇದರೊಂದಿಗೆ ಒಂದು ಕಾಲದಲ್ಲಿ ಒಂದು ಬಗೆಯಲ್ಲಿ ಗಿರಕಿ ಹೊಡೆಯುತ್ತಿದ್ದ ಕನ್ನಡ ಚಿತ್ರರಂಗದ ಅಸಲೀ ಖದರ್ ಅನ್ನು ವಿಶ್ವಕ್ಕೆಲ್ಲ ಪರಿಚಯಿಸಿದ ಕೀರ್ತಿ ಯಶ್ ಅವರಿಗೆ ಸಲ್ಲುತ್ತೆ. ಇದೂ ಕೂಡಾ ಪ್ಯಾನಿಂಡಿಯಾ ಕಾನ್ಸೆಪ್ಟಿನ ಮಾಯೆ ಅನ್ನೋದನ್ನ ಒಪ್ಪಿಕೊಳ್ಳಲೇ ಬೇಕಿದೆ.
ಅದು ರೋಚಕ ಗೆಲುವು

ಈವತ್ತಿಗೆ ಕನ್ನಡ ಚಿತ್ರರಂಗ ಬಾಲಿವುಡ್ ಮಟ್ಟಕ್ಕೇರಿ ನಿಂತಿರೋದರ ಹಿಂದೆ ಯಶ್ ಕೆಜಿಎಫ್ ಮೂಲಕ ಕೊಟ್ಟಿದ್ದ ಬೂಸ್ಟರ್ ಡೋಸ್ ಕಾರಣ. ಮೈಸೂರು ಸೀಮೆಯ ಸಾಮಾನ್ಯ ಕುಟುಂಬದ ಕೂಸಾಗಿ ಹುಟ್ಟಿದ್ದವರು ಯಶ್. ತಂದೆ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್. ಇಡೀ ಸಂಸಾರಕ್ಕೆ ಆ ದುಡಿಮೆಯೇ ಅನ್ನದ ಮೂಲ. ಇಂಥಾ ಸೀಮಿತ ಚೌಕಟ್ಟುಗಳನ್ನು ಮೀರಿ ಕನಸು ಕಂಡವರು ಯಶ್. ಕಾಲೇಜು ದಿನಗಳಲ್ಲಿಯೇ ಸ್ಟಾರ್ ಆಗಬೇಕನ್ನೋ ಕನಸು ಕಂಡಿದ್ದ ಯಶ್ ಪಾಲಿಗೆ ಆ ಹಾದಿ ಸಲೀಸಿನದ್ದಾಗಿರಲಿಲ್ಲ. ನಟನಾಗೋ ಆಸೆ ಹೊತ್ತು ಬರಿಗೈಲಿ ಬೆಂಗಳೂರು ತಲುಪಿದ್ದ ಯಶ್ ಪಾಲಿಗೆ ಒಂದೊಂದು ಅವಕಾಶವೂ ಸತಾಯಿಸಿ ಬಿಟ್ಟಿತ್ತು. ಆರಂಭದ ಘಳಿಗೆಗಳಲ್ಲಿ ಅವಕಾಶ ಸಿಗದೆ, ಮೆಜೆಸ್ಟಿಕ್ಕಿನ ಎದೆತುಂಬಾ ಶಥಪಥ ತಿರುಗುವಾಗ, ಅಲ್ಲಿಯೇ ರಾತ್ರಿ ಕಳೆಯುವ ಸ್ಥಿತಿ ಎದುರಾದಾಗ ಅರ್ಧ ಅನ್ನ ಸಾಂಬಾರೂ ಕೂಡಾ ಸಿಗದೆ ಸತಾಯಿಸಿ ಬಿಟ್ಟಿತ್ತು.
ಸಿನಿಮಾ ಸಂಬಂಧಿತ ಸಣ್ಣಪುಟ್ಟ ಕೆಲಸ ಮಾಡುತ್ತಾ, ಕಡೆಗೊಮ್ಮೆ ಸೀರಿಯಲ್ಲುಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದವ್ರು ಯಶ್. ಆ ಬಳಿಕ ತೀರಾ ಪ್ರಯತ್ನ ಪಟ್ಟು ನಾಯಕನಾದ್ರೂ ಕೂಡಾ, ಆ ಹಾದಿ ಸಲೀಸಿನದ್ದಾಗಿರಲಿಲ್ಲ. ಬರಬರುತ್ತಾ ಒಂದು ಸೀಮಿತ ಪರಿಧಿಯಲ್ಲಿ ಯಶ್ ನಾಯಕನಾಗಿ ಕ್ಲಿಕ್ ಆಗಿದ್ರು. ಆದ್ರೆ ಹಾಸಿಗೆಯಾಚೆ ಕಾಲು ಚಾಚುತ್ತಾ, ಚೌಕಟ್ಟುಗಳನ್ನ ಮೀರಿ ಗರಿಗೆದರುವ ಸ್ವಭಾವ ಯಶ್ ಅವರದ್ದು. ಈ ಕಾರಣದಿಂದಲೇ ಕನ್ನಡ ಚಿತ್ರರಂಗವನ್ನು ಪ್ಯಾನಿಂಡಿಯಾ ಮಟ್ಟದಲ್ಲಿ ಮಿರುಗಿಸಿ, ತಾನು ಪ್ಯಾನಿಂಡಿಯಾ ಸ್ಟಾರ್ ಆಗೋ ಕನಸು ಕಂಡಿದ್ರು. ಅದರ ಫಲವಾಗಿಯೇ ಕೆಜಿಎಫ್ ಚಿತ್ರ ಶುರುವಾದಾಗ ಯಶ್ ಆಡಿದ್ದ ಮಾತುಗಳೆಲ್ಲವೂ ದುರಹಂಕಾರದಂತೆ, ನಗೆಪಾಟಲಿನಂತೆ ಕಾಣಿಸಿದ್ದವು. ಅದರ ಬಗ್ಗೆ ಕುಹಕದ ಮಾತುಗಳೂ ಕೇಳಿ ಬಂದಿದ್ದವು.
ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವರ್ಷಗಟ್ಟಲೆ ಶ್ರಮ ಪಟ್ಟು ಅಣಕಿಸಿದವರೇ ಅಚ್ಚರಿಗೊಳ್ಳುವಂತೆ ಪ್ಯಾನಿಂಡಿಕಯಾ ಸ್ಟಾರ್ ಆದ ಸಾಹಸಿ ಯಶ್. ಸಾಮಾನ್ಯವಾಗಿ ಎಲ್ಲಾ ನಟರ ಅಭಿಮಾನಿಗಳು ಸಿನಿಮಾ ಪಾತ್ರಗಳ ಮೂಲಕ ಅಭಿಮಾನ ತುಂಬಿಕೊಳ್ಳುತ್ತಾರೆ. ಆದ್ರೆ ನಿಜಕ್ಕೂ ಅಭಿಮಾನಿಗಳ ಪಾಲಿಗೆ ಸ್ಫೂರ್ತಿಯಾಗಬೇಕಿರೋದು ಯಶ್ ನಡೆದು ಬಂದ ದಾರಿಯಷ್ಟೇ. ಕೇವಲ ಸಿನಿಮಾ ಮಾತ್ರವಲ್ಲ; ಸಾಧಿಸೋ ಛಲ ಹೊಂದಿರುವ ಪ್ರತೀ ಕ್ಷೇತ್ರಗಳವ್ರಿಗೂ ಯಶ್ ಸಾರ್ವಕಾಲಿಕ ಸ್ಫೂರ್ತಿ. ಅಂಥಾದ್ದೊಂದು ಕಡುಗಷ್ಟದಿಂದ ಮೇಲೆದ್ದು ಬಂದು ಇಂದು ಪ್ಯಾನಿಂಡಿಯಾ ಸ್ಟಾರ್ ಆಗಿರುವವರು ಯಶ್. ಈ ಕಾರಣದಿಂದಲೇ ಅವರ ಹುಟ್ಟುಹಬ್ಬ ನಮ್ಮ ಪಾಲಿಗೂ ಸಂಭ್ರಮ ಅನ್ನಿಸುತ್ತೆ. ಅದು ಯಶ್ ನಡೆದು ಬಂದ ಹಾದಿಯ, ಪಟ್ಟ ಕಷ್ಟಗಳ ನಿಜವಾದ ಸಾರ್ಥಕತೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ.
ಈ ವರ್ಷ ನಿರ್ಣಾಯಕ

ಕೆಜಿಎಫ್ ನಂತರದಲ್ಲಿ ಕನ್ನಡ ಚಿತ್ರರಂಗದ ದಿಕ್ಕು ದೆಸೆಗಳೇ ಬದಲಾಗಿ ಬಿಟ್ಟಿವೆ. ಒಂದು ಕಾಲದಲ್ಲಿ ಕೇವಲ ಉತ್ತರದ ಚಿತ್ರರರಂಗ ಮಾತ್ರವಲ್ಲದೇ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೂ ಕನ್ನಡ ಸಿನಿಮಾ ರಂಗವನ್ನ ಅಸಡ್ಡೆಯಿಂದ ನೋಡಲಾಗುತ್ತಿತ್ತು. ಅದೆಲ್ಲವೂ ಈಗ ಅಕ್ಷರಶಃ ಅದಲುಬದಲಾಗಿದೆ. ಕನ್ನಡ ಚಿತ್ರರಂಗವೀಗ ಪ್ಯಾನಿಂಡಿಯಾ ಮಟ್ಟದಲ್ಲಿ ಮಿರುಗುತ್ತಿದೆ. ಇದರಲ್ಲಿ ಕಾಂತಾರ ಚಿತ್ರದ ಪಾಲೂ ಸಾಕಷ್ಟಿರೋದು ಸತ್ಯ. ಈ ವರ್ಷದಲ್ಲಿ ಚಿತ್ರರಂಗ ಒಂದಷ್ಟು ಸೋಲು ಗೆಲುವುಗಳನ್ನು ಕಂಡಿದೆ. ವರ್ಷವೊಂದರ ಅಂಚಿನಲ್ಲಿ ನಿಂತು ೨೦೨೫ರ ದಿಗಂತದತ್ತ ಒಮ್ಮೆ ದಿಟ್ಟಿಸಿದರೆ, ನಿಜಕ್ಕೂ ಆಶಾದಾಯಕ ಅಂಶಗಳು ಕಾಣಿಸಿಕೊಳ್ಳುತ್ತವೆ. ವಿಶೇಷವೆಂದರೆ, ಕಾಂತಾರಾ ಅಧ್ಯಾಯ ಒಂದು ಮುಂದಿನ ವರ್ಷ ಅಕ್ಟೋಬರ್ ೨ರಂದು ಬಿಡುಗಡೆಗೊಳ್ಳಲಿದೆ. ಎ ಹರ್ಷ ನಿರ್ದೇಶನದ ಬಾಲಿವುಡ್ ಚಿತ್ರ ಬಾಗಿ೪ ೨೦೨೫ ಸೆಪ್ಟೆಂಬರ್೫ರಂದು ಬಿಡುಗಡೆಗೊಳ್ಳಲಿದೆ.
ಅಲ್ಲಿಗೆ ಮುಂದಿನ ವರ್ಷದ ಕಡೇಯ ಭಾಗದಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಪ್ಯಾನಿಂಡಿಯಾ ಮಟ್ಟದಲ್ಲಿ ಪಟಪಟಿಸೋದು ಗ್ಯಾರೆಂಟಿ. ಪ್ರಧಾನವಾಗಿ, ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ ಅಧ್ಯಾಯ೧ರ ಸುತರ್‍ತ ದೊಡ್ಡ ಮಟ್ಟದಲ್ಲಿಯೇ ಕುತೂಹಲ ಮೂಡಿಕೊಂಡಿದೆ. ರಿಷಭ್ ಅತ್ಯಂತ ಎಚ್ಚರಿಕೆಯಿಂದ, ಅತೀವ ಜಾಣತನದಿಂದಲೇ ಪ್ರತೀ ಹೆಜ್ಜೆಯನ್ನೂ ಎತ್ತಿಡುತ್ತಿದ್ದಾರೆ. ಹೈಪುಗಳ ಗೊಡವೆಯಿಲ್ಲದೆ, ಅಸಣ್ಣ ಸುಳಿವನ್ನೂ ಬಿಟ್ಟುಕೊಡದೆ, ದಿನಕ್ಕೊಂದರಂತೆ ಹಬ್ಬಿಕೊಳ್ಳುತ್ತಿರುವ ರೂಮರುಗಳಿಗೆಲ್ಲ ಪ್ರತಿಕ್ರಿಯಿಸದೆ ಮುಂದಡಿಯಿಡುತ್ತಿದ್ದಾರೆ. ಇದೀಗ ತಣ್ಣಗೆ ಕಾಂತಾರಾ ಅಧ್ಯಾಯ ಒಂದರ ನಿಖರವಾದ ಬಿಡುಗಡೆ ದಿನಾಂಕ ಘೋಶಣೆ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ.
ಕಾಂತಾರ ಅಧ್ಯಾಯ೧ರ ಬಿಡುಗಡೆ ದಿನಾಂಕ ಘೋಶಣೆಯಾದ ಬೆನ್ನಲ್ಲಿಯೇ ಮತ್ತೊಂದು ಖುಷಿ ಕನ್ನಡದ ಸಿನಿಮಾ ಪ್ರೇಮಿಗಳನ್ನು ಎದುರುಗೊಂಡಿದೆ. ಅದು ಕನ್ನಡ ಚಿತ್ರರಂಗದ ಪ್ರತಿಭಾನಿವಿತ ನಿರ್ದೇಶಕ ಎ ಹರ್ಷ ನಿರ್ದೇಶನದ ಬಾಲಿವುಡ್ ಚಿತ್ರದ ಸಂಗತಿ. ಎ ಹರ್ಷ ಟೈಗರ್ ಶ್ರಾಫ್ ಅಭಿನಯದ ಬಾಗಿ೪ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ವಿಚಾರ ಈ ಹಿಂದೆಯೇ ಜಾಹೀರಾಗಿತ್ತು. ಆದರೀಗ ಸದ್ದೇ ಇರದಂತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿರೋ ಹರ್ಷ ಈ ಸಿನಿಮಾದ ಬಿಡುಗಡೆ ದಿನಾಂಕ ಘೋಶಣೆ ಮಾಡಿದ್ದಾರೆ. ಬಾಗಿ ಚಿತ್ರ ಈಗಾಗಲೇ ಮೂರು ಸರಣಿಗಳಲ್ಲಿ ಬಿಡುಗಡೆಗೊಂಡು ಯಶ ಕಂಡಿದೆ. ಈ ಸಿನಿಮಾ ಪೋಸ್ಟರ್ ಬಗ್ಗೆಯೂ ವ್ಯಾಪಕ ಮೆಚ್ಚುಗೆ, ಕುತೂಹಲಗಳು ಮೂಡಿಕೊಂಡಿವೆ.
ವಿಶೇಷವೆಂದರೆ, ಒಂದು ತಿಂಗಳ ಅಂತರದಲ್ಲಿ ಮುಂದಿನ ವರ್ಷ ಕನ್ನಡದ ಪ್ರತಿಭಾವಂತ ನಿರ್ದೇಶಕರಿಬ್ಬರ ಸಿನಿಮಾಗಳು ತೆರೆಗಾಣಲಿವೆ. ರಿಷಭ್ ಶೆಟ್ಟಿ ನಿರ್ದೇಶಕರಾಗಿ ಹೆಸರು ಮಾಡುತ್ತಲೇ ನಟನಾಗಿಯೂ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿರುವವರು. ಬೆಲ್ ಬಾಟಮ್ ಮೂಲಕ ನಾಯಕನಾಗಿದ್ದ ಅವರು, ಕಾಂತಾರಾ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಸ್ಟಾರ್ ಗಿರಿ ಗಿಟ್ಟಿಸಿಕೊಂಡಿದ್ದಾರೆ. ಎ ಹರ್ಷ ನೃತ್ಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದವರು. ಬಳಿಕ ನಟನಾಗಿ ನಿರ್ದೇಶಕನಾಗಿ ತಮ್ಮನ್ನು ತಾವು ನೆಲೆಗಾಣಿಸಿಕೊಂಡಿದ್ದವರು ಹರ್ಷ. ಅವರೀಗ ಏಕಾಏಕಿ ಬಾಲಿವುಡ್ಡಿಗೆ ಹಾರಿದ್ದಾರೆ. ಈ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಹರ್ಷ ಮತ್ತು ರಿಷಭ್ ಶೆಟ್ಟಿ ಸಿನಿಮಾ ಯಾನದಲ್ಲಿ ಒಂದಷ್ಟು ಸಾಮ್ಯತೆಗಳಿದ್ದಾವೆ. ಅದು ಗೆಲುವಿನಲ್ಲಿಯೂ ಪ್ರತಿಫಲಿಸುತ್ತಾ ಅನ್ನೋದನ್ನು ಕಾದು ನೋಡ ಬೇಕಿದೆ.
ಪ್ಯಾನಿಂಡಿಯಾ ಹಿಸ್ಟರಿ

ಬಾಲಿವುಡ್ ಮಂದಿ ದಕ್ಷಿಣ ಭಾರತೀಯ ಚಿತ್ರರಂಗವನ್ನು ಗಣನೆಗೆ ತೆಗೆದುಕೊಳ್ಳುವ ಮನಃಸ್ಥಿತಿ ಹೊಂದಿರಲೇ ಇಲ್ಲ. ಮಲೆಯಾಳಂ, ತಮಿಳು ಚಿತ್ರರಂಗದಲ್ಲಿ ಮೌಲಿಕವಾದ ಪ್ರಯೋಗಗಳು ನಡೆಯುತ್ತಿದ್ದರೂ ಕೂಡಾ ಅದರ ಬಗ್ಗೆ ಮೆಚ್ಚುಗೆಯ ಮಾತಾಡಿ ಉತ್ತೇಜನ ನೀಡುವಂಥಾ ಮನೋಭಾವ ಯಾರೊಬ್ಬರಿಗೂ ಇರಲಿಲ್ಲ. ಇಂಥಾ ಘಳಿಗೆಯಲ್ಲಿ ಎಲ್ಲವನ್ನೂ ಮೀರಿ ನಿಲ್ಲಬೇಕೆಂಬ ಕಿಚ್ಚು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಇದ್ದೇ ಇತ್ತು. ಅದು ಮೊದಲ ಬಾರಿ ಸಾಧ್ಯವಾದದ್ದು, ಮೊದಲ ಸಲ ದಕ್ಷಿಣ ಭಾರತೀಯ ಚಿತ್ರರಂದ ತಾಕತ್ತು ಕಂಡು ಬಾಲಿವುಡ್ಡಿನಂಥಾ ಬಾಲಿವುಡ್ಡಿನಂಥಾ ಬಾಲಿವುಡ್ಡೇ ಬೆಚ್ಚಿ ಬಿದ್ದಿತ್ತು. ಇಂಥಾದ್ದೊಂದು ಸಂಚನವನ್ನು ತಣ್ಣಗೆ ಸೃಷ್ಟಿಸಿ ಕಮಾಲ್ ಮಾಡಿದ್ದವರು ನಿರ್ದೇಶಕ ರಾಜಮೌಳಿ.
ರಾಜಮೌಳಿ ಈಗ ಅಂತೊಂದು ಸಿನಿಮಾ ಮೂಲಕ ಗಮನ ಸೆಳೆದಿದ್ದವರು. ಅವರು ಬಾಹುಬಲಿ ಚಿತ್ರವನ್ನು ಕೈಗೆತ್ತಿಕೊಂಡಾಗ ಕನ್ನಡದಲ್ಲಿ ಕೆಜಿಎಫ್ ಚಿತ್ರದಂಥಾದ್ದೇ ವಾತಾವರಣವಿದ್ದದ್ದು ಸುಳ್ಳಲ್ಲ. ಪ್ರಭಾಸ್ ನಂಥ ಹೀರೋನನ್ನು ಹಾಕಿಕೊಂಡು ರಾಜಮೌಳಿ ಆ ಮಟ್ಟದ ಸಿನಿಮಾ ಮಾಡಬಹುದೆಂಬ ಕಲ್ಪನೆ ಯಾರಲ್ಲಿಯೂ ಇರಲಿಕ್ಕೆ ಸಾಧ್ಯವಿಲ್ಲ. ವರ್ಷಗಟ್ಟಲೆ ಧ್ಯಾನದಂತೆ ಬಾಹುಬಲಿ ಚಿತ್ರವನ್ನು ರೂಪಿಸಿದ್ದ ರಾಜಮೌಳಿ ಕಡೆಗೂ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದರು. ಬಹುಶಃ ಅದು ದಕ್ಷಿಣ ಭಾರತೀಯ ಚಿತ್ರರಂಗದ ಮೊದಲ ಪ್ಯಾನಿಂಡಿಯಾ ಸಿನಿಮಾ. ಕೇವಲ ಇಂಡಿಯಾ ಮಾತ್ರವಲ್ಲದೇ ವಿಶ್ವಾದ್ಯಂತ ಬಾಹುಬಲಿಯ ಖದರ್ ಕಂಡು ಅಚ್ಚರಿಗೊಂಡಿದ್ದರು. ಯಾವ ಬಾಲಿವುಡ್ಡಿನ ಸಿನಿಮಾಇಗಳೂ ಮಾಡಲಾಗದ ದಾಖಲೆಗಳನ್ನು ಬಾಹುಬಲಿ ಚಿತ್ರ ತನ್ನದಾಗಿಸಿಕೊಂಡಿತ್ತು. ಆ ನಂತರ ಬಾಹುಬಲಿ೨ ಸರಣಿಯ ಮೂಲಕವೂ ಅಂಥಾದ್ದೇ ಮಹಾ ಗೆಲುವು ಪುನರಾವರ್ತನೆಯಾಗಿತ್ತು.
ಸೋಶಿಯಲ್ ಮೀಡಿಯಾ ಕಾರಣ

ಪ್ಯಾನಿಂಡಿಯಾ ಮಟ್ಟದಲ್ಲಿ ಕನ್ನಡ ಮತ್ತು ತೆಲುಗಿನಂಥಾ ಭಾಷೆಗಳ ಚಿತ್ರಗಳು ಸದ್ದು ಮಾಡೋದು ಸಾಮಾನ್ಯದ ಸಂಗತಿಯೇನಲ್ಲ. ಇದರ ಹಿಂದೆ ಬಹು ದೊಡ್ಡ ಆರ್ಥೀಕ ವಹಿವಾಟಿದೆ. ಆಯಾ ಚಿತ್ರರಂಗಕ್ಕೂ ಕೂಡಾ ಇದರಿಂದ ಒಂದಷ್ಟು ಲಾಭವಾಗೋದಿದೆ. ಇಲ್ಲಿ ಬೇರ್‍ಯಾವ ಗಿಮಿಕ್ಕುಗಳಿಂದಲೂ ಕೂಡಾ ಜಯಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಒಂದು ಕಾಲದಲ್ಲಿ ಶಾರೂಕ್ ಖಾನ್, ಅಮೀರ್ ಖಾನ್ ಅಮಿತಾಭ್‌ರಂಥಾ ನಟರು ಬಾಲಿವುಡ್ಡಿನ ಪ್ರಭೆಯಲ್ಲಿ ಪ್ಯಾನಿಂಡಿಯಾ ಸ್ಟಾರುಗಳಾಗಿ ಮಿಂಚಿದ್ದರು. ಬೇರ್‍ಯಾವ ನಟರು ಯಾವ ಭಾಷೆಯಲ್ಲಿ ಅದೆಂಥಾದ್ದೇ ಸಾಧನೆ ಮಾಡಿದ್ದರೂ ಕೂಡಾಅವರೆಲ್ಲರು ಬಾಲಿವುಡ್ಡಿನ ಮುಂದೆ ಮಂಕಾದಂತೆಯೇ ಕಾಣಿಸುತ್ತಿದ್ದರು.
ಬಾಲಿವುಡ್ ಹೀರೋಗಳು ಕೂಡಾ ಒಂದಷ್ಟು ಗುಣಮಟ್ಟ ಕಾಯ್ದುಕೊಳ್ಳುತ್ತ, ಒಮ್ಮೊಮ್ಮೆ ಕಳಪೆಯನ್ನೇ ಅದ್ಭುತ ಎಂಬಂತೆ ಬಿಂಬಿಸುತ್ತಾ ಹೇಗೋ ಬಚಾವಾಗುತ್ತಾ ಬಂದಿದ್ದರು. ಆದರೆ ಯಾವಾಗ ಸೋಶಿಯಲ್ ಮೀಡಿಯಾ ಪ್ರವರ್ಧಮಾನಕ್ಕೆ ಬಂತೋ ಆ ಕ್ಷಣದಿಂದಲೇ ಅಸಲೀ ಬಂಡವಾಳ ಬಯಲಾಗಲಾರಂಭಿಸಿತ್ತು. ಯಾಕೆಂದರೆ ಜಗತ್ತಿನ ನಾನಾ ಭಾಷೆಗಳ ಸಿನಿಮಾಗಳು, ಅದರ ಅಪ್‌ಡೇಟುಗಳು ಪ್ರೇಕ್ಷಕರ ಬೆರಳ ಮೊನೆಯಲ್ಲಿ ಕುಣಿದಾಡಲಾರಂಭಿಸಿದ್ದವು. ಅದೆಲ್ಲದರ ಮುಂದೆ ಗುಣಮಟ್ಟವಿಲ್ಲದ ಬಾಲಿವುಡ್ ಸಿನಿಮಾಗಳೇ ಡಲ್ಲು ಅನ್ನುವಂತೆ ಅನೇಕರಿಗೆ ಕಾಣಿಸಲಾರಂಭಿಸಿದ್ದು ಸುಳ್ಳಲ್ಲ. ಸಿನಿಮಾ ನಿರ್ದೇಶನ ಮಾಡೋರಿಗಿಂತಲೂ ಪ್ರೇಕ್ಷಕರೇ ಬುದ್ಧಿವಂತರಾಗಿರುವ ಕಾಲಘಟ್ಟ ಬಾಲಿವುಡ್ಡಿಗೆ ಬಿಗ್ ಶಾಕ್ ಕೊಟ್ಟಿತ್ತು.
ಅದೇನು ಅಂತಿಂಥಾ ಶಾಕ್ ಅಲ್ಲ. ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು, ಅವುಗಳು ನಿರ್ಮಾಣಗೊಳ್ಳುವ ಶ್ರೀಮಂತಿಕೆಯನ್ನು ಕಂಡಿದ್ದ ಪ್ರೇಕ್ಷಕರ ಪಾಲಿಗೆ ಭಾರತದ ಬಾಲಿವುಡ್ ಬಿಗ್ ಬಜೆಟ್ಟಿನ ಸ್ಟಾರ್ ಸಿನಿಮಾಗಳೇ ಸಪ್ಪೆ ಅನ್ನಿಸಲಾರಂಭಿಸಿತ್ತು. ಮಿನಿಮಮ್ ಗ್ಯಾರೆಂಟಿ ಎಂಬಂತಿದ್ದ ಸ್ಟಾರ್ ಸಿನಿಮಾಗಳೂ ಕೂಡಾ ಹೀನಾಯವಾಗಿ ಸೋಲು ಕಾಣಲಾರಂಭಿಸಿದ್ದವು. ಇದೇ ಹೊತ್ತಿನ್ಲ್ಲಿ ಭಾರತದ ಬೇರೆ ಬೇರೆ ಭಾಷೆಗಳತ್ತ ಬಾಲಿವುಡ್ಡಿನ ಸಾಂಪ್ರದಾಯಿಕ ಪ್ರೇಕ್ಷಕರು ಕಣ್ಣರಳಿಸಿ ನೋಡಲಾರಂಭಿಸಿದ್ದರು. ಇದೇ ಹೊತ್ತಿಗೆ ಸರಿಯಾಗಿ ಬಾಹುಬ ಲಿ ಮೂಲಕ ಪ್ಯಾನಿಂಡಿಯಾ ಕಾನ್ಸೆಪ್ಟ್ ಶುರುವಾಗಿತ್ತು. ಅದನ್ನು ಕನ್ನಡದ ಕೆಜಿಇಎಫ್ ಮತ್ತಷ್ಟು ಆವೇಗದಿಂದ ಮುಂದುವರೆಸಿಕೊಂಡು ಹೋಗಿತ್ತು. ಬಹುಶಃ ಸೋಶಿಯಲ್ ಮೀಡಿಯಾ ಮೂಲಕ ಇಂಥಾದ್ದೊಂದು ತಿಳುವಳಿಕೆ ಮೂಡದೇ ಹೋಗಿದ್ದರೆ, ಪ್ರಾದೇಶಿಕ ಮಟ್ಟದಲ್ಲಿ ಸೃಷ್ಟಿಯಾಗಿದ್ದ ಕಾಂತಾರಾ ಚಿತ್ರ ಪ್ಯಾನಿಂಡಿಯಾ ಮೂವಿಗಳಿಗೇ ಸೆಡ್ಡು ಹೊಡೆಯುವಂಥಾ ಗೆಲುವು ಕಾಣೋದು ಕನಸಿನ ಮಾತಾಗುತ್ತಿತ್ತು.
ಇದು ಶಾಪವೂ ಹೌದು

ಮೇಲು ನೋಟಕ್ಕೆ ಇಂಥಾ ಪ್ಯಾನಿಂಡಿಯಾ ಹವಾ ರೋಮಾಂಚಕವಾಗಿ ಕಾಣಿಸೋದರಲ್ಲಿ ಯಾವ ಸಂದೇಹವೂ ಇಲ್ಲ. ಅದರಲ್ಲಿ ಅಸಹಜವಾದದ್ದೇನೂ ಇಲ್ಲ. ಆದರೆ ನಮ್ಮ ಭಾಷೆಯ ಗಡಿ ದಾಟಿದ ಖುಷಿಯಲ್ಲಿ ಅದರಾಚೆಗೆ ದೃಷ್ಟಿ ನೆಟ್ಟು ಕೂತಿದ್ದರೆ, ಹೊರಳಿ ನೋಡುವಷ್ಟರಲ್ಲಿ ನಮ್ಮದೇ ಚಿತ್ರರಂಗ ಅಕ್ಷರಶಃ ಹೈರಾಣಾಗಿರುತ್ತೆ ಯಾಕೆಂದರೆ, ಈ ಪ್ಯಾನಿಂಡಿಯಾ ಸಿನಿಮಾಗಳಿಗೆ ಸಣ್ಣ ಪುಟ್ಟ ಸಿನಿಮಾಗಳನ್ನು, ಹೊಸಾ ಬಗೆಯ ಪ್ರಯೋಗಗಳನ್ನು ಹೊಸಕಿ ಹಾಕುವಂಥಾ ನಿರ್ದಾಕ್ಷಿಣ್ಯ ಗುಣವೂ ಇದೆ. ಬೇರೆ ಭಾಷೆಗಳ ಉದಾಹರಣ ಬೇಡ; ನಮ್ಮದೇ ಕನ್ನಡ ಚಿತ್ರರಂಗದ ಸ್ಥಿತಿಗತಿಗಳನ್ನು ನೋಡಿದರೆ ಪ್ಯಾನಿಂಡಿಯಾ ಸಿನಿಮಾಗಳ ಡಾರ್ಕ್ ಶೇಡ್ ಒಂದರ ಅನಾವರಣವಾಗುತ್ತದೆ.
ಕೆಜಿಎಫ್ ಚಿತ್ರದ ಮಹಾ ಗೆಲುವಿನ ನಂತರ ಕೆಜಿಎಫ್೨ ಬಿಡುಗಡೆಗೊಂಡಿತ್ತು. ಆ ಆವೃತ್ತಿ ಕೂಡಾ ನಿರೀಕ್ಷೆಯಂತೆಯೇ ಕಮಾಲ್ ಮಾಡಿತ್ತು. ಆ ಸಿನಿಮಾ ಬಂದ ನಂತರದಲ್ಲಿ ಕನ್ನಡ ಚಿತ್ರರಂಗ ಹೇಳಿಕೊಳ್ಳಲಾರದ ಸಂಕಟದಿಂದ ನಲುಗಿ ಹೋಗಿತ್ತು. ಯಾಕೆಂದರೆ, ಆ ಶ್ರೀಮಂತಿಕೆಯ ದೃಷ್ಯ ವೈಭವಕ್ಕೆ ಅಡಿಕ್ಟ್ ಆದಂತಿದ್ದ ಪ್ರೇಕ್ಷಕರಿಗೆ ಆ ನಂತರ ಬಂದ ಸಿನಿಮಾಗಳ್ಯಾವುವೂ ರುಚಿಸಿರಲಿಲ್ಲ. ಹೇಳಿಕೇಳಿ ಆಗ ಕೊರೋನಾ ಕಾಲದ ಸ್ಟಾಕ್ ಕ್ಲಿಯರೆನ್ಸ್ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಏನೇನೋ ಸರ್ಕಸ್ಸು ನಡೆಸಿ ಹಾಕಿದ ಬಂಡವಾಳವನ್ನಾದರೂ ವಾಪಾಸು ತೆಗೆಯುವ ಆಸೆಯಿಂದ ಒಂದಷ್ಟು ಸಿನಿಮಾಗಳು ತೆರೆಗಂಡಿದ್ದವು. ಅವ್ಯಾವನ್ನೂ ಪ್ರೇಕ್ಷಕರು ನೋಡುವ ಮನಸು ಮಾಡಲೇ ಇಲ್ಲ.
ಒಂದು ವರ್ಷಗಳ ಕಾಲ ಬಿಡುಗಡೆಯಾದ ಸಿನಿಮಾಗಳೆಲ್ಲ ಸೋಲುತ್ತಲೇ ಸಾಗುವಂತಾಗಿತ್ತು. ಇಂಥಾ ಹೊತ್ತಿನಲ್ಲಿ ಕಾಂತತಾರಾ ತೆರೆಗಂಡು ಅದರಲ್ಲಿನ ಮತ್ತೊಂದು ಬಗೆಯ ವೈಭವಕ್ಕೆ ಪ್ರೇಕ್ಷಕರು ಅಂಟಿಕೊಂಡಿದ್ದರುಇ. ಆ ನಂತರವೂ ಒಂದಷ್ಟು ಕಾಲ ಸೋಲಿನ ಪರ್ವ ಮುಂದುವರೆದಿತ್ತು. ಇದರ ನಡುವೆ ಶಿವಣ್ಣ, ಕಿಚ್ಚ, ದರ್ಶನ್ ಥರದ ಸ್ಟಾರ್ ಸಿನಿಮಾಗಳು ಹೇಗೋ ಬಚಾವಾಗುತ್ತವೆ. ಆದರೆ, ಹೊಸಬರ ಸಿನಿಮಾಗಳು ಉಸಿರಾಡಲು ಯಾವ ಆಸರೆಯೂ ಸಿಗದೆ ಕಂಗಾಲಾಗುತ್ತಿವೆ. ಒಂದು ಸಣ್ಣ ಮಟ್ಟದ ಗೆಲುವೂ ಕೂಡಾ ಮರೀಚಿಕೆಯಾಗಿ ಒಟ್ಟಾರೆ ಸಿನಿಮಾ ರಂಗವೇ ಏದುಸಿರು ಬಿಡುವಂಥಾ ಸ್ಥಿತಿ ನಿರ್ಮಾಣಗೊಂಡಿದೆ.
ಹಾಗಂತ ಇದನ್ನು ಪ್ಯಾನಿಂಡಿಯಾ ಸಿನಿಮಾ ಪ್ರಭಾವ ಅಂತ ಆರೋಪಿಸಿ ಸುಮ್ಮನಾಗುವಂತಿಲ್ಲ. ಇದರಲ್ಲಿ ಪ್ರೇಕ್ಷಕರ ಪಾಲೂ ಇದ್ದೇ ಇದೆ. ಒಂದು ಬಗೆಯ ಸಿನಿಮಾಗಳಿಗೆ ಅಡಿಕ್ಟ್ ಆಗಿ ಅದೇ ಧಾಠಟಿಯ ಸಿನಿಮಾಗಳಿಗಾಗಿ ಹಂಬಲಿಸೋದು ತರವಲ್ಲ. ಯಾಕೆಂದರೆ ದೊಡ್ಡ ಮನಸು ಮಾಡಿ ತಾವು ಗೆಲ್ಲಿಸುವ ಸಣ್ಣ ಸಿನಿಮಾಗಳ ಮೂಲಕವೇ ದೊಡ್ಡ ಪ್ರತಿಭೆಗಳು, ಸ್ಟಾರ್‌ಗಳು ಹುಟ್ಟಿಕೊಳ್ಳುತ್ತಾರೆ. ಹಾಗೆ ನೋಡಿದರೆ ಖುದ್ದು ಯಶ್ ಅವರೇ ನಟಿಸಿರುವ ಒಂದಷ್ಟು ಸಇನಿಮಾಗಳೂ ಕೂಡಾ ಕೆಜಿಎಫ್ ಮುಂದೆ ಸಪ್ಪೆ ಅನ್ನಿಸಬಹುದು. ಹಾಗೊಂದು ವೇಳೆ ಯಶ್ ನಟಿಸಿದ್ದ ಅಷ್ಟೂ ಸಿನಿಮಾಗಳನ್ನು ನೋಡಿ ಕೈ ಹಿಡಿಯದೇ ಹೋಗಿದ್ದರೆ, ಅವರು ಕೆಜಿಎಫ್ ಮೂಲಕ ಕಮಾಠಲ್ ಮಾಡೋದಕ್ಕೆ, ಪ್ಯಾನಿಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಬರೀ ಸ್ಟಾರ್ ಗಳ ಸಿನಿಮಾಗಳು, ಪ್ಗಯಾನಿಂಡಿಯಾ ಸಿನಿಮಾಗಳಿಂದಲೇ ಚಿತ್ರರಂಗ ಉದ್ದಾರವಾಗುತ್ತದೆ ಅನ್ನೋದು ಭಮೆಯಾಗುತ್ತದೆ. ಯಾಕೆಂದರೆ, ವರ್ಷವಿಡೀ ಸಿನಿಮಾರಂಗಗ ಥರ ಥರದ ಗೆಲುವುಗಳಿಂದ ಎಂಗೇಜ್ ಆಗಿರಬೇಕಾಗುತ್ತದೆ. ಎಲ್ಲ ಬಗೆಯ ಸಿನಿಮಾಗಳನ್ನೂ ನೋಡಿ ಬೆನ್ತಟ್ಟುವ ಮನಸನ್ನು ಪ್ರೇಕ್ಷಕರು ಮಾಡದೇ ಹೋದರೆ ಸಿದ್ಧ ಸೂತ್ರಗಳ ಸರಪಳಿಗೆ ಸಿಕ್ಕು ಚಿತ್ರರಂಗ ಉಸಿರುಗಟ್ಟಿ ಒದ್ದಾಡುತ್ತದೆ. ಸುಮ್ಮನೊಮ್ಮೆ ಯೋಚಿಸಿ ನೋಡಿ. ಹೊಸತನ ಇಲ್ಲದೇ ಹೋದರೆ ಅದೆಂಥಾ ವೈಭವದಿಂದ ಸಿದ್ಧಗೊಂಡ ಪ್ಯಾನಿಂಡಿಯಾ ಸಿನಿಮಾಗಳಾದರೂ ಬೋರು ಹೊಡೆಸುತ್ತವೆ. ಅಂಥಾ ಕಾಲದಲ್ಲಿ ಹೊಸಾ ಹರಿವು ಸಾಧ್ಯವಾಗೋದು ಹೊಸಾ ಆಲೋಚನೆಗಳು, ಪ್ರಯೋಗಗಳು ಮಾತ್ರ. ಅಂಥಾ ಹೊಸತನ ಹುಟ್ಟಿಕೊಳ್ಳೋದು ಸಣ್ಣ ಸಿನಿಮಾಗಳ ಮೂಲಕವೇ. ನೀವು ಅವುಗಳನ್ನು ಕೈ ಹಿಡಿಯದಿದ್ದರೆ ಎಷ್ಟೋ ಪ್ರತಿಭೆಗಳು ಅನಿವಾರ್ಯವಾಗಿ ಬೇರೆ ಕಡೆ ಹೊರಳಿಕೊಳ್ಳಬೇಕಾಗುತ್ತೆ. ಪ್ಯಾನಿಂಡಿಯಾ ಭ್ರಮೆಯಲ್ಲಿ ನೀವು ಗೆಲ್ಲಿಸುತ್ತಾ ಬಂದ ಮಂದಿ ಖಾಲಿಯಾದರೆ ಚಿತ್ರರಂಗ ನಿಕಾಲಿಯಾಗುತ್ತೆ. ಈ ನಿಟ್ಟಿನಲ್ಲಿ ಸಣ್ಣ ಸಿನಿಮಾಗಳನ್ನು ಕೂಡಾ ಕೈ ಹಿಡಿದು ಪ್ರೋತ್ಸಾಹಿಸೋ ಗುಣವನ್ನು ಅಗತ್ಯವಾಗಿ ಬೆಳೆಸಿಕೊಳ್ಳಬೇಕಿದೆ.