ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಪರ್ಯಾಯ’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಅಂಧ, ಕಿವುಡ ಮತ್ತು ಮೂಗ ಹೀಗೆ ಮೂವರು ಅಂಗವಿಕಲ ಸ್ನೇಹಿತರ ಜೀವನದಲ್ಲಿ ನಡೆಯುವ ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ತಯಾರಾಗಿರುವ ‘ಪರ್ಯಾಯ’ ಸಿನಿಮಾಕ್ಕೆೆ ರಮಾನಂದ ಮಿತ್ರ ನಿರ್ದೇಶನ ಮಾಡಿದ್ದಾರೆ. ‘ಮಮತಾ ಕ್ರಿಯೇಶನ್ಸ್’ ಮೂಲಕ ಬೆಳಗಾವಿ ಮೂಲದ ರಾಜಕುಮಾರ್ ಹಾಗೂ ಶ್ರೀಮತಿ ಇಂದುಮತಿ ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ‘ಪರ್ಯಾಯ’ ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಟೀಸರ್ ಮತ್ತು ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ.
‘ಪ್ರತಿಯೊಬ್ಬರೂ ಜೀವನದಲ್ಲಿ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಹೋಗುತ್ತೇವೆ. ಅದು ಸರಿಯಾಗಿರದಿದ್ರೆೆ ಏನಾಗುತ್ತೆೆ ಎಂಬುದು ಈ ಚಿತ್ರದ ಕಥೆ. ಮೂರು ಪಾತ್ರಗಳ ಮೂಲಕ ಮನುಷ್ಯನ ಆಸೆಯನ್ನು ತೋರಿಸಲಾಗಿದ್ದು, ಸಸ್ಪೆನ್ಸ್-ಥ್ರಿಲ್ಲರ್ ಕಥೆಯೂ ಸಿನಿಮಾದಲ್ಲಿದೆ. ಮೂವರು ಅಂಗವಿಕಲರು ತಮ್ಮ ಬದುಕು ಕಟ್ಟಿಕೊಳ್ಳಲು ಏನೆಲ್ಲ ಹರಸಾಹಸ ಮಾಡುತ್ತಾರೆ. ಅವರ ಜೀವನ ಮುಂದೆ ಏನೆಲ್ಲ ತಿರುವು ಪಡೆಯಲಿದೆ ಎಂಬುದನ್ನು ಈ ಸಿನಿಮಾದ ಮೂಲಕ ಹೇಳಿದ್ದೇವೆ. ಕಥೆಯಲ್ಲಿ ನಾಯಕಿಯ ಪಾತ್ರವಿಲ್ಲ’ ಎಂಬುದು ಸಿನಿಮಾದ ಬಗ್ಗೆ ಚಿತ್ರತಂಡದ ಮಾತು.
ಬೆಳಗಾವಿ ಜಿಲ್ಲೆೆಯ ಸುತ್ತಮುತ್ತ ‘ಪರ್ಯಾಯ’ ಸಿನಿಮಾದ ಹೆಚ್ಚಿನ ಭಾಗದ ಶೂಟಿಂಗ್ ಮಾಡಲಾಗಿದ್ದು ಸಿನಿಮಾದಲ್ಲಿ ಬೆಳಗಾವಿ ಮೂಲದ ರಾಜಕುಮಾರ್ ಅಂಧನ ಪಾತ್ರದಲ್ಲಿ, ಮುರುಗೇಶ್ ಶಿವಪೂಜಿ ಕಿವುಡನ ಪಾತ್ರದಲ್ಲಿ ಮತ್ತು ರಂಜನ ಕುಮಾರ್ ಮೂಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಜಯಂತಿ ರೇವಡಿ, ಅರ್ಚನಾ ಶೆಟ್ಟಿ, ಪ್ರಿಯಾ ಕೊಠಾರಿ, ಭೀಮಾನಾಯಕ್, ಸುರೇಶ್ ಬೆಳಗಾವಿ, ರೋಹನ್ ಕುಬ್ಸದ್ ಮುಂತಾದವರು ‘ಪರ್ಯಾಯ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಎ. ಟಿ. ರವೀಶ್ ರಾಮ್ ಸಂಗೀತವಿದ್ದು, ಅಜಯ್ ವಾರಿಯರ್, ಮೆಹಬೂಬ್ ಸಾಬ್, ನದಿರಾ ಬಾನು, ಲೆಮನ್ ಪರಶುರಾಮ್ ಮೊದಲಾದ ಗಾಯಕರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ‘ಪರ್ಯಾಯ’ ಸಿನಿಮಾಕ್ಕೆೆ ಜಿ. ರಂಗಸ್ವಾಮಿ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನವಿದೆ. ಇದೇ ಸೆಪ್ಟೆೆಂಬರ್ ತಿಂಗಳಿನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.