Pawan Kalyan: ಪವನ್ ಕಲ್ಯಾಣ್(Pawan Kalyan) ಅಭಿನಯದ ‘ಹರಿ ಹರ ವೀರಮಲ್ಲು'(Hari Hara Veera Mallu) ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಪವರ್ ಫುಲ್ ಟೀಸರ್ ಕಂಡು ಪವರ್ ಸ್ಟಾರ್ ಅಭಿಮಾನಿ ಬಳಗ ಥ್ರಿಲ್ ಆಗಿದೆ. ಹೋರಾಟಗಾರನಾಗಿ ಕಾಣಿಸಿಕೊಂಡಿರುವ ಗಬ್ಬರ್ ಸಿಂಗ್, ಎಫೆಕ್ಟಿವ್ ಆಗಿರುವ ಟೀಸರ್ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದೆ.
‘ಹರಿ ಹರ ವೀರಮಲ್ಲು’ ಸೆಟ್ಟೇರಿ ಮೂರು ವರ್ಷಗಳೇ ಕಳೆದಿದೆ ಸಿನಿಮಾ ಬಗ್ಗೆ ಅಪ್ಡೇಟ್ ಸಿಗದೆ ಪವರ್ ಸ್ಟಾರ್ ಭಕ್ತಗಣ ತಲೆ ಕೆಡಿಸಿಕೊಂಡಿದ್ರು. ಆದ್ರೀಗ ಟೀಸರ್ ಮೂಲಕ ಡಬಲ್ ಧಮಾಕ ನೀಡಿದೆ ಚಿತ್ರತಂಡ. ಈ ಸೀಕ್ವೆಲ್‌ನಲ್ಲಿ ತೆರೆ ಕಾಣುತ್ತಿದೆ. ಮೊದಲ ಸೀಕ್ವೆಲ್‌ಗೆ ‘ಸ್ವ್ಯಾರ್ಡ್ VS ಸ್ಪಿರಿಟ್’ ಎಂದು ಹೆಸರಿಟ್ಟಿರುವ ಚಿತ್ರತಂಡ ಇದೇ ವರ್ಷ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಧರ್ಮಕ್ಕಾಗಿ ಹೋರಾಡಲು ಹರಿಹರ ವೀರಮಲ್ಲು ಟೊಂಕ ಕಟ್ಟಿ ನಿಂತಿದ್ದು, ಟೀಸರ್ ತುಣುಕಿನಲ್ಲಿ ಕಾಣಸಿಗುವ ಅದ್ದೂರಿತನ, ತಾರಾಬಳಗ, ಮೇಕಿಂಗ್ ಎಲ್ಲದಕ್ಕಿಂತ ಹೆಚ್ಚಾಗಿ ಪವನ್ ಕಲ್ಯಾಣ್(Pawan Kalyan) ಸ್ವ್ಯಾಗ್ ಸಖತ್ ಕಿಕ್ ನೀಡುತ್ತಿದೆ. ಟೀಸರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಮೊಘಲ್ ಆಳ್ವಿಕೆ ಕಾಲದಲ್ಲಿ ನಡೆದ ಘಟನೆ ಆಧರಿಸಿದ ಚಿತ್ರದಲ್ಲಿ ಪೌರಾಣಿಕ ವೀರಮಲ್ಲು ಜೀವನವನ್ನು ತೆರೆದಿಡಲಾಗಿದೆ. ಆಕ್ಷನ್ ಪವರ್ ಪ್ಯಾಕ್ಡ್ ಕಥಾಹಂದರ ಒಳಗೊಂಡ ಚಿತ್ರಕ್ಕೆ ಕ್ರಿಶ್ ಜಗರ್ಲಮುಡಿ(Krish Jagarlamudi) ಹಾಗೂ ಜ್ಯೋತಿ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಹರಿ ಹರ ವೀರಮಲ್ಲು(Hari Hara Veera Mallu) ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಮೊಘಲ್ ಚಕ್ರವರ್ತಿಯಾಗಿ ಬಾಬಿ ಡಿಯೋಲ್ ಮಿಂಚಿದ್ದಾರೆ. ನಟಿ ನಿಧಿ ಅಗರ್ವಾಲ್, ನಾಸರ್, ಸುನಿಲ್, ರಘುಬಾಬು, ಸುಬ್ಬರಾಜು, ನೋರಾ ಫತೇಹಿ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.