Pooja Hegde: ಸೌತ್ ಸಿನಿ ರಂಗದ ಚೆಂದದ ಚೆಲುವೆ ಪೂಜಾ ಹೆಗ್ಡೆ(Pooja hegde).. ಸೌತ್ ಹಾಗೂ ಬಿಟೌನ್ ಅಂಗಳದ ಸ್ಟಾರ್ ನಟರೊಂದಿಗೆ ಮಿಂಚಿರುವ ಈ ನಟಿಗೆ ಕಳೆದ ಎರಡ್ಮೂರು ವರ್ಷದಿಂದ ನಸೀಬು ಕೈಕೊಟ್ಟಿದೆ. ಸಿನಿಮಾಗಳಿಲ್ಲದೆ ಖಾಲಿ ಕೂತಿದ್ದಾಳೆ. ಆಗಾಗ ಬಿಟೌನ್ ಕದಾ ತಟ್ಟಿದರೂ ಅಲ್ಲಿಯೂ ಗೆಲುವು ಮರೀಚಿಕೆಯಾಗಿದೆ. ಬುಟ್ಟಾಬೊಮ್ಮಳ ಮುಂದಿನ ಸಿನಿಮಾ ಯಾವುದಮ್ಮ ಅನ್ನೋವಾಗಲೇ ಸ್ಟಾರ್ ನಟನಿಗೆ ನಾಯಕಿಯಾಗಿದ್ದಾಳೆ.
ಪೂಜಾ ಹೆಗ್ಡೆ(Pooja Hegde) ನಟನೆ, ಡಾನ್ಸ್, ಅಂದ-ಚೆಂದ ಎಲ್ಲದರಲ್ಲೂ ಪರ್ಫೆಕ್ಟ್. ಈಕೆಯ ಅಭಿಮಾನಿ ಬಳಗವೂ ದೊಡ್ದಿದಿದೆ. ಆದ್ರೆ ಈ ನಡುವೆ ಅದೃಷ್ಟ ಕೈ ಕೊಟ್ಟಿದೆ. ಸ್ಟಾರ್ ಸಿನಿಮಾಗಳಲ್ಲಿ ಮಿಂಚಿದ್ದ ನಟಿಗೆ ಒಂದೂ ಸ್ಟಾರ್ ಸಿನಿಮಾಗಳು ಸಿಗದೇ ಕಸಿವಿಸಿಯಲ್ಲಿದ್ಲು. ಆದ್ರೀಗ ಮತ್ತೆ ಟ್ರ್ಯಾಕ್‌ಗೆ ಬರುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಸೀದ ಕಾಲಿವುಡ್ ಅಂಗಳಕ್ಕೆ ಹಾರಿರುವ ಕರಾವಳಿ ಬೆಡಗಿ ನಟ ಸೂರ್ಯ ಸಿನಿಮಾಗೆ ನಾಯಕಿಯಾಗಿದ್ದಾಳೆ.
ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ಸೂರ್ಯ(Surya) 44ನೇ ಸಿನಿಮಾ ಮೂಡಿ ಬರ್ತಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಸೂರ್ಯನಿಗೆ ಜೋಡಿಯಾಗ್ತಿದ್ದಾಳೆ. ಕಂಗುವಾ(Kanguva) ಶೂಟಿಂಗ್ ಮುಗಿಸಿರುವ ಸೂರ್ಯ ಕಾರ್ತಿಕ್ ಸುಬ್ಬರಾಜು ತಂಡ ಶೀಘ್ರದಲ್ಲೇ ಸೇರಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಜೋರಾಗಿ ನಡೆಯುತ್ತಿವೆ.