Jr.NTR: ಜೂ.ಎನ್‌ಟಿಆರ್(Jr.NTR) ‘ದೇವರ’(Devara) ಸಿನಿಮಾ ಸೌತ್ ಸಿನಿದುನಿಯಾದಿಂದ ಹಿಡಿದು, ನಾರ್ತ್ ಅಂಗಳದಲ್ಲೂ ಸಖತ್ ಸೌಂಡ್ ಮಾಡ್ತಿದೆ. ಚಿತ್ರೀಕರಣದ ಅಂತಿಮ ಹಂತ ತಲುಪಿರುವ ಸಿನಿಮಾತಂಡವೀಗ ಭರ್ಜರಿ ಡಾನ್ಸ್ ನಂಬರ್ ಚಿತ್ರೀಕರಣಕ್ಕೆ ಸಿದ್ದತೆ ನಡೆಸುತ್ತಿದೆ. ಈ ಸಾಂಗ್‌ನಲ್ಲಿ ಮ್ಯಾನ್ ಆಫ್ ಮಾಸಸ್ ಜೊತೆ ಹೆಜ್ಜೆ ಹಾಕೋಕೆ ಸೌತ್‌ನ ಇಬ್ಬರೂ ಸುಂದರಿಯರು ಕ್ಯೂನಲ್ಲಿ ನಿಂತಿದ್ದಾರಂತೆ.
ಬಿಡುಗಡೆಯ ಮುನ್ನವೇ ದೇವರ ಕ್ರೇಜ಼್ ಅಭಿಮಾನಿಗಳಲ್ಲಿ ಕಿಕ್ಕೇರಿಸಿದೆ. ಪ್ರಿರಿಲೀಸ್ ಬ್ಯುಸಿನೆಸ್‌ನಲ್ಲಿ ದಾಖಲೆ ಬರೆಯುತ್ತಿರುವ ಜೂ. ಎನ್‌ಟಿಆರ್(Jr.NTR) ಸಿನಿಮಾ ಅಕ್ಟೋಬರ್‌ನಲಿ ದೇಶಾದ್ಯಂತ ಬಿಡುಗಡೆ ಕಾಣುತ್ತಿದೆ. ಚಿತ್ರದಲ್ಲಿ ಭರ್ಜರಿ ಡಾನ್ಸ್ ನಂಬರ್ ಸಾಂಗ್ ಇರಲಿದ್ದು, ‘ಬುಟ್ಟಾಬೊಮ್ಮ’ ಖ್ಯಾತಿಯ ಪೂಜಾ ಹೆಗ್ಡೆ(Pooja Hegde), ‘ಮಗಧೀರ’ ಬೆಡಗಿ ಕಾಜಲ್ ಅಗರರ್ವಾಲ್(Kajal Aggarwal) ಈ ಇಬ್ಬರಲ್ಲಿ ಒಬ್ಬರು ಜೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಲಿದ್ದಾರಂತೆ. ಟಾಲಿವುಡ್ ಮೂಲಗಳ ಪ್ರಕಾರ ಈ ರೇಸ್‌ನಲ್ಲಿ ಪೂಜಾ ಹೆಗ್ಡೆ ಸೆಲೆಕ್ಟ್ ಆಗಿದ್ದಾರೆ ಎನ್ನಲಾಗ್ತಿದೆ.
ಜೂ.ಎನ್‌ಟಿಆರ್(Jr.NTR) ಡಾನ್ಸ್ ಹೇಗಿರುತ್ತೆ, ಎನರ್ಜಿ ಎಷ್ಟಿರುತ್ತೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಅದರಲ್ಲೂ ಡಾನ್ಸಿಂಗ್ ನಂಬರ್ ಅಂದ್ರೆ ಎನರ್ಜಿ ನೆಕ್ಸ್ಟ್ ಲೆವೆಲ್‌ನಲ್ಲಿರುತ್ತೆ. ಈ ಎನರ್ಜಿಗೆ ಅನಿರುದ್ ಮ್ಯೂಸಿಕ್ ಮಸ್ತಿ ಮಿಕ್ಸ್ ಆದ್ರೆ ನೆಸ್ಟ್ ಲೆವೆಲ್ ಕ್ರೇಜ಼್ ಇರುತ್ತೆ. ಇದೀಗ ಈ ಹೈವೊಲ್ಟೇಜ್ ಸಾಂಗ್‌ನಲ್ಲಿ ಜಿಗೇಲು ರಾಣಿ ಆಗಮನ ಕನ್ಫರ್ಮ್ ಆದ್ರೆ ಎಕ್ಸ್ಪೆಕ್ಟೇಶನ್ ಇನ್ನೂ ಹೆಚ್ಚಾಗಲಿದೆ.
ಹಾಡಿನ ಚಿತ್ರಕರಣ ಹೊರತು ಪಡಿಸಿದ್ರೆ ‘ದೇವರ’(Devara) ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಅಕ್ಟೋಬರ್ 10ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ನಿರ್ದೇಶಕ ಕೊರಟಾಲ್ ಶಿವ(Koratala siva) ಚಿತ್ರದಲ್ಲಿ ಡಾನ್ಸಿಂಗ್ ನಂಬರ್ ಇಟ್ಟಿರೋದು ಡಾನ್ಸಿಂಗ್ ಮೇನಿಯಾದಲ್ಲಿ ಕುಣಿದಾಡಲು ಭಕ್ತಗಣ ಕಾಯುತ್ತಿದ್ದಾರೆ.