Prabhas: ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ನಂತರ ಸೋಲುಗಳನ್ನು ಕಂಡ ಪ್ರಭಾಸ್ ‘ಸಲಾರ್’(Salaar) ಮೂಲಕ ಕೊಂಚ ರಿಲೀಫ್ ಕಂಡಿದ್ದಾರೆ. ಡಾರ್ಲಿಂಗ್ ಕೈತುಂಬ ಸಿನಿಮಾಗಳಿದ್ದು, ಅದರಲ್ಲಿ ‘ದಿ ರಾಜಾ ಸಾಬ್’(The Raja Saab) ಸಿನಿಮಾ ಗಮನ ಸೆಳೆಯುತ್ತಿದೆ. ಇದೀಗ ಈ ಚಿತ್ರಕ್ಕೆ ಬಿಟೌನ್ ಸಂಜು ಬಾಬಾ ಎಂಟ್ರಿಯಾಗಿದೆ.
ಹೌದು, ‘ದಿ ರಾಜಾ ಸಾಬ್’(The Raja Saab)ಗೆ ಅಧೀರ ಅಲಿಯಾಸ್ ಸಂಜಯ್ ದತ್(Sanjay Dutt) ಎಂಟ್ರಿಯಾಗಿದೆ. ಈ ಸುದ್ದಿ ಸಿನಿಮಾ ಮೇಲೆ ಅತಿಯಾದ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಕೆಜಿಎಫ್ ಸಿನಿಮಾ ಮೂಲಕ ಸೌತ್ ಸಿನಿಮಾಗಳಲ್ಲಿ ನಟಿಸಲು ಸಂಜು ಬಾಬಾ ಎಕ್ರೈಟ್ ಆಗಿದ್ದಾರೆ. ಇದೀಗ ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾ ಸ್ಕ್ರಿಪ್ಟ್ ಕೇಳಿ ಥ್ರಿಲ್ ಆಗಿ ಸ್ಪೆಷಲ್ ಪಾತ್ರವೊಂದನ್ನು ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಚಿತ್ರದಲ್ಲಿ ಸಂಜು ಬಾಬಾ(Sanjay Dutt) ಹೊಸ ಲುಕ್‌ನಲ್ಲಿ ಕಾಣಸಿಗಲಿದ್ದಾರೆ ಎನ್ನಲಾಗ್ತಿದೆ. ಪ್ರಭಾಸ್ ಅಜ್ಜನ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ಅಧೀರ ಘೋಸ್ಟ್ ಅವತಾರ ತಾಳಲಿದ್ದಾರೆ. ಈ ಕ್ಯಾರೆಕ್ಟರ್ ಸಿನಿಮಾದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆಯಂತೆ. ಚಿತ್ರತಂಡ ಈ ಬಗ್ಗೆ ಅಧೀಕೃತ ಘೋಷಣೆ ಮಾಡದಿದ್ದರು, ಚಿತ್ರತಂಡದಿಂದ ತೇಲಿ ಬಂದ ಈ ಸುದ್ದಿ ಟಿಟೌನ್ ಅಂಗಳವನ್ನು ಥ್ರಿಲ್ ಆಗಿಸಿದೆ. ಸದ್ಯ ಪುರಿ ಜಗನ್ನಾಥ್ ನಿರ್ದೇಶನದ ಡಬಲ್ ಇಸ್ಮಾರ್ಟ್ ಸಿನಿಮಾದಲ್ಲಿ ಸಂಜು ಬಾಬಾ ಬ್ಯುಸಿಯಾಗಿದ್ದು, ಚಿತ್ರೀಕರಣ ಮುಗಿಯುತ್ತಿದ್ದಂತೆ ಪ್ರಭಾಸ್ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ.
ಯುವ ನಿರ್ದೇಶಕ ಮಾರುತಿ ಪ್ರಭಾಸ್(Prabhas)ಗೆ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಶೂಟಿಂಗ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಪ್ರಭಾಸ್ ನಯಾ ಅವತಾರ ಕೂಡ ಗಮನ ಸೆಳೆದಿದೆ. ಹಾರಾರ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಿಧಿ ಅಗರ್ವಾಲ್, ಮಾಳವಿಕ ಮೋಹನನ್, ರಿದ್ಧಿ ಕುಮಾರ್, ಯೋಗಿ ಬಾಬು, ವರಲಕ್ಷ್ಮಿ ಶರತ್ ಕುಮಾರ್ ಒಳಗೊಂಡ ತಾರಾಗಣವಿದೆ. ತಮನ್.ಎಸ್(Thaman S) ಮ್ಯೂಸಿಕ್ ಚಿತ್ರಕ್ಕಿದೆ.