Kannappa: ವಿಷ್ಣು ಮಂಚು(Vishnu Manchu) ಅಭಿನಯದ ‘ಕಣ್ಣಪ್ಪ’(Kannappa) ಸಿನಿಮಾ ಸೌತ್ ದುನಿಯಾದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಸೆಟ್ಟೇರಿದ ದಿನದಿಂದ ಬಝ್‌ನಲ್ಲಿದೆ ಈ ಸಿನಿಮಾ. ಇದೀಗ ಈ ಚಿತ್ರದ ಪಾತ್ರಗಳ ಬದಲಾವಣೆ ಸುದ್ದಿ ಕೇಳಿ ಬರ್ತಿದ್ದು, ಪ್ರಭಾಸ್(Prabhas) ಪಾತ್ರವನ್ನು ಬದಲಾಯಿಸುವಂತೆ ಬೇಡಿಕೆ ಇಡಲಾಗಿದೆಯಂತೆ.
ಸದ್ಯ ಸಿನಿಜಗತ್ತು ಮೈತಾಲಜಿ ಸಿನಿಮಾ ನಿರ್ಮಾಣ ಕಡೆ ಹೊರಳಿದೆ ‘ಕಣ್ಣಪ್ಪ’(Kannappa) ಕೂಡ ಇದಕ್ಕೆ ಹೊರತಾಗಿಲ್ಲ. ಫ್ಯಾಂಟಸಿ ಡ್ರಾಮ ಸಬ್ಜೆಕ್ಟ್ ಒಳಗೊಂಡ ಚಿತ್ರ ವಿಷ್ಣು ಮಂಚು(Vishnu Manchu) ಕೆರಿಯರ್‌ನ ಡ್ರೀಮ್ ಪ್ರಾಜೆಕ್ಟ್. ಚಿತ್ರದಲ್ಲಿ ಪ್ರಭಾಸ್ ಸೇರಿದಂತೆ ಸೌತ್ ಸಿನಿರಂಗದ ದಿಗ್ಗಜರು ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಇದೀಗ ಕಣ್ಣಪ್ಪ ಚಿತ್ರತಂಡದಲ್ಲಿ ಕೊಂಚ ಬದಲಾವಣೆ ಆಗುತ್ತಿದೆ ಎನ್ನಲಾಗ್ತಿದೆ. ಈ ಮೊದಲು ನೀಡಿದ್ದ ಪಾತ್ರಕ್ಕೆ ಬದಲಾಗಿ ಬೇರೆ ಪಾತ್ರ ನೀಡುವಂತೆ ಪ್ರಭಾಸ್(Prabhas) ತಂಡ ಚಿತ್ರತಂಡದ ಮುಂದೆ ಬೇಡಿಕೆ ಇಟ್ಟಿದೆಯಂತೆ. ಇದಕ್ಕೆ ಕಾರಣ ‘ಕಲ್ಕಿ’(Kalki) ಸಿನಿಮಾ ಎನ್ನಲಾಗ್ತಿದೆ. ‘ಕಲ್ಕಿ’ ಸಿನಿಮಾದಲ್ಲಿ ಪ್ರಭಾಸ್ ಮಹಾ ವಿಷ್ಣು ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲೂ ಶಿವನ ಪಾತ್ರವೇ ಆದರೆ ಭಿನ್ನ ಎನಿಸೋದಿಲ್ಲ ಆದ್ರಿಂದ ಬೇರೆ ಪಾತ್ರ ನೀಡುವಂತೆ ಭೇಡಿಕೆಯಿಟ್ಟಿದೆಯಂತೆ.
ಟಾಲಿವುಡ್‌ನಲ್ಲಿ ಪ್ರಚಲಿತದಲ್ಲಿರುವ ಮಾಹಿತಿ ಪ್ರಕಾರ ನಂದೀಶ್ವರನ ಪಾತ್ರಕ್ಕೆ ಪ್ರಭಾಸ್(Prabhas) ಬಣ್ಣ ಹಚ್ಚಲಿದ್ದು, ಅಕ್ಷಯ್ ಕುಮಾರ್(Akshay Kumar) ಶಿವನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಬರ್ತಿರೋ ಚಿತ್ರದಲ್ಲಿ ‘ಕಣ್ಣಪ್ಪ’ನಾಗಿ ವಿಷ್ಣು ಮಂಚು ಮಿಂಚಲಿದ್ದಾರೆ.