Prabhas: ಸಿನಿ ರಸಿಕರು ಕಲ್ಕಿ(Kalki) ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಪ್ರಭಾಸ್(Prabhas) ಅಭಿನಯದ ಈ ಚಿತ್ರ ಭಾರತೀಯ ಚಿತ್ರರಂಗದ ದಿಗ್ಗಜರನ್ನು ತಾರಾಬಳಗದಲ್ಲಿ ಒಳಗೊಂಡಿದೆ. ಒಂದಾದ ಮೇಲೊಂದು ಅಪ್ಡೇಟ್ ನೀಡಿ ನೋಡುಗರ ಗಮನ ಸೆಳೆದ ಈ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ.
ಇಡೀ ದೇಶ, ಪ್ರಭಾಸ್(Prabhas) ನಟನೆಯ ಕಲ್ಕಿ (Kalki) ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ನೀಡುತ್ತಾ ಬಂದಿರುವ ಕಲ್ಕಿ ಸಿನಿಮಾ ತಾರಾಗಣದ ವಿಚಾರದಲ್ಲೂ ಕುತೂಹಲ ಮೂಡಿಸಿದೆ. ಅದರಂತೆ ಟ್ರೇಲರ್ ಮೂಲಕ ಮತ್ತಷ್ಟು ರೋಚಕತೆ ನೀಡಲು ಸಿದ್ದವಾಗಿದೆ. ಹೈವೋಲ್ಟೇಜ್ ಸಿನಿಮಾದ ಟ್ರೇಲರ್ ಜೂನ್ 10ರಂದು ಬಿಡುಗಡೆಯಾಗುತ್ತಿದೆ.
ಅಮಿತಾಭ್ ಬಚ್ಚನ್, ಕಮಲ್ ಹಾಸನ್(Kamal haasan), ಪ್ರಭಾಸ್, ದೀಪಿಕಾ ಪಡುಕೋಣೆ(Deepika Padukone) ಮತ್ತು ದಿಶಾ ಪಟಾನಿ ಸೇರದಂತೆ ಬಹುದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಜಗತ್ತಿನಾದ್ಯಂತ ಜೂನ್ 27 ಸಿನಿಮಾ ಬಿಡುಗಡೆ ಆಗಲಿದೆ.