Prabhas: ಕಲ್ಕಿ(Kalki), ಪ್ರಭಾಸ್(Prabhas) ಅಭಿನಯದ ಬಿಗ್ ಬಜೆಟ್ ಸಿನಿಮಾ. 600 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಜೂನ್ ೨೭ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಪ್ರಮೋಶನ್ ಕೂಡ ಭರ್ಜರಿಯಾಗಿ ಶುರು ಮಾಡಿದೆ ಚಿತ್ರತಂಡ. ಹೈದ್ರಾಬಾದ್‌ನಲ್ಲಿ ಬಹು ದೊಡ್ಡ ಇವೆಂಟ್ ನಡೆಸಿ ಚಿತ್ರತಂಡ ಎಲ್ಲರ ಅಟೆಂಶನ್ ಗ್ರ್ಯಾಬ್ ಮಾಡಿದೆ. ಇದೀಗ ಪ್ರಭಾಸ್ ಜೊತೆ ಕಾರ್ ಕೂಡ ಹೈಲೈಟ್ ಆಗಿದ್ದು, ಕಲ್ಕಿ ಸಿನಿಮಾದಲ್ಲಿ ಬಳಕೆಯಾದ ಈ ಕಾರ್ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ.
ಮಲ್ಟಿಸ್ಟಾರಾರ್ ಕಲ್ಕಿ(Kalki) ಇಂಡಿಯನ್ ಸಿನಿಲೋಕದಲ್ಲಿ ಸಖತ್ ಬಝ್ ಕ್ರಿಯೇಟ್ ಮಾಡಿದೆ. ಹೌದು. ಬಹುಕೋಟಿ ವೆಚ್ಚದ, ಬಹು ತಾರಾಗಣದ ಸಿನಿಮಾದಲ್ಲಿ. ಈ ಚಿತ್ರಕ್ಕಾಗಿ ಸ್ಪೆಷಲ್ ಕಾರ್ ಬಳಕೆ ಮಾಡಿಕೊಳ್ಳಲಾಗಿದೆ. ಹೈದ್ರಾಬಾದ್‌ನಲ್ಲಿ ನಡೆದ ಪ್ರೆಸ್‌ಮೀಟ್‌ನಲ್ಲಿ ಚಿತ್ರತಂಡ ಈ ಕಾರ್ ಹಾಗೂ ಇದರ ವಿಶೇಷತೆ ರಿವೀಲ್ ಮಾಡಿದೆ. ಎಲ್ಲರ ಕಣ್ಣು ಈ ಕಾರ್‌ನತ್ತ ಹರಿದಿದೆ. ಹಲವು ಆಟೋ ಮೊಬೈಲ್ ವಿಮರ್ಶಕರು ಕಾರ್ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಕಾರ್ ಪ್ರಿಯರ ಗಮನವೀಗ ಬರೋಬ್ಬರಿ ಐದು ಕೋಟಿ ಕಾರ್‌ನತ್ತ ಬಿದ್ದಿದೆ. ಚಿತ್ರತಂಡ ಕೂಡ ಸಿನಿಮಾ ಪ್ರಚಾರಕ್ಕೆ ಹೋದಲೆಲ್ಲಾ ಈ ಕಾರ್ ತೆಗೆದುಕೊಂಡು ಹೋಗಲು ಪ್ಲ್ಯಾನ್ ಮಾಡಿಕೊಂಡಿದೆ. ಕಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಡಲಿದೆ.
ಹೈದ್ರಾಬಾದ್‌ನಲ್ಲಿ ನಟ ನಾಗಚೈತನ್ಯ ಕಲ್ಕಿ(Kalki) ಕಾರ್ ಓಡಿಸಿ ತಮ್ಮ ಕಾರ್ ಕ್ರೇಜ಼್ ತೀರಿಸಿಕೊಂಡಿದ್ದಾರೆ. ಜೊತೆಗೆ ಎಲ್ಲರ ಗಮನ ಸೆಳೆದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರೋದ್ರಿಂದ ಚಿತ್ರತಂಡ ಎಲ್ಲಾ ರಾಜ್ಯದಲ್ಲೂ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಬೆಂಗಳೂರಿಗೂ ಚಿತ್ರತಂಡ ಪ್ರಚಾರಕ್ಕೆ ಬರಲಿದೆ. ಆಗ ಈ ಕಾರ್ ಕೂಡ ಬೆಂಗಳೂರಿಗೆ ಬರಲಿದ್ದು, ಕನ್ನಡದ ಯಾವ ನಟ ಈ ಕಾರ್ ಓಡಿಸುತ್ತಾರೆ ಎನ್ನುವುದರತ್ತ ಈಗ ಎಲ್ಲರ ಗಮನ ಹರಿದಿದೆ. ಬೆಂಗಳೂರಿಗರೂ ಸಿನಿಮಾ ಸ್ಟಾರ್ ಮಾತ್ರವಲ್ಲದೇ, ಈ ಕಾರ್ ನೋಡಬಹುದು, ಸೆಲ್ಪಿ ಕ್ಲಿಕ್ಕಿಸಿಕೊಳ್ಳಬಹುದು.
ಅಮಿತಾಭ್ ಬಚ್ಚನ್(Amithab Bachchan), ದೀಪಿಕಾ ಪಡುಕೋಣೆ(Deepika Padukone), ದುಲ್ಕರ್ ಸಲ್ಮಾನ್, ದಿಶಾ ಪಟಾನಿ, ಕಮಲ್ ಹಾಸನ್(Kamal Haasan) ಸೇರಿದಂತೆ ಹಲವು ಕಲಾವಿದರು ಕಲ್ಕಿ ತಾರಾಬಳಗದಲ್ಲಿ ಬಣ್ಣ ಹಚ್ಚಿದ್ದಾರೆ. ಮಹಾನಟಿ ಖ್ಯಾತಿಯ ನಾಗ್ ಅಶ್ಬಿನ್ ನಿರ್ದೇಶನದ ಈ ಚಿತ್ರವನ್ನು ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಸಿ.ಅಸ್ವನಿ ದತ್ ನಿರ್ಮಾಣ ಮಾಡಿದ್ದಾರೆ.