Prem: ನಿರ್ದೇಶಕ ಪ್ರೇಮ್(Prem). ಕರಿಯ, ಜೋಗಿ ನಂತರ ಮತ್ತೊಮ್ಮೆ ರೌಡಿಸಂ ಕಥೆಯ ಜಾಡು ಹಿಡಿದಿದ್ದಾರೆ. 70ರ ದಶಕದ ರೌಡಿಸಂ ಕಹಾನಿಯನ್ನು ಆಕ್ಷನ್ ಪ್ರಿನ್ಸ್ ಜೊತೆಗೂಡಿ ‘ಕೆಡಿ’(KD)ಯಲ್ಲಿ ಕಟ್ಟಿಕೊಡಲು ಹೊರಟಿದ್ದಾರೆ. ಫಸ್ಟ್ ಲುಕ್, ಟೈಟಲ್ ಟೀಸರ್ ಥ್ರಿಲ್ ಹೆಚ್ಚಿಸಿದೆ. ‘ಕೆಡಿ’(KD) ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮೂಡಿ ಬರ್ತಿರುವ ಸಿನಿಮಾ. ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡ್ತಿದೆ. ಇದೀಗ ಪ್ರೇಮ್ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿ ಎಲ್ಲರ ಕಿವಿ ನಿಮಿರವಂತೆ ಮಾಡಿದ್ದಾರೆ.
‘ಕೆಡಿ’(KD) ಸಿನಿಮಾದ ಸಂಗೀತಕ್ಕಾಗಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ(Arjun Janya) ಹಗಲು ರಾತ್ರಿ ದುಡಿಯುತ್ತಿದ್ದಾರೆ. ಪ್ರೇಮ್ ಸಿನಿಮಾ ಅಂದ್ರೆ ಅಲ್ಲಿ ಹಾಡುಗಳ ಕಾರುಬಾರು ಜೋರಿರುತ್ತೆ. ಹಾಡನ್ನು ಭವ್ಯವಾಗಿ ಕಟ್ಟಿಕೊಡಲು ಪ್ರೇಮ್ ಎಂತಹ ಸಾಹಸಕ್ಕೂ ರೆಡಿಯಾಗಿರುತ್ತಾರೆ. ಅದ್ರಲ್ಲೂ ಪ್ರೇಮ್- ಜನ್ಯ ಕಾಂಬಿನೇಶನ್ ಅಂದ್ರೆ ಹಾಡುಗಳ ಹಂಗಾಮವೇ ನಡೆದಿರುತ್ತೆ. ಆ ಎಕ್ಸ್ಪೆಕ್ಟೇಶನ್ ಅರಿತೇ ಆನಂದ್ ಆಡಿಯೋ ಸಂಸ್ಥೆ ಸುಮಾರು ೧೭ ಕೋಟಿ ಮೊತ್ತ ಕೊಟ್ಟು ಕೆಡಿ ಹಾಡುಗಳ ಆಡಿಯೋ ಖರೀದಿ ಮಾಡಿದೆ ಎನ್ನಲಾಗ್ತಿದೆ.
‘ಕೆಡಿ’(KD) ಹಾಡುಗಳಿಗಾಗಿ ಅಮೇರಿಕಾದ ಲಾಸ್ ಏಂಜಲೀಸ್ನಲ್ಲಿ ಲೈವ್ ಆರ್ಕೇಸ್ಟ್ರಾ ಮಾಡಿಸಲಾಗಿದೆ. ಎಲ್ಲಾ ಹಾಡುಗಳನ್ನು ಇಲ್ಲೇ ರೆಕಾರ್ಡ್ ಮಾಡಲಾಗಿದೆ. ಕೆಡಿ ಸಿನಿಮಾಗೆ ಬಳಸಿರೋ ದೊಡ್ಡ ಪ್ರಮಾಣದ ಆರ್ಕೇಸ್ಟ್ರಾವನ್ನು ಹಿಂದಿ ಸಿನಿಮಾಗಳಲ್ಲೂ ಬಳಸಿಕೊಳ್ಳಲಿಲ್ಲವಂತೆ. ಇಂತಹದ್ದೊಂದು ಸಾಹಸದ ಮೂಲಕ ಕೆಡಿ, ಆಡಿಯೋ, ಹಿನ್ನೆಲೆ ಸಂಗೀತದ ಮೇಲೆ ಇನ್ನಿಲ್ಲದ ನಿರೀಕ್ಷೆ ಕ್ರಿಯೇಟ್ ಮಾಡಿದ್ದಾರೆ ಪ್ರೇಮ್ ಹಾಗೂ ತಂಡ.
ಡಿಸೆಂಬರ್ ನಲ್ಲಿ ಕೆಡಿ ಸಿನಿಮಾವನ್ನು ಚಿತ್ರತಂಡ ಬಿಡುಗಡೆ ಮಾಡೋದಾಗಿ ತಿಳಿಸಿದೆ. ಇದಕ್ಕಾಗಿ ಕೆವಿಎನ್ ಸಂಸ್ಥೆ ಸಕಲ ಸಿದ್ದತೆ ಮಾಡಿಕೊಂಡಿದೆ. ತಾರಾಬಳಗ, ಆಡಿಯೋ, ರೌಡಿಸಂ ಸಭ್ಜೆಕ್ಟ್, ಮೇಕಿಂಗ್ ಎಲ್ಲವೂ ಕೆಡಿಯತ್ತ ಕ್ಯೂರಿಯಸ್ ಆಗಿ ನೋಡುವಂತೆ ಮಾಡಿದೆ. ಬಿಟೌನ್ ಖ್ಯಾತ ನಟ ಸಂಜಯ್ ದತ್(Sanjay Dutt), ಶಿಲ್ಪಾ ಶೆಟ್ಟಿ(Shilpa Shetty), ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಒಳಗೊಂಡ ಸ್ಟಾರ್ ತಾರೆಯರು ಚಿತ್ರದ ಹೈಲೈಟ್.