Devara: ದೇವರ..ತೆಲುಗು ನಾಡಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿರುವ ಸಿನಿಮಾ. ಜೂ. NTR ಸಿನಿಮಾ ಬಝ್ ಕೇವಲ ಟಿಟೌನ್‌ನಲ್ಲಿ ಮಾತ್ರವಲ್ಲ ನಾರ್ತ್ ಅಂಗಳದಲ್ಲೂ ಜೋರಾಗಿದೆ. ‘ಆರ್‌ಆರ್‌ಆರ್’(RRR) ಗೆಲುವು ಮ್ಯಾನ್ ಆಫ್ ಮಾಸಸ್ ಖ್ಯಾತಿಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದೆ. ಇದರ ಬೆನ್ನಲ್ಲೇ ಮೊದಲ ಹಾಡಿಗೂ ಬೇಡಿಕೆ ಹೆಚ್ಚಾಗಿದೆ. ಹಾಡಿಗೆ ಹೆಚ್ಚಾದ ಬೇಡಿಕೆ ನಿರ್ಮಾಪಕರ ವಿಶ್ವಾಸವನ್ನು ಹೆಚ್ಚು ಮಾಡಿದೆ. ಅದೇ ಖುಷಿಯಲ್ಲೇ ಸ್ಟೇಟ್‌ಮೆಂಟ್ ನೀಡಿ ಗಮನ ಸೆಳೆದಿದ್ದಾರೆ.
ಹೌದು, ದೇವರ(Devara) ಸಿನಿಮಾ ಹಾಡಿಗೆ ಮ್ಯಾನ್ ಆಫ್ ಮಾಸಸ್ ಅಭಿಮಾನಿಗಳು ಬೆನ್ ಬಿಡದೇ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆ ಕಂಡು ಚಿತ್ರತಂಡ ಜೂ.NTR ಹುಟ್ಟುಹಬ್ಬಕ್ಕೆ ಮೊದಲ ಹಾಡನ್ನು ಉಡುಗೊರೆಯಾಗಿ ನೀಡುವ ಆಲೋಚನೆ ಮಾಡಿತ್ತು. ಇದೀಗ ಒಂದು ದಿನ ಮುನ್ನವೇ ಅಂದ್ರೆ ಮೇ ೧೯ಕ್ಕೆ ಮೊದಲ ಸಾಂಗ್ ಯೂಟ್ಯೂಬ್ ಧೂಳಿಪಟ ಮಾಡೋದು ಕನ್ಫರ್ಮ್ ಆಗಿದೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ರವಿಚಂದ್ರನ್ ಹಾಗೂ ಜೂ.NTR ಕಾಂಬಿನೇಶನ್‌ನಲ್ಲಿ ಇದೇ ಮೊದಲು ಸಿನಿಮಾ ಮೂಡಿ ಬರ್ತಿದ್ದು, ಅನಿರುದ್ದ ಹಾಡುಗಳ ಮ್ಯಾಜಿಕ್ ಬಲ್ಲವರು ಈ ಕಾಂಬೋ ಮೇಲೆ ವೋಲ್ಟೇಜ್ ನಿರೀಕ್ಷೆ ಇರಿಸಿದೆ. ಇದು ನಿರ್ಮಾಪಕರ ಥ್ರಿಲ್ ಹೆಚ್ಚು ಮಾಡಿದೆ. ದೇವರ(Devara) ಹಾಡು ಜೈಲರ್ ಸಿನಿಮಾದ ಹುಕುಂ ಹಾಡನ್ನು ಮೀರಿಸುತ್ತೆ, ಮರೆಸುತ್ತೆ ಎಂದು ನಿರ್ಮಾಪಕ ನಾಗ ವಂಶಿ ಸ್ಟೇಟ್‌ಮೆಂಟ್ ನೀಡಿದ್ದಾರೆ. ಅಂದ್ರೆ ಈ ಹಾಡು ಅದೆಷ್ಟು ಮಾಸ್ ಆಗಿರಬಹುದು, ಅದೆಷ್ಟು ಕಿಕ್ ನೀಡಬಹುದು ಎಂದು ಊಹೆಯಲ್ಲಿ ಬಿದ್ದಿದ್ದಾರೆ ಫ್ಯಾನ್ಸ್.
ಕೊರಟಾಲ ಶಿವ ನಿರ್ದೇಶನದಲ್ಲಿ ಬರ್ತಿರುವ ದೇವರ(Devara) ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ. ಜಾನ್ವಿ ಕಪೂರ್, ಸೈಫ್ ಅಲಿಖಾನ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಕ್ಟೋಬರ್ 10ಕ್ಕೆ ಸಿನಿಮಾ ಬಿಡುಗಡೆಯಾಗ್ತಿದೆ.