ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮ ದಿನಚರಿಯ ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಪುಷ್ಪ-2 ಶೂಟಿಂಗ್ ಭರದಿಂದ ಸಾಗುತ್ತಿರುವ ದೃಶ್ಯಾವಳಿಗಳಿದ್ವು. ಇದೀಗ, ಶ್ರೀವಲ್ಲಿ ಉರುಫ್ ರಶ್ಮಿಕಾ ಪುಷ್ಪ-2 ಸೆಟ್‍ನ ಫೋಟೋವೊಂದನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಚ್ಚರಿ ಅಂದರೆ ಅದೊಂದು ಫೋಟೋ ನೋಡಿಯೇ ಚಿತ್ರಪ್ರೇಮಿಗಳು ಪುಷ್ಪ ಪಾರ್ಟ್-2 ಸ್ಟೋರಿನಾ ಕಣ್ಮುಂದೆ ತಂದುಕೊಂಡಿದ್ದಾರೆ.
ನಟಿ ರಶ್ಮಿಕಾ ಐಷರಾಮಿ ಬಂಗ್ಲೆ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ಪುಷ್ಪರಾಜ್ ದೊಡ್ಡ ಶ್ರೀಮಂತನಾಗಿ ಬೆಳೆದಿರುವ ಸೂಚನೆ ನೀಡಿದ್ದಾರೆ. ಅಂದ್ಹಾಗೇ, ಟ್ರೇಲರಿನಲ್ಲಿ ಪುಷ್ಪರಾಜ್ ದೊಡ್ಡ ವ್ಯಕ್ತಿಯಾಗಿ ಬೆಳೆದಿರುವ ಸುಳಿವು ಸಿಕ್ಕಿತ್ತು. ರಕ್ತಚಂದನ ಕಳ್ಳಸಾಗಣೆಕೆ ಮಾಡುತ್ತಾ ತನ್ನದೇ ಆದ ಸಾಮ್ರಾಜ್ಯ ಕಟ್ಟುವ ಪುಷ್ಪರಾಜ್ ಕನಸು ನೆರವೇರಿರುವ ಲಕ್ಷಣಗಳು ಗೋಚರಿಸಿದ್ವು. ಇದೀಗ ಸ್ವತಃ ಶ್ರೀವಲ್ಲಿ ಬಂಗ್ಲೆ ಫೋಟೋ ರಿವೀಲ್ ಮಾಡುವ ಮೂಲಕ ಪತಿ ಪುಷ್ಪರಾಜ್ ಜೊತೆ ಅರಮನೆಯಂತಿರೋ ಮನೆಯಲ್ಲಿ ವಾಸ ಮಾಡುವ ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಅಷ್ಟಕ್ಕೂ, ‘ಪುಷ್ಪ’ ಸಿನಿಮಾ ಮುಗಿಯುವುದೇ ಶ್ರೀವಲ್ಲಿ ಹಾಗೂ ಪುಷ್ಪ ಮದುವೆ ಆಗುವ ಮೂಲಕ. ಹೀಗಾಗಿಯೇ ಇಂತಹ ಸಂಶಯಗಳು ಶ್ರೀವಲ್ಲಿ ಫೋಟೋದಿಂದ ಹುಟ್ಟಿಕೊಂಡಿವೆ.
ಅಂದ್ಹಾಗೇ, ಶ್ರೀವಲ್ಲಿ ಪಾರ್ಟ್-2ನಲ್ಲಿ ಇರಲ್ಲ, ಡೈರೆಕ್ಟರ್ ಸುಕುಮಾರ್ ಅವರು ಶ್ರೀವಲ್ಲಿ ಪಾತ್ರಕ್ಕೆ ಇತಿಶ್ರೀ ಹಾಡಿದ್ದಾರೆ. ಯಾವುದೇ ಕಾರಣಕ್ಕೂ ರಶ್ಮಿಕಾ ಪುಷ್ಪ ಜೊತೆ ರೂಲ್ ಮಾಡಲು ಬರುವುದಿಲ್ಲ ಎನ್ನಲಾಗಿತ್ತು. ಆದ್ರೀಗ, ಸ್ವತಃ ಶ್ರೀವಲ್ಲಿಯೇ ಪುಷ್ಪ ಶೂಟಿಂಗ್ ಸೆಟ್‍ನಿಂದ ಫೋಟೋ ತೆಗೆದು ಅಪ್‍ಲೋಡ್ ಮಾಡಿದ್ದಾರೆ. ಈ ಮೂಲಕ ಅಂತೆಕಂತೆ ಮ್ಯಾಟರ್‍ಗೆಲ್ಲಾ ಅಂತ್ಯಹಾಡಿದ್ದಾರೆ. ಚಿತ್ರೀಕರಣಕ್ಕೆ ಎಂಟ್ರಿಕೊಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಾನ್ವಿ ಸಿಹಿಸುದ್ದಿ ನೀಡಿದ್ದಾರೆ.
https://twitter.com/i/status/1699625909865828448
ಈ ಮಧ್ಯೆ ಪುಷ್ಪ ಸಿನಿಮಾದಲ್ಲಿ ಬಳಕೆ ಮಾಡಲಾಗಿರುವ, ರಕ್ತಚಂದನ ಸಾಗಣೆ ಮಾಡುವ ಟ್ರಕ್‍ಗಳನ್ನು ಹೋಲುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ನೂರಾರು ಸಂಖ್ಯೆಯಲ್ಲಿ ಸಾಲಾಗಿ ನಿಂತಿರುವ ಟ್ರಕ್‍ಗಳನ್ನ ನೋಡಿ ಇದು `ಪುಷ್ಪ-2′ ಚಿತ್ರದ್ದೇ ಅಂತಿದ್ದಾರೆ ಫ್ಯಾನ್ಸ್ . ನೆಕ್ಸ್ಟ್ ಲೆವೆಲ್ ಮೇಕಿಂಗ್ ಅಂತ ಐಕಾನ್ ಸ್ಟಾರ್ ಅಭಿಮಾನಿಗಳು ಕಣ್ಣುಬ್ಬು ಎಗರಿಸುತ್ತಿದ್ದಾರೆ. ಅಫ್‍ಕೋರ್ಸ್ ಪುಷ್ಪ ದಿ ರೂಲ್ ಅನದರ್ ಲೆವೆಲ್‍ನಲ್ಲೇ ಇರಬೇಕು. ಯಾಕಂದ್ರೆ, ಈ ಭಾರಿ ಇಡೀ ಜಗತ್ತು ಕಾಯುತ್ತಿದೆ. ಪುಷ್ಪರಾಜ್ ರೂಲ್ ಮಾಡೋದನ್ನ ನೋಡೋದಕ್ಕೆ ಪ್ಯಾನ್ ವಲ್ರ್ಡ್ ಮಂದಿಯೂ ಕಣ್ಣರಳಿಸಿದ್ದಾರೆ. ಹೀಗಾಗಿ, ನಿರ್ದೇಶಕ ಸುಕುಮಾರ್, ನಟ ಅಲ್ಲು ಅರ್ಜುನ್ ಹಾದಿಯಾಗಿ ಎಲ್ಲರ ಮೇಲೂ ಜವಬ್ದಾರಿ ಹೆಚ್ಚಿದೆ. ಒಂದಳತಿ ಆಚೀಚೆ ಆಗದಂತೆ, ನಿರೀಕ್ಷೆಗೆ ಕುತ್ತುಬಾರದಂತೆ ಪುಷ್ಪ-2ನಾ ಕಟ್ಟಿಕೊಡಬೇಕಿದೆ. ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿದ್ದು, ಪಾರ್ಟ್1 ಗಿಂತ ಡಬ್ಬಲ್ ಬಂಡವಾಳ ಸುರಿಯುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಜೊತೆಗೆ ಸೂಪರ್ ಸ್ಟಾರ್ ಗಳಿಗೆ ಮಣೆಹಾಕಲಾಗಿದ್ದು, ಬಿಗ್ ಕ್ಯಾನ್ವಾಸ್ ನಲ್ಲಿ, ಬಿಗ್ ಸ್ಟಾರ್ ಗಳ ಸಮಾಗಮದಲ್ಲಿ ಪುಷ್ಪ ಪಾರ್ಟ್2 ಅನಾವರಣಗೊಳ್ಳಲಿದೆ.