ಪುಷ್ಪ… ಪುಷ್ಪ.. ಪುಷ್ಪ… (Pushpa) ಸಿನಿಮಾ ರಿಲೀಸ್ ಆಗಿ ಎರಡೂವರೆ ವರ್ಷ ಕಳೆದ್ರೂ ಕೂಡ ಈ ಚಿತ್ರದ ಕ್ರೇಜ್ ಕಮ್ಮಿಯಾಗಿಲ್ಲ. ಅಷ್ಟು ಸುಲಭವಾಗಿ ಕಡಿಮೆಯಾಗಲ್ಲ ಅನ್ನೋದಕ್ಕೆ ಪುಷ್ಪ ಪಾರ್ಟ್-2 (Pushpa 2: The Rule) ಗಾಗಿ ಕಣ್ಣರಳಿಸಿರೋ ಕಾಯ್ತಿರೋ ಕಲಾಭಿಮಾನಿಗಳೇ ಸಾಕ್ಷಿ. ಅಷ್ಟಕ್ಕೂ, ಹೀಗ್ಯಾಕೆ ಪುಷ್ಪ-2 (Pushpa 2: The Rule) ಮ್ಯಾಟರ್ ತಗೀತಿದ್ದೀವಿ ಅಂದರೆ ಆಪಲ್ ಬ್ಯೂಟಿ ಸಮಂತಾ(SamanthaRuthPrabhu)ಗೆ ಪುಷ್ಪ ಟೀಮ್ ಮತ್ತೆ ಮಣೆಹಾಕಿದೆಯಂತೆ. ʻಊ ಅಂಟಾವʼ ಹಾಡಿಗೆ ತನ್ನ ಸೆಕ್ಸಿ ಸೊಂಟ ಬಳುಕಿಸಿ ಸಂಚಲನ ಮೂಡಿಸಿದ ಮನಂ ಚೆಲುವೆನಾ (SamanthaRuthPrabhu) ಮತ್ತೆ ಪುಷ್ಪ ಅಖಾಡಕ್ಕೆ ಕರೆತರಲು ಪ್ರಯತ್ನಿಸುತ್ತಿದೆಯಂತೆ.
ಅರ್ರೇ ಹೌದಾ? ಮೊನ್ನೆ ಮೊನ್ನೆಯಷ್ಟೇ ಸ್ಯಾಮ್(SamanthaRuthPrabhu) ಪುಷ್ಪ ಚಿತ್ರದ ಹಾಡಿನ ಬಗ್ಗೆ ಸ್ಟೇಟ್‌ಮೆಂಟ್ ಕೊಟ್ಟಿದ್ದರಲ್ಲ. ʻಊ ಅಂಟಾವʼ ಹಾಡಿನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡುಬಿಟ್ಟೆ. ಇನ್ಮೇಲೆ ನಾನು ಪುಷ್ಪ ತರಹದ ಸಾಂಗ್ ಮಾಡಲ್ಲ, ಹಾಡುಗಳಲ್ಲಿ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಳ್ಳಲ್ಲ ಎಂದಿದ್ರಲ್ಲ. ಹೀಗ್ ನೋಡಿದರೆ ಪುಷ್ಪ ಟೀಮ್ ಮತ್ತೆ ಮಣೆಹಾಕಿದೆ ಅಂತ ಹೇಳ್ತೀದ್ದೀರಾ. ಹೀಗೊಂದು ಪ್ರಶ್ನೆ ನಿಮ್ಮೆಲ್ಲರಲ್ಲೂ ರೈಸ್ ಆಗೋದು ಸಹಜ. ಆ ಪ್ರಶ್ನೆಗೆ ಉತ್ತರ ಕೊಡಬೇಕು ಅಂದರೆ ಅಸಲಿಯತ್ತನ್ನ ನಿಮ್ಮ ಮುಂದೆ ಹರವಿಡಲೇಬೇಕು.
ನಿಮಗೆಲ್ಲ ಗೊತ್ತಿರುವ ಹಾಗೇ ಪುಷ್ಪ-2(Pushpa 2: The Rule) ಚಿತ್ರದ ಚಿತ್ರೀಕರಣದ ಭರದಿಂದ ಸಾಗ್ತಿದೆ. ಪುಷ್ಪರಾಜ್ (Allu Arjun)ಹಾಗೂ ಶ್ರೀವಲ್ಲಿ (Rashmika) ಮ್ಯಾರೇಜ್ ಸೀಕ್ವೆನ್ಸ್ ಕ್ಯಾಪ್ಚರ್ ಮಾಡಿಕೊಂಡಿರೋ ಡೈರೆಕ್ಟರ್ ಸುಕುಮಾರ್(Sukumar) ಗಾರು, ಪುಷ್ಪ-2 (Pushpa 2: The Rule)ಚಿತ್ರದ ಸ್ಪೆಷಲ್ ಸಾಂಗ್ ಚಿತ್ರೀಕರಣಕ್ಕಾಗಿ ಎದುರು ನೋಡ್ತಿದ್ದಾರೆ. ಆದರೆ, ಪುಷ್ಪರಾಜ್ ಜೊತೆ ನಡುಬಗ್ಗಿಸೋ ಕುಣಿಯೋ ಆ ಕ್ಯೂಟಿ ಪೈ ಯಾರು ಅನ್ನೋದು ಮಾತ್ರ ಚಿತ್ರತಂಡ ಈ ಕ್ಷಣಕ್ಕೂ ಗುಟ್ಟಾಗಿರಿಸಿದೆ. ಆದರೆ, ಬಜಾರ್‌ನಲ್ಲಿ ಬಿಟೌನ್ ಬ್ಯೂಟಿ ಜಾಹ್ನವಿ ಕಪೂರ್ ಹೆಸರು ಕೇಳಿಬರುತ್ತಿದೆ. ಹೌದು, ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ (Allu Arjun)ಜೊತೆ ದಢಕ್ ಚೆಲುವೆ ಲೆಗ್ ಶೇಕ್ ಮಾಡಲಿದ್ದಾರೆನ್ನುವ ಖಬರ್ ಥಕ್ಕಥೈ ಅಂತ ಕುಣಿಯುತ್ತಿದೆ. ಹೀಗಿರುವಾಗಲೇ ಮಜಿಲಿ(SamanthaRuthPrabhu) ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಆದರೆ, ಮಜಿಲಿನಾ (SamanthaRuthPrabhu) ಪುಷ್ಪ ಟೀಮ್ ಅಪ್ರೋಚ್ ಮಾಡಿರೋದು ತಮ್ಮ ಮಾದಕ ಮೈಮಾಟವನ್ನ ಪ್ರದರ್ಶಿಸೋ ಹಾಡಿಗಾಗಿ ನೃತ್ಯ ಮಾಡಲಿಕ್ಕಲ್ಲ ಬದಲಾಗಿ ಕ್ಯಾಮಿಯೋ ಪಾತ್ರಕ್ಕೆ ಅನ್ನೋದು ತಾಜಾ ಸಮಾಚಾರ
ಯಸ್. ಟಿಟೌನ್ ಅಂಗಳದಲ್ಲಿ ಕೇಳಿಬರುತ್ತಿರುವ ಸುದ್ದಿ ಪ್ರಕಾರ ಪುಷ್ಪ ಡೈರೆಕ್ಟರ್ ಸುಕುಮಾರ್(Sukumar)ಗಾರು ಸಮಂತಾ(SamanthaRuthPrabhu)ರನ್ನ ಸ್ಪೆಷಲ್ ಅಪಿಯರೆನ್ಸ್ ಮಾಡುವಂತೆ ಅಪ್ರೋಚ್ ಮಾಡಿದ್ದಾರಂತೆ. ಪುಷ್ಪ ಪಾರ್ಟ್-2 (Pushpa 2: The Rule) ಹಾಗೂ ಪಾರ್ಟ್-3ಗೆ ಕನೆಕ್ಟ್ ಆಗೋ ರೀತಿಯಲ್ಲಿ ಒಂದು ಕ್ಯಾರೆಕ್ಟರ್ ಇದೆಯಂತೆ. ಅದನ್ನ ಸ್ಮಾಲ್ ಸಾಂಗ್ ಬಿಟ್‌ನಲ್ಲಿ ಸ್ಯಾಮ್ (SamanthaRuthPrabhu)ನ ಕುಣಿಸೋ ಮೂಲಕ ಕಲಾಭಿಮಾನಿಗಳಿಗೆ ಕನ್ವೆ ಮಾಡಬೇಕು ಅನ್ನೋದು ಸುಕುಮಾರ್ ಅವ್ರ ಕಲ್ಪನೆಯಂತೆ. ಹೀಗಾಗಿ, ಮನಂ ಚೆಲುವೆನಾ(SamanthaRuthPrabhu) ರತ್ನಗಂಬಳಿ ಮೇಲೆ ಪುಷ್ಪನ ಅಖಾಡಕ್ಕೆ ಕರ್ಕೊಂಡು ಬರಬೇಕು ಅಂತ ಪ್ಲಾನ್ ರೂಪಿಸಿದ್ದಾರಂತೆ. ಹೀಗೊಂದು ಸುದ್ದಿಯಂತೂ ಇದೆ. ಇದು ನಿಜಾನಾ? ಸ್ಯಾಮ್(SamanthaRuthPrabhu) ಊ ಅಂದ್ರಾ? ಹೂ ಅಂದ್ರಾ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್ . ಈಗ ಮಜಿಲಿ ಉರುಫ್ ಸಮಂತಾ ರುತ್ ಪ್ರಭು (SamanthaRuthPrabhu) ಫ್ಯಾಮಿಲಿಮ್ಯಾನ್ ತಂಡದ ಜೊತೆ ಸಿಟಾಡೆಲ್ ಎನ್ನುವ ವೆಬ್‌ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮಯೋಸೈಟಿಸ್ ಖಾಯಿಲೆಗೆ ಸೆಡ್ಡು ಹೊಡೆದು ಗೆದ್ದುಬಂದಿರೋ ಸ್ಯಾಮ್ (SamanthaRuthPrabhu), ಮತ್ತೆ ಸಿನಿಮಾಗಳು, ವೆಬ್‌ಸಿರೀಸ್‌ಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಶೂಟಿಂಗ್, ಔಟಿಂಗ್, ಡಬ್ಬಿಂಗ್ ಮಧ್ಯೆ ಕೊಂಚ ಬಿಡುವು ಮಾಡಿಕೊಂಡು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್ ಜೊತೆ ಕೆಲ ಸಮಯ ಕಳೆಯುತ್ತಾರೆ.