Pushpa2: ‘ಪುಷ್ಪ2’ ಸಿನಿಮಾ ಸದ್ಯ ಸೌತ್ ಸಿನಿದುನಿಯಾ ಮಾತ್ರವಲ್ಲ ಇಂಡಿಯನ್ ಸಿನಿಮಾ ಅಂಗಳದಲ್ಲೂ ಸಖತ್ ಕ್ರೇಜ಼್ ಕ್ರಿಯೇಟ್ ಮಾಡಿದೆ. ಟೀಸರ್ ಮೂಲಕ ಪ್ರಮೋಶನ್ ಭರ್ಜರಿಯಾಗಿ ಶುರು ಮಾಡಿರುವ ಚಿತ್ರತಂಡ ಮೊದಲ ಹಾಡನ್ನು ಉಡುಗೊರೆಯಾಗಿ ನೀಡಲು ಸರ್ವ ರೀತಿಯಲ್ಲೂ ಸಜ್ಜಾಗಿದೆ. ಅದಕ್ಕೆ ಗ್ಯಾರೆಂಟಿ ಚಿತ್ರತಂಡ ಬಿಡುಗಡೆ ಮಾಡಿರುವ ಪ್ರೋಮೋ.
ಹೌದು, ‘ಏ ಬಿಡ್ಡಾ ಇದಿ ನಾ ಅಡ್ಡ’, ‘ಚೂಪೆ ಬಂಗಾರಮಾಯನೇ’ ಎಂದು ಮೊದಲ ಪಾರ್ಟ್ನಲ್ಲಿ ಕ್ರೇಜಿ಼ ಹಾಡುಗಳ ಮೂಲಕ ಟ್ರೆಂಡ್ ಕ್ರಿಯೇಟ್ ಮಾಡಿತ್ತು ಪುಷ್ಪ ಟೀಂ. ಇದೀಗ ಆ ಕ್ರೇಜ಼್ ಮತ್ತೆ ಸೃಷ್ಟಿಯಾಗಲಿದೆ. ಕೋಟಿಗಟ್ಟಲೇ ವೀವ್ಸ್ ಕಂಡು ಟ್ರೆಂಡಿಂಗ್ನಲ್ಲಿ ರಾರಾಜಿಸಿದ್ದ ‘ಪುಷ್ಪ’ ಹಾಡುಗಳ ಇತಿಹಾಸ ಮತ್ತೆ ಮರುಕಳಿಸಲಿದೆ. ‘ಪುಷ್ಪ2’(Pushpa2) ಹುಕ್ ಸ್ಟೆಪ್ಗಳು ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಗಿಚ್ಚಿ ಗಿಲಿಗಿಲಿ ಮಾಡಲು ಲೋಡ್ ಆಗ್ತಿದೆ. ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡೋದಾಗಿ ಖಾತ್ರಿ ನೀಡಿದೆ ಚಿತ್ರತಂಡ. ಮೇ 1ರಂದು ಪುಷ್ಪರಾಜ್ ಅಭಿಮಾನಿಗಳನ್ನು ಕುಣಿಸಲು ರೆಡಿಯಾಗಿದ್ದಾನೆ.
ಮೇ 1ರಂದು ಚಿತ್ರದ ಮೊದಲ ಹಾಡು ಯೂಟ್ಯೂಬ್ ಫೈರ್ ಮಾಡಲು ಬರ್ತಿದೆ ಅಂತಿದೆ ಚಿತ್ರತಂಡ. ನಿರ್ದೇಶಕ ಸುಕುಮಾರ್ ಸಾಹಿತ್ಯ, ರಾಕ್ಸ್ಟಾರ್ ಡಿಎಸ್ಪಿ ರಾಕಿಂಗ್ ಮ್ಯೂಸಿಕ್ ಕಮಾಲ್ ಮಾಡೋಕೆ ಸನ್ನದವಾಗಿದ್ದು, ಐಕಾನ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಭಕ್ತಗಣ ಕುಣಿದು ಕುಪ್ಪಳಿಸಲು ಕಾತುರರಾಗಿದ್ದಾರೆ.