Pushpa2: ಅಲ್ಲು ಅರ್ಜುನ್(Allu Arjun) ಅಭಿನಯದ ‘ಪುಷ್ಪಾ2’(Pushpa2) ಸಿನಿಮಾ ಸೌತ್ ಸಿನಿದುನಿಯಾ ಮಾತ್ರವಲ್ಲ ಇಂಡಿಯನ್ ಸಿನಿ ಅಂಗಳದಲ್ಲೂ ಸಖತ್ ಕ್ರೇಜ಼್ ಕ್ರಿಯೇಟ್ ಮಾಡಿದೆ. ಪುಷ್ಪಾ ಮೊದಲ ಪಾರ್ಟ್ ಡೈಲಾಗ್ಗಳು ಸಖತ್ ವೈರಲ್ ಆಗಿದ್ದವು, ತಗ್ಗದೇ ಲೇದು, ಶ್ರೀವಳ್ಳಿ ಸಾಂಗ್, ಹುಕ್ ಸ್ಟೆಪ್ ಎಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಮೇನಿಯಾ ಸೃಷ್ಟಿಸಿತ್ತು. ಅದನ್ನಿನ್ನೂ ಯಾರೂ ಮರೆತಿಲ್ಲ. ಇದೀಗ ಅಂತರಾಷ್ಟ್ರೀಯ ಖ್ಯಾತಿಯ ಸಿಂಗರ್ ದನಿಯಲ್ಲಿ ಪುಷ್ಪ ಡೈಲಾಗ್ ಕೇಳಿ ಬಂದ್ದಿದ್ದು, ಐಕಾನ್ ಸ್ಟಾರ್ ಭಕ್ತಗಣವನ್ನು ಸಂತೃಪ್ತಿಗೊಳಿಸಿದೆ.
ಖ್ಯಾತ ಇಂಗ್ಲೀಷ್ ಗಾಯಕ ಈದ್ ಶಿರನ್(Eid Sheeran) ಪುಷ್ಪಾ ಸಿನಿಮಾದ ಹಿಂದಿ ಡೈಲಾಗ್ ಹೇಳಿ ಕಮಾಲ್ ಮಾಡಿದ್ದಾರೆ. ಕಪಿಲ್ ಶರ್ಮಾ ಕಾಮಿಡಿ ಶೋ ನಲ್ಲಿ ಭಾಗಿಯಾದ ಈದ್ ಶಿರನ್ ಕಪಿಲ್ ಶರ್ಮಾ ಹೇಳಿಕೊಟ್ಟ ಪುಷ್ಪಾ(Pushpa) ಸಿನಿಮಾದ ಐಕಾನಿಕ್ ಡೈಲಾಗ್ ಹಿಂದಿಯಲ್ಲಿ ಹೇಳಿದ್ದಾರೆ. ಪುಷ್ಪಾ ಸ್ಟೈಲ್ ನಲ್ಲೇ ಹೇಳಿರುವ ಈದ ಶಿರನ್ ಅಲ್ಲು ಅರ್ಜುನ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಷ್ಟೇ ಅಲ್ಲ ಕಾರ್ಯಕ್ರಮ ಮುಗಿದ ಬಳಿಕ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಭೇಟಿಯಾಗಿರುವ ಈದ್ ಶಿರನ್ ಅಲ್ಲು ಅರ್ಜುನ್ ಫೇಮಸ್ ಸಾಂಗ್ ಬುಟ್ಟಾಬೊಮ್ಮ ಹಾಡಿಗೆ ಅರ್ಮಾನ್ ಜೊತೆ ಸ್ಟೆಪ್ ಹಾಕಿದ್ದಾರೆ. ಇದೆಲ್ಲಾ ಕಂಡು ಪುಷ್ಪಾರಾಜ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ರಿಲೀಸ್ ಮುನ್ನವೇ ಪುಷ್ಪಾ2(Pushpa) ಚಿತ್ರ ತೆಲುಗು ಚಿತ್ರರಂಗದಲ್ಲಿ ಹೊಸ ರೆಕಾರ್ಡ್ ತನ್ನದಾಗಿಸಿಕೊಂಡಿದೆ. ಹಿಂದಿ ರೈಟ್ಸ್, ಆಡಿಯೋ ರೈಟ್ಸ್, ಟಿವಿ ರೈಟ್ಸ್, ಓಟಿಟಿ ರೈಟ್ಸ್ ಬ್ಯುಸಿನೆಸ್ನಲ್ಲಿ ತೊಡಗಿಕೊಂಡಿದ್ದ ಚಿತ್ರತಂಡ ಪ್ರಿರೀಲೀಸ್ ಬ್ಯುಸಿನೆಸ್ನಲ್ಲಿ ಸಾವಿರ ಕೋಟಿ ದಾಖಲೆ ಬರೆದಿದೆ. ಸಿಕ್ಕಾಪಟ್ಟೆ ಕ್ರೇಜ಼್ ಹುಟ್ಟಿಸಿರುವ ಈ ಚಿತ್ರ ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗ್ತಿದೆ.