Pushpa2: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ2’(Pushpa2) ಸಿನಿಮಾ ನ್ಯಾಶನಲ್ ಲೆವೆಲ್‌ನಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದೆ. ದಿನಕ್ಕೊಂದು ಬಿಗ್ ಅಪ್ಡೇಟ್ ಮೂಲಕ ಎಲ್ಲರ ಅಟೆಂಶನ್ ಗ್ರ್ಯಾಬ್ ಮಾಡಿರುವ ಚಿತ್ರತಂಡ ಚಿತ್ರದ ಮೊದಲ ಸಾಂಗ್ ಬಿಡುಗಡೆ ಮಾಡಿದೆ. ಬಹು ನಿರೀಕ್ಷಿತ ಸಾಂಗ್‌ಗಾಗಿ ಕಾದು ಕುಳಿತ್ತಿದ್ದ ಪುಷ್ಪರಾಜ್ ಫ್ಯಾನ್ಸ್ ಡಾನ್ಸ್ ಮೂಡ್‌ಗೆ ಜಾರಿದ್ದಾರೆ.
‘ಪುಷ್ಪ ಪುಷ್ಪ ಪುಷ್ಪರಾಜ್’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಸಾಂಗ್ ಬಿಡುಗಡೆಯಾಗಿದ್ದೇ ತಡ ಒನ್ಸ್ ಮೋರ್ ಎಂದು ರಿಪೀಟ್ ಮೂಡಲ್ಲಿ ಕೇಳೋಕೆ ಶುರುವಿಟ್ಟಿದ್ದಾರೆ ಅಭಿಮಾನಿಗಳು. ಚಂದ್ರಬೋಸ್ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡಿಗೆ ನಕಾಶ್ ಅಜೀಜ್, ದೀಪಕ್ ದನಿಯಾಗಿದ್ದಾರೆ. ರಾಕ್‌ಸ್ಟಾರ್ ಡಿಎಸ್‌ಪಿ(DSP) ರಾಕಿಂಗ್ ಮ್ಯೂಸಿಕ್ ಹಾಡಿಗಿದೆ. ಅಲ್ಲು ಅರ್ಜುನ್ ಲುಕ್, ಕಾಸ್ಟ್ಯೂಮ್, ಮ್ಯಾನರಿಸಂ, ಸ್ಟೆಪ್ ನೋಡುಗರನ್ನು ಕಿಕ್ಕೇರಿಸಿದೆ.
ಮೊದಲ ಸೀಕ್ವೇಲ್‌ನಲ್ಲಿದ್ದ ‘ಏ ಬಿಡ್ಡಾ ಇದಿ ನಾ ಅಡ್ಡ’, ‘ಚೂಪೆ ಬಂಗಾರಮಾಯನೇ’ ಹಾಡುಗಳು ಟ್ರೆಂಡ್ ಆಗೋದ್ರ ಜೊತೆಗೆ ಮಿಲಿಯನ್ ಗಟ್ಟಲೆ ವೀವ್ಸ್ ಗಳಿಸಿಕೊಂಡಿತ್ತು. ಇದೀಗ ‘ಪುಷ್ಪ2’(Pushpa2) ಸಿನಿಮಾದ ಮೊದಲ ಹಾಡು ಆ ಟ್ರೆಂಡ್ ಬ್ರೇಕ್ ಮಾಡೋ ಎಲ್ಲಾ ಲಕ್ಷಣ ಹೊಂದಿದೆ. ಈ ಹಾಡಿನ ಜೊತೆಗೆ ಚಿತ್ರತಂಡ ಬಿಡುಗಡೆ ಮಾಡಲಿರುವ ಮುಂದಿನ ಹಾಡುಗಳ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿದೆ.
ಆಗಸ್ಟ್ 15ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಜೊತೆಗೆ ಬೆಂಗಾಲಿ ಭಾಷೆಯಲ್ಲೂ ತೆರೆ ಕಾಣುತ್ತಿದೆ. ಬಿಡುಗಡೆ ಮೊದಲೇ ಪ್ರಿರಿಲೀಸ್ ಬ್ಯುಸಿನೆಸ್‌ನಲ್ಲಿ ಅಲ್ಲು ಅರ್ಜುನ್(Allu Arjun) ಸಿನಿಮಾ ಹೊಸ ರೆಕಾರ್ಡ್ ಬರೆದಿದೆ.