Pushpa-2: ಅಲ್ಲು ಅರ್ಜುನ್ (Allu Arjun), ಸುಕುಮಾರ್(Sukumar)ಪುಷ್ಪ-2(Pushpa-2) ಹಾಡುಗಳ ಮೂಲಕ ಸಿನಿಮಾಗೆ ವೆಲ್‌ಕಂ ನೀಡೋಕೆ ಶುರು ಮಾಡಿದ್ದಾರೆ. ಇದೀಗ ಚಿತ್ರದ ಎರಡನೇ ಹಾಡು ಸೂಸೇಕಿ(Sooseki) ಬಿಡುಗಡೆಯಾಗಿ ಎಲ್ಲರ ದಿಲ್ ಕದಿಯಲು ಶುರು ಮಾಡಿದೆ.
ಪುಷ್ಪಾ ಸೀಕ್ವಲ್(Pushpa-2)ನಲ್ಲಿ ಶ್ರೀವಳ್ಳಿ ಹಾಗೂ ಪುಷ್ಪರಾಜ್ ಸೂಸೇಕಿ(Sooseki) ಕಪಲ್ ಸಾಂಗ್ ಮೂಲಕ ಕಮಾಲ್ ಮಾಡೋಕೆ ಆರಂಭಿಸಿದ್ದಾರೆ. ಲಿರಿಕಲ್ ವಿಡಿಯೋ ಜೊತೆಯಲ್ಲಿ ಮೇಕಿಂಗ್ ಝಲಕ್ ಹೊತ್ತು ಬಂದ ಈ ಹಾಡು ಎಲ್ಲರ ಗಮನ ಸೆಳೆಯುತ್ತಿದೆ. ಸೆಟ್‌ನಲ್ಲಿ ಹಾಡಿನ ಪ್ರಾಕ್ಟೀಸ್‌ನಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್(Alli Arjun), ರಶ್ಮಿಕಾ (Rashmika Mandanna) ಎಲ್ಲರ ಚಿತ್ತ ತಮ್ಮತ್ತ ಸೆಳೆದಿದ್ದಾರೆ. ಈ ಹಾಡಿನ ಹುಕ್ ಸ್ಟೆಪ್ ಸಖತ್ ಕಿಕ್ ನೀಡಲಿದೆ, ವೈರಲ್ ಆಗಲಿದೆ ಎನ್ನುವುದಕ್ಕೆ ಲಿರಿಕಲ್ ವಿಡಿಯೋ ಸಾಕ್ಷಿಯಾಗಿದೆ. ವರ್ಷದ ಬೆಸ್ಟ್ ಕಪಲ್ ಸಾಂಗ್ ಇದಾಗಲಿದೆ ಎನ್ನುವುದು ಇಬ್ಬರ ಫ್ಯಾನ್ಸ್ ಅಭಿಪ್ರಾಯ.
ರಾಕ್ ಸ್ಟಾರ್ DSP ಮ್ಯೂಸಿಕ್ ಮ್ಯಾಜಿಕ್‌ನಲ್ಲಿ ಮೂಡಿಬಂದ ಹಾಡಿಗೆ ಶ್ರೇಯಾ ಘೋಶಾಲ್ ದನಿಯಾಗಿದ್ದಾರೆ. ಬಿಟೌನ್ ಸ್ಟಾರ್ ಕೋರಿಯೋಗ್ರಾಫರ್ ಗಣೇಶ್ ಆಚಾರ್ಯ ಸ್ಟೆಪ್‌ಗಳಲ್ಲಿ ಮೂಡಿ ಬಂದ ಈ ಹಾಡು ಪುಷ್ಪಾ ಚಿತ್ರಕೆ ಸ್ಪೆಷಲ್ ಮೈಲೇಜ್ ನೀಡಲಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎರಡು ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ ಸೂಸೇಕಿ ಕಪಲ್ ಸಾಂಗ್.