Pushpa2: ಪುಷ್ಪಾ ಸಿನಿಮಾದಲ್ಲಿ ‘ಊ ಅಂಟವಾ ಮಾವ, ಊಹುಂ ಅಂಟವಾ ಮಾವ’ ಎಂದು ಬೋಲ್ಡ್ ಅಂಡ್ ಹಾಟ್ ಸ್ಟೆಪ್ ಹಾಕಿದ್ದರು ಸಮಂತ(Samantha). ಈ ಹಾಡು ಹುಟ್ಟಿಸಿದ್ದ ಕ್ರೇಜ಼್ ಅಷ್ಟಿಷ್ಟಲ್ಲ. ಚಿತ್ರಕ್ಕೆ ಸ್ಪೆಷಲ್ ಮೈಲೇಜ್ ತಂದುಕೊಟ್ಟಿತ್ತು ಈ ಸಾಂಗ್. ಮೈ ಚಳಿ ಬಿಟ್ಟು ಕುಣಿದ ಸ್ಯಾಮ್ ಪಡ್ಡೆ ಹುಡುಗರ ನಿದ್ದೆ ಕದ್ದಿದ್ರು. ಇಷ್ಟು ವರ್ಷದಲ್ಲಿ ನಟಿಯಾಗಿ ಸಂಪಾದಿಸಿದ್ದ ಕ್ರೇಜ಼್ ಈ ಒಂದೇ ಸಾಂಗ್ನಿಂದ ಪಡೆದುಕೊಂಡಿದ್ರು. ಇದಕ್ಕಾಗಿ ಬರೋಬ್ಬರಿ ಐದು ಕೋಟಿ ಸಂಭಾವನೆಯನ್ನೂ ಪಡೆದಿದ್ರು. ಪಾರ್ಟ್ 2ನಲ್ಲೂ ಸ್ಯಾಮ್ ಮತ್ತೆ ಮೈ ಬಳುಕಿಸಿ ಕಿಕ್ಕೇರಿಸುತ್ತಾಳೆಂದೇ ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ರು. ಆದ್ರೆ ಅಷ್ಟೆಲ್ಲಾ ಮೈಲೇಜು ತಂದು ಕೊಟ್ಟ ಸಾಂಗ್ ಸ್ಯಾಮ್ಗೆ ತೃಪ್ತಿ ನೀಡಿಲ್ಲವಂತೆ. ಆದ್ರಿಂದ ಪುಷ್ಟ ಸೀಕ್ವೆಲ್ನಲ್ಲಿ ಕುಣಿಯಲು ಊಹುಂ ಎಂದಿದ್ದಾಳಂತೆ.
ಐಟಂ ಸಾಂಗ್ ಮೇಲೇಜ್ ತಂದು ಕೊಟ್ರು ಫ್ಯೂಚರ್ನಲ್ಲಿ ಸಿನಿ ಕೆರಿಯರ್ಗೆ ಮಾರಕ ಅನ್ನೋದು ಸ್ಯಾಮ್ ಚಿಂತನೆ. ಒಮ್ಮೆ ಐಟಂ ಸಾಂಗ್ಗೆ ಫಿಕ್ಸ್ ಆದ್ರೆ ಸಿನಿಮಾಗಳ ಆಫರ್ ಕಡಿಮೆ ಆಗುತ್ತೆ. ಜನ ಸಿನಿಮಾ ಬಿಟ್ಟು ಐಟಂ ಸಾಂಗ್ನಿಂದಲೇ ಗುರುತಿಸೋಕೆ ಶುರುವಿಡುತ್ತಾರೆ ಎಂಬ ಆತಂಕ ಸಮಂತಾಗೆ ಕಾಡಿದೆ. ಆದ್ರಿಂದಲೇ ಇನ್ಮುಂದೆ ಐಟಂ ಸಾಂಗ್ಗೆ ಹೆಜ್ಜೆ ಹಾಕೋದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರಂತೆ.
ಸುಕುಮಾರ್(Sukumar) ನೆಚ್ಚಿನ ನಟಿಯರಲ್ಲೊಬ್ಬರು ಸಮಂತಾ. ಸಮಂತಾ(Samantha)ಗೆ ಎಷ್ಟೇ ವಯಸ್ಸಾದ್ರು ಅವರಿಗೆ ಹೊಂದುವಂತ ಪಾತ್ರ ಕೊಡುತ್ತೇನೆ ಎಂದಿದ್ರು ಪುಷ್ಪಾ ಸಾರಥಿ.̤ ಆದ್ರೀಗ ಅದೇ ನೆಚ್ಚಿನ ನಟಿ ಸುಕುಮಾರ್ಗೆ ಕೈ ಕೊಟ್ಟಿದ್ದಾಳೆ. ಸ್ಯಾಮ್ ನಿರ್ಧಾರ ಸುಕುಮಾರ್ರನ್ನ ಪೇಚಿಗೆ ಸಿಲುಕಿಸಿದೆ. ಪುಷ್ಪರಾಜ್ ಜೊತೆ ಯಾರನ್ನ ಕುಣಿಸೋದು ಎಂಬ ಆಲೋಚನೆಯಲ್ಲಿ ಮುಳುಗಿದ್ದಾರೆ. ಬಿಟೌನ್ ಬೆಡಗಿ ದಿಶಾ ಪಟಾನಿ ಈಗಾಗಲೇ ನೋ ಎಂದಿದ್ದಾಳೆ. ಜಾನ್ವಿ ಕಪೂರ್, ಶ್ರೀಲೀಲಾರತ್ತ ಸುಕುಮಾರ್ ಮುಖ ಮಾಡಿದ್ದಾರೆ. ಆದ್ರೆ ಈ ಇರ್ವರಲ್ಲಿ ಪುಷ್ಪರಾಜ್ ಜೊತೆ ಯಾರು ಕುಣಿಯುತ್ತಾರೆ..? ಅಥವಾ ಬೇರೆ ಯಾವ ಡಾನ್ಸರ್ ಚಿತ್ರತಂಡ ಸೇರಿಕೊಳ್ತಾರೆ ಅನ್ನೋದು ಇಲ್ಲಿವರೆಗೂ ಕನ್ಫರ್ಮ್ ಆಗಿಲ್ಲ.