ಕಾಲೆಳೆಯೋರ್ ಯಾವತ್ತಿದ್ರೂ ಕಾಲ್ ಕೆಳಗಡೆ ಇರ್ತಾರೆ, ಪ್ರೀತಿ ಅಭಿಮಾನಿ ಇಟ್ಟಿರೋ ಜನರು ಹೃದಯದಲ್ಲಿರ್ತಾರೆ. ಈ ಕ್ಷಣ ರಾಕಿಂಗ್ ಸ್ಟಾರ್ ಯಶ್ ಅವರ ಈ ಡೈಲಾಗ್ನ ನೆನಪು ಮಾಡಿಕೊಳ್ಳೋದಕ್ಕೆ ಕಾರಣ ಕಬ್ಜ ಸಾರಥಿ ಆರ್ ಚಂದ್ರು ಅವರು. ಹೌದು, ಕಬ್ಜ ಚಿತ್ರ ನಿರೀಕ್ಷೆಯ ಹಂತ ಮುಟ್ಟಿಲ್ಲ ಅನ್ನೋ ಕಾರಣಕ್ಕೆ ಜನ ತಲೆಗೊಂದು ಮಾತನಾಡಿದ್ದರು. ರಿಲೀಸ್ಗೂ ಮುನ್ನ ಬೇಜಾನ್ ಬಿಲ್ಡಪ್ ಕೊಟ್ಟರು, ಆದರೆ ಸಿನಿಮಾದಲ್ಲಿ ಏನು ಇಲ್ಲ. ಬರೀ ಕತ್ಲು ಅಷ್ಟೇಯಾ? ಕೆಜಿಎಫ್ ಸಿನಿಮಾನ ಹಂಗೆ ಬಟ್ಟಿಇಳಿಸಿಬಿಟ್ಟವ್ರೆ ಅಂತ ಕೊಂಕು ಮಾತನಾಡಿದ್ದರು. 100 ಕೋಟಿ ಕಲೆಕ್ಷನ್ ಆಗೈತೆ ಅಂತ ಲೆಕ್ಕ ಕೊಡ್ತಾವ್ರೆ, ಆದರೆ, 50 ಕೋಟಿ ಮೊದಲಾಗಿಲ್ಲ ಅಂತ ಟೀಕೆ ಟಿಪ್ಪಣಿ ಮಾಡ್ತಾ, ಕಬ್ಜ ಸಾರಥಿನಾ ಹೀಯಾಳಿಸೋ ಪ್ರಯತ್ನ ಮಾಡಿದ್ದರು. ಬರೆದಿಟ್ಕೊಳಿ ಕಬ್ಜ ಪಾರ್ಟ್2 ಬರಕ್ಕಿಲ್ಲ ಅಂತ ಕೆಲವರು ಗಾಂಧಿನಗರದ ತುಂಬೆಲ್ಲಾ ಹೇಳಿಕೊಂಡು ಓಡಾಡ್ತಿದ್ದರು. ಅವರೆಲ್ಲರಿಗೂ ಕಬ್ಜ ಡೈರೆಕ್ಟರ್ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ. ಕಬ್ಜ-2 ಮಾತ್ರವಲ್ಲ ಅದರ ಜೊತೆಗೆ ಒಮ್ಮೆಲೆ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಅನೌನ್ಸ್ ಮಾಡಿದ್ದಾರೆ.
ನಿರ್ದೇಶಕ ಆರ್ ಚಂದ್ರು ಅದ್ಭುತ ಕನಸುಗಾರ..ತಾಜ್ ಮಹಲ್ ನಿಂದ ಶುರುವಾದ ಜರ್ನಿಯಲ್ಲಿ ಅವ್ರು ಸೋಲು ಗೆಲುವು ಎರಡನ್ನು ಕಂಡಿದ್ದಾರೆ,. ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಪ್ರೇಕ್ಷಕರನ್ನು ರಂಜಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಬ್ಜ 2 ಅನೌನ್ಸ್ ಮೆಂಟ್ ಮಾಡಿದ್ಮೇಲೆ ಎಲ್ಲಿಯೂ ಕಾಣಿಸಿಕೊಳ್ಳದ ಆರ್ ಚಂದ್ರು, ಹೊಸ ಕನಸುಗಳನ್ನು ಹೊತ್ತು ಮಂಗಳವಾರದಂದು ಮಾಧ್ಯಮಗಳ ಮುಂದೆ ಬಂದಿದ್ದರು. ನಿರ್ಮಾಣ ಸಂಸ್ಥೆ ಹುಟ್ಟುಹಾಕೋದು ನನ್ನ ಕನಸಾಗಿತ್ತು ಎಂದ ಚಂದ್ರು, ಆರ್ಸಿ ಪ್ರೊಡಕ್ಷನ್ಲಾಂಚ್ಮಾಡಿ ಒಟ್ಟೊಟ್ಟಿಗೆ ಐದು ಸಿನಿಮಾಗಳನ್ನ ಘೋಷಣೆ ಮಾಡಿದರು. ತಾಜ್ಮಹಲ್ಸಾರಥಿಯ ಕನಸಿನ ಸಂಸ್ಥೆ ಹಾಗೂ ಸಿನಿಮಾಗಳನ್ನ ಲಾಂಚ್ ಮಾಡೋದಕ್ಕೆ ಸಿಎಂ ಸಿದ್ದರಾಮಯ್ಯ, ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್, ರಿಯಲ್ ಸ್ಟಾರ್ ಉಪೇಂದ್ರ, ಹೆಚ್.ಎಂ ರೇವಣ್ಣ, ನಿರ್ಮಾಪಕ ಜಾಕ್ ಮಂಜು ಸೇರಿದಂತೆ ಹಲವರು ಆಗಮಿಸಿದ್ದರು.
ನಾವ್ ಮೊದ್ಲೇ ಹೇಳಿದಂತೆ ಆರ್ ಸಿ ಪ್ರೊಡಕ್ಷನ್ ..ಆರ್ ಚಂದ್ರು ಹೊಸ ಕನಸು ..ಈ ವೇದಿಕೆ ಮೂಲಕ ಐದು ಸಿನಿಮಾಗಳು ಘೋಷಣೆಯಾಗಿದೆ. ಕಬ್ಜ-2, P O K, ಶ್ರೀರಾಮಬಾಣ ಚರಿತ, ಫಾದರ್ ಹಾಗೂ ಡಾಗ್ ಎಂಬ ಐದು ಚಿತ್ರಗಳು ಆರ್ ಸಿ ಪ್ರೊಡಕ್ಷನ್ ನಡಿ ನಿರ್ಮಾಣವಾಗಲಿದೆ. ಈ ಐದು ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳು ಅನ್ನೋದು ವಿಶೇಷ..ಈ ಚಿತ್ರದಲ್ಲಿ ಚಂದ್ರಣ್ಣ ಎರಡು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಕಬ್ಜ ಹಾಗೂ P O K ಸಿನಿಮಾಗಳಿಗೆ ಚಂದ್ರು ಸಾರಥಿಯಾಗಿದ್ದಾರೆ. ಕಬ್ಜ ಸೀಕ್ವೆಲ್ ನಲ್ಲಿ ಶಿವಣ್ಣ ಹಾಗೂ ಉಪ್ಪಿ ಜುಗ್ಬಲಂಧಿ ಇದ್ರೆ, P O Kಯಲ್ಲಿ ಅಭಿನಯ ಚಕ್ರವರ್ತಿ ಧಗಧಗಿಸಲಿದ್ದಾರೆ. ಸುದೀಪ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಂದ್ರು ಸಿನಿಮಾ ಮಾಡೋದಾಗಿ ತಿಳಿಸಿದ್ದರು. ಗ್ಲೋಬಲ್ ಲೆವೆಲ್ ನಲ್ಲಿ ತಯಾರಾಗಲಿರುವ ಈ ಚಿತ್ರಕ್ಕೆ ರಾಜಮೌಳಿ ತಂದೆ ಖ್ಯಾತ ಬರಗಹಾರ ವಿಜಯೇಂದ್ರ ಪ್ರಸಾದ್ ಕಥೆ ಒದಗಿಸ್ತಿ ದ್ದಾರೆ. ಜಕ್ಕಣ್ಣನ ಸಕ್ಸಸ್ ಹಿಂದಿನ ಶಕ್ತಿಯಾಗಿರುವ ವಿಜಯೇಂದ್ರ ಪ್ರಸಾದ್ ಬರೆದ ಕಥೆಗಳು ಸೋತ ಉದಾಹರಣೆಯೇ ಇಲ್ಲ. ಕಿಚ್ಚ ಆಕ್ಟಿಂಗ್, ಚಂದ್ರು ಟೇಕಿಂಗ್, ವಿಜಯೇಂದ್ರ ಪ್ರಸಾದ್ ರೈಟಿಂಗ್ ಈ ಸಿನಿಮಾ ಬೇರೆ ಲೆವೆಲ್ ನಲ್ಲಿ ಇರಲಿದೆ ಅನ್ನೋದು ಪಕ್ಕ.
ಶ್ರೀರಾಮಬಾಣ ಚರಿತ, ಫಾದರ್ ಹಾಗೂ ಡಾಗ್ ಈ ಚಿತ್ರಗಳಿಗೆ ಚಂದ್ರು ಹಣ ಹಾಕ್ತಿದ್ದಾರೆ. ಈ ಪೈಕಿ ಫಾದರ್ ಸಿನಿಮಾಗೆ ರಾಜಮೋಹನ್ ಎಂಬುವವರು ಆಕ್ಷನ್ ಕಟ್ ಹೇಳ್ತಿದ್ದಾರೆ. ಮಿಕ್ಕ ಪ್ರಾಜೆಕ್ಟ್ ಗಳ ಸಾರಥಿ ಯಾರು? ಯಾವಾಗ ಆ ಚಿತ್ರಗಳು ಟೇಕಾಫ್ ಆಗಲಿದೆ ಅನ್ನೋದು ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಅದೇನೇ ಇರಲಿ ಹಿಯಾಳಿಸುವವರ ನಡುವೆ ಹಿರಿಹಿರಿ ಹಿಗ್ಗುತ್ತಾ, ಸದಾ ನಗುತ್ತಾ ನಾನೇ ಏನಾದ್ರೂ ಮಾಡೇ ಮಾಡ್ತಿಲ್ಲ. ನಾನು ಸೋತಿಲ್ಲ. ಸಾಧಿಸೋದು ತುಂಬಾ ಇದೆ ಅಂತಾ ದಿಟ್ಟ ಹೆಜ್ಜೆ ಇಟ್ಟಿರುವ ಕಬ್ಜ ಕಲಿಗೆ ನಿಮ್ಮದೊಂದು ಹಾರೈಕೆ ಇರಲಿ..