Chandru: ಕಬ್ಜ(Kabza) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮಿರುವ ಕನ್ನಡಿಗ ಆರ್. ಚಂದ್ರು. ಕಬ್ಜ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಷ್ಟು ಕಮಾಲ್ ಮಾಡದಿದ್ರು ಆರ್. ಚಂದ್ರು(R. Chandru) ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ನಿರ್ಮಾಪಕನಾಗಿ ಹೊಸ ಶಕೆ ಆರಂಭಿಸಿರುವ ಆರ್. ಚಂದ್ರು ಒಂದೇ ಸಾರಿಗೆ ಐದು ಸಿನಿಮಾ ಅನೌನ್ಸ್ ಮಾಡಿ ಸಖತ್ ಸುದ್ದಿಯಾಗಿದ್ರು. ಆ ಐದು ಗುಚ್ಚದಲ್ಲಿ ಒಂದು ಸಿನಿಮಾಗೆ ಜೀವ ಬಂದಿದೆ.
ಆರ್ ಚಂದ್ರು(R. Chandru) ನಿರ್ಮಾಪಕನಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಒಮ್ಮೆಲೆ ಐದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹೊಸ ಪ್ರತಿಭೆಗಳ ಕನಸಿಗೆ ಜೀವ ತುಂಬಲು ಹೆಗಲಾಗಿ ನಿಂತಿದ್ದಾರೆ. ಆರ್. ಸಿ ಸ್ಟುಡಿಯೋಸ್ ಮೂಲಕ ಮೊದಲ ಸಿನಿಮಾ ನಿರ್ಮಾಣಕ್ಕೆ ಮುಹೂರ್ತ ಬರೆಯಲು ಸಜ್ಜಾಗಿದ್ದಾರೆ. ಇದೇ ತಿಂಗಳ ೨೭ರಂದು ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ‘ಫಾದರ್’(Father) ಸಿನಿಮಾ ಸೆಟ್ಟೇರಲಿದೆ. ಅಪ್ಪ-ಮಗನ ಕೈ ಹಿಡಿದಿರುವ ಪೋಸ್ಟರ್ ಚಿತ್ರ ತಂದೆ-ಮಗನ ಸೆಂಟಿಮೆಂಟ್ ಸುತ್ತ ಸುತ್ತಲಿದೆ ಎನ್ನುವುದರ ಸುಳಿವು ನೀಡಿದೆ.
ನಟ ಡಾರ್ಲಿಂಗ್ ಕೃಷ್ಣ(Darling Krishna) ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದು, ಖ್ಯಾತ ನಟ ಪ್ರಕಾಶ್ ರಾಜ್(Prakash Raj) ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಜಮೋಹನ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಟಾಲಿವುಡ್ ಸೂಪರ್ ಡೂಪರ್ ಹಿಟ್ ಸಿನಿಮಾ ‘ಹನು-ಮಾನ್’ ಸಂಗೀತ ನಿರ್ದೇಶಕ ಗೌರ ಹರಿ(Gowra Hari) ಸಂಗೀತ ‘ಫಾದರ್’(Father) ಚಿತ್ರಕ್ಕಿದೆ. ಮಂಜು ಮಾಂಡವ್ಯ ಸಂಭಾಷಣೆ, ರವಿವರ್ಮಾ- ಚೇತನ್ ಡಿಸೋಜ ಸಾಹಸ ನಿರ್ದೇಶನ ಚಿತ್ರಕ್ಕಿದೆ.